IBPS RRB Result: ಆರ್‌ಆರ್‌ಬಿ ಆಫೀಸ್ ಅಸಿಸ್ಟೆಂಟ್  ಪರೀಕ್ಷೆ ಫಲಿತಾಂಶ ಬಿಡುಗಡೆ. ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ..

Result: ಇನ್ನು  ಸೆಪ್ಟೆಂಬರ್ 9 ರವರೆಗೆ ಮಾತ್ರ ಫಲಿತಾಂಶವನ್ನು  ನೋಡಬಹುದಾಗಿದ್ದು, ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಐಬಿಪಿಎಸ್ ಆರ್‌ಆರ್‌ಬಿ ಆಫೀಸ್ ಅಸಿಸ್ಟೆಂಟ್ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್  (ಐಬಿಪಿಎಸ್) ಆರ್‌ಆರ್‌ಬಿ ಆಫೀಸ್ ಅಸಿಸ್ಟೆಂಟ್  ಪ್ರಾಥಮಿಕ ಪರೀಕ್ಷೆ 2021 ರ ಫಲಿತಾಂಶವನ್ನು ಘೋಷಣೆ ಮಾಡಿದೆ.  ನೋಂದಾಯಿತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ibps.in ನಲ್ಲಿ ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ.  

ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್   ಪರೀಕ್ಷೆಯನ್ನು 2021 ಆಗಸ್ಟ್ 14 ರಂದು ಆನ್‌ಲೈನ್  ಮೂಲಕ ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು. 45 ನಿಮಿಷಗಳ ಕಾಲ ನಡೆಸಿದ ಪರೀಕ್ಷೆಯಲ್ಲಿ  ಮಲ್ಟಿಪಲ್ ಚಾಯ್ಸ್  ಪ್ರಶ್ನೆಗಳನ್ನು ನೀಡಲಾಗಿತ್ತು. ಒಟ್ಟು 80 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಒಟ್ಟು 800 ಪ್ರಶ್ನೆಗಳನ್ನು ಕೇಳಲಾಗಿತ್ತು.

ಇನ್ನು  ಸೆಪ್ಟೆಂಬರ್ 9 ರವರೆಗೆ ಮಾತ್ರ ಫಲಿತಾಂಶವನ್ನು  ನೋಡಬಹುದಾಗಿದ್ದು, ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಐಬಿಪಿಎಸ್ ಆರ್‌ಆರ್‌ಬಿ ಆಫೀಸ್ ಅಸಿಸ್ಟೆಂಟ್ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.

ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಫಲಿತಾಂಶ 2021 ಪರೀಕ್ಷಿಸಲು  ಈ ಹಂತಗಳನ್ನು ಪಾಲಿಸಿ

ಅಧಿಕೃತ ವೆಬ್‌ಸೈಟ್ ibps.in ಗೆ ಭೇಟಿ ನೀಡಿ

ಸಿಆರ್‌ಪಿ-ಆರ್‌ಆರ್‌ಬಿ-ಎಕ್ಸ್‌ ಆಫೀಸ್‌ ಅಸಿಸ್ಟೆಂಟ್‌ (ಮಲ್ಟಿಪರ್ಪಸ್‌) ಗಾಗಿ ಆನ್‌ಲೈನ್‌ ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಾಬ್ ಮೇಳ ಶುರು; 2000 ಉದ್ಯೋಗಗಳಿಗೆ ಅವಕಾಶ

ನಿಮ್ಮ ನೋಂದಣಿ ಸಂಖ್ಯೆ/ ರೋಲ್ ಸಂಖ್ಯೆ ಮತ್ತು ಪಾಸ್‌ವರ್ಡ್/ DOB (DD-MM-YY)  ಹಾಕಿ.

ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಸ್ಕೋರ್‌ಕಾರ್ಡ್  ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿ. ಅಲ್ಲದೇ ಅದನ್ನು ಪ್ರಿಂಟ್ ತೆಗೆದುಕೊಳ್ಳುವುದು ಉತ್ತಮ.

ಐಬಿಪಿಎಸ್ ಆರ್‌ಆರ್‌ಬಿ ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶ 2021 ಅನ್ನು ಪರೀಕ್ಷಿಸಲು ನೇರ ಲಿಂಕ್ ಇಲ್ಲಿದೆ. 

IBPS ಪರೀಕ್ಷೆಯನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (RRB) ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: