HOME » NEWS » Lifestyle » IAF RECRUITMENT 2019 FOR AIRMEN GROUP X Y AND MUSICIAN TRADE POSTS HG

IAF Recruitment 2019: ಏರ್​ಮೆನ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ ತಿಂಗಳಿಗೆ 26,900 ರಿಂದ 33,100 ರೂ. ಗಳ ವರೆಗೆ ವೇತನ ನೀಡಲಾಗುವುದು.

news18-kannada
Updated:December 15, 2019, 2:51 PM IST
IAF Recruitment 2019: ಏರ್​ಮೆನ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ ತಿಂಗಳಿಗೆ 26,900 ರಿಂದ 33,100 ರೂ. ಗಳ ವರೆಗೆ ವೇತನ ನೀಡಲಾಗುವುದು.
  • Share this:
ಇಂಡಿಯನ್​ ಏರ್​ಪೋರ್ಸ್​(ಐಎಎಫ್​) ಏರ್​ಮೆನ್​ (ಗ್ರೂಪ್​ ಎಕ್ಸ್​ ಮತ್ತು ವೈ) ಮತ್ತು ಮ್ಯೂಸಿಷಿಯನ್​ ಟ್ರೇಡ್​  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್​​​ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ. ಜನವರಿ 20ರ ಒಳಗೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ:

ಭಾರತೀಯ ಏರ್​ಪೋರ್ಸ್​ ಹೊರಡಿಸಿರುವ ಏರ್​ಮೆನ್​ ಹುದ್ದೆಗಳಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಇಂಟರ್​ಮೀಡಿಯೆಟ್​/10+2 ಅಥವಾ ಇಂಜಿನಿಯರಿಂಗ್​​ನಲ್ಲಿ ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ:

ಏರ್​ಮೆನ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಜನವರಿ 17,2000 ರಿಂದ ಡಿಸೆಂಬರ್​ 30, 2003ರೊಳಗೆ ಜನಿಸಿರಬೇಕು

ವೇತನದ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ ತಿಂಗಳಿಗೆ 26,900 ರಿಂದ 33,100 ರೂ. ಗಳ ವರೆಗೆ ವೇತನ ನೀಡಲಾಗುವುದು.ಆಯ್ಕೆ ಪ್ರಕ್ರಿಯೆ:

ಆನ್​ಲೈನ್​ ಮತ್ತು ದೈಹಿಕ ಪರೀಕ್ಷೆ ಮೂಲಕ ಆಯ್ಕೆ ನಡೆಸಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, 250 ರೂ ಅರ್ಜಿ ಶುಲ್ಕವನ್ನು ಆನ್​ಲೈನ್​ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಭಾರತೀಯ ಏರ್​ಫೋರ್ಸ್​ (ಐಎಎಫ್​)ನ ಏರ್​​ಮೆನ್​ ಹುದ್ದೆಗೆ ಸೇರ ಬಯಸುವ ಅಭ್ಯರ್ಥಿಗಳು https://airmenselection.cdac.in/CASB/index.html ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ. ಅಲ್ಲಿರುವ ಮಾಹಿತಿಯನ್ನು ಭರ್ತಿ ಮಾಡುಬೇಕು.

ಹೆಚ್ಚಿನ ಮಾಹಿತಿಗೆ ಇದರ ಮೇಲೆ ಕ್ಲಿಕ್​ ಮಾಡಿ

ಇದನ್ನೂ ಓದಿ: ‘ಫ್ಯಾಂಟಮ್‘ ಚಿತ್ರದಲ್ಲಿ ಕಿಚ್ಚ ಸುದೀಪ್​​​ಗೆ ನಾಯಕಿಯಾಗಿ ಸಮಂತಾ ಅಕ್ಕಿನೇನಿ?

ಇದನ್ನೂ ಓದಿ: Bigg Boss Kannada 7 elimination: ಈ ವಾರ ಬಿಗ್​​​​ ಬಾಸ್​​​ ಮನೆಯಿಂದ ಹೊರ ಬೀಳಲಿರುವ 9ನೇ ಸ್ಪರ್ಧಿ ಇವರೇ?
Youtube Video
Published by: Harshith AS
First published: December 15, 2019, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories