Sexual wellness: ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ; ಇದು ಸಾಮಾನ್ಯವೇ?

ನೀವು ನಿಮ್ಮ ಕೋಣೆಯಲ್ಲಿ ಬೀಗ ಹಾಕಿ ಇಡೀ ದಿನ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ ಅದು ಒಂದು ಸಮಸ್ಯೆ. ನಿಮ್ಮ ಜನನಾಂಗಗಳನ್ನು ನೋಯಿಸುವಷ್ಟರ ಮಟ್ಟಿಗೆ ನೀವು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ ಅಥವಾ ತಡೆರಹಿತ ಉಜ್ಜುವಿಕೆಯಿಂದ ನೋಯುತ್ತಿರುವಂತೆ ಮಾಡಿದರೆ, ಅದು ಕೂಡ ಒಂದು ಸಮಸ್ಯೆಯಾಗಿದೆ. ಹೀಗಾಗಿ ಹಸ್ತಮೈಥುನ ನಿಮ್ಮ ಮನಸ್ಸಿಗೆ ಆಪ್ತವಾಗುವಂತೆ ಇರಲಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಶ್ನೆ: ಹಲೋ ಮೇಡಂ, ಹಸ್ತಮೈಥುನ ಮಾಡಿಕೊಳ್ಳಲು ಯಾವುದೇ ಸಮಯವಿದೆಯೇ? ಬೆಳಿಗ್ಗೆ ಸಂಜೆ ಅಥವಾ ರಾತ್ರಿ? ನಾನು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ, ಇದು ಸಾಮಾನ್ಯವೇ? ಅಥವಾ ಇದರಿಂದ ಏನಾದರೂ ಸಮಸ್ಯೆಯಾಗಲಿದೆಯೇ?

ಉತ್ತರ: ಹಸ್ತಮೈಥುನ ಸಾಮಾನ್ಯ ಮತ್ತು ಆರೋಗ್ಯಕರ ಲೈಂಗಿಕ ಕ್ರಿಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ, ಮಕ್ಕಳು ತಮ್ಮ ಜನನಾಂಗಗಳನ್ನು ಕುತೂಹಲದಿಂದ ಸ್ಪರ್ಶಿಸಬಹುದು. ಹದಿಹರೆಯದವರು ಮತ್ತು ವಯಸ್ಕರು ಸ್ವಯಂ-ಸಾಂತ್ವನ, ಲೈಂಗಿಕ ಪರಿಶೋಧನೆ ಮತ್ತು ಲೈಂಗಿಕ ಆನಂದಕ್ಕಾಗಿ ಹಸ್ತಮೈಥುನ ಮಾಡಿಕೊಳ್ಳಬಹುದು.

ದಿನಕ್ಕೆ ಇಷ್ಟೇ ಬಾರಿ ಹಸ್ತಮೈಥುನ ಮಾಡಿಕೊಳ್ಳಲು ಅಥವಾ ನಿಗದಿತ ಸಮಯ ಇಲ್ಲ. ಒಬ್ಬರು ದಿನಕ್ಕೆ ಎಷ್ಟು ಬಾರಿಯಾದರೂ ಮತ್ತು ಯಾವಾಗ ಬೇಕಾದರೂ ಹಸ್ತಮೈಥುನ ಮಾಡಿಕೊಳ್ಳಬಹುದು. ಹಸ್ತಮೈಥುನದ ಆವರ್ತನ ಮತ್ತು ಸಮಯವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದು ದಿನದಲ್ಲಿ 2-3 ಬಾರಿ, ವಾರಕ್ಕೆ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿಯಾಗಿ ಇರಬಹುದು.

ಹೌದು, ಹಸ್ತಮೈಥುನದ ಸುತ್ತ ಸಾಕಷ್ಟು ಪೂರ್ವಾಗ್ರಹ ಅಭಿಪ್ರಾಯ ಮತ್ತು ಭಯಗಳಿವೆ. ಹಸ್ತಮೈಥುನದಿಂದ ವೀರ್ಯಾಣು ನಷ್ಟವಾಗಲಿದೆ, ಶಿಶ್ನ ದೌರ್ಬಲ್ಯವಾಗಲಿದೆ, ಲೈಂಗಿಕ ಬಯಕೆ ಕಡಿಮೆ ಆಗಲಿದೆ, ಮಾನಸಿಕ ವಿಕೃತತೆ ಮತ್ತು ಮುಂತಾದವುಗಳಿಂದಾಗಿ ಬಂಜೆತನಕ್ಕೆ ಕಾರಣವಾಗುತ್ತದೆ ಎಂಬೆಲ್ಲಾ ತಪ್ಪು ಕಲ್ಪನೆಗಳಿವೆ. ಹಸ್ತಮೈಥುನವು ಲೈಂಗಿಕ ಹತಾಶೆಯನ್ನು ನಿವಾರಿಸುತ್ತದೆ, ಉತ್ತಮ ನಿದ್ರೆ, ದೈಹಿಕವಾಗಿ ಮತ್ತು ಮಾನಸಿಕ ವಿಶ್ರಾಂತಿಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಅಲ್ಲದೇ ಒತ್ತಡವನ್ನು ಕಡಿಮೆ ಮಾಡಲು ಹಸ್ತಮೈಥುನ ಅತ್ಯುತ್ತಮ ಮಾರ್ಗವಾಗಿದೆ.  ಹಸ್ತಮಥುನದಿಂದ  ಸ್ವಾಭಿಮಾನ ಸುಧಾರಿಸುವಂತಹ ಆರೋಗ್ಯ ಸಂಬಂಧಿತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದ್ದರಿಂದ ಮುಕ್ತವಾಗಿ ಹಸ್ತಮೈಥುನ ಮಾಡಿಕೊಳ್ಳಿ!

ಹೌದು, ಹಸ್ತಮೈಥುನ ವಿಷಯದಲ್ಲಿ ಯಾವುದೇ ಮಿತಿಯಿಲ್ಲ. ಒಬ್ಬ ವ್ಯಕ್ತಿಯು ಪ್ರತಿದಿನ ಎಷ್ಟು ಬಾರಿಯಾದರೂ ಹಸ್ತಮೈಥುನ ಮಾಡಿಕೊಳ್ಳಬಹುದು. ಸಾಕಷ್ಟು ಲೈಂಗಿಕ ಭಾವನೆಗಳು ಮತ್ತು ಆಸೆಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಹಸ್ತಮೈಥುನ ಮಾಡುವ ಸಮಯವು ವ್ಯಕ್ತಿಯ ಆರೋಗ್ಯಕರ ಮತ್ತು ಸಮತೋಲಿತ ಜೀವನದ ಇತರ ಭಾಗಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸದ ಹೊರತು ವ್ಯಕ್ತಿಯು ಎಷ್ಟು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಾನೆ ಎಂಬುದು ಸಮಸ್ಯೆಯಾಗುವುದಿಲ್ಲ.

ಇದನ್ನು ಓದಿ: Sexual wellness: ನನ್ನನ್ನು ಪುರುಷರು ತುಂಬಾ ಕೆಟ್ಟದಾಗಿ ನಡೆಸಿಕೊಳ್ತಾರೆ, ಇದಕ್ಕೇನು ಮಾಡಲಿ?

ಆದರೆ, ಹಸ್ತಮೈಥುನ ವ್ಯಸನವಾಗಿ ಪರಿಣಮಿಸಬಾರದು. ಅಂದರೆ, ನಿಮ್ಮ ದೈನಂದಿನ ಜೀವನದ ಮೇಲೆ, ಕೆಲಸದ ಮೇಲೆ ಇದು ಪ್ರಭಾವ ಬೀರಬಾರದು. ಉದಾಹರಣೆಗೆ, ಶಾಲೆ, ಕೆಲಸ, ಕುಟುಂಬ, ಸಾಮಾಜಿಕ ಪ್ರವಾಸ, ನಿಮ್ಮ ಕೆಲಸದಿಂದ ಹೊರಗುಳಿಯಲು ಪ್ರಾರಂಭಿಸಿದರೆ, ನೀವು ಹೊರಗೆ ಹೋಗುವುದನ್ನು ನಿಲ್ಲಿಸಿದರೆ, ಸ್ನೇಹಿತರನ್ನು ಭೇಟಿಯಾಗುವುದು ನಿಲ್ಲಿಸಿದರೆ, ನಿಮ್ಮ ಕುಟುಂಬಕ್ಕೆ ಸಮಯ ನೀಡುವುದನ್ನು ನಿಲ್ಲಿಸಿ, ನೀವು ನಿಮ್ಮ ಕೋಣೆಯಲ್ಲಿ ಬೀಗ ಹಾಕಿ ಇಡೀ ದಿನ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ ಅದು ಒಂದು ಸಮಸ್ಯೆ. ನಿಮ್ಮ ಜನನಾಂಗಗಳನ್ನು ನೋಯಿಸುವಷ್ಟರ ಮಟ್ಟಿಗೆ ನೀವು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ ಅಥವಾ ತಡೆರಹಿತ ಉಜ್ಜುವಿಕೆಯಿಂದ ನೋಯುತ್ತಿರುವಂತೆ ಮಾಡಿದರೆ, ಅದು ಕೂಡ ಒಂದು ಸಮಸ್ಯೆಯಾಗಿದೆ. ಹೀಗಾಗಿ ಹಸ್ತಮೈಥುನ ನಿಮ್ಮ ಮನಸ್ಸಿಗೆ ಆಪ್ತವಾಗುವಂತೆ ಇರಲಿ.
First published: