ರಕ್ತದೊತ್ತಡವನ್ನು ನಿರ್ಲಕ್ಷಿಸಬೇಡಿ: ಅತಿಯಾದ ಒತ್ತಡ ಪ್ರಾಣಕ್ಕೇ ಕುತ್ತು ತಂದೀತು

news18
Updated:July 9, 2018, 4:49 PM IST
ರಕ್ತದೊತ್ತಡವನ್ನು ನಿರ್ಲಕ್ಷಿಸಬೇಡಿ: ಅತಿಯಾದ ಒತ್ತಡ ಪ್ರಾಣಕ್ಕೇ ಕುತ್ತು ತಂದೀತು
news18
Updated: July 9, 2018, 4:49 PM IST
ನ್ಯೂಸ್​ 18 ಕನ್ನಡ

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡವೆಂಬುದು ಸಾಮಾನ್ಯ ಸಮಸ್ಯೆಯಾಗಿಹೋಗಿದೆ. ಮೊದಲು ವಯಸ್ಸಾದ ನಂತರ ಬರುತ್ತಿದ್ದ ಈ ಖಾಯಿಲೆ ಈಗ ಟೀನೇಜ್​ನವರಿಗೂ ಬರಲಾರಂಭಿಸಿದೆ. ಅತಿಯಾದ ಟೆನ್ಷನ್​ನಿಂದ ಉಂಟಾಗುವ ರೋಗಗಳ ಬಗ್ಗೆ ಯಾರೂ ಗಮನ ಹರಿಸದಂತಾಗಿದೆ. ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರ ತಂಡವೊಂದು ಭಾರತದಲ್ಲಿ ಕೇವಲ ಶೇ. 50ರಷ್ಟು ಅತಿಯಾದ ಟೆನ್ಷನ್​ ಅಥವಾ ರಕ್ತದೊತ್ತಡ ಸಮಸ್ಯೆ ಇರುವವರು ಮಾತ್ರ ಸೂಕ್ತ ಚಿಕಿತ್ಸೆ ಪಡೆಯುತ್ತಾರೆ.  ಕೆಲವರು ತಪಾಸಣೆ ಮಾಡಿಕೊಂಡರೂ ನಾನಾ ಕಾರಣಗಳಿಂದ ಚಿಕಿತ್ಸೆಯನ್ನೇ ಪಡೆಯುವುದಿಲ್ಲ.

ಭಾರತೀಯ ವೈದ್ಯರ ಪ್ರಕಾರ 130/80 ಅಥವಾ ಅದಕ್ಕಿಂತ ಕಡಿಮೆ ರಕ್ತದೊತ್ತಡ ಇದ್ದರೆ ಅದು ಸಾಮಾನ್ಯ ಮಾನದಂಡ. ಆದರೆ, ಅಮೆರಿಕ ಮತ್ತು ಯುರೋಪಿಯನ್​ ದೇಶಗಳಲ್ಲಿ 140/90 ರಕ್ತದೊತ್ತಡದ ಮಾನದಂಡವನ್ನು ನಿಗದಿಪಡಿಸಲಾಗಿದೆ. ಹೈದರಾಬಾದ್​ನ ಅಪೋಲೊ ಹಾಸ್ಪಿಟಲ್ಸ್​ನ ಸೀನಿಯರ್​ ಕನ್ಸಲ್ಟೆಂಟ್ ಸಿ. ವೆಂಕಟ ಎಸ್​. ರಾಮ್​ ಹೇಳುವ ಪ್ರಕಾರ, 130/80ಗಿಂತಲೂ ರಕ್ತದೊತ್ತಡ ಹೆಚ್ಚಾದರೆ ಅದನ್ನೇ ಎಚ್ಚರಿಕೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ಅತಿಯಾದ ಟೆನ್ಷನ್​ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂಥದ್ದರಲ್ಲಿ ಅಮೆರಿಕದ ರಕ್ತದೊತ್ತಡದ ಮಾನದಂಡ ರೋಗಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಹೆಚ್ಚಿಸಬಹುದು.

ಭಾರತದ ಅತಿಯಾದ ಒತ್ತಡದ ಮಾರ್ಗಸೂಚಿಯ ಪ್ರಕಾರ, 130-139/ 80-89 ರಕ್ತದೊತ್ತಡದ ಪ್ರಮಾಣವಿದ್ದರೆ ಅದನ್ನು ಹೈ ನಾರ್ಮಲ್​ ಎಂದು ಪರಿಗಣಿಸಲಾಗುತ್ತದೆ. 120-129/ 80ಕ್ಕಿಂತ ಕಡಿಮೆಯಿದ್ದರೆ ನಾರ್ಮಲ್​ ಎಂದೂ, 120/ 80ಕ್ಕಿಂತಲೂ ಕಡಿಮೆ ರಕ್ತದೊತ್ತಡವಿದ್ದರೆ ಅದನ್ನು ಸರಿಯಾದ ರಕ್ತದೊತ್ತಡದ ಪ್ರಮಾಣವೆಂದೂ ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ 137/88 ರಕ್ತದೊತ್ತಡವಿದ್ದರೂ ಅದನ್ನು ವೈದ್ಯರು ನಾರ್ಮಲ್ ಎಂಬಂತೆ ಪರಿಗಣಿಸುತ್ತಾರೆ. ಆದರೆ, ಭಾರತೀಯರ ಜೀವನಕ್ರಮಕ್ಕೆ 130/80 ಅಥವಾ ಅದಕ್ಕಿಂತ ಕಡಿಮೆ ರಕ್ತದೊತ್ತಡ ಇದ್ದರೆ ಮಾತ್ರ ಅವರು ಆರೋಗ್ಯವಂತರೆಂದು ಪರಿಗಣಿಸುವುದು ಸರಿಯಾದ ಕ್ರಮ ಎಂದು ರಾಮ್​ ಅಭಿಪ್ರಾಯಪಟ್ಟಿದ್ದಾರೆ.ಜೀವಕ್ಕೇ ಕುತ್ತು ಬರಬಹುದು:

ಇತ್ತೀಚಿನ ದಿನಗಳಲ್ಲಿ ಅತಿಯಾದ ಒತ್ತಡದ ಜೀವನಕ್ರಮದಿಂದಲೇ ಹೆಚ್ಚಿನ ಸಾವುಗಳಾಗುತ್ತಿವೆ. ಒತ್ತಡದ ಸೈಡ್​ ಎಫೆಕ್ಟ್​ನಿಂದ ಹಲವಾರು ರೋಗಗಳು ಹುಟ್ಟುತ್ತಿವೆ. ಅತಿಯಾದ ಒತ್ತಡವನ್ನು ಜನರು ಹಗುರವಾಗಿ ಪರಿಗಣಿಸುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುವ ಬಗ್ಗೆಯೂ ಯೋಚನೆ ಮಾಡುವುದಿಲ್ಲ. ಇದರಿಂದಾಗಿ ಕೆಲವರಿಗೆ ಹೃದಯ ಸಂಬಂಧಿ ಖಾಯಿಲೆ, ಲಕ್ವ, ಕಿಡ್ನಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. 2015-16ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನಡೆಸಿದ ಅಧ್ಯಯನದ ಪ್ರಕಾರ ಶೇ. 11 ಪುರುಷರು ಮತ್ತು ಶೇ. 7 ಮಹಿಳೆಯರು 140/90ಕ್ಕಿಂತಲೂ ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ.
Loading...

ರಕ್ತದೊತ್ತಡ ಸಮಸ್ಯೆ ಕಾಡಿದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತಲೂ ಡಯಟ್​ ಕಂಟ್ರೋಲ್​, ತೂಕ ಇಳಿಸುವುದು, ಉಪ್ಪಿನ ಬಳಕೆ ಕಡಿಮೆ ಮಾಡುವುದು, ಸರಿಯಾದ ವ್ಯಾಯಾಮ ಮಾಡುವುದು, ಧೂಮಪಾನ ಮಾಡದಿರುವುದು ಹೀಗೆ ಜೀವನಕ್ರಮದಲ್ಲಿ ಮುನ್ನೆಚ್ಚರಿಕೆಗಳನ್ನು ವಹಿಸುವುದರಿಂದ ಶೇ. 6ರಿಂದ 10ರಷ್ಟು ರಕ್ತದೊತ್ತಡ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಿದೆ.

 

 
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...