• Home
  • »
  • News
  • »
  • lifestyle
  • »
  • Heart Care: ಹೃದಯದ ಆರೋಗ್ಯ ಹಾಳಾಗಬಾರದು ಅಂದ್ರೆ ಚೆನ್ನಾಗಿ ನೀರು ಕುಡಿಬೇಕಂತೆ

Heart Care: ಹೃದಯದ ಆರೋಗ್ಯ ಹಾಳಾಗಬಾರದು ಅಂದ್ರೆ ಚೆನ್ನಾಗಿ ನೀರು ಕುಡಿಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಧ್ಯಯನದ ಪ್ರಕಾರ ಚೆನ್ನಾಗಿ ನೀರು ಸೇವಿಸಿದವರು ಆರೋಗ್ಯಕರವಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿ ಎಂಬುದು ಬಹಿರಂಗಗೊಂಡಿದೆ.

  • Trending Desk
  • 5-MIN READ
  • Last Updated :
  • Share this:

ನೀರು (Water) ದೇಹಕ್ಕೆ (Body) ಪ್ರಮುಖವಾಗಿ ಬೇಕಾಗಿರುವ ಜೀವಾಧಾರವಾಗಿದ್ದು ಆರೋಗ್ಯವಾಗಿರಲು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ಎಂಟು ಲೋಟಗಳಷ್ಟು ನೀರು (Water)  ಕುಡಿಯಬೇಕು ಎಂದು ವೈದ್ಯಲೋಕ ತಿಳಿಸುತ್ತದೆ. ದೇಹದ ಚಟುವಟಿಕೆಗಳು ಉತ್ತಮವಾಗಿ ನಡೆಯಲು, ಚಯಾಪಚಯ ಕ್ರಿಯೆ ಸಾಂಗವಾಗಿ ನಡೆಯಲು, ಆಹಾರ (Food) ಜೀರ್ಣಗೊಳ್ಳಲು ಹೀಗೆ ನೀರು ದೇಹದಲ್ಲಿ ಬಹುವಿಧವಾಗಿ ಕೆಲಸ ಮಾಡುತ್ತದೆ. eBioMedicine ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಚೆನ್ನಾಗಿ ನೀರು ಸೇವಿಸಿದವರು ಆರೋಗ್ಯಕರವಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿ ಎಂಬುದು ಬಹಿರಂಗಗೊಂಡಿದೆ. ಹೆಚ್ಚು ನೀರು ಸೇವಿಸಿದಂತೆ ಹೆಚ್ಚು ಕಾಲ ಬದುಕುತ್ತಾರೆ ಎಂಬುದು ಅಧ್ಯಯನಕಾರರ ಮಾತಾಗಿದ್ದು ನೀರಿನ ಪ್ರಮಾಣ ಎಷ್ಟಿರಬೇಕು ಹಾಗೂ ಯಾವ ರೀತಿಯಲ್ಲಿ ನೀರಿನ ಸೇವನೆ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ.


ಅಧ್ಯಯನಕಾರರು ಇದಕ್ಕಾಗಿ ಸಮೀಕ್ಷೆಯೊಂದನ್ನು ಕೈಗೊಂಡಿದ್ದು 30 ವರ್ಷಗಳ ಅವಧಿಯಲ್ಲಿ ಸುಮಾರು 11,255 ವಯಸ್ಕರ ಮಾಹಿತಿ ಕಲೆಹಾಕಿದ್ದಾರೆ. ನೀರು ಕುಡಿದಾಗ ಸೀರಮ್ ಸೋಡಿಯಮ್ ಮಟ್ಟ (ರಕ್ತದಲ್ಲಿನ ಸೋಡಿಯಂ ಸಾಂದ್ರತೆ) ಹತೋಟಿಯಲ್ಲಿರುತ್ತದೆ ಹಾಗೂ ನೀರು ಕಡಿಮೆ ಕುಡಿದಾಗ ಈ ಮಟ್ಟ ಕಡಿಮೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.


ನೀರು ಕಡಿಮೆ ಕುಡಿದಂತೆ ಕಾಯಿಲೆಗಳು ಹೆಚ್ಚುತ್ತದೆ


ಸೀರಮ್ ಸೋಡಿಯಮ್ ಮಟ್ಟ (ರಕ್ತದಲ್ಲಿನ ಸೋಡಿಯಂ ಸಾಂದ್ರತೆ) ಹೆಚ್ಚಿದಂತೆ ಕಾಯಿಲೆಗಳು ಉಲ್ಭಣಗೊಳ್ಳುತ್ತವೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದ್ದು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದರೆ ಚಿಂತಿಸಬೇಡಿ, ಈ ಸಲಹೆ ಪಾಲಿಸಿ


ಇನ್ನು ಸೀರಮ್ ಮಟ್ಟ ಮಧ್ಯಮ ಶ್ರೇಣಿಯಲ್ಲಿರುವವರು ಉತ್ತಮ ಆರೋಗ್ಯವನ್ನು ಹೊಂದಿದ್ದು ಸದೃಢವಾಗಿರುವುದನ್ನು ಕಂಡುಕೊಂಡಿದ್ದಾರೆ. ಸೀರಮ್ ಮಟ್ಟ ಹೆಚ್ಚಿದಂತೆ ಸಣ್ಣ ವಯಸ್ಸಿನವರು ಮರಣ ಹೊಂದುವಂತಹ ತೀವ್ರ ಅಪಾಯಕ್ಕೆ ತುತ್ತಾಗುತ್ತಾರೆ ಎಂಬ ಕಳವಳಕಾರಿ ಅಂಶವನ್ನು ವೈದ್ಯರು ತಿಳಿಸಿದ್ದಾರೆ.


ನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತೇ?


ಸಾಕಷ್ಟು ನೀರು ಕುಡಿಯುವುದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಹಾಗೂ ರೋಗವೇ ಇಲ್ಲದ ಉತ್ತಮ ಆರೋಗ್ಯವಂತ ಜೀವನವನ್ನು ನಡೆಸಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಕಾರ್ಡಿಯೋವಾಸ್ಕುಲರ್ ರಿಜೆನೆರೇಟಿವ್ ಮೆಡಿಸಿನ್ ಪ್ರಯೋಗಾಲಯದಲ್ಲಿ ಅಧ್ಯಯನ ಲೇಖಕಿ ಮತ್ತು ಸಂಶೋಧಕರಾದ ನಟಾಲಿಯಾ ಡಿಮಿಟ್ರಿವಾ ತಿಳಿಸಿದ್ದಾರೆ.


ಮಾರ್ಚ್ 2022 ರಲ್ಲಿ ವಿಜ್ಞಾನಿಗಳು ಸಂಶೋಧನೆಯನ್ನು ಪ್ರಕಟಿಸಿದ್ದು ಸೀರಮ್ ಸೋಡಿಯಂ ಮಟ್ಟಗಳ ಹೆಚ್ಚಿನ ಶ್ರೇಣಿಯು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತವೆ ಎಂಬ ಅಂಶವನ್ನು ಬಹಿರಂಗಗೊಳಿಸಿದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸದೇ ಇದ್ದರೆ ಸೀರಮ್ ಸೋಡಿಯಂ ಮಟ್ಟ ಹೆಚ್ಚಾಗುತ್ತದೆ ಎಂಬ ಅಂಶವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು ಹೃದಯದ ಸಮಸ್ಯೆಗಳಿಗೆ ಇದುವೇ ಕಾರಣ ಎಂಬುದನ್ನು ತಿಳಿಸಿದ್ದಾರೆ.
ದೇಹದ ಸರ್ವೋತ್ತಮ ಅಭಿವೃದ್ಧಿಗೆ ನೀರು ಬೇಕು


15 ಆರೋಗ್ಯ ಪರಿಸ್ಥಿತಿಗಳನ್ನೊಳಗೊಂಡ ಗುರುತುಗಳೊಂದಿಗೆ ಸೋಡಿಯಂ ಸೀರಮ್ ಮಟ್ಟ ಹೇಗೆ ಸಂಯೋಜನೆಗೊಂಡಿದೆ ಎಂಬುದನ್ನು ಪರಿಶೀಲಿಸಲಾಯಿತು. ಪ್ರತಿಯೊಬ್ಬ ವ್ಯಕ್ತಿಯ ಹೃದಯರಕ್ತನಾಳದ, ಉಸಿರಾಟ, ಚಯಾಪಚಯ, ಮೂತ್ರಪಿಂಡ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ವಿವರವನ್ನು ಒದಗಿಸುವ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯಂತಹ ಅಂಶಗಳನ್ನು ಈ ಸಮಯದಲ್ಲಿ ಪರಿಗಣಿಸಲಾಯಿತು.


ಸಾಕಷ್ಟು ನೀರು ಸೇವಿಸುವುದು ಆರೋಗ್ಯಕರವಾಗಿ ವಯಸ್ಸಾಗುವುದನ್ನು ವೃದ್ಧಿಸುತ್ತದೆ ಹಾಗೂ ರೋಗವನ್ನು ತಡೆಗಟ್ಟುತ್ತದೆ ಜೊತೆಗೆ ದೀರ್ಘಾಯಷ್ಯಕ್ಕೆ ಕಾರಣವಾಗಬಹುದು ಎಂಬ ಅಂಶವನ್ನು ತಿಳಿಸಿದ್ದಾರೆ. ಅಧ್ಯಯನಕಾರರ ಮಾಹಿತಿಯ ಪ್ರಕಾರ ದೇಹಕ್ಕೆ ಅಗತ್ಯವಾಗಿರುವ ದ್ರವದ ಪೂರೈಕೆಯನ್ನು ನೀರಿನ ಜೊತೆಗೆ ಜ್ಯೂಸ್, ಇತರ ದ್ರವಾಹಾರಗಳೊಂದಿಗೆ ಮಾಡಬಹುದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಮಧುಮೇಹಕ್ಕೆ ರಾಮಬಾಣ ಈ ಬುರಾನ್ಶ್! ಹಿಮಾಲಯದಲ್ಲಿ ಮಾತ್ರ ಬೆಳೆಯುತ್ತೆ ಈ ಅಪರೂಪದ ಹೂವು


ದೇಹಕ್ಕೆ ಅಗತ್ಯವಿರುವಷ್ಟು ದ್ರವ ಒದಗಿಸಬೇಕು


ಪ್ರಪಂಚದಲ್ಲಿ ಅರ್ಧದಷ್ಟು ಜನರು ಸಾಕಷ್ಟು ನೀರು ಕುಡಿಯುವುದಿಲ್ಲ ಎಂಬ ಅಂಶವನ್ನು ಅಧ್ಯಯನಕಾರರು ಸೂಚಿಸಿದ್ದು, ದೇಹಕ್ಕೆ ಬೇಕಾದ ಕನಿಷ್ಟ 1.5 ಲೀಟರ್‌ಗಳಷ್ಟು ದ್ರವವವನ್ನು ದೇಹಕ್ಕೆ ಜನರು ಒದಗಿಸುವುದಿಲ್ಲ ಎಂಬ ಕೊಂಚ ಆತಂಕದ ಮಾಹಿತಿಯನ್ನು ತಿಳಿಸಿದ್ದಾರೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಂತೆ ಸೀರಮ್ ಸೋಡಿಯಂ ಮಟ್ಟ ಹೆಚ್ಚಾಗುತ್ತದೆ ಹಾಗೂ ಇದರಿಂದ ಮಾನವನ ದೇಹ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

Published by:Sandhya M
First published: