ವಯಸ್ಸಾದಂತೆ ಉದುರುವ ಕೂದಲಿನ (Hair Fall) ಬಗ್ಗೆ ಮನುಷ್ಯ (Human) ಸಹಜವಾಗಿ ಚಿಂತಿತನಾಗಿರುತ್ತಾನೆ. ಆದರೆ, ಒಂದು ಶುಭ ಸುದ್ದಿ ಎಂದರೆ ಕೆಲ ವಿಜ್ಞಾನಿಗಳು (Scientists) ತಾವು ನಡೆಸಿರುವ ಅಧ್ಯಯನದ ಪ್ರಕಾರ ಮುಂದಿನ ದಿನಗಳಲ್ಲಿ ಮನುಷ್ಯನ ದೇಹದಲ್ಲಿ (Human Body) ಮತ್ತೆ ಕೂದಲು ಬೆಳೆಯುವ ಹಲವು ಪರಿಣಾಮಕಾರಿ ಮಾರ್ಗಗಳು ಲಭ್ಯವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೂದಲುದುರುವಿಕೆ ಎಂಬುದು ಶರೀರದಲ್ಲಿ ಸಂಭವಿಸುವ ಸಹಜವಾದ ಪ್ರಕ್ರಿಯೆಯಾಗಿದೆ. ಆದರೂ ವಯಸ್ಸಾದಂತೆ ಕೂದಲುದುರುವಿಕೆಯು ಸಹಜವಾಗಿ ಸಾಕಷ್ಟು ಜನರು ಚಿಂತೆಗೀಡಾಗುವಂತೆ ಮಾಡುತ್ತದೆ ಎಂದರೆ ತಪ್ಪಿಲ್ಲ. ಅದಕ್ಕಾಗಿಯೇ ಇಂದು ಮಾರುಕಟ್ಟೆಯಲ್ಲಿ ಮತ್ತೆ ಕೂದಲು ಬರಿಸುವಂತಹ ಆಶ್ವಾಸನೆ ನೀಡುವ ಅದೆಷ್ಟೋ ಉತ್ಪನ್ನಗಳು ಪ್ರಚಾರದಲ್ಲಿರುತ್ತವೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಮನುಷ್ಯನಿಗೆ ತನ್ನ ಕೂದಲನ್ನು ಬಹುಬೇಗನೆ ಕಳೆದುಕೊಳ್ಳಲು ಮನಸ್ಸಿಲ್ಲ ಎನ್ನಬಹುದು. ಅದಕ್ಕಾಗಿಯೇ ನೂರೆಂಟು ಪ್ರಯತ್ನಗಳನ್ನು ಪ್ರತಿಯೊಬ್ಬರೂ ಮಾಡುತ್ತಲೇ ಇರುತ್ತಾರೆ. ಆದರೆ, ಇದೀಗ ಕೂದಲಿನ ಸಮಸ್ಯೆ ಎದುರಿಸುತ್ತಿರುವವರ ಮುಖದಲ್ಲಿ ಮಂದಹಾಸ ಒಂದು ಮೂಡುವಂತಹ ಸುದ್ದಿಯೊಂದು ಬಂದಿದೆ.
ಮನುಷ್ಯನ ದೇಹದಲ್ಲಿ ಮತ್ತೆ ಕೂದಲು ಬೆಳೆಸಬಹುದು
ಉಟಾಹ್ ಹಾಗೂ ಪಿಟ್ಸ್ ಬರ್ಗ್ ವಿವಿಗಳ ಸಂಶೋಧಕರ ತಂಡವೊಂದು ದೀರ್ಘವಾದ ಅಧ್ಯಯನ ಮಾಡಿದ್ದು ಅದರ ಫಲಿತಾಂಶದ ಪ್ರಕಾರ ಮುಂದಿನ ದಿನಗಳಲ್ಲಿ ಮನುಷ್ಯನ ದೇಹದಲ್ಲಿ ಮತ್ತೆ ಕೂದಲು ಬೆಳೆಯುವ ಹಲವು ಪರಿಣಾಮಕಾರಿ ಮಾರ್ಗಗಳು ಲಭ್ಯವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು, ಅಧ್ಯಯನದಿಂದ ಸಂಶೋಧಕರಿಗನಿಸಿರುವಂತೆ, ಮನುಷ್ಯನ ದೇಹವು ಈಗಲೂ ಶರೀರದ ತುಂಬ ಕೂದಲು ಬೆಳೆಯುವಂತಹ ಜೀನ್ ಗಳನ್ನು (ವಂಶವಾಹಿಗಳು) ಹೊಂದಿರಬಹುದೆಂದಾಗಿದೆ, ಆದರೆ ವಿಕಸನ ಪ್ರಕ್ರಿಯೆಯು ಇದನ್ನು ನಿಷ್ಕ್ರೀಯ ಮಾಡಿದೆ ಅಷ್ಟೇ ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇ-ಲೈಫ್ ಎಂಬ ಜರ್ನಲ್ನಲ್ಲಿ ಸಂಶೋಧನೆ
ಇ-ಲೈಫ್ ಎಂಬ ಜರ್ನಲ್ ನಲ್ಲಿ ಈ ಸಂಶೋಧನಾಧ್ಯಯವನ್ನು ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ವಿವರಿಸಿರುವಂತೆ, ಸಂಶೋಧಕರು 62 ಬಗೆಯ ವಿವಿಧ ಸಸ್ತನಿಗಳಾದ್ಯಂತ ಒಟ್ಟು 20,000 ಕೋಡಿಂಗ್ ಜೀನ್ ಗಳನ್ನು ಹಾಗೂ ನಿಯಂತ್ರಕಗಳು ಎನ್ನಲಾಗುವ ಇತರೆ 350,000 ಜೀನ್ ಗಳನ್ನು ವಿಶ್ಲೇಷಿಸಿದ್ದಾರೆ.
ಈ ಅಧ್ಯಯನದ ಕೋ ಆಥರ್ ಆಗಿರುವ ಜೆನಿಟಿಸ್ಟ್ ನಥನ್ ಕ್ಲಾರ್ಕ್ ಹೇಳುತ್ತಾರೆ, "ನಾವು ನಮ್ಮ ಸ್ವಂತ ಜೆನೆಟಿಕ್ಸ್ ಅನ್ನು ಹೆಚ್ಚು ಅರಿಯಲು ಜೀವಶಾಸ್ತ್ರದ ವೈವಿಧ್ಯತೆಯನ್ನು ಬಳಸಿದ್ದೇವೆ. ಇದು ನಮಗೆ ಬಹು ಮುಖ್ಯವಾಗಿ ಬೇಕಾಗಿರುವ ವಸ್ತುವಿನ ನಿರ್ದಿಷ್ಟ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡಿದೆ" ಎಂದು ತಿಳಿಸಿದ್ದಾರೆ.
ಈ ಸಂಶೋಧನಾ ತಂಡವು ಪ್ರಾಥಮಿಕವಾಗಿ ಏಕೆ ಕೆಲವು ಸಸ್ತನಿಗಳು ಕೆಲ ಇತರೆ ಸಸ್ತನಿಗಳಿಗಿಂತ ತಮ್ಮ ದೇಶದಲ್ಲಿ ಕಡಿಮೆ ಪ್ರಮಾಣದ ಕೂದಲು ಹೊಂದಿರುತ್ತವೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಅವರ ಅಧ್ಯಯನವು ಶರೀರದಲ್ಲಿರುವ ಜಿನೋಮ್ ನ ಕೆಲ ನಿಯಂತ್ರಕ ಪ್ರದೇಶಗಳು ಹೇಗೆ ಕೂದಲು ಬೆಳೆಯುವ ಪ್ರಕ್ರಿಯೆಯನ್ನು ಪರೋಕ್ಷವಾಗಿ ಪ್ರಭಾವಿಸುತ್ತದೆ ಎಂಬುದು ತಿಳಿಸಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
ಹೊಸ ಜೀನ್ ಸೆಟ್ ಮೂಲಕ ಹೊಸ ಕೂದಲು
ಅಧ್ಯಯನಕಾರರು ತಮ್ಮ ಅಧ್ಯಯನದಲ್ಲಿ ಸಂಭಾವ್ಯ ಕೂದಲು ಬೆಳೆಯುವಿಕೆಗೆ ಕಾರಣವಾಗಿರಬಹುದೆನ್ನಲಾದ ಹೊಸ ಜೀನ್ ಸೆಟ್ ಅನ್ನು ಕಂಡುಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಂಶೋಧಕರ ತಂಡದ ಇನ್ನೊಬ್ಬ ಜೀನ್ ಸಂಶೋಧಕರಾದ ಅಮಂಡಾ ಕೊವಾಲ್ಜಿಕ್ ಅವರು, "ಹಲವು ಸಂಖ್ಯೆಯ ಜೀನ್ ಗಳು ಲಭ್ಯವಿದ್ದು ಅವುಗಳ ಬಗ್ಗೆ ನಮಗೆ ಅಷ್ಟೊಂದು ಇನ್ನೂ ತಿಳಿದಿಲ್ಲ" ಎಂಬುದಾಗಿ ಹೇಳುತ್ತಾರೆ.
ಅವರ ಪ್ರಕಾರ, ಆ ಜೀನ್ ಗಳು ಕೂದಲು ಬೆಳವಣಿಗೆ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದ್ದವುಗಳಾಗಿರಬಹುದೆಂದು ಅಮಾಂಡಾ ತಿಳಿಸುತ್ತಾರೆ. ಒಟ್ಟಾರೆಯಾಗಿ ತಂಡದ ಅಭಿಪ್ರಾಯದಂತೆ, ಮಾನವ ಶರೀರದ ವಿಕಸನ ಪ್ರಕ್ರಿಯೆಯು, ಕೆಲ ಸಸ್ತನಿಗಳಲ್ಲಿ ಕಡಿಮೆ ಕೂದಲು ಉತ್ಪತ್ತಿಯಾಗುವುದನ್ನು ಸೇರಿಸಿ ಜೀನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪ್ರಭಾವಿಸಿದೆ.
ಕೂದಲು ಬೆಳವಣಿಗೆಗೆ ವಂಶವಾಹಿನಿಗಳು ಕಾರಣ
ವಿಕಸನದ ಪ್ರಕ್ರಿಯೆ ತನ್ನ ಶಿಖರದಲ್ಲಿದ್ದಾಗ ಕೂದಲು ಕಳೆದುಕೊಳ್ಳುವಂತಹ ಒತ್ತಡದ ಪರಿಸ್ಥಿತಿ ಶರೀರದಲ್ಲಿ ಮೂಡಲಾರಂಭಿಸಿದಾಗ ಕೂದಲು ಬೆಳವಣಿಗೆಗೆ ಕಾರಣವಾದ ವಂಶವಾಹಿನಿಗಳು ತಮ್ಮ ಮಹತ್ವವನ್ನು ಕಳೆದುಕೊಂಡವು ಹಾಗೂ ಇದು ಮುಂದುವರಿದಂತೆ ಕೂದಲಿನ ಪ್ರಮಾಣ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದ ವಂಶವಾಹಿನಿಗಳು ಬಲು ಕಡಿಮೆ ಪ್ರಮಾಣದಲ್ಲಿ ಸಕ್ರಿಯವಾದವು ಎಂದಾಗಿದೆ.
ಆದರೆ, ಈಗ ನಡೆಸಲಾಗಿರುವ ಅಧ್ಯಯನದ ಪ್ರಕಾರ, ಮನುಷ್ಯನಲ್ಲಿ ಇಂದಿಗೂ ಕೂದಲ ಬೆಳವಣಿಗೆ ಬೂಸ್ಟ್ ಮಾಡುವ ಜೀನ್ ಗಳು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತೆ ಸಕ್ರಿಯವಾಗಿ ಪುನರುಜ್ಜೀವನಗೊಳಿಸುವ ಮಾರ್ಗಗಳು ಲಭ್ಯವಾಗಬಹುದು ಹಾಗೂ ಆ ಮೂಲಕ ಕೂದಲಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದೆ ಎಂದು ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ