HPV Virus: ಮಹಿಳೆಯರಿಗೆ ಮಾತ್ರ ಅಲ್ಲ ಪುರುಷರಿಗೂ ಅಪಾಯ ತಂದೊಡ್ಡುತ್ತದೆ ಹೆಚ್​​ಪಿವಿ! ಹೇಗೆ ಅಂತ ತಿಳ್ಕೊಳ್ಳಿ

ಹೆಚ್​​ಪಿವಿ ವೈರಸ್ ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲೂ ವಿವಿಧ ರೀತಿಯ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗಳಿಗೆ ಕಾರಣವಾಗುತ್ತದೆ. 2001 ರಿಂದ 2017ರವರೆಗೆ ಅಮೆರಿಕಾದಲ್ಲಿನ ಯುವಕರಲ್ಲಿ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ ಐದು ಪಟ್ಟು ಹೆಚ್ಚಳವಾಗಿದ್ದು, ಇದಕ್ಕೆ ಹೆಚ್‌ ಪಿವಿ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹ್ಯೂಮನ್ ಪ್ಯಾಪಿಲೋಮ್ ವೈರಸ್ ನಿಂದ ಉಂಟಾಗುವ ದೀರ್ಘಕಾಲದ ಸೋಂಕು ಗರ್ಭಕಂಠದ ಕ್ಯಾನ್ಸರ್‌ ಗೆ (Cancer) ಕಾರಣ ಮಾತ್ರವಲ್ಲದೇ ಇದು ಲೈಂಗಿಕ ಸಮಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮಾನ್ಯ ವೈರಸ್ ಆಗಿದೆ. ಎಲ್ಲರಿಗೂ ತಿಳಿದಿರುವಂತೆ ಅಸುರಕ್ಷಿತ ಲೈಂಗಿಕ ಕ್ರಿಯೆ ಯಾವಾಗ್ಲೂ ಅಪಾಯಕಾರಿಯಾಗಿದೆ. ಕೇವಲ ಗರ್ಭಧಾರಣೆ (pregnancy) ಮಾತ್ರವಲ್ಲ ಇದರಿಂದಾಗಿ ಅನೇಕ ಸೋಂಕುಗಳು ದೇಹವನ್ನು ಪ್ರವೇಶಿಸುತ್ತವೆ ಮತ್ತು ಗಂಭೀರ ಕಾಯಿಲೆಗಳಿಗೆ (Serious Diseases) ಕಾರಣವಾಗುತ್ತದೆ. ಇದು ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲೂ ವಿವಿಧ ರೀತಿಯ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗಳಿಗೆ ಕಾರಣವಾಗುತ್ತದೆ. 2001 ರಿಂದ 2017ರವರೆಗೆ ಅಮೆರಿಕಾದಲ್ಲಿನ ಯುವಕರಲ್ಲಿ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ ಐದು ಪಟ್ಟು ಹೆಚ್ಚಳವಾಗಿದ್ದು, ಇದಕ್ಕೆ ಹೆಚ್‌ ಪಿವಿ (HPV) ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.

ಹೆಚ್​​ಪಿವಿ ಲಸಿಕೆ ಮಹಿಳೆಯರು ಮಾತ್ರ ಅಲ್ಲ ಪುರುಷರಿಗೂ ತೆಗೆದುಕೊಳ್ಳುವಂತೆ ಒತ್ತಾಯ
ಈ ಡೇಟಾವನ್ನು ಔಪಚಾರಿಕವಾಗಿ 2021ರ ಅಮೇರಿಕನ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಹೆಚ್​​ಪಿವಿ ಲಸಿಕೆಯನ್ನು ಪುರುಷರು ಸೇರಿ ಮಹಿಳೆಯರು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ವಾರ್ವಿಕ್ ವಿಶ್ವವಿದ್ಯಾನಿಲಯದ ಮಾದರಿಯು ಹೆಚ್​​ಪಿವಿ ಲಸಿಕೆ ಕಾರ್ಯಕ್ರಮವು 2058ರ ಹೊತ್ತಿಗೆ 64,138 ಹೆಚ್​​ಪಿವಿ ಸಂಬಂಧಿತ ಗರ್ಭಕಂಠದ ಕ್ಯಾನ್ಸರ್ ಮತ್ತು 49,649 ಇತರ ಹೆಚ್​​ಪಿವಿ ಸಂಬಂಧಿತ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು ಎಂದು ಅಂದಾಜಿಸಿದೆ.

ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತಂತೆ ಈ ವೈರಸ್ 
ಹೆಚ್​​ಪಿವಿ ವೈರಸ್ ಯಾವುದೇ ಲಿಂಗ ಪಕ್ಷಪಾತವಿಲ್ಲದೇ ಹರಡುವಂತ ಕಾಯಿಲೆಯಾಗಿದೆ. ಇದು ಲೈಂಗಿಕವಾಗಿ ಸಕ್ರಿಯವಾಗಿರುವರಲ್ಲಿ ಕೆಲವು ಹಂತದಲ್ಲಿ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತದೆ. ಕೆಲವು ಡೆಟಾಗಳ ಪ್ರಕಾರ, 2013 ಮತ್ತು 2017 ರ ನಡುವೆ, ಮಹಿಳೆಯರಲ್ಲಿ ಸುಮಾರು 25,000 ಹೆಚ್​​ಪಿವಿ -ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ಮತ್ತು ಪುರುಷರಲ್ಲಿ 19,000 ಪ್ರಕರಣಗಳು ಕಂಡುಬಂದಿವೆ. ಯುಎಸ್‌ನಲ್ಲಿ ಗರ್ಭಕಂಠದ ಕ್ಯಾನ್ಸರ್‌ಗಳಿಗಿಂತ, ಪುರುಷರಲ್ಲಿ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳ ಪ್ರಕರಣಗಳು ಈಗ ಹೆಚ್ಚು ಎಂದು ಡೇಟಾ ತೋರಿಸುತ್ತದೆ. ಇದರಲ್ಲಿ 70 ಪ್ರತಿಶತ ಪ್ರಕರಣಗಳು ಹೆಚ್​​ಪಿವಿ ವೈರಸ್‌ನಿಂದ ಉಂಟಾಗುತ್ತದೆ.

ಆದ್ದರಿಂದ, ಯುಎಸ್‌ನಲ್ಲಿ ಶಾಲಾ ಹಂತದಲ್ಲಿಯೇ ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಲಸಿಕೆ ಹಾಕಲಾಗುತ್ತಿದೆ. ಈ ವೈರಸ್, ಪುರುಷರು ಮತ್ತು ಮಹಿಳೆಯರಲ್ಲಿ ನಾಲಿಗೆ ಮತ್ತು ಟಾನ್ಸಿಲ್‌ಗಳ ಬುಡ ಸೇರಿದಂತೆ ಗಂಟಲಿನ ಹಿಂಭಾಗದಲ್ಲಿ ಓರೊಫಾರಂಜಿಯಲ್ ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಾಲಕರಿಗೆ, ಪುರುಷರಿಗೆ ಮೊದಲೇ ಲಸಿಕೆ ತೆಗೆದುಕೊಳ್ಳುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ.

ಹುಡುಗರಿಗೆ ಯಾವಾಗ ಹೆಚ್​​ಪಿವಿ ಲಸಿಕೆ ನೀಡಬೇಕು?
ಹುಡುಗರು ಮತ್ತು ಹುಡುಗಿಯರಿಗೆ ಒಂಬತ್ತು ವರ್ಷ ತುಂಬಿದ ಬಳಿಕ ಹೆಚ್​​ಪಿವಿ ಲಸಿಕೆಯನ್ನು ಶಿಫಾರಸು ಮಾಡಲಾಗುತ್ತದೆ. ಹುಡುಗರಿಗೆ ಈ ಲಸಿಕೆ ತೆಗೆದುಕೊಳ್ಳಲು ಉತ್ತಮ ಸಮಯ 9 ರಿಂದ 15 ವರ್ಷ ಎಂದು ತಜ್ಞರು ಹೇಳಿದ್ದಾರೆ. ಈ ಲಸಿಕೆ ತೆಗೆದುಕೊಳ್ಳುವುದಿಂದ ಮುಂದಿನ ದಿನಗಳಲ್ಲಿ ತಮ್ಮ ಸಂಗಾಂತಿಗೆ ಇವರು ವೈರಸ್ ಅನ್ನು ರವಾನಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:  Cancer: ಯುವಜನರಲ್ಲಿಯೇ ಹೆಚ್ಚುತ್ತಿದ್ಯಂತೆ ಮಹಾಮಾರಿ ಕ್ಯಾನ್ಸರ್‌! ಹಾಗಿದ್ರೆ ಇದಕ್ಕೆ ಕಾರಣವೇನು?

ಹುಡುಗರಿಗೆ ಡೋಸೇಜ್ ಹೇಗಿರಬೇಕು?
ಒಂಭತ್ತು ಮತ್ತು 15 ವರ್ಷಗಳ ನಡುವೆ ಹುಡುಗರಿಗೆ ಕೇವಲ ಎರಡು ಡೋಸ್ಗಳು ಅವಶ್ಯಕತೆ ಇರುತ್ತದೆ. ಹೆಚ್ಚುವರಿ ಎಂದರೆ ಮೂರು ಡೋಸ್‌ ಗಳನ್ನು ಪಡೆಯಬಹುದು.

ಲಸಿಕೆ ಎಲ್ಲಾ ಹೆಚ್​​ಪಿವಿ ವೈರಸ್‌ಗಳಿಂದ ರಕ್ಷಿಸುತ್ತದೆಯೇ?
ಈ ಹೆಚ್​​ಪಿವಿ ವೈರಸ್‌ನಲ್ಲಿ 15 ತಳಿಗಳಿವೆ ಮತ್ತು ಈ ಲಸಿಕೆಯು ಯುವಕರನ್ನು ನಾಲ್ಕು ತಳಿಗಳ ವಿರುದ್ಧ ರಕ್ಷಿಸುತ್ತದೆ. ಇದು ಕ್ಯಾನ್ಸರ್ ತಡೆಗಟ್ಟುವ ಅತ್ಯುತ್ತಮ ಮಾರ್ಗವಾಗಿದೆ ಮತ್ತು ಹಲವು ದೇಶಗಳು ವ್ಯಾಕ್ಸಿನೇಷನ್ ನೀಡಿದ ನಂತರ ಪ್ರಕರಣಗಳಲ್ಲಿ ಇಳಿಕೆ ಕಂಡಿವೆ.

ಹುಡುಗರಿಗೆ ಹೆಚ್​​ಪಿವಿ ಏಕೆ ಅಪಾಯಕಾರಿ?
ಹೆಚ್​​ಪಿವಿ ಹಲವಾರು ರೀತಿಯ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗಬಹುದು. ಈ ಪ್ರಕರಣಗಳು ಮೊದಲ ಹಂತದಲ್ಲಿಯೇ ಗೋಚರವಾಗದ ಕಾರಣ ಇವುಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯ, ಹೆಚ್​​ಪಿವಿಯಿಂದ ಉಂಟಾಗುವ ಇತರ ಕ್ಯಾನ್ಸರ್ಗಳು ತಡವಾಗಿ ಪ್ರಕಟವಾಗುವವರೆಗೆ ಅವುಗಳನ್ನು ಪತ್ತೆಹಚ್ಚಲಾಗುವುದಿಲ್ಲ.

ಇದನ್ನೂ ಓದಿ:  Infertility: ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ 6 ಜೀವನಶೈಲಿಗಳಿವು, ಎಚ್ಚರವಹಿಸಿ

ಹೀಗಾಗಿ ಈ ವೈರಸ್‌ ನಿಂದ ಉಂಟಾಗುವ ಕ್ಯಾನ್ಸರ್‌ ಪುರುಷರಿಗೆ ಅಪಾಯಕಾರಿಯಾಗಿದ್ದು, ಲಸಿಕೆ ತೆಗೆದುಕೊಳ್ಳುವುದರ ಮೂಲಕ ಅಪಾಯವನ್ನು ತಡೆಯಬಹುದಾಗಿದೆ.

ಯಾವೆಲ್ಲಾ ದೇಶಗಳು ಹುಡುಗರಿಗೆ ಹೆಚ್​​ಪಿವಿ ಲಸಿಕೆಗಳನ್ನು ಪರಿಚಯಿಸಿವೆ?
ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು, ವಿಶೇಷವಾಗಿ ಯುಎಸ್ ಮತ್ತು ಯುಕೆ ರಾಷ್ಟ್ರಗಳು ಈ ಲಸಿಕೆಯನ್ನು ಪರಿಚಯಿಸಿವೆ. ಯುಎಸ್ ಮತ್ತು ಯುಕೆ ಹೊರತುಪಡಿಸಿ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬರ್ಮುಡಾ, ಬ್ರೆಜಿಲ್, ಕೆನಡಾ, ಕ್ರೊಯೇಷಿಯಾ, ಜರ್ಮನಿ, ಇಸ್ರೇಲ್, ಇಟಲಿ, ಲಿಚ್ಟೆನ್‌ಸ್ಟೈನ್, ನ್ಯೂಜಿಲೆಂಡ್ ಮತ್ತು ಸೆರ್ಬಿಯಾ "ಲಿಂಗ ತಟಸ್ಥ" ರೋಗನಿರೋಧಕ ಕಾರ್ಯಕ್ರಮಗಳನ್ನು ಹೊಂದಿವೆ.
Published by:Ashwini Prabhu
First published: