HPV Vaccine: HPV ಲಸಿಕೆಯು ಮಹಿಳೆಯರಲ್ಲಿ ಕುತ್ತಿಗೆಯ ಕ್ಯಾನ್ಸರ್ ಪ್ರಮಾಣವನ್ನು 87% ಕಡಿಮೆ ಮಾಡಿದೆ: ಅಧ್ಯಯನ

3 ಗುಂಪುಗಳಲ್ಲಿ ಲಸಿಕೆ ನೀಡಲಾಗಿದ್ದು ವಿವಿಧ ವಯಸ್ಸಿನವರಿಗೆ ಲಸಿಕೆಯನ್ನು ನೀಡಲಾಯಿತು. 12-13 ವಯಸ್ಸಿನವರ ಗುಂಪು, 14-16 ವಯಸ್ಸಿನವರ ಗುಂಪು, 16-18 ವಯಸ್ಸಿನವರ ಗುಂಪು ಹೀಗೆ ವಯಸ್ಸಿನ ಆಧಾರದಲ್ಲಿ ಲಸಿಕೆ ವಿತರಿಸಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಫಸ್ಟ್ ಜನರೇಶನ್ HPV ಲಸಿಕೆಯು(HPV vaccine) ಮಹಿಳೆ(Women)ಯರಲ್ಲಿ ಕಂಡುಬರುವ ಕುತ್ತಿಗೆಯ ಕ್ಯಾನ್ಸರ್(Cervical Cancer) ಪ್ರಮಾಣವನ್ನು 87%ನಷ್ಟು ಕಡಿಮೆ ಮಾಡಿದೆ ಎಂದು ಬ್ರಿಟಿಷ್ ಸಂಶೋಧಕರು(British Researchers) ವರದಿ ಮಾಡಿದ್ದಾರೆ. 2006ರಲ್ಲಿ ಮೆರ್ಕ್ ನಿರ್ಮಿಸಿದ ಮೊದಲ ತಲೆಮಾರಿನ ಗಾರ್ಡಸಿಲ್ ® ಅನ್ನು FDA ಮೊದಲ ಬಾರಿಗೆ ಅನುಮೋದಿಸಿತು. HPV ಯ - 6, 11, 16, ಮತ್ತು 18ರ 4 ತಳಿಗಳ ಸೋಂಕನ್ನು ತಡೆಯಿತು. ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ(Study)ವು 2019ರ ಮಧ್ಯದ ವೇಳೆಗೆ ಕುತ್ತಿಗೆಯ ಕ್ಯಾನ್ಸರ್(Cervical Cancer)‌ನ 450ಕ್ಕಿಂತ ಕಡಿಮೆ ಪ್ರಕರಣಗಳು ಹಾಗೂ 17,200 ಪೂರ್ವ-ಕ್ಯಾನ್ಸರ್ ಪ್ರಕರಣಗಳು ಲಸಿಕೆ ಪಡೆದ ಜನರಲ್ಲಿ ಇಳಿಮುಖವಾಗಿರುವುದನ್ನು ಕಂಡುಕೊಂಡಿದೆ.

ಲಸಿಕೆ ಹಾಕಿಸಿಕೊಂಡವರನ್ನು ಹಾಕಿಸಿಕೊಳ್ಳದಿರುವವರ ಜೊತೆ ಹೋಲಿಕೆ

ಈ ಸಂಬಂಧಿತವಾಗಿ ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಬ್ರಿಟಿಷ್ ಸರ್ಕಾರದ ಸಂಶೋಧಕರು ಜನವರಿ 2006 ಮತ್ತು ಜೂನ್ 2019ರ ನಡುವೆ ಇಂಗ್ಲೆಂಡ್‌ನಲ್ಲಿ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆ ಡೇಟಾವನ್ನು 7 ಗುಂಪುಗಳ ಮಹಿಳೆಯರಲ್ಲಿ ಅನ್ವೇಷಿಸಿದ್ದು, ಲಸಿಕೆ ಹಾಕಿಸಿಕೊಂಡವರನ್ನು ಲಸಿಕೆ ಹಾಕಿಸಿಕೊಳ್ಳದವರೊಂದಿಗೆ ಹೋಲಿಸಿದ್ದಾರೆ.

ಲಸಿಕೆ ಎಷ್ಟು ಸೇಫ್?

ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ HPVಯ ಎರಡು ತಳಿಗಳ ವಿರುದ್ಧ ರಕ್ಷಿಸುವ ಸೆರ್ವಾರಿಕ್ಸ್ ಲಸಿಕೆ ಒಳಗೊಂಡಿರುವ ಡೇಟಾ ವಿಶ್ಲೇಷಣೆ ನಡೆಸಿದ್ದು, ಗಾರ್ಡಸಿಲ್ ಬ್ರ್ಯಾಂಡ್ ವ್ಯಾಪ್ತಿಯಲ್ಲಿ ಬರುವ ಲಸಿಕೆಗಳು ಕ್ಯಾನ್ಸರ್ ಉಂಟುಮಾಡುವ ಇನ್ನಷ್ಟು ತಳಿಗಳ ವಿರುದ್ಧ ಸಂರಕ್ಷಿಸುತ್ತಿವೆ ಎಂಬುದನ್ನು ಕಂಡುಕೊಂಡಿದೆ.

ಅಧ್ಯಯನದಲ್ಲಿ ಕಂಡು ಬಂದ ಸತ್ಯವೇನು?

3 ಗುಂಪುಗಳಲ್ಲಿ ಲಸಿಕೆ ನೀಡಲಾಗಿದ್ದು ವಿವಿಧ ವಯಸ್ಸಿನವರಿಗೆ ಲಸಿಕೆಯನ್ನು ನೀಡಲಾಯಿತು. 12-13 ವಯಸ್ಸಿನವರ ಗುಂಪು, 14-16 ವಯಸ್ಸಿನವರ ಗುಂಪು, 16-18 ವಯಸ್ಸಿನವರ ಗುಂಪು ಹೀಗೆ ವಯಸ್ಸಿನ ಆಧಾರದಲ್ಲಿ ಲಸಿಕೆ ವಿತರಿಸಲಾಯಿತು. ಆರಂಭಿಕ ವಯಸ್ಸಿನಲ್ಲಿ (12-13) ಲಸಿಕೆ ಪಡೆದವರು ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ತಂಡವು ವರದಿ ಮಾಡಿದೆ. 14-16ರ ಹರೆಯದವರಲ್ಲಿ ಲಸಿಕೆಯು ಕ್ಯಾನ್ಸರ್ ದರವನ್ನು 62%ದಷ್ಟು ಕಡಿಮೆ ಮಾಡಿದ್ದರೆ 16-18ರ ಹರೆಯದವರಲ್ಲಿ ಈ ಪ್ರಮಾಣವು 24%ರಷ್ಟು ಕಡಿಮೆಯಾಗಿದೆ ಎಂಬುದಾಗಿ ಅಧ್ಯಯನ ತಂಡವು ತಿಳಿಸಿದೆ.

ಇದನ್ನೂ ಓದಿ:Healthy Pregnancy Tips: ಗರ್ಭಿಣಿಯರು ಗರ್ಭಾವಸ್ಥೆ ಸಮಯದಲ್ಲಿ ಈ ಸೂತ್ರಗಳನ್ನು ತಪ್ಪದೇ ಪಾಲಿಸಿ

ಕುತ್ತಿಗೆ ಕ್ಯಾನ್ಸರ್​ ಮಹಿಳೆಯರಲ್ಲೇ ಏಕೆ ಹೆಚ್ಚು?

ಕುತ್ತಿಗೆಯ ಕ್ಯಾನ್ಸರ್ ಮೇಲೆ UK HPV ಲಸಿಕೆ ಅಭಿಯಾನದ ಪ್ರಭಾವದ ನೇರ ಪುರಾವೆಯನ್ನು ಈ ಅಧ್ಯಯನವು ಒದಗಿಸುತ್ತದೆ. ಲಸಿಕೆ ಹಾಕಿದ ಸಮೂಹದಲ್ಲಿನ ಕುತ್ತಿಗೆಯ ಕ್ಯಾನ್ಸರ್‌ನ ಪ್ರಮಾಣದಲ್ಲಿ ದೊಡ್ಡ ಇಳಿಕೆ ತೋರಿಸುತ್ತದೆ ಎಂದು UK ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಅಧ್ಯಯನದ ಸಹ-ಲೇಖಕಿ ಡಾ. ಕೇಟ್ ಸೋಲ್ಡನ್ ಹೇಳಿದ್ದಾರೆ.

ಕುತ್ತಿಗೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಲಸಿಕೆ ಬಹುಮುಖ್ಯ ಪಾತ್ರ

ಲಸಿಕಾ ಅಭಿಯಾನವು ಕುತ್ತಿಗೆಯ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಯುವತಿಯರಲ್ಲಿ ಕುತ್ತಿಗೆಯ ಕ್ಯಾನ್ಸರ್ ಅಪರೂಪವಾಗಿದ್ದು ಈ ಕ್ಯಾನ್ಸರ್‌ನ ಮೇಲೆ HPV ಪ್ರತಿರಕ್ಷಣೆಗಳ ಸಂಪೂರ್ಣ ಪ್ರಭಾವ ನಿರ್ಧರಿಸಲು ಇನ್ನೂ ಸಮಯ ಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅಧ್ಯಯನದಲ್ಲಿ 2012ರಲ್ಲಿ ಇಂಗ್ಲೆಂಡ್ ಲಸಿಕೆ ಬಳಸುವುದನ್ನು ನಿಲ್ಲಿಸಿತು. ಇದೀಗ Cervarix ಲಸಿಕೆಯ ಬದಲಿಗೆ ಇಂಗ್ಲೆಂಡ್ ಗಾರ್ಡಸಿಲ್ ಲಸಿಕೆ ಬಳಸುತ್ತಿದೆ.

ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಕುತ್ತಿಗೆಯ ಕ್ಯಾನ್ಸರ್ ನಿರ್ಮೂಲನೆ ವೇಗಗೊಳಿಸಲು ಜಾಗತಿಕ ಕಾರ್ಯತಂತ್ರ ಪ್ರಾರಂಭಿಸಿತು, ಇದು ಕ್ಯಾನ್ಸರ್ ತೊಡೆದುಹಾಕಲು ಮೊದಲ ಜಾಗತಿಕ ಬದ್ಧತೆಯಾಗಿದ್ದು, 90% ಹುಡುಗಿಯರು 15ರ ಹರೆಯಕ್ಕೆ ಬರುವ ವೇಳೆಗೆ HPV ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆಯುವ ಗುರಿ ಹೊಂದಿದ್ದರು.

HPV ಲಸಿಕಾ ಅಭಿಯಾನ ಎಲ್ಲೆಲ್ಲಿ ನಡೆಯಿತು?

ಜನವರಿಯಲ್ಲಿ, US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು HPV ವ್ಯಾಕ್ಸಿನೇಷನ್ ದರಗಳನ್ನು ಹೆಚ್ಚಿಸಲು ಅಭಿಯಾನ ಪ್ರಾರಂಭಿಸಿತು. ಅಭಿಯಾನವು ದಕ್ಷಿಣ ಕೆರೊಲಿನಾ, ಟೆಕ್ಸಾಸ್ ಮತ್ತು ಮಿಸ್ಸಿಸ್ಸಿಪ್ಪಿ ಸೇರಿದಂತೆ ಕೆಲವು ಕಡಿಮೆ HPV ಲಸಿಕೆ ದರಗಳೊಂದಿಗೆ ನಿರ್ದಿಷ್ಟವಾಗಿ ರಾಜ್ಯಗಳನ್ನು ಗುರಿಯಾಗಿಸಿಕೊಂಡಿದೆ.

ಅಮೆರಿಕದಲ್ಲಿ ಕುಸಿತ ಕಂಡ ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳು

2021ರಲ್ಲಿ, ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ HPV ಲಸಿಕೆ ದರಗಳು ಉತ್ತಮವಾಗುತ್ತಿವೆ ಎಂದು ಕಂಡುಕೊಂಡಿದೆ, ಆದರೆ USನಲ್ಲಿ ಅರ್ಧಕ್ಕಿಂತ ಕಡಿಮೆ ಯುವ ವಯಸ್ಕರು ಒಂದು ಅಥವಾ ಹೆಚ್ಚಿನ ಪ್ರಮಾಣ ಸ್ವೀಕರಿಸಿದ್ದಾರೆ ಮತ್ತು HPV ವ್ಯಾಕ್ಸಿನೇಷನ್ ದರವು ಇತರ ಲಸಿಕೆಗಳ ದರಕ್ಕೆ ಇನ್ನೂ ತಾಳೆಯಾಗಿಲ್ಲ. CDC 2006ರಲ್ಲಿ 11-12 ವರ್ಷ ವಯಸ್ಸಿನ ಹುಡುಗಿಯರಿಗೆ HPV ಲಸಿಕೆ ಶಿಫಾರಸು ಮಾಡಲು ಪ್ರಾರಂಭಿಸಿತು. 2021 CDC ವರದಿಯು HPV ಲಸಿಕೆಯಿಂದಾಗಿ ಅಮೆರಿಕದಲ್ಲಿ ಕುತ್ತಿಗೆಯ ಕ್ಯಾನ್ಸರ್ ದರಗಳು ಗಣನೀಯವಾಗಿ ಕುಸಿದಿದೆ ಎಂದು ಕಂಡುಕೊಂಡಿದೆ.

ಇದನ್ನೂ ಓದಿ:Covid 19: ಮೆದುಳಿನ ಮೇಲೆ ಕೋವಿಡ್-19 ವೈರಸ್ ಪರಿಣಾಮ ಬೀರುವುದಿಲ್ಲವಂತೆ!

USನಲ್ಲಿ HPV ಅತ್ಯಂತ ಸಾಮಾನ್ಯವಾದ ಲೈಂಗಿಕವಾಗಿ ಹರಡುವ ವೈರಸ್ ಆಗಿದೆ. ಇದು ಸಾಮಾನ್ಯವಾಗಿ ತನ್ನಷ್ಟಕ್ಕೇ ಪರಿಹಾರಗೊಂಡರೂ ನಿರಂತರವಾದ HPV ಸೋಂಕು ಮಹಿಳೆಯರಲ್ಲಿ ಕುತ್ತಿಗೆಯ ಕ್ಯಾನ್ಸರ್‌ಗೆ ಕಾರಣವಾಗಿದ್ದು, ಅಂದರೆ ಗಂಟಲಿನ ಹಿಂಭಾಗದ ಕ್ಯಾನ್ಸರ್ ಮತ್ತು ಅನೋಜೆನಿಟಲ್ (ಗುದದ್ವಾರ ಮತ್ತು ಜನನಾಂಗಗಳಿಗೆ ಸಂಬಂಧಿಸಿದೆ) ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. HPV ಪುರುಷರಿಗೆ ಗುದ, ಶಿಶ್ನ ಮತ್ತು ಗಂಟಲಿನ ಕ್ಯಾನ್ಸರ್ ಉಂಟಾಗುವ ಅಪಾಯವಿದೆ.
Published by:Latha CG
First published: