HPCL recruitment: ಹೆಚ್‌ಪಿಸಿಎಲ್​ ನೇಮಕಾತಿ: ತಿಂಗಳ ಕನಿಷ್ಠ ವೇತನ 40 ಸಾವಿರ..!

HPCL recruitment 2019: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಿಂದ ಬಿ.ಎಸ್ಸಿ ಹೊಂದಿರಬೇಕು. ರಸಾಯನಶಾಸ್ತ್ರ ವಿಷಯದಲ್ಲಿ ಕನಿಷ್ಠ  ಶೇ. 60 ರಷ್ಟು ಅಂಕಗಳನ್ನು ಪಡೆದಿರಬೇಕು.

zahir | news18-kannada
Updated:September 25, 2019, 10:20 AM IST
HPCL recruitment: ಹೆಚ್‌ಪಿಸಿಎಲ್​ ನೇಮಕಾತಿ: ತಿಂಗಳ ಕನಿಷ್ಠ ವೇತನ 40 ಸಾವಿರ..!
ಸಾಂದರ್ಭಿಕ ಚಿತ್ರ
zahir | news18-kannada
Updated: September 25, 2019, 10:20 AM IST
HPCL recruitment 2019:  ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್​ನ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದರೆ  ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿದ್ದು, ಇದರೊಳಗೆ ಹೆಚ್‌ಪಿಸಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್ಲಿಕೇಶನ್​ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರ:

ಮೈಂಟೇನೆನ್ಸ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 8 ಹುದ್ದೆಗಳು.

ಮೈಂಟೇನೆನ್ಸ್ ಟೆಕ್ನಿಷಿಯನ್ (ಇನ್ಸಟ್ರುಮೆಂಟೇಶನ್): 5 ಹುದ್ದೆಗಳು

ಮೈಂಟೇನೆನ್ಸ್ ಟೆಕ್ನಿಷಿಯನ್ (ಮೆಕ್ಯಾನಿಕಲ್): 7 ಹುದ್ದೆಗಳು

ಲ್ಯಾಬ್ ಅನಾಲಿಸ್ಟ್: 4 ಹುದ್ದೆಗಳು

ಜೂನಿಯರ್ ಫೈರ್ ಅಂಡ್ ಸೇಫ್ಟಿ ಇನ್ಸ್‌ಪೆಕ್ಟರ್: 12 ಹುದ್ದೆಗಳು
Loading...

ಶೈಕ್ಷಣಿಕ ಅರ್ಹತೆ:

ಮೈಂಟೇನೆನ್ಸ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್): ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರಬೇಕು.

ಮೈಂಟೇನೆನ್ಸ್ ಟೆಕ್ನಿಷಿಯನ್ (ಇನ್ಸಟ್ರುಮೆಂಟೇಶನ್): ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಇನ್ಸಟ್ರುಮೆಂಟೇಶನ್ ಅಥವಾ  ಕಂಟ್ರೋಲ್ ಅಥವಾ ಎಲೆಕ್ಟ್ರಾನಿಕ್ ಮತ್ತು ಇನ್ಸಟ್ರುಮೆಂಟೇಶನ್​ನಲ್ಲಿ ಡಿಪ್ಲೊಮಾ ಹೊಂದಿರಬೇಕು.

ಮೈಂಟೇನೆನ್ಸ್ ಟೆಕ್ನಿಷಿಯನ್ (ಮೆಕ್ಯಾನಿಕಲ್):  ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು.

ಲ್ಯಾಬ್ ವಿಶ್ಲೇಷಕ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಿಂದ ಬಿ.ಎಸ್ಸಿ ಹೊಂದಿರಬೇಕು. ರಸಾಯನಶಾಸ್ತ್ರ ವಿಷಯದಲ್ಲಿ ಕನಿಷ್ಠ  ಶೇ. 60 ರಷ್ಟು ಅಂಕಗಳನ್ನು ಪಡೆದಿರಬೇಕು. ಇದಲ್ಲದೆ ಶೇ.60 ರಷ್ಟು ಅಂಕಗಳೊಂದಿಗೆ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪಡೆದಿರುವ ಅಭ್ಯರ್ಥಿಗಳು  ಸಹ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಫೈರ್ ಅಂಡ್ ಸೇಫ್ಟಿ ಇನ್ಸ್‌ಪೆಕ್ಟರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ ಪದವೀಧರರಾಗಿರಬೇಕು. ಹಾಗೆಯೇ ಪದವಿಯಲ್ಲಿ ಕನಿಷ್ಠ 40% ಅಂಕಗಳನ್ನು ಪಡೆದಿರಬೇಕು. ಇದರೊಂದಿಗೆ ಹೆವಿ ಮೋಟಾರು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ಇದನ್ನೂ ಓದಿ: 600 ಕೋಟಿ ಬಜೆಟ್​​ನಲ್ಲಿ ಬೆಳ್ಳಿತೆರೆ ಮೇಲೆ ರಾಮಾಯಣ: ರಾಮ ಮತ್ತು ರಾವಣ ಪಾತ್ರಕ್ಕೆ ಸ್ಟಾರ್ ನಟರು ಫಿಕ್ಸ್..!

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಕನಿಷ್ಠ 40,000 ವೇತನ ನೀಡಲಾಗುತ್ತದೆ. ಇನ್ನು ವೇತನವು ಅವರ ಸ್ಥಾನ ಮತ್ತು ಅವರು ಕೆಲಸ ಮಾಡುವ ಸ್ಥಳವನ್ನು ಅವಲಂಬಿಸಿ ಬದಲಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 9 ತಿಂಗಳ ತರಬೇತಿ ಅವಧಿ ಇರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್​ನ ಅಧಿಕೃತ ವೆಬ್‌ಸೈಟ್ hindustanpetroleum.com ಗೆ ಭೇಟಿ  ಅರ್ಜಿ ಸಲ್ಲಿಸಬಹುದು. ಅಲ್ಲಿ ನೀಡಲಾಗಿರುವ "Career Opportunities" ಆಯ್ಕೆ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 30, 2019

ಚೆಂದುಟಿಯ ಚೆಲುವೆ ಶುಭಾ ಪೂಂಜಾ ಮುಂದಿದೆ ಖಾಲಿ ದೋಸೆ


First published:September 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...