• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Health Tips: ಏನನ್ನು ಯೋಚಿಸಬೇಕೆಂಬುದನ್ನು ಮೆದುಳು ಹೇಗೆ ನಿರ್ಧರಿಸುತ್ತದೆ; ನರವಿಜ್ಞಾನಿ ಮಾರ್ಕಸ್ ರೈಚೆಲ್ ಸಲಹೆ ಏನು?

Health Tips: ಏನನ್ನು ಯೋಚಿಸಬೇಕೆಂಬುದನ್ನು ಮೆದುಳು ಹೇಗೆ ನಿರ್ಧರಿಸುತ್ತದೆ; ನರವಿಜ್ಞಾನಿ ಮಾರ್ಕಸ್ ರೈಚೆಲ್ ಸಲಹೆ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ಹಗಲುಗನಸು ಕಾಣುವಾಗ, ನಮ್ಮ ಬಗ್ಗೆ ಅಥವಾ ಇತರರ ಬಗ್ಗೆ ಯೋಚಿಸುವಾಗ, ನೆನಪುಗಳನ್ನು ನೆನಪಿಸಿಕೊಳ್ಳುವಾಗ ಅಥವಾ ಭವಿಷ್ಯದ ಘಟನೆಗಳನ್ನು ಊಹಿಸುವಾಗ ಮೆದುಳು ತನ್ನಷ್ಟಕ್ಕೆ ತಾನು ಕೆಲವೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತದೆ

 • Trending Desk
 • 4-MIN READ
 • Last Updated :
 • Share this:

  ನಮ್ಮ ಮನಸ್ಸು (Mid) ಎಂಬುದು ಮರ್ಕಟನಂತೆ (ಕೋತಿಯಂತೆ) (Monkey) ಎಂಬ ಮಾತೊಂದಿದೆ. ಏಕೆಂದರೆ ಮನಸ್ಸಿಗೆ ಬರುವ ಆಲೋಚನೆಗಳು (Thoughts) ಪ್ರಸ್ತುತ ಸನ್ನಿವೇಶಕ್ಕೆ ಸಂಬಂಧಿಸಿದ್ದೇ ಆಗಬೇಕು ಎಂದೇನಿಲ್ಲ. ನಮ್ಮ ತಲೆಯಲ್ಲಿ ಮೂಡುವ ಆಲೋಚನೆಗಳು ಹಾಗೂ ಮನದಲ್ಲಿ ಹುಟ್ಟುವ ತರ್ಕಗಳು ಒಮ್ಮೊಮ್ಮೆ ಆ ಸನ್ನಿವೇಶಕ್ಕೆ (Situation) ಸಂಬಂಧಿಸಿದ್ದೇ ಆಗಿರುವುದಿಲ್ಲ. ಹಾಗಿದ್ದರೆ ಇಂತಹ ಆಲೋಚನೆಗಳು ಹುಟ್ಟುವುದು ಹೇಗೆ? ಅದಕ್ಕೆ ಕಾರಣಗಳೇನು? ನಾವು ಕೆಲವು ವಿಷಯಗಳನ್ನು ಏಕೆ ನೆನಪಿಸಿಕೊಳ್ಳುತ್ತೇವೆ ಎಂಬುದನ್ನು ತಿಳಿದುಕೊಳ್ಳೋಣ. 


  ಮೆದುಳಿನ ಚಟುವಟಿಕೆಯ ಭಾಗ


  ಇಂತಹ ಪ್ರಕ್ರಿಯೆಯನ್ನು ಮೆದುಳಿನ ಚಟುವಟಿಕೆ ಎಂದು ಕರೆದಿರುವ ನರವಿಜ್ಞಾನಿ ಮಾರ್ಕಸ್ ರೈಚೆಲ್ ನಾವು ಹಗಲುಗನಸು ಕಾಣುವಾಗ, ನಮ್ಮ ಬಗ್ಗೆ ಅಥವಾ ಇತರರ ಬಗ್ಗೆ ಯೋಚಿಸುವಾಗ, ನೆನಪುಗಳನ್ನು ನೆನಪಿಸಿಕೊಳ್ಳುವಾಗ ಅಥವಾ ಭವಿಷ್ಯದ ಘಟನೆಗಳನ್ನು ಊಹಿಸುವಾಗ ಮೆದುಳು ತನ್ನಷ್ಟಕ್ಕೆ ತಾನು ಕೆಲವೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.


  how bad cholesterol damage brain health and which foods beneficial
  ಸಾಂದರ್ಭಿಕ ಚಿತ್ರ


  ಮೆದುಳಿನ ಈ ಚಟುವಟಿಕೆ ನಾವು ಶಾಂತರಾಗಿ ಕುಳಿತಿದ್ದಾಗ ಹಾಗೂ ಯಾವುದೇ ಕೆಲಸಗಳನ್ನು ಮಾಡದೆಯೇ ಇರುವ ಸಮಯದಲ್ಲಿ ಸಾಮಾನ್ಯವಾಗಿ ನಡೆಯುತ್ತದೆ ಎಂದು ಮಾರ್ಕಸ್ ತಿಳಿಸಿದ್ದಾರೆ.


  ಇತರರ ಕುರಿತ ನೆನಪುಗಳು ಏಕೆ ಮನದಲ್ಲಿ ಮೂಡುತ್ತದೆ?


  ಕೆಲವು ನೆನಪುಗಳು ಸ್ವಯಂಪ್ರೇರಿತವಾಗಿ ಮೂಡುತ್ತವೆ ಎಂಬುದು ಮಾರ್ಕಸ್ ಹೇಳಿಕೆಯಾಗಿದೆ. ಆ ನೆನಪುಗಳು ಭಾವನಾತ್ಮಕ, ಪದೇ ಪದೇ ನೆನಪಿಗೆ ಬರುವ, ಹಾಗೂ ನಮ್ಮ ಗುರುತಿನಲ್ಲಿರುವವರ ಬಗ್ಗೆ ಆಗಿರುತ್ತದೆ ಎಂಬುದು ಅವರ ವಾದವಾಗಿದೆ. ನಮ್ಮ ಗಮವನ್ನು ಆ ವ್ಯಕ್ತಿ ಯಾವುದೋ ಒಂದು ರೀತಿಯಲ್ಲಿ ಒಳ್ಳೆಯ ಅಂಶದಿಂದ ನಮ್ಮನ್ನು ಸೆಳೆದಿರುತ್ತಾರೆ ಹಾಗಾಗಿಯೇ ಅದೇ ವ್ಯಕ್ತಿಯ ಗುರುತು ಆಗಾಗ್ಗೆ ಮನದಲ್ಲಿ ಮೂಡುತ್ತದೆ ಎಂದು ಮಾರ್ಕಸ್ ತಿಳಿಸುತ್ತಾರೆ. ಈ ರೀತಿಯ ನೆನಪುಗಳು ಆ ಸಮಯದಲ್ಲಿ ನಮ್ಮ ಭೌತಿಕ ಮತ್ತು ಸಾಮಾಜಿಕ ಪರಿಸರದೊಂದಿಗೆ ತೊಡಗಿಸಿಕೊಳ್ಳಲು ಪ್ರಮುಖವಾದವು ಎಂಬುದು ಅವರ ಮಾತಾಗಿದೆ.


  ನೆನಪುಗಳು ಸನ್ನಿವೇಶದ ಮೇಲೆ ಕೇಂದ್ರಿತವಾಗಿರುತ್ತದೆ


  ಮೆದುಳು ಮರುನಿರ್ಮಾಣ, ಸಹಾಯಕ ರೀತಿಯಲ್ಲಿ ನೆನಪುಗಳನ್ನು ಸಂಗ್ರಹಿಸುತ್ತದೆ ಹಾಗೂ ಸಂಪೂರ್ಣ ಸನ್ನಿವೇಶವನ್ನು ಕಾಲಾನುಕ್ರಮದಲ್ಲಿ ಜೋಡಿಸಿ ನೆನಪಿಸುತ್ತದೆ. ಇದರರ್ಥ ವಿಭಿನ್ನ ಸಂವೇದನಾ, ಭಾವನಾತ್ಮಕ ಮತ್ತು ಸಂದರ್ಭೋಚಿತ ವಿವರಗಳ ಮೂಲಕ ನೆನಪುಗಳು ಪರಸ್ಪರ ಸಂಬಂಧ ಹೊಂದಿರಬಹುದು.


  ಸಾಂದರ್ಭಿಕ ಚಿತ್ರ


  ಆಲೋಚನೆಗಳು ಕೆಟ್ಟದಾಗಿ ಬದಲಾದಾಗ ಏನು ಮಾಡಬೇಕು? ತಡೆಹಿಡಿಯುವುದು ಹೇಗೆ?


  ಆಲೋಚನೆಗಳು ಮತ್ತು ನೆನಪುಗಳ ಸ್ವಾಭಾವಿಕ ಸ್ವಭಾವವು ಕಲ್ಪನೆ ಮತ್ತು ಸೃಜನಶೀಲತೆಯನ್ನು ಬೆಂಬಲಿಸುತ್ತದೆ. ಸ್ವಯಂಪ್ರೇರಿತವಾಗಿ ಬರುವ ಆಲೋಚನೆಗಳು ಯಾವಾಗಲೂ ಒಳ್ಳೆಯದಲ್ಲ ಎಂಬುದು ಮಾರ್ಕಸ್ ಹೇಳಿಕೆಯಾಗಿದೆ.


  ಉದಾಹರಣೆಗೆ, ಪ್ರಸವಾನಂತರದ ಆತಂಕ ಮತ್ತು ಖಿನ್ನತೆಯಲ್ಲಿ, ಹೊಸದಾಗಿ ತಾಯಿಯಾದವರು ತಮ್ಮ ಮಗುವಿಗೆ ಏನಾದರೂ ಹಾನಿಯಾದರೆ ಎಂಬ ಭಯದಲ್ಲಿ ದಿನದೂಡುತ್ತಾರೆ. ಇದು ಒಂದು ರೀತಿಯ ಗೊಂದಲವನ್ನು ಉಂಟುಮಾಡುತ್ತದೆ, ಈ ಸಮಯದಲ್ಲಿ ಮನಸ್ಸಿಗೆ ಧೈರ್ಯವನ್ನು ಹೇಳಬೇಕು ಹಾಗೂ ಇಂತಹ ಆಲೋಚನೆಗಳು ಮನಸ್ಸಿಗೆ ಬಾರದಂತೆ ಬೇರೆ ಏನಾದರೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಮಾರ್ಕಸ್ ತಿಳಿಸುತ್ತಾರೆ.


  ಕೆಟ್ಟ ಯೋಚನೆಗಳನ್ನು ತನ್ನಷ್ಟಕ್ಕೆ ಹಾದುಹೋಗಲು ಬಿಡಿ


  ಇಂತಹ ಆಲೋಚನೆಗಳು ಬಂದಂತಹ ಸಂದರ್ಭದಲ್ಲಿ ಮನೆಯವರ ಹಾಗೂ ಆಪ್ತರ ಸಹಾಯವನ್ನು ಮುಂಚಿತವಾಗಿ ಪಡೆದುಕೊಳ್ಳಿ ಎಂದು ಮಾರ್ಕಸ್ ಸಲಹೆ ನೀಡುತ್ತಾರೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಅನಗತ್ಯ ಆಲೋಚನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಮಾರ್ಕಸ್ ತಿಳಿಸುತ್ತಾರೆ. ಅನೇಕ ಆಲೋಚನೆಗಳು ನಮ್ಮ ಮನಸ್ಸನ್ನು ಯಾವಾಗ ಬೇಕಾದರೂ ನಿಯಂತ್ರಿಸಬಹುದು ಹಾಗೂ ಯಾವಾಗ ಬೇಕಾದರೂ ಬರಬಹುದು.
  ಇದನ್ನು ಮಾನವ ತನ್ನ ಸ್ಮರಣೆಯ ಹಾಗೂ ಚಿಂತನೆಯ ಪ್ರಕ್ರಿಯೆಗಳ ಸಾಮಾನ್ಯ ಭಾಗ ಎಂದೇ ನೆನಪಿನಲ್ಲಿರಿಸಿಕೊಳ್ಳಬೇಕು. ಇದೇ ರೀತಿ ಮನಸ್ಸಿಗೆ ಭಯವನ್ನುಂಟು ಮಾಡುವ ಹಾಗೂ ಗೊಂದಲ ಸೃಷ್ಟಿಸುವ ಆಲೋಚನೆಗಳು ಬಂದಾಗ ಅದನ್ನು ಅದರಷ್ಟಕ್ಕೆ ಬಿಡಿ ಎಂದು ಮಾರ್ಕಸ್ ಸಲಹೆ ನೀಡುತ್ತಾರೆ.

  Published by:Monika N
  First published: