Fertility Issues: ಬಂಜೆತನ ಸಮಸ್ಯೆ ನಿವಾರಣೆಗೆ ಯೋಗಾಸನ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?

Yoga : ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ನಿಮಗೆ ವ್ಯಾಯಾಮವು ಸಹಾಯಕವಾಗುತ್ತದೆ. ನೀವು ಹೆಚ್ಚು ತೂಕವನ್ನು ಹೊಂದಿದ್ದರೆ ವ್ಯಾಯಾಮ ಮತ್ತು ಡಯೆಟ್ ನಿಮಗೆ ಗರ್ಭಧರಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯ್ತನವು ಜೀವನದಲ್ಲಿ ಅತ್ಯಂತ ಅದ್ಭುತ ಅನುಭವಗಳಲ್ಲಿ ಒಂದು, ಆದರೆ ಇದನ್ನು ಅನುಭವಿಸಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಒತ್ತಡದ ಜೀವದ,  ಹೆಚ್ಚಿನ ಕೆಲಸದ  ಸಮಯ ಮತ್ತು ಕೆಟ್ಟ ಆಹಾರ ಪದ್ಧತಿ ಅನೇಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪರಿಣಾಮವಾಗಿ, ಅನೇಕ ಜನರು Fertility ಸಮಸ್ಯೆಯನ್ನು  ಎದುರಿಸುತ್ತಿದ್ದಾರೆ. ಸಂಶೋಧನೆಯ ಪ್ರಕಾರ, ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆರೋಗ್ಯಕರ ಜೀವನಶೈಲಿ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡುತ್ತದೆ. ಜೊತೆಗೆ ಆರೋಗ್ಯ ಸ್ಥಿರವಾಗಿರುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ.

ಇನ್ನು ನಿಮ್ಮಲ್ಲಿ Fertility ಸಮಸ್ಯೆ ಕಾಣಿಸಿಕೊಂಡಲ್ಲಿ ವ್ಯಾಯಾಮ ಮಾಡುವ ಮೂಲಕ  ಪರಿಹಾರ ಕಂಡುಕೊಳ್ಳಬಹುದು. ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ನಿಮಗೆ ವ್ಯಾಯಾಮವು ಸಹಾಯಕವಾಗುತ್ತದೆ. ನೀವು ಹೆಚ್ಚು ತೂಕವನ್ನು ಹೊಂದಿದ್ದರೆ ವ್ಯಾಯಾಮ ಮತ್ತು ಡಯೆಟ್ ನಿಮಗೆ ಗರ್ಭಧರಿಸಲು ಸಹಾಯ ಮಾಡುತ್ತದೆ. ಯೋಗಾಸನ ನಿಮ್ಮ ದೇಹ ಮತ್ತು ಮನಸ್ಸನ್ನು ಶಾಂತವಾಗಿಡಲು ಮತ್ತು  ದೇಹದ ಶಕ್ತಿಯನ್ನು ಅಭಿವೃದ್ಧಿಪಡಿಸುವ ಮೂಲಕ ಹೆರಿಗೆಗೆ ನಿಮ್ಮನ್ನ  ಸಿದ್ಧಪಡಿಸುತ್ತದೆ. ನೀವು ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಯೋಗಾಸನ ಮಾಡುವುದು ಬಹಳ ಉಪಯುಕ್ತವಾಗಿದೆ.

ಯೋಗವು ಬಂಜೆತನವನ್ನು ಹೇಗೆ ನಿವಾರಿಸುತ್ತದೆ?

ಯೋಗಾಸನ ಹಲವು ಆರೋಗ್ಯಕರ ಪ್ರಯೋಜವನ್ನು ಹೊಂದಿದೆ. ಕೆಲ ಆಸನಗಳು ಈ ಬಂಜೆತನ ನಿವಾರಣೆಗೆ ಸಹಾಯ ಮಾಡುತ್ತದೆ.

ಹೇಗೆ ಯೋಗಾಸನ ಮಹಿಳೆಯರಿಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

ಪ್ರತಿದಿನ ಯೋಗ ಮಾಡುವ  ಅಭ್ಯಾಸ ಗರ್ಭಕೋಶ ಮತ್ತು ಅಂಡಾಶಯದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಬೆನ್ನಿನ ಸ್ನಾಯುಗಳ ನೋವು ಇರುತ್ತದೆ, ಇದು ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಯೋಗ ಮಾಡುವುದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪಿಸಿಓಎಸ್​ ಸಮಸ್ಯೆಯಿಂದ ಹೊರಬರಲು ಈ ಕ್ರಮಗಳನ್ನು ಪಾಲಿಸಿ

ಯೋಗಾಸನ ಮಾಡುವ ಮೂಲಕ ದೇಹದಲ್ಲಿರುವ ವಿಷವನ್ನು ಹೊರಹಾಕಿ ದೇಹವನ್ನು ನಿರ್ವಿಷಗೊಳಿಸಬಹುದು.

ಸೊಂಟದ ನೋವು ಸೇರಿದಂತೆ ಸೊಂಟದ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ.

ಕುತ್ತಿಗೆಯ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಿ  ಬಲಪಡಿಸುತ್ತದೆ ಮತ್ತು ಬೆನ್ನುಮೂಳೆಯು ಹೆಚ್ಚು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.

ಸಂತಾನೋತ್ಪತ್ತಿ ಅಂಗಗಳಿಗೆ ಹೆಚ್ಚಿನ ರಕ್ತ ಪೂರೈಕೆ ಮಾಡಲು ಯೋಗ ಮಾಡುವುದು ಒಳ್ಳೆಯ ಮಾರ್ಗ.

ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆ, ಒತ್ತಡವನ್ನು ಹೋಗಲಾಡಿಸಿ. ಮನಸಿನ ಭಾವನೆಗಳ ಬದಲಾವಣೆಗಳನ್ನು ಕಡಿಮೆ ಮಾಡಲು ಸಹಾಯ

ಮಾಡುತ್ತದೆ. ಇನ್ನು ಯೋಗ ಮಾಡುವುದು ಹೆರಿಗೆಗೆ ಸುಲಭವಾಗಲು ಸಹಾಯವಾಗುತ್ತದೆ.

ಸಮಸ್ಯೆಗೆ ಪರಿಹಾರ ಪಡೆಯಲು ಈ ಯೋಗಾಸನಗಳನ್ನು ಪ್ರಯತ್ನಿಸಿ ನೋಡಿ

ನೀವು ಕುಳಿತುಕೊಂಡು ಮುಂದಕ್ಕೆ ಬಾಗಿ  ಈ ಯೋಗಾಸನ ಗರ್ಭಕೋಶ ಮತ್ತು ಅಂಡಾಶಯದ ಕಾರ್ಯಗಳನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಸಡಿಲಗೊಳಿಸುತ್ತದೆ.

ವಿಪರೀತ ಕರಣಿ: ಈ ಆಸನ  ಬೆನ್ನು ನೋವನ್ನು ನಿವಾರಣೆ ಮಾಡುತ್ತದೆ ಮತ್ತು ಸೊಂಟದಲ್ಲಿ ಸುಧಾರಿತ ರಕ್ತ ಪರಿಚಲನೆಯನ್ನು ಒದಗಿಸುತ್ತದೆ. ಈ ಭಂಗಿ ಮಾಡಲು, ಗೋಡೆಯ ಪಕ್ಕದಲ್ಲಿ ನೆಲದ ಮೇಲೆ ಕುಳಿತುಕೊಳ್ಳಿ, ನಿಮ್ಮ ಎಡಭಾಗವನ್ನು ಗೋಡೆಯ ಮೇಲೆ ಉದ್ದವಾಗಿ  ಇರಿಸಿ. ಶವಾಸನದ ರೀತಿಯಲ್ಲಿ ಕೈಗಳನ್ನು ಚಾಚಿ ಹಿಡಿದುಕೊಳ್ಳಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: