ಅತಿಯಾದ ತೂಕ (Over Weight) ಹಲವು ಕಾಯಿಲೆಗಳಿಗೆ (Disease) ಕಾರಣವಾಗುತ್ತದೆ. ಸ್ಥೂಲಕಾಯ (Obesity) ನಡೆಯಲು, ಓಡಲು, ಸಕ್ರಿಯವಾಗಿರಲು ಸಾಕಷ್ಟು ತೊಂದರೆ (Problem) ಉಂಟು ಮಾಡುತ್ತದೆ. ಹಾಗೆಯೇ ದೀರ್ಘಕಾಲದ ಸ್ಥೂಲಕಾಯದಿಂದ ಮೂಳೆಗಳು ಸವೆಯುತ್ತವೆ ಎಂದು ಹೇಳಲಾಗುತ್ತದೆ. ಅತಿಯಾದ ಬೊಜ್ಜು ಮೊಣಕೈ, ಮೊಣಕಾಲು, ಹಿಮ್ಮಡಿ ಮತ್ತು ಪಾದಗಳಲ್ಲಿ ನೋವಿಗೆ ಕಾರಣವಾಗುತ್ತದೆ. ಸ್ಥೂಲಕಾಯವು ಕೀಲು ನೋವು, ಊತ ಹಾಗೂ ಸಂಧಿವಾತ ಕಾಯಿಲೆಗೆ (Arthritis Disease) ಕಾರಣವಾಗುತ್ತದೆ. ಸ್ಥೂಲಕಾಯ ಒಂದು ಸಮಸ್ಯೆಯಾದ್ರೆ, ವಯಸ್ಸಾದಂತೆ ಮೂಳೆಗಳು ಸವೆಯುವುದು ಇನ್ನೊಂದು ಸಮಸ್ಯೆ. ಇದು ಮೊಣಕಾಲು ನೋವು ಹೆಚ್ಚಿಸುತ್ತದೆ. ಈ ಸಂಧಿವಾತ ನೋವು ವ್ಯಕ್ತಿಯನ್ನು ಸಾಕಷ್ಟು ಬಾಧಿಸುತ್ತದೆ. ಏಳಲು, ಕೂರಲು, ನಡೆಯಲು ಸಾಧ್ಯವಾಗದ ಸ್ಥಿತಿಗೆ ಕಾರಣವಾಗುತ್ತದೆ.
ಸ್ಥೂಲಕಾಯ ಮತ್ತು ಸಂಧಿವಾತ
ಅಸ್ಥಿಸಂಧಿವಾತ ಮತ್ತು ಸಂಧಿವಾತ ಎಂಬ ವಿಧಗಳು ಹೆಚ್ಚು ಸ್ಥೂಲಕಾಯ ಹೊಂದಿರುವ ಜನರನ್ನು ಬಾಧಿಸುತ್ತವೆ. ಇನ್ನು ಸಂಧಿವಾತ ಸಮಸ್ಯೆ ಕೆಲವೊಮ್ಮೆ ಬೊಜ್ಜಿನಿಂದ ಬರಬಹುದು.
ಇನ್ನು ಕೆಲವೊಮ್ಮೆ ಅನುವಂಶಿಕವಾಗಿ ಬರಬಹುದು. ಕೆಲವೊಮ್ಮೆ ತಪ್ಪಾದ ಆಹಾರ ಮತ್ತು ದೈಹಿಕ ಚಟುವಟಿಕೆ ಕೊರತೆ ಹಾಗೂ ಹೆಚ್ಚಿನ ದೈಹಿಕ ಚಟುವಟಿಕೆಯಿಂದಲೂ ಬರಬಹುದು.
ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚು ಸಂಗ್ರಹವಾದಾಗ ಸಂಧಿವಾತ ಸಮಸ್ಯೆ ಕಾಡುತ್ತದೆ. ಇದು ಗೌಟ್ ಸಮಸ್ಯೆಗೆ ಕಾರಣವಾಗುತ್ತದೆ. ಸಂಧಿವಾತವು ಕ್ಯಾಲ್ಸಿಯಂ ಕೊರತೆ, ರೋಗ ನಿರೋಧಕ ಶಕ್ತಿ ದೌರ್ಬಲ್ಯ, ಚಯಾಪಚಯ ದರದಲ್ಲಿನ ಬದಲಾವಣೆಯಿಂದಾಗಿ ಬರುತ್ತದೆ.
ಹೆಚ್ಚಿನ ಸಂಧಿವಾತ ಪ್ರಕರಣಗಳು ಸ್ಥೂಲಕಾಯ ಸಮಸ್ಯೆಯಿಂದ ಬರುತ್ತದೆ ಎಂದು ಹೇಳಲಾಗಿದೆ. ನೀವು ತೂಕ ಕಡಿಮೆ ಮಾಡುವ ಮೂಲಕ ಸಂಧಿವಾತದ ಸಮಸ್ಯೆ ಕಡಿಮೆ ಮಾಡಬಹುದು.
ಸಂಧಿವಾತ ಸಮಸ್ಯೆ ತಡೆಗೆ ತೂಕವನ್ನು ಕಡಿಮೆ ಮಾಡಿ
ಸಂಧಿವಾತ ಸಮಸ್ಯೆ ತಡೆಗೆ ತೂಕವನ್ನು ಕಡಿಮೆ ಮಾಡಬೇಕು. ದೇಹದಲ್ಲಿ ಸಕಾರಾತ್ಮಕ ಬದಲಾವಣೆಯಾದಾಗ ಸಂಧಿವಾತ ಸಮಸ್ಯೆ ಕಡಿಮೆಯಾಗುತ್ತದೆ. ಸರಿಯಾದ ಆಹಾರ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ತೂಕ ಕಾಪಾಡಿ.
ಅಧಿಕ ತೂಕದಿಂದಾಗಿ ಕೀಲುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದು ಹೆಚ್ಚಿದ ನೋವು ಮತ್ತು ಊತ ಉಂಟು ಮಾಡುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿದರೆ ಕೀಲುಗಳ ಮೇಲೆ ಒತ್ತಡ ಕಡಿಮೆ ಬೀಳುತ್ತದೆ. ಸಂಧಿವಾತ ರೋಗ ಲಕ್ಷಣಗಳ ತೀವ್ರತೆ ಕಡಿಮೆಯಾಗುತ್ತದೆ.
ನಿಯಮಿತ ವ್ಯಾಯಾಮ ಮಾಡುವುದು, ಹಣ್ಣು, ತರಕಾರಿ, ನೇರ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧ ಸಮತೋಲಿತ ಆಹಾರ ಸೇವನೆ ಮಾಡಿ. ಇದು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಹಾಗೂ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.
ತೂಕ ಇಳಿಕೆ ಹೇಗೆ ಸಂಧಿವಾತ ಸಮಸ್ಯೆ ನಿವಾರಿಸುತ್ತದೆ?
ಕೀಲುಗಳ ಮೇಲಿನ ನೋವು ಮತ್ತು ಒತ್ತಡ ಕಡಿಮೆ ಮಾಡುತ್ತದೆ
ದೇಹದ ತೂಕ ಕಡಿಮೆಯಾದಂತೆ ಕೀಲುಗಳ ಮೇಲಿನ ಹೆಚ್ಚಿನ ಒತ್ತಡ ಕಡಿಮೆ ಆಗುತ್ತದೆ. ಸರಿಯಾದ ಆಹಾರ ಮತ್ತು ದೈನಂದಿನ ವ್ಯಾಯಾಮವು ತೂಕ ಇಳಿಕೆಗೆ ಸಹಕಾರಿ. ಇದು ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆ.
ದಿನವೂ ವಾಕಿಂಗ್ ಮಾಡಿ
ದಿನವೂ ನಿಯಮಿತವಾಗಿ ವಾಕಿಂಗ್ ಮಾಡುವುದು ತೂಕ ಕಡಿಮೆ ಮಾಡುತ್ತದೆ. ಕೀಲುಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಚುರುಕಾದ ನಡಿಗೆ ನಿಮ್ಮ ಕೀಲುಗಳ ಆರೋಗ್ಯ ಸುಧಾರಿಸುತ್ತದೆ.
ತೂಕ ಇಳಿಸಿದರೆ ರೋಗ ಕಡಿಮೆಯಾಗುತ್ತದೆ
ತೂಕ ಕಳೆದುಕೊಂಡಂತೆ ಸಂಧಿವಾತ ಕಡಿಮೆಯಾಗುತ್ತದೆ. ಉತ್ತಮ ರೋಗ ನಿಯಂತ್ರಣ ಮಾಡಬಹುದು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ವೇಟ್ ಲಾಸ್ ಸಹಕಾರಿ.
ಇದನ್ನೂ ಓದಿ: ಅಸ್ತಮಾ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಸುತ್ತಾರಾ? ಅದು ರೋಗಿಯ ತೂಕ ಹೆಚ್ಚಿಸುತ್ತಾ?
ದೀರ್ಘಕಾಲದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ
ತೂಕ ಇಳಿಕೆಯು ರುಮಟಾಯ್ಡ್ ಸಂಧಿವಾತ, ಹೃದ್ರೋಗ ಮತ್ತು ಮಧುಮೇಹ ಹಾಗೂ ದೀರ್ಘಕಾಲದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ