• Home
  • »
  • News
  • »
  • lifestyle
  • »
  • Anti-Aging Tips: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?

Anti-Aging Tips: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಟಮಿನ್ ಸಿ ಸೀರಮ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಮತ್ತು ಇದು ಎಲ್ಲಾ ಚರ್ಮದ ಸಮಸ್ಯೆ ಹೋಗಲಾಡಿಸುತ್ತದೆ. ಇದು ಕಾಲಜನ್ ಬೆಳವಣಿಗೆ ಹೆಚ್ಚಿಸುವ ಮೂಲಕ ವಯಸ್ಸಾಗುವಿಕೆ ವಿರೋಧಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ.

  • Share this:

    ಪ್ರತಿಯೊಬ್ಬರೂ (Everyone) ದೋಷ ರಹಿತ ಮತ್ತು ಹೊಳೆಯುವ ಮುಖ (Glowing Skin) ತಮ್ಮದಾಗಬೇಕು ಎಂದು ಬಯಸುತ್ತಾರೆ. ಹೊಳೆಯುವ ಚರ್ಮ ಪಡೆಯಲು ಮತ್ತು ಚರ್ಮದ ಸಮಸ್ಯೆ (Skin Problem) ತೊಡೆದು ಹಾಕಲು ಶ್ರಮಿಸುತ್ತಾರೆ. ಮಹಿಳೆಯರು (Women’s) ಎಷ್ಟು ಪ್ರಯತ್ನ ಮಾಡುತ್ತಾರೆಂದರೆ ಸಾಕಷ್ಟು ಕ್ರೀಂಗಳನ್ನು (Creams) ತಂದು ಮುಖಕ್ಕೆ ಅನ್ವಯಿಸಿ, ಫಲಿತಾಂಶ ಪಡೆಯಲು ನೋಡುತ್ತಾರೆ. ಮತ್ತು ಅನೇಕ ಸೌಂದರ್ಯ ವರ್ಧಕಗಳನ್ನು ಸಹ ಬಳಕೆ ಮಾಡುತ್ತಾರೆ. ಆದರೆ ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಒಂದು ಮುಖ್ಯ ವಸ್ತು ಎಂದರೆ ಸೀರಮ್. ಇದನ್ನು ನೀವು ಕಂಡರೆ ಖರೀದಿ ಮಾಡಿ. ವಿಟಮಿನ್ ಸಿ ಸೀರಮ್ ಅನ್ನು ಸಿಟ್ರಸ್ ಹಣ್ಣುಗಳಿಂದ ತಯಾರಿಸಲಾಗುತ್ತದೆ.


    ವಿಟಮಿನ್ ಸಿ ಸೀರಮ್ ಎಂದರೇನು?


    ವಿಟಮಿನ್-ಸಿ ಸೀರಮ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಮತ್ತು ಇದು ಎಲ್ಲಾ ಚರ್ಮದ ಸಮಸ್ಯೆ ಹೋಗಲಾಡಿಸುತ್ತದೆ. ಇದು ಕಾಲಜನ್ ಬೆಳವಣಿಗೆ ಹೆಚ್ಚಿಸುವ ಮೂಲಕ ವಯಸ್ಸಾಗುವಿಕೆ ವಿರೋಧಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಚರ್ಮದ ಸುಕ್ಕು, ಕಲೆ, ಮೊಡವೆ ಮತ್ತು ಕಲೆಗಳು ಕಡಿಮೆ ಆಗುತ್ತವೆ.


    ವಿಟಮಿನ್ ಸಿ ಸೀರಮ್ ಪ್ರಯೋಜನಗಳು


    ಯಾವುದೇ ಅಡ್ಡ ಪರಿಣಾಮ ಬೀರಲ್ಲ


    ವಿಟಮಿನ್ ಸಿ ಸೀರಮ್ ನ್ನು ದೀರ್ಘ ಕಾಲದವರೆಗೆ ಚರ್ಮದ ಮೇಲೆ ಅನ್ವಯಿಸಬಹುದು. ಇದು ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಹಾಗೆಯೇ ಚರ್ಮಕ್ಕೆ ತೇವಾಂಶ ನೀಡುತ್ತದೆ.


    ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


    ಚರ್ಮದ ಆರೈಕೆಗಾಗಿ ಬಳಸುವ ವಿಟಮಿನ್ ಸಿ ಆಧಾರಿತ ತ್ವಚೆ ಉತ್ಪನ್ನಗಳಲ್ಲಿ ಮೆಗ್ನೀಸಿಯಮ್ ಆಸ್ಕೋರ್ಬಿಲ್ ಫಾಸ್ಫೇಟ್ ಕೂಡ ಇರುತ್ತದೆ. ಇದು ತ್ವಚೆಯ ತೇವಾಂಶ ಉಳಿಸಲು ತುಂಬಾ ಸಹಕಾರಿ ಆಗಿದೆ.


    ಮೈಬಣ್ಣ ಚೆನ್ನಾಗಿಡಲು ಸಹಕಾರಿ


    ವಿಟಮಿನ್ ಸಿ ಸೀರಮ್ ಪಿಗ್ಮೆಂಟೇಶನ್ ಅನ್ನು ಹಗುರ ಮಾಡುತ್ತದೆ. ಮತ್ತು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ. ಇದರ ನಿಯಮಿತ ಬಳಕೆ ಚರ್ಮಕ್ಕೆ ಕಳೆದು ಹೋದ ಹೊಳಪನ್ನು ಮರಳಿ ತರುತ್ತದೆ.


    ಸುಕ್ಕುಗಳಿಗೆ ಪರಿಹಾರ ನೀಡುತ್ತದೆ


    ಕಾಲಜನ್ ಒಂದು ನೈಸರ್ಗಿಕ ಪ್ರೋಟೀನ್ ಆಗಿದೆ. ಇದರ ಉತ್ಪಾದನೆ ವಯಸ್ಸಾದಂತೆ ಕಡಿಮೆ ಆಗುತ್ತದೆ. ಈ ಕಾರಣ ಮುಖದ ಮೇಲೆ ಸುಕ್ಕು ಮತ್ತು ನುಣ್ಣಗೆ ಗೆರೆ ಉಂಟಾಗುವ ಸಮಸ್ಯೆ ಉಂಟು ಮಾಡುತ್ತದೆ. ಅಂತಹ ವೇಳೆ ವಿಟಮಿನ್ ಸಿ ಸೀರಮ್ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಕಾರಿ ಆಗಿದೆ.


    ಕಣ್ಣಿನ ವಲಯಗಳ ಬಣ್ಣ ಹಗುರ ಮಾಡುತ್ತದೆ


    ವಿಟಮಿನ್ ಸಿ ಸೀರಮ್ ಮುಖದ ಮೇಲೆ ಸೂಕ್ಷ್ಮ ರೇಖೆಗಳು ಮತ್ತು ಕಣ್ಣಿನ ಕೆಳಭಾಗದ ಪ್ರದೇಶ ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಇದು ಕಣ್ಣಿನ ಕೆಳಗಿನ ವಲಯಗಳ ಮೈಬಣ್ಣ ಹಗುರ ಮಾಡುತ್ತದೆ.


    ಯಾವಾಗ ವಿಟಮಿನ್ ಸಿ ಸೀರಮ್ ಅನ್ನು ಅನ್ವಯಿಸಬೇಕು?


    ವಿಟಮಿನ್ ಸಿ ಸೀರಮ್ ಅನ್ನು ಯಾವಾಗಲೂ ರಾತ್ರಿ ಸಮಯದಲ್ಲಿ ಅನ್ವಯಿಸಬೇಕು. ಏಕೆಂದರೆ ಹಗಲಿನಲ್ಲಿ ಇದನ್ನು ಬಳಸುವುದು ಚರ್ಮದಲ್ಲಿ ಮೆಲನಿನ್ ಪ್ರಮಾಣ ಹೆಚ್ಚಾಗುತ್ತದೆ. ಮತ್ತು ಚರ್ಮದಲ್ಲಿ ಕಪ್ಪಾಗುವ ಸಮಸ್ಯೆ ಇರುತ್ತದೆ. ಹಾಗಾಗಿ ಇದನ್ನು ಮಲಗುವ ಮೊದಲು ಬಳಸಬೇಕು. ರಾತ್ರಿಯಲ್ಲಿ ಚರ್ಮದ ದುರಸ್ತಿ ನಡೆಯುತ್ತಿದ್ದರೆ ಈ ಸೀರಮ್ ಚರ್ಮದಲ್ಲಿ ಚೆನ್ನಾಗಿ ಹೀರಲ್ಪಡುತ್ತದೆ.


    ಇದನ್ನೂ ಓದಿ: ಮೃದುವಾದ ಮತ್ತು ಹೊಳೆಯುವ ಕೂದಲು ಬೇಕೇ? ಹಾಗಾದ್ರೆ ಪ್ರತಿದಿನ ಈ ಹೂವುಗಳ ಹೇರ್ ಮಾಸ್ಕ್ ಹಾಕೊಳ್ಳಿ


    ವಿಟಮಿನ್ ಸಿ ಸೀರಮ್ ನ್ನು ಹೇಗೆ ಬಳಸುವುದು?


    ವಿಟಮಿನ್ ಸಿ ಸೀರಮ್ ಬಲವಾದ ಸೀರಮ್ ಆಗಿದೆ. ಹಾಗಾಗಿ ಮೊದಲು ಸೀರಮ್ ನ 2 ರಿಂದ 3 ಹನಿಗಳನ್ನು ಚರ್ಮಕ್ಕೆ ಅನ್ವಯಿಸಿ. ಮತ್ತು ನಂತರ ಮಾಯಿಶ್ಚರೈಸರ್ ಬಳಸಿ. ಸೂಕ್ಷ್ಮ ಚರ್ಮ ಹೊಂದಿರುವ ಜನರು ಅದನ್ನು ಬಳಸುವ ಮೊದಲು ಪ್ಯಾಚ್ ಪರೀಕ್ಷೆ ಮಾಡಬೇಕು. ಏಕೆಂದರೆ ಇದು ಅಲರ್ಜಿಯ ಪ್ರತಿಕ್ರಿಯೆ ಅಥವಾ ಕೆಂಪು ದದ್ದು ಉಂಟು ಮಾಡುತ್ತದೆ.

    Published by:renukadariyannavar
    First published: