Vastu: ವ್ಯಾಪಾರದಲ್ಲಿ ನಷ್ಟ ಇದೆಯಾ? ಲಾಭ ಪಡೆಯಬೇಕಾ? ಹಾಗಿದ್ರೆ ಈ ಯಂತ್ರಗಳನ್ನು ಪೂಜಿಸಿ

Vastu Yantra: ಕುಬೇರನು ಸಂಪತ್ತಿನ ಅಧಿಪತಿ ಮತ್ತು ಕುಬೇರ ಯಂತ್ರವನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ ವ್ಯಾಪಾರವನ್ನು ಹೊಂದಿರುವವರು ಹಣವನ್ನು ಪಡೆಯಲು ವಿಫಲವಾದರೆ ಸಂಪೂರ್ಣ ಭಕ್ತಿಯಿಂದ ಈ ಯಂತ್ರವನ್ನು ಪೂಜಿಸಿದರೆ ಹಣದ ಲಾಭವು ದೊರೆಯುತ್ತದೆ

ಯಂತ್ರ

ಯಂತ್ರ

 • Share this:
  ಹಿಂದೂ ಧರ್ಮ(Hindu Religion) ಹಾಗೂ ಧಾರ್ಮಿಕ ಸಂಗತಿಯ ಅನುಸಾರ ಪ್ರಪಂಚದ(World) ಪ್ರತಿಯೊಂದು ಸಂಗತಿಯ ಹಿಂದೆಯೂ ದೈವ(God) ಶಕ್ತಿಯ ಪ್ರಭಾವವಿದೆ. ಹಾಗಾಗಿ ನಾವು ಎಲ್ಲೆಲ್ಲಿ ದೇವರನ್ನು ಕಾಣಲು ಬಯಸುತ್ತೇವೆಯೋ ಅಲ್ಲೆಲ್ಲಾ ದೇವರನ್ನು ಕಂಡುಕೊಳ್ಳಬಹುದು. ತಿನ್ನುವ ಆಹಾರದಲ್ಲಿ(Food), ಧರಿಸುವ ಉಡುಗೆಯಲ್ಲಿ(Dress), ನೆಲೆಸುವ ಮನೆಯಲ್ಲಿ(Home) ಎಲ್ಲೆಡೆಯೂ ದೇವನಿದ್ದಾನೆ. ವಾಸಿಸುವ ಮನೆ, ಕಚೇರಿ(Office) ಎಲ್ಲವೂ ವಾಸ್ತುಗಳನ್ನು(Vastu) ಒಳಗೊಂಡಿರುತ್ತದೆ. ವಾಸ್ತು ದೇವನ ನಿಯಮದಂತೆ ಕಟ್ಟಡದ ನಿರ್ಮಾಣ ಹಾಗೂ ಕೆಲಸ ಕಾರ್ಯಗಳು ನಡೆದರೆ ವ್ಯಕ್ತಿ ಜೀವನದಲ್ಲಿ ಧನಾತ್ಮಕ ಗುಣಗಳನ್ನು(Positive) ಮತ್ತು ಅದೃಷ್ಟವನ್ನು(Luck) ಪಡೆದುಕೊಳ್ಳುತ್ತಾನೆ.. ಜೊತೆಗೆ ನೆಮ್ಮದಿ, ಅಭಿವೃದ್ಧಿ, ಹಣಕಾಸು(Financial) ಅನುಕೂಲ, ಆರೋಗ್ಯ ಎಲ್ಲವೂ ದೊರೆಯಲಿ ಅಂತಲೇ. ವಾಸ್ತು ಶಾಸ್ತ್ರದ ಅನ್ವಯವಾಗಿ ನಿರ್ಮಾಣವಾದ ಗೃಹವಾಗಲೀ ಕಚೇರಿಯಾಗಲಿ ಏಳ್ಗೆಗೆ ಕಾರಣವಾಗುತ್ತದೆ. ಆದ್ರೆ ವಾಸ್ತು ಸರಿ ಇಲ್ಲದ ಜಾಗದಲ್ಲಿ ಇದು ಯಾವುದು ಆಗುವುದಿಲ್ಲ.. ಹೀಗಾಗಿಯೇ ವಾಸ್ತು ಪಂಡಿತರು ಈ ಯಂತ್ರಗಳ ಬಳಕೆಯ ಸಲಹೆ ನೀಡುತ್ತಾರೆ...

  1)ವ್ಯಾಪಾರ ವೃದ್ಧಿ ಯಂತ್ರ: ವ್ಯಾಪಾರ ನಡೆಸುತ್ತಿರುವ ಉದ್ಯಮಿಗಳಿಗೆ, ನಿರುದ್ಯೋಗಿಗಳಿಗೆ, ತಮ್ಮ ಉದ್ಯೋಗದಲ್ಲಿ ಬಡ್ತಿ ಬಯಸುವ ಜನರು, ನಿಸ್ಸಂದೇಹವಾಗಿ ಈ ವ್ಯಾಪಾರ ವೃದ್ಧಿ ಯಂತ್ರವನ್ನು ಹೊಂದಿರಬೇಕು. ವ್ಯಾಪಾರ ವೃದ್ಧಿ ಯಂತ್ರವನ್ನು ಕಚೇರಿ, ಅಂಗಡಿ ಅಥವಾ ಶೋ ರೂಂನಂತಹ ವ್ಯವಹಾರದ ಸ್ಥಳದಲ್ಲಿ ಇರಿಸಿ ಮತ್ತು ವ್ಯವಹಾರವು ಹಣ ಸಂಪಾದಿಸುವ ಯಂತ್ರವಾಗಿ ಬದಲಾಗಲಿದೆ..ಇನ್ನು, ವ್ಯಾಪಾರ ವೃದ್ಧಿ ಯಂತ್ರವನ್ನು ತಂದ ಬಳಿಕ ನೀವು ''ಓಂ ಆಕರ್ಷಯೇ ಸ್ವಾಹಾ'' ಎಂಬ ಮಂತ್ರವನ್ನು ಪಠಿಸಬೇಕಾಗಿದೆ.

  ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ಯಾ? ಹಾಗಿದ್ರೆ ಈ ನಿಯಮಗಳನ್ನು ತಪ್ಪದೇ ಫಾಲೋ ಮಾಡಿ.

  2)ಶ್ರೀ ಯಂತ್ರ: ಯಾರ ಮನೆಯಲ್ಲಿ ನಿತ್ಯವೂ ಶ್ರೀ ಯಂತ್ರದ ಪೂಜೆ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ಪರಮೇಶ್ವರಿ ದೇವಿ ವಾಸವಿರುತ್ತಾಳೆ. ಅವರಿಗೆ ದಾರಿದ್ರ್ಯ ಬರುವದಿಲ್ಲವೆಂದು ನಂಬಲಾಗಿದೆ.ಯಂತ್ರವು ನಿಮಗೆ ಬದುಕಿನಲ್ಲಿ ಬೇಕಾದ ಎಲ್ಲ ರೀತಿಯ ಸಂಪತ್ತನ್ನು ಆಕರ್ಷಿಸಿಕೊಡುತ್ತದೆ. ಶಾಂತಿ, ಯಶಸ್ಸು, ಆರೋಗ್ಯ ಹಾಗೂ ಬದುಕಿನ ನೆಮ್ಮದಿಯನ್ನು ನೋಡುವವರಿಗೆ ಶ್ರೀ ಯಂತ್ರ ಸಹಕರಿಸುತ್ತದೆ. ನಿಮ್ಮ ಹಾಗೂ ಸಂಪತ್ತಿನ ನಡುವೆ ಇರಬಹುದಾದ ಅಡೆತಡೆಗಳನ್ನಿದು ತೆಗೆಯುತ್ತದೆ. ಪ್ರತಿ ಶುಕ್ರವಾರ ಬೆಳಿಗ್ಗೆ ನಿಮ್ಮ ಪೂಜಾ ಕೋಣೆಯಲ್ಲಿ ಈ ಯಂತ್ರಕ್ಕೆ ಪಂಚಾಮೃತ ಅಥವಾ ಕಾಯಿಸದ ಹಾಲಿನಿಂದ ಅಭಿಷೇಕ ಮಾಡಿ, ಕೆಂಪು ಬಟ್ಟೆಯ ಮೇಲಿರಿಸಿ. ನಂತರ 108 ಬಾರಿ 'ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೇ ನಮಃ' ಎಂದು ಜಪ ಮಾಡಿ..

  3)ಕುಬೇರ ಯಂತ್ರ: ಕುಬೇರನು ಸಂಪತ್ತಿನ ಅಧಿಪತಿ ಮತ್ತು ಕುಬೇರ ಯಂತ್ರವನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ. ವ್ಯಾಪಾರವನ್ನು ಹೊಂದಿರುವವರು, ಹಣವನ್ನು ಪಡೆಯಲು ವಿಫಲವಾದರೆ, ಸಂಪೂರ್ಣ ಭಕ್ತಿಯಿಂದ ಈ ಯಂತ್ರವನ್ನು ಪೂಜಿಸಿದರೆ ಹಣದ ಲಾಭವು ದೊರೆಯುತ್ತದೆ.ಪುರಾತನ ಗ್ರಂಥಗಳು ಕುಬೇರ ಸಾಧನಾ ಅಭ್ಯಾಸ ಮತ್ತು ಸಂಪತ್ತನ್ನು ಸಂಗ್ರಹಿಸುವುದನ್ನು ಪ್ರೋತ್ಸಾಹಿಸುತ್ತವೆ. ಭಗವಂತ ಕುಬೇರನನ್ನು ಎಲ್ಲಾ ಸಂಪತ್ತುಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ, ಆರಾಧಕನಿಗೆ ಸಮೃದ್ಧಿಯ ಎಲ್ಲಾ ಪ್ರವೇಶವನ್ನು ಹೊಂದಲು ಸಹಾಯ ಮಾಡುತ್ತದೆ.

  ಇದನ್ನೂ ಓದಿ: ಸೂರ್ಯನ ಪ್ರತಿಮೆ ಮನೆಯಲ್ಲಿಡುವುದರಿಂದ ಸಿಗಲಿದೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ

  ಅನೇಕ ಜನರು ವಿವಿಧ ಮಾಧ್ಯಮಗಳ ಮೂಲಕ ಅನಿರೀಕ್ಷಿತ ಹಣವನ್ನು ಗಳಿಸಲು ಕುಬೇರನನ್ನು ಪೂಜಿಸುತ್ತಾರೆ.ಇನ್ನು ಗೃಹಪ್ರವೇಶದ ದಿನ ಕೊಡಲು ಅತ್ಯುತ್ತಮ ಉಡುಗೊರೆ ಇದು. ಏಕೆಂದರೆ ಕುಬೇರ ಎಂದರೆ ಸಂಪತ್ತಿನ ಒಡೆಯ. ಆತನ ಅನುಗ್ರಹ ಇದ್ದವರಿಗೆ ಹಣಕಾಸಿನ ವ್ಯತ್ಯಯವಾಗದು. ಹಾಗಾಗಿ, ಕುಬೇರನನ್ನು ಪೂಜಿಸಿ ಅವನ ಅನುಗ್ರಹಕ್ಕೆ ಪಾತ್ರವಾಗುವುದಕ್ಕೆ ಈ ಯಂತ್ರ ಸಹಾಯ ಮಾಡುತ್ತದೆ.ಇದನ್ನು ಪೂಜಿಸುವಾಗ 'ಓಂ ಹ್ರೀಂ ಶ್ರೀಂ ಹ್ರೀಂ ಕುಬೇರಾಯ ನಮಃ' ಮಂತ್ರವನ್ನು ಜಪಿಸಬೇಕು. ಪ್ರತಿದಿನ ಪೂಜೆಗೆ ಮೊದಲು ಇದನ್ನು ಸ್ವಚ್ಛ ಮಾಡಬೇಕು.
  Published by:ranjumbkgowda1 ranjumbkgowda1
  First published: