Health Tips:ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದ್ರೆ ಇದನ್ನು ನೀವು ಓದಲೇಬೇಕು

Side Effects Of Using Phone In Toilet: ಫೋನ್ ನಮಗೆ ಬೆಳಗಿನಿಂದ ರಾತ್ರಿಯವರೆಗೆ  ಬೇಕಾಗಿರುವ ಅತ್ಯಗತ್ಯ ವಸ್ತುವಾಗಿದೆ. ಊಟ ಮಾಡುವಾಗ ಸಹ, ಅನೇಕ ಜನರು ತಮ್ಮ ಫೋನ್ ಅನ್ನು ಪಕ್ಕಕ್ಕೆ ಇಟ್ಟುಕೊಂಡು  ಆಹಾರ ಸೇವನೆ ಮಾಡುತ್ತಾರೆ. ಆದರೆ, ಕಂಪನಿಯ ಇತ್ತೀಚಿನ ಸಮೀಕ್ಷೆಯೊಂದು ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅನೇಕ ಜನರು ತಮ್ಮ ಸೆಲ್ ಫೋನ್‌ಗಳನ್ನು(Cell Phone) ಬಾತ್​ರೂಂಗೆ ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ಅಭ್ಯಾಸವು ನಿಜವಾಗಿಯೂ ಎಷ್ಟು  ಅಪಾಯಕಾರಿ  ಎಂಬುದರ ಅರಿವು ಇಲ್ಲ. ಸಂಶೋಧನೆಗಳ ಪ್ರಕಾರ, ಮೊಬೈಲ್​ ಅನ್ನು(Mobile) ಬಾತ್​ರೂಂಗೆ ತೆಗೆದುಕೊಂಡು ಹೋಗುವುದರಿಂದ ಸೂಕ್ಷ್ಮಜೀವಿಗಳಾದ ಸಾಲ್ಮೊನೆಲ್ಲಾ, ಇ.ಕೋಲಿ ಮತ್ತು ಸಿ ಡಿಫೈಸಿಲ್​ಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೊಬೈಲ್​ (Mobile)ಅನ್ನು ಬಾತ್​ರೂಂಗೆ ತೆಗೆದುಕೊಂಡು ಹೋಗುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುದು ಇಲ್ಲಿದೆ.  

ತಜ್ಞರ ಅಭಿಪ್ರಾಯವೇನು?

ಫೋನ್ ನಮಗೆ ಬೆಳಗಿನಿಂದ ರಾತ್ರಿಯವರೆಗೆ  ಬೇಕಾಗಿರುವ ಅತ್ಯಗತ್ಯ ವಸ್ತುವಾಗಿದೆ. ಊಟ ಮಾಡುವಾಗ ಸಹ, ಅನೇಕ ಜನರು ತಮ್ಮ ಫೋನ್ ಅನ್ನು ಪಕ್ಕಕ್ಕೆ ಇಟ್ಟುಕೊಂಡು  ಆಹಾರ ಸೇವನೆ ಮಾಡುತ್ತಾರೆ. ಆದರೆ, ಕಂಪನಿಯ ಇತ್ತೀಚಿನ ಸಮೀಕ್ಷೆಯೊಂದು ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದೆ.  ಸಂಶೋಧನೆಯ ಪ್ರಕಾರ 90 ಪ್ರತಿಶತ ಜನರು ಫೋನ್ ಅನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಅದು ಹೆಚ್ಚು ಅಪಾಯಕಾರಿ.

ಶೌಚಾಲಯದ ಸ್ಥಳವನ್ನು ಅವಲಂಬಿಸಿ ಮಾಲಿನ್ಯದ ಮಟ್ಟಗಳು ಬದಲಾಗುತ್ತವೆ ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಸಣ್ಣ ಆಫೀಸ್ ಹೆಚ್ಚು ಸಮಸ್ಯೆ ಮಾಡದೇ ಇರಬಹುದು ಆದರೆ, ಆದರೆ ಆಸ್ಪತ್ರೆ ಸೇರಿದಂತೆ ಹೆಚ್ಚು ಜನರು ಇರುವ ಸ್ಥಳಗಳಲ್ಲಿ ಅಪಾಯ ಹೆಚ್ಚಿರುತ್ತದೆ.

ಇದನ್ನೂ ಓದಿ: ಅನ್ನಾಟೊ ಬೀಜಗಳು ಕೇವಲ ಬಣ್ಣ ಹಾಕಲು ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಪರಿಣಾಮಕಾರಿ ..

ಬಾತ್​ರೂಂಗೆ ಫೋನ್ ತೆಗೆದುಕೊಂಡು ಹೋಗುವುದರಿಂದ ಉಂಟಾಗುವ ತೊಂದರೆಗಳು ಏನು?

ಆ ರೀತಿಯ ಫೋನ್ ಅನ್ನು ಬಾತ್​ರೂಂಗೆ ತೆಗೆದುಕೊಂಡು ಹೋಗುವುದರಿಂದ  ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಫೋನ್ ಪರದೆಯ ಮೇಲೆ ಬ್ಯಾಕ್ಟೀರಿಯಾ ದೀರ್ಘಕಾಲ ಉಳಿಯಬಹುದು ಎಂದು ಹೇಳಲಾಗುತ್ತದೆ. ನಾವು ಅದನ್ನು ಮುಟ್ಟಿದಾಗ ನಮಗೆ ಸೋಂಕು ತಗುಲುವ  ಅಪಾಯ ಹೆಚ್ಚು ಎಂದು ಅವರು ಹೇಳುತ್ತಾರೆ.

ಹಾಗೆಯೇ, ನೀವು ಶೌಚಾಲಯದಲ್ಲಿ ಫೋನ್ ತೆಗೆದುಕೊಂಡು ಟಾಯ್ಲೆಟ್ ಬೇಸಿನ್ ಮೇಲೆ ಕುಳಿತರೆ ,ಇನ್ನೊಂದು ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಅಂದರೆ,  ಗುದನಾಳದ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ನೋವು, ಊತ ಮತ್ತು ರಕ್ತಸ್ರಾವ ಆರಂಭವಾಗುವ ಸಾಧ್ಯತೆ ಇರುತ್ತದೆ.

ಇದು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನ ಮರೆಯಬಾರದು.ಅನೇಕ ಜನರು ತಮಗೆ ಸಾಕಷ್ಟು ಕೆಲಸಗಳಿವೆ ಅದಕ್ಕೆ ಫೋನ್ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ. ನೀವು ಎಷ್ಟೇ ಕೆಲಸ  ಹೊಂದಿದ್ದರು ಸಹ ಸ್ವಲ್ಪ ಬಿಡುವಿನ ಸಮಯ ತೆಗೆದುಕೊಳ್ಳಿ ಮತ್ತು ಯಾವುದೇ ಒತ್ತಡವಿಲ್ಲದೆ ಟಾಯ್ ಲೆಟ್‌ಗೆ ಹೋಗಿ ಎಂದು ತಜ್ಞರು ಹೇಳುತ್ತಾರೆ.

ನೀವು ಶೌಚಾಲಯದಲ್ಲಿ ನಿಮ್ಮ ಫೋನ್ ಬಳಸದಿದ್ದರೂ ಸಹ, ನೀವು ಒಳಗೆ ಮತ್ತು ಹೊರಗೆ ಹೋಗುತ್ತಿರುವಾಗಲೂ ನೀವು ಅದನ್ನು ಹಿಡಿದುಕೊಂಡು ಹೋದರೆ ಮತ್ತು ನೀವು  ಬಾತ್​ರೂಂನಿಂದ ಬಂದ ನಂತರ ಕೈ ತೊಳೆಯದಿದ್ದಾಗ ಫೋನ್‌ನಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗಲು ಕಾರಣವಾಗುತ್ತದೆ.

ಹಾಗಾದ್ರೆ ಏನು ಮಾಡಬೇಕು?

ಮೊದಲಿಗೆ, ನಿಮ್ಮ ಫೋನ್ ಅನ್ನು ಬಾತ್​ರೂಂಗೆ ತೆಗೆದುಕೊಂಡು ಹೋಗಬೇಡಿ ಮತ್ತು ತಿನ್ನುವಾಗ ಅದನ್ನು ಬಳಸದಿರಲು ಪ್ರಯತ್ನಿಸಿ. ನಿಮ್ಮ ಫೋನ್ ಅನ್ನು ನಿಯಮಿತವಾಗಿ ಸೋಂಕು ರಹಿತಗೊಳಿಸುವುದು  ಅಂದರೆ ಸ್ಯಾನಿಟೈಸ್​ ಮಾಡುವುದು ಸಹ ಒಳ್ಳೆಯದು,ವಿಶೇಷವಾಗಿ ನೀವು ಅದನ್ನು ಬಾತ್​ರೂಂನಲ್ಲಿ ಬಳಸುತ್ತಿದ್ದರೆ. ಟಚ್‌ಸ್ಕ್ರೀನ್‌ಗಳನ್ನು ಸ್ವಚ್ಛಗೊಳಿಸಲು ನಿರ್ದಿಷ್ಟ ಸ್ಪ್ರೇಗಳನ್ನು ಖರೀದಿಸಬಹುದು ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ಕೂಡ ನಿಮಗೆ ಸಹಾಯ ಮಾಡಬಹುದು.

ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್​ ಬಳಕೆ ಮಾಡುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ..

ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.  ವಿಶೇಷವಾಗಿ  ಬಾತ್​ರೂಂನಿಂದ ಹೊರಬರುವಾಗ ಅಥವಾ ಬೇರೆಯವರ ಸ್ಮಾರ್ಟ್‌ಫೋನ್‌ಗಳನ್ನು ಮುಟ್ಟಿದಾಗ ನಿಮ್ಮ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ.
Published by:Sandhya M
First published: