• Home
 • »
 • News
 • »
 • lifestyle
 • »
 • Uric Acid: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತದೆ? ಇಲ್ಲಿದೆ ಮಾಹಿತಿ

Uric Acid: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಯಾವ ಸಮಸ್ಯೆ ಕಾಡುತ್ತದೆ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವ್ಯಕ್ತಿಯು ಪ್ಯುರಿನ್ ಅಂಶ ಸಮೃದ್ಧ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದಾಗ ಅದರ ಮೂಲಕ ಯೂರಿಕ್ ಆಮ್ಲ ದೇಹದಲ್ಲಿ ಸಂಗ್ರಹ ಆಗುತ್ತದೆ. ಪ್ಯೂರಿನ್‌ ನಲ್ಲಿ ಅಧಿಕ ಸಮೃದ್ಧವಾಗಿರುವ ಕೆಲವು ಆಹಾರಗಳ ಸೇವನೆ ಯೂರಿಕ್ ಆಮ್ಲ ಹೆಚ್ಚಿಸುತ್ತದೆ. ಮೂತ್ರಪಿಂಡಗಳು ಮತ್ತು ಮೂತ್ರದ ಮೂಲಕ ಯೂರಿಕ್ ಆಮ್ಲವನ್ನು ಶೋಧಿಸುತ್ತದೆ.

ಮುಂದೆ ಓದಿ ...
 • Share this:

  ಯೂರಿಕ್ ಆಮ್ಲವು (Uric Acid) ದೇಹದಲ್ಲಿ (Body) ಕಂಡು ಬರುವ ಕೊಳಕು ವಸ್ತು (Dirty Stuff) ಆಗಿದೆ. ದೇಹವು ಅದನ್ನು ಉತ್ಪಾದನೆ ಮಾಡಲ್ಲ. ಆದರೆ ವ್ಯಕ್ತಿಯು (Person) ಯಾವ ರೀತಿಯ ಆಹಾರ (Food) ಸೇವಿಸುತ್ತಾನೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ವ್ಯಕ್ತಿಯು ಸೇವನೆ ಮಾಡುವ ಪ್ಯುರಿನ್ ಅಂಶದಿಂದ ಸಮೃದ್ಧ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದಾಗ ಅದರ ಮೂಲಕ ದೇಹದಲ್ಲಿ ಸಂಗ್ರಹ ಆಗುತ್ತದೆ. ಪ್ಯೂರಿನ್‌ ನಲ್ಲಿ ಅಧಿಕ ಸಮೃದ್ಧವಾಗಿರುವ ಕೆಲವು ಆಹಾರಗಳ ಸೇವನೆ ಯೂರಿಕ್ ಆಮ್ಲ ಹೆಚ್ಚಿಸುತ್ತದೆ. ಕೆಂಪು ಮಾಂಸ, ಯಕೃತ್ತು, ಸಾರ್ಡೀನ್‌, ಬಿಯರ್ ಇತ್ಯಾದಿಗಳು ಪದಾರ್ಥಗಳು ಯೂರಿಕ್ ಆಮ್ಲ ಹೆಚ್ಚಿಸುವ ಪದಾರ್ಥಗಳು ಆಗಿವೆ.


  ಯೂರಿಕ್ ಆಸಿಡ್ ಎಷ್ಟು ಪ್ರಮಾಣದಲ್ಲಿ ಇರಬೇಕು?


  ಸಾಮಾನ್ಯವಾಗಿ ನಿಮ್ಮ ದೇಹವು ನಿಮ್ಮ ಮೂತ್ರಪಿಂಡಗಳು ಮತ್ತು ಮೂತ್ರದ ಮೂಲಕ ಯೂರಿಕ್ ಆಮ್ಲವನ್ನು ಶೋಧಿಸುತ್ತದೆ. ಆದರೆ ಕೆಲವೊಮ್ಮೆ ಅದರ ಪ್ರಮಾಣವು ತುಂಬಾ ಹೆಚ್ಚಾಗುತ್ತದೆ. ಮತ್ತು ಅದು ಕೀಲುಗಳಲ್ಲಿ ಸಂಗ್ರಹ ಆಗುತ್ತದೆ. ಕೆಲವೊಮ್ಮೆ ರಕ್ತದಲ್ಲಿ ಅದರ ಪ್ರಮಾಣ ಹೆಚ್ಚಾಗುತ್ತದೆ. ಯೂರಿಕ್ ಆಮ್ಲದ ಸಾಮಾನ್ಯ ವ್ಯಾಪ್ತಿ 6.8 mg/dL ಗಿಂತ ಕಡಿಮೆ ಇರುತ್ತದೆ.


  ಯೂರಿಕ್ ಆಮ್ಲ ಹೆಚ್ಚಾದಾಗ ಏನಾಗುತ್ತದೆ?


  ಹೆಚ್ಚಿನ ಯೂರಿಕ್ ಆಸಿಡ್ ಮಟ್ಟ 6.8 mg/dL ಗಿಂತ ಹೆಚ್ಚು ಇದ್ದರೆ ಇದನ್ನು ವೈದ್ಯಕೀಯವಾಗಿ ಹೈಪರ್ಯುರಿಸೆಮಿಯಾ ಎಂದು ಕರೆಯುತ್ತಾರೆ. ಇದು ಗೌಟ್ ಎಂಬ ಕಾಯಿಲೆ ಉಂಟಾಗಲು ಕಾರಣ ಆಗಬಹುದು. ಇದು ಕೀಲುಗಳಲ್ಲಿ ನೋವು ಉಂಟು ಮಾಡುತ್ತದೆ.


  ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


  ಇದರಲ್ಲಿ ಯುರೇಟ್ ಹರಳು ಸಂಗ್ರಹ ಆಗುತ್ತವೆ. ಇದು ನಿಮ್ಮ ರಕ್ತ ಮತ್ತು ಮೂತ್ರವನ್ನು ಆಮ್ಲೀಯ ಆಗಿಸುತ್ತದೆ. ಹಾರ್ವರ್ಡ್ ಹೆಲ್ತ್‌ ವರದಿ ಪ್ರಕಾರ, ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು, ನೀವು ಕೆಲವು ಕ್ರಮಗಳನ್ನು ಫಾಲೋ ಮಾಡಿ.


  ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆ ಕಡಿಮೆ ಮಾಡಿ


  ಗೌಟ್ ಹೊಂದಿರುವ ಜನರು ಕೆಲವು ಆಹಾರಗಳ ಸೇವನೆ ಕಡಿಮೆ ಮಾಡಬೇಕು ಅಥವಾ ಸಾಧ್ಯವಾದಷ್ಟು ಸಂಪೂರ್ಣವಾಗಿ ತ್ಯಜಿಸಬೇಕು. ಕೆಲವು ಆಹಾರಗಳು ಪ್ರಯೋಜನಕಾರಿ ಆಗಬಹುದು. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆ ಮಾಡುವ ಜನರಲ್ಲಿ


  ಕಡಿಮೆ ಯೂರಿಕ್ ಆಮ್ಲದ ಮಟ್ಟ ಇರುತ್ತದೆ ಎಂದು ಕೆಲ ಅಧ್ಯಯನಗಳು ಕಂಡುಕೊಂಡಿವೆ. ಕ್ಯಾಲ್ಸಿಯಂ ಹೊಂದಿರುವ ಉತ್ಪನ್ನಗಳು ಗೌಟ್ ಅನ್ನು ಏಕಕಾಲದಲ್ಲಿ ಕಡಿಮೆ ಮಾಡುವಾಗ ನಿಮ್ಮ ಮೂಳೆಗಳ ರಕ್ಷಿಸಲು ಸಹಾಯ ಮಾಡುತ್ತದೆ.


  ಒಮೆಗಾ -3 ಕೊಬ್ಬಿನಾಮ್ಲ


  ಮೀನು ಆರೋಗ್ಯಕರ ಆಹಾರದ ಭಾಗ ಒಮೆಗಾ -3 ಕೊಬ್ಬಿನಾಮ್ಲ ಹೊಂದಿದೆ. ಆದರೆ ಕೆಲವು ಸಮುದ್ರಾಹಾರಗಳಲ್ಲಿ ಪ್ಯೂರಿನ್‌ ಅಧಿಕವಾಗಿರುತ್ತವೆ. ಗೌಟ್ ಇರುವವರು ಮೀನನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಆದರೆ ಚಿಪ್ಪುಮೀನು, ಸಾರ್ಡೀನ್ ಮತ್ತು ಆಂಚೊವಿಗಳು ಹೆಚ್ಚಿನ ಪ್ರಮಾಣದ ಪ್ಯೂರಿನ್‌ ಒಳಗೊಂಡಿವೆ. ಅವುಗಳ ಸೇವನೆಯ ಪ್ರಮಾಣವನ್ನು ಮಿತಿಗೊಳಿಸಿ. ಉತ್ತಮ ಆಯ್ಕೆಯಾಗಿ, ನೀವು ಕಾಡ್, ಟಿಲಾಪಿಯಾ ಅಥವಾ ಫ್ಲೌಂಡರ್ ಅನ್ನು ಸೇವಿಸಿ.


  ವಿಟಮಿನ್ ಸಿ


  ವಿಟಮಿನ್ ಸಿ ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಸಿಟ್ರಸ್ ಹಣ್ಣುಗಳು ಮತ್ತು ವಿಟಮಿನ್ ಸಿ ಸಮೃದ್ಧ ಇತರ ಆಹಾರಗಳನ್ನು ಅವರ ಆಹಾರದಲ್ಲಿ ಸೇರಿಸುವುದು  ಗೌಟ್ ಇರುವವರಿಗೆ ಸಹಾಯ ಮಾಡಬಹುದು. ಚೆರ್ರಿ ತಿನ್ನುವುದು ಗೌಟ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ.


  ಸಸ್ಯ ಆಧಾರಿತ ಆಹಾರ


  ನಿಮ್ಮ ಆಹಾರದಲ್ಲಿ ಸಸ್ಯ ಆಧಾರಿತ ಆಹಾರ ಸೇರಿಸಿ. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು ಮತ್ತು ದ್ವಿದಳ ಧಾನ್ಯ ಸೇವಿಸಿ.


  ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


  ನೇರ ಪ್ರೋಟೀನ್


  ನೀವು ಕಡಿಮೆ ಕೊಬ್ಬಿನ ಪದಾರ್ಥ ಸೇವಿಸಿ. ಕೆಂಪು ಮಾಂಸ ಕಡಿಮೆ ಸೇವಿಸಿ. ಕೋಳಿ, ಟರ್ಕಿ, ಮೀನು ಮತ್ತು ತೋಫು ಪ್ರೋಟೀನ್‌ನ ನೇರ ಮೂಲಗಳು ಆಗಿವೆ.

  Published by:renukadariyannavar
  First published: