Stomach Tumor: ಹೊಟ್ಟೆಯಲ್ಲಿ ಗಡ್ಡೆಗಳು ಹೇಗೆ ರೂಪುಗೊಳ್ಳುತ್ತವೆ, ಮೆಸೆಂಟೆರಿಕ್ ಗಡ್ಡೆ ಎಂದರೇನು?

ಹೊಟ್ಟೆಯು ನಮ್ಮ ದೇಹದ ಪ್ರಮುಖ ಭಾಗ. ಇದು ಎಲ್ಲಾ ಅಂಗಗಳಿಗೆ ಪೋಷಕಾಂಶ ಪೂರೈಸಲು ಕೆಲಸ ಮಾಡುತ್ತದೆ. ಹಾಗಾಗಿ ಪರಿಣಾಮಕಾರಿಯಾಗಿ ಇದು ಕೆಲಸ ಮಾಡಬೇಕಾಗುತ್ತದೆ. ಹೀಗೆ ದೇಹದ ಎಲ್ಲಾ ಭಾಗಗಳಿಗೆ ಪೋಷಕಾಂಶ ಒದಗಿಸುವ ಹೊಟ್ಟೆಯೇ ಕಾಯಿಲೆಗಳ ಕೂಪವಾಗಿ ಮಾರ್ಪಾಡಾದರೆ ದೇಹ ಮತ್ತು ಆರೋಗ್ಯದ ಸ್ಥಿತಿ ಹೇಗಿರುತ್ತೇ ಅಂತಾ ನೀವೇ ಊಹಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಠ್ಮಂಡುವಿನ (Katmandu) 32 ವರ್ಷದ ಮಹಿಳೆಯೊಬ್ಬರು (Women) ತೀವ್ರ ಹೊಟ್ಟೆ ನೋವಿನಿಂದ (Stomach Pain) ಇತ್ತೀಚೆಗೆ ದೆಹಲಿಯ (Delhi) ಸಿಕೆ ಬಿರ್ಲಾ ಆಸ್ಪತ್ರೆಗೆ (Hospital) ದಾಖಲಾಗಿದ್ರು. ಅಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿ ನಾಲ್ಕು ಕೆಜಿಯಷ್ಟು ದೊಡ್ಡ ಗಡ್ಡೆ ಇರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ಗಡ್ಡೆಯನ್ನು ವೈದ್ಯರು ಹೊರಕ್ಕೆ ತೆಗೆದಿದ್ದಾರೆ. ಮಹಿಳೆ ಹಲವು ದಿನಗಳಿಂದ ಹೊಟ್ಟೆಯ ತೀವ್ರ ನೋವಿನಿಂದ ಬಳಲುತ್ತಿದ್ದರು. ಕಠ್ಮಂಡುವಿನ ಅನೇಕ ಆಸ್ಪತ್ರೆಗಳಿಗೆ ಮಹಿಳೆ ಭೇಟಿ ನೀಡಿದ್ದರು. ಆದರೆ ಯಾವುದೇ ಆಸ್ಪತ್ರೆಯು ಶಸ್ತ್ರಚಿಕಿತ್ಸೆಯ ಅಪಾಯ ತೆಗೆದುಕೊಳ್ಳಲು ಸಿದ್ಧವಾಗಿರಲಿಲ್ಲ. ಕೊನೆಗೆ ದೆಹಲಿಯ ವೈದ್ಯರ ತಂಡ ಮಹಿಳೆಯ ಹೊಟ್ಟೆಯನ್ನು ಪರೀಕ್ಷಿಸಿದಾಗ, ಈ ಗಡ್ಡೆ ಅಪರೂಪವಾಗಿರದೆ ಫುಟ್ಬಾಲ್ ಗಾತ್ರದ್ದಾಗಿರುವುದು ಕಂಡು ಬಂದಿತ್ತು.

  ಮಹಿಳೆಯ ಹೊಟ್ಟೆಯಲ್ಲಿತ್ತು ಮೆಸೆಂಟೆರಿಕ್ ಗಡ್ಡೆ

  ಇದೊಂದು ಮೆಸೆಂಟೆರಿಕ್ ಗಡ್ಡೆಯಾಗಿದ್ದು, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರಕ್ಕೆ ತೆಗೆದಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಮತ್ತು ಈಗ ಮಹಿಳೆ ಸಾಮಾನ್ಯವಾಗಿದ್ದಾರೆ. ಆರಾಮವಾಗಿ ಜೀವನ ನಡೆಸುತ್ತಿದ್ದಾರೆ. ಹೊಟ್ಟೆಯು ನಮ್ಮ ದೇಹದ ಪ್ರಮುಖ ಭಾಗ. ಇದು ಎಲ್ಲಾ ಅಂಗಗಳಿಗೆ ಪೋಷಕಾಂಶ ಪೂರೈಸಲು ಕೆಲಸ ಮಾಡುತ್ತದೆ. ಹಾಗಾಗಿ ಪರಿಣಾಮಕಾರಿಯಾಗಿ ಇದು ಕೆಲಸ ಮಾಡಬೇಕಾಗುತ್ತದೆ.

  ಹೀಗೆ ದೇಹದ ಎಲ್ಲಾ ಭಾಗಗಳಿಗೆ ಪೋಷಕಾಂಶ ಒದಗಿಸುವ ಹೊಟ್ಟೆಯೇ ಕಾಯಿಲೆಗಳ ಕೂಪವಾಗಿ ಮಾರ್ಪಾಡಾದರೆ ದೇಹ ಮತ್ತು ಆರೋಗ್ಯದ ಸ್ಥಿತಿ ಹೇಗಿರುತ್ತೇ ಅಂತಾ ನೀವೇ ಊಹಿಸಿ. ಹೊಟ್ಟೆಯಲ್ಲಿ ಗೆಡ್ಡೆಯ ರಚನೆ ಸಾಮಾನ್ಯ ಸಂಗತಿಯಲ್ಲ. ಆದರೆ ಕೆಲವು ಸಂದರ್ಭದಲ್ಲಿ ಸರಳವಾದ ಅಂಶಗಳು ಅದರ ರಚನೆಗೆ ಕಾರಣವಾಗಬಹುದು.

  ಇದನ್ನೂ ಓದಿ: ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕಿನಿಂದ ಸಾವು; ಯಾವುದು ಈ ಕಾಯಿಲೆ?

  ಹೊಟ್ಟೆಯಲ್ಲಿ ಗಡ್ಡೆಗಳು ಹೇಗೆ ರೂಪುಗೊಳ್ಳುತ್ತವೆ?

  ಹೊಟ್ಟೆಯಲ್ಲಿ ಅಸಹಜ ಊತ ಅಥವಾ ಗಡ್ಡೆ, ದೀರ್ಘ ಕಾಲದವರೆಗೆ ಚಿಕಿತ್ಸೆ ನೀಡದಿದ್ದಾಗ ಅದು ಗಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇದು ಕ್ಯಾನ್ಸರ್ ಆಗಿಯೂ ಮಾರ್ಪಾಡಾಗುತ್ತದೆ. ಹೊಟ್ಟೆಯಲ್ಲಿ ಜೀವಕೋಶಗಳ ಶೇಖರಣೆ ಆಗುತ್ತದೆ. ಇದು ಅಂಗಾಂಶದ ಅಸಹಜ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಗಡ್ಡೆಗಳು ರೂಪುಗೊಳ್ಳುತ್ತವೆ.

  ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಅದರ ಗಾತ್ರವೂ ಹೆಚ್ಚಾಗುತ್ತದೆ. ಇದು ನಿಮ್ಮ ದಿನನಿತ್ಯದ ಚಟುವಟಿಕೆಗೆ ಅಡಚಣೆ ಉಂಟು ಮಾಡುತ್ತದೆ. ಹಾಗಾಗಿ ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡುವುದು ಅವಶ್ಯಕ.

  ಮೆಸೆಂಟೆರಿಕ್ ಟ್ಯೂಮರ್ / ಗಡ್ಡೆ ಎಂದರೇನು?

  NCBI ಪ್ರಕಾರ, ಮೆಸೆಂಟೆರಿಕ್ ಗಡ್ಡೆಗಳು ಅಪರೂಪ ಮತ್ತು ಗಾಯಗಳ ಹಲವು ಗುಂಪುಗಳಿಂದ ಕೂಡಿರುತ್ತವೆ. ಇದು ಪೆರಿಟೋನಿಯಮ್, ದುಗ್ಧರಸ ಅಂಗಾಂಶ, ಅಡಿಪೋಸ್ ಮತ್ತು ಸಂಯೋಜಕ ಅಂಗಾಂಶ ಮತ್ತು ಸಾಂಕ್ರಾಮಿಕ ಅಥವಾ ಉರಿಯೂತದ ಪ್ರಕ್ರಿಯೆಗಳಿಂದ ಸೆಲ್ಯುಲಾರ್ ಪ್ರಸರಣದಿಂದ ಉಂಟಾಗಬಹುದು.

  ಹೊಟ್ಟೆಯಲ್ಲಿ ಎಷ್ಟು ರೀತಿಯ ಗಡ್ಡೆಗಳಿವೆ?

  ಹೊಟ್ಟೆಯಲ್ಲಿ ಮೂರು ವಿಧದ ಗಡ್ಡೆಗಳಿವೆ. ಇವುಗಳಲ್ಲಿ

  ಹಾನಿಕರವಲ್ಲದ ಗಡ್ಡೆಗಳು ಅಂದ್ರೆ ಕ್ಯಾನ್ಸರ್ ಅಲ್ಲದ ಮತ್ತು ಇತರ ಭಾಗಗಳಿಗೆ ಅಥವಾ ಗಾತ್ರಕ್ಕೆ ಹರಡದ ಗಡ್ಡೆಗಳು

  ಪ್ರೀಮಾಲಿಗ್ನಂಟ್ ಗಡ್ಡೆಗಳು ಅಂದ್ರೆ ಕ್ಯಾನ್ಸರ್ ಆಗುವ ಸಾಧ್ಯತೆಯಿರುವುದು

  ಮಾರಣಾಂತಿಕ ಗಡ್ಡೆಗಳು ಅಂದ್ರೆ ಗಾತ್ರದಲ್ಲಿ ಬೆಳೆಯುವ ಮತ್ತು ಕ್ಯಾನ್ಸರ್ ಆಗುವ ಅಪಾಯವಿರುತ್ತದೆ

  ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ತಿಳಿಯುವುದು ಹೇಗೆ?

  ನುಂಗಲು ತೊಂದರೆ, ಹೊಟ್ಟೆಯುಬ್ಬರ, ಹೊಟ್ಟೆ ತುಂಬಿದ ಭಾವನೆ, ಹೊಟ್ಟೆ ಕೆರಳಿಕೆ, ಅಜೀರ್ಣ, ವಾಕರಿಕೆ, ಹೊಟ್ಟೆ ನೋವು, ತ್ವರಿತ ತೂಕ ನಷ್ಟ, ವಾಂತಿ, ಮಲದಲ್ಲಿ ರಕ್ತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

  ಹೊಟ್ಟೆಯ ಗಡ್ಡೆ ಉಂಟಾಗುವಿಕೆ ತಡೆಯುವುದು ಹೇಗೆ?

  ನಿಯಮಿತ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವನೆ, ಧೂಮಪಾನ ಮತ್ತು ಮದ್ಯಪಾನ ಮಾಡದಿರುವುದು, ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳ ಸೇವನೆ, ನಿಯಮಿತ ಆರೋಗ್ಯ ತಪಾಸಣೆ ಇವುಗಳಿಂದ ಗಡ್ಡೆ ತಡೆಯಬಹುದು.

  ಇದನ್ನೂ ಓದಿ: ಅಕ್ಕಿ ತೊಳೆದ ನೀರು, ಗಂಜಿ ಚೆಲ್ಲುತ್ತೀರಾ? ಚರ್ಮ ಮತ್ತು ಕೂದಲ ಸಮಸ್ಯೆಗೆ ಇದೇ ರಾಮಬಾಣವಂತೆ!

  ಯಾವ ಪರೀಕ್ಷೆಯು ಹೊಟ್ಟೆಯಲ್ಲಿನ ಗಡ್ಡೆ ಪತ್ತೆ ಮಾಡುತ್ತದೆ?

  ಹೊಟ್ಟೆಯಲ್ಲಿ ಗಡ್ಡೆಯ ಲಕ್ಷಣಗಳು ಕಂಡು ಬಂದರೆ, ವೈದ್ಯರ ಸಂಪರ್ಕಿಸಿದ ನಂತರ, ಎಕ್ಸ್-ರೇ, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಎಂಆರ್ಐ, ರಕ್ತ ಪರೀಕ್ಷೆ ಮಾಡಿಸಬೇಕು.
  Published by:renukadariyannavar
  First published: