Night Shift: ನೈಟ್‌ ಶಿಫ್ಟ್‌ ಅನಿವಾರ್ಯವೇ, ಆದ್ರೆ ಆರೋಗ್ಯ ಮರೆಯಬೇಡಿ..

ರಾತ್ರಿ ಪಾಳಿ ಮುಗಿಸಿ ಹಗಲು ಸ್ವಲ್ಪ ಹೊತ್ತು ನಿದ್ದೆ ಮಾಡುವ ಅಭ್ಯಾಸ ಬಿಟ್ಟುಬಿಡಿ. ಹಗಲು ಕನಿಷ್ಠ 5-8 ಗಂಟೆ ನಿದ್ದೆ ಮಾಡಿರಿ. ದಿನದ ಆರಂಭದಲ್ಲಿ ಒಂದಿಷ್ಟು ವ್ಯಾಯಾಮಮಾಡಿ. ಈಜುವ (swimming) ಅಭ್ಯಾಸವಿದ್ದರೆ ದೇಹ ದಣಿಯುವಷ್ಟು ಈಜಬಹುದು. ಇದರಿಂದ ಹಗಲು ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ದೇಹಕ್ಕೆ ವ್ಯಾಯಾಮವೂ ದೊರಕುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ಜಾಗತೀಕರಣ ಸನ್ನಿವೇಶದಲ್ಲಿ ಪಾಳಿಗಳಲ್ಲಿ (Working Shifts) ಕೆಲಸ ಮಾಡುವ ಅಗತ್ಯ ಬಹಳ ಇದೆ. ಬೇರೆ ದೇಶಗಳ (country) ಜೊತೆಗೆ ಸೇರಿ ಕೆಲಸ ಮಾಡುವಾಗ ಆ ದೇಶದ ಸಮಯದ ಪ್ರಕಾರವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಕಾರ್ಮಿಕರಿಗೆ ಬಂದೇ ಬರುತ್ತದೆ. ಜಾಗತೀಕರಣ ಮಾತ್ರವಲ್ಲದೆ ಇನ್ನೂ ಕೆಲವೊಂದು ಕ್ಷೇತ್ರದಲ್ಲಿ ರಾತ್ರಿ ಪಾಳಿಯ (Night Shift) ಕೆಲಸಗಳು ಅಗತ್ಯವಾಗುತ್ತವೆ. ಎಲ್ಲರಿಗೂ ಹಗಲು (morning work) ದುಡಿಯಬೇಕು, ರಾತ್ರಿ ನಿದ್ದೆ (night sleep) ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲಾಉದ್ಯೋಗಗಳು ಹೀಗಿರುವುದಿಲ್ಲ. ರಾತ್ರಿ ಪಾಳಿ (Night Shift) ಮಾಡುವುದು ಅನಿವಾರ‍್ಯವಾಗಿರುತ್ತದೆ. ಮಕ್ಕಳು ಶಾಲೆಯಿಂದ ಬಂದ ನಂತರಕೆಲಸಕ್ಕೆ ಹೋಗಬೇಕಾಗುತ್ತದೆ. ಗಂಡ ಕೆಲಸ ಮುಗಿಸಿಕೊಂಡುಬಂದಾಗ ಹೆಂಡತಿ ಕೆಲಸಕ್ಕೆ ಹೋಗಬೇಕಾಗುತ್ತದೆ ಅಥವಾಹೆಂಡತಿ ಕೆಲಸ ಮುಗಿಸಿಕೊಂಡು ಬಂದಾಗ ಗಂಡ ಕೆಲಸಕ್ಕೆ ಹೋಗಬೇಕಾಗುತ್ತದೆ. ಎಲ್ಲರೂ ಸವಿನಿದ್ದೆಯಲ್ಲಿ ಕನಸಿನಲ್ಲಿರುವಾಗಕೆಲಸ ಮಾಡುವ ಅನಿವಾರ‍್ಯತೆ ರಾತ್ರಿ ಪಾಳಿಯಲ್ಲಿ ಕೆಲಸಮಾಡುವವರಿಗೆ ಇರುತ್ತದೆ. ಈ ಪಾಳಿಗಳಲ್ಲಿ ಕೆಲಸ (work) ಮಾಡುವಾಗ ನಿದ್ರಾಹೀನತೆ ಅಥವಾ ಬದಲಾದ ಸಮಯದಲ್ಲಿ ನಿದ್ದೆ ಮಾಡುವುದರಿಂದ ನಿದ್ರೆಗೆ ಸಂಬಂಧಿಸಿದ ಅನಾರೋಗ್ಯಗಳು ಸಾಮಾನ್ಯ.

  ಇದನ್ನು ಓದಿ:Viral video: ಕತ್ತಲಲ್ಲಿ ಟಿಕ್​ಟಾಕ್​ ಮಾಡಿದ ಮಹಿಳೆಗೆ ಕಾದಿತ್ತು ಶಾಕ್​; ಬೆನ್ನ ಹಿಂದೆ ನಿಂತವರಾರು?

  ರಾತ್ರಿ ಪಾಳಿಯಲ್ಲಿ (Night Shift) ಇರುವವರು ಹೆಚ್ಚು ಕಷ್ಟಪಡುವುದು ಆರೋಗ್ಯ ತೊಂದರೆಯಿಂದ. ನಿದ್ದೆ ಕೊರತೆಯಿಂದ ಮತ್ತು ಆಹಾರ ಸೇವನೆಯಲ್ಲಿ ವ್ಯತ್ಯಾಸವುಂಟಾಗಿ ಹಲವು ತೊಂದರೆಗಳಿಗೆಈಡಾಗಬೇಕಾಗುತ್ತದೆ. ಆರೋಗ್ಯದೊಂದಿಗೆ (health) ಮಾನಸಿಕತೊಂದರೆಯೂ ಉಂಟಾಗುತ್ತದೆ.

  ಚೆನ್ನಾಗಿ ನಿದ್ದೆ ಮಾಡಿ: ರಾತ್ರಿ ಪಾಳಿ ಮುಗಿಸಿ ಹಗಲು ಸ್ವಲ್ಪ ಹೊತ್ತು ನಿದ್ದೆ ಮಾಡುವ ಅಭ್ಯಾಸ ಬಿಟ್ಟುಬಿಡಿ. ಹಗಲು ಕನಿಷ್ಠ 5-8 ಗಂಟೆ ನಿದ್ದೆ ಮಾಡಿರಿ. ದಿನದ ಆರಂಭದಲ್ಲಿ ಒಂದಿಷ್ಟು ವ್ಯಾಯಾಮಮಾಡಿ. ಈಜುವ (swimming) ಅಭ್ಯಾಸವಿದ್ದರೆ ದೇಹ ದಣಿಯುವಷ್ಟು ಈಜಬಹುದು. ಇದರಿಂದ ಹಗಲು ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ದೇಹಕ್ಕೆ ವ್ಯಾಯಾಮವೂ ದೊರಕುತ್ತದೆ ಎನ್ನಬಹುದು.

  ಆಹಾರ ಸೇವನೆ ಮರೆಯಬೇಡಿ: ಹಗಲು ಪೂರ್ತಿ ಮಲಗಿದ್ದರೂ ಆಹಾರ ಸೇವಿಸುವ ಸಮಯದಲ್ಲಿ ಸೇವಿಸಲು ಮರೆಯಬೇಡಿ. ಮುಂಜಾನೆ ಎಂದಿನ ಸಮಯಕ್ಕೆ ಎದ್ದು ತಿಂಡಿ ತಿನ್ನುವ ಅಭ್ಯಾಸವನ್ನು ಬಿಟ್ಟು ಬಿಡಬೇಡಿ. ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟ (lunch)ಮಾಡಿರಿ. ಸಾಕಷ್ಟು ಜ್ಯೂಸ್‌, ಎಳನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಚೆನ್ನಾಗಿ ನೀರು (water)ಕುಡಿಯಿರಿ.

  ಜಂಕ್‌ ಫುಡ್‌ ಬೇಡ: ರಾತ್ರಿ ಪಾಳಿಯಲ್ಲಿರುವಾಗ ಹೊರಗೆ ಹೋಗಿ ಜಂಕ್‌ಫುಡ್‌ (junk food)ತಿನ್ನುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ಮನೆಯಿಂದ ಬುತ್ತಿ ತರುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಪಾಳಿಯಲ್ಲಿ ಉಪವಾಸ ಇರಬೇಡಿ.

   ಸ್ಮಾರ್ಟ್‌ಫೋನ್‌ ಬಳಕೆ ಬೇಡ: ಮುಂಜಾನೆ ನಿದ್ದೆಗಣ್ಣಿನಿಂದ ಆಫೀಸ್‌ನಿಂದ ಹೊರಬಂದಾಗ ಸೂರ್ಯ ನಿಮ್ಮನ್ನು ಸ್ವಾಗತಿಸಬಹುದು. ಸೂರ್ಯನ ಬೆಳಕಿಗೆ ನಿಮ್ಮ ಕಣ್ಣು ಬೇಗ ರಿಯಾಕ್ಟ್ ಮಾಡುತ್ತದೆ. ಇದಕ್ಕಾಗಿ ಸನ್‌ಗ್ಲಾಸ್‌ ಧರಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಬೆಳಗ್ಗೆ ಕ್ಯಾಬ್‌ನಲ್ಲಿ ಮನೆಗೆ ಬರುತ್ತಿರುವಾಗ ಸ್ಮಾರ್ಟ್‌ಫೋನ್‌ (smart phone) ಅನ್ನು ಹೆಚ್ಚು ಬಳಸಬೇಡಿ.

  ಮನೆಯ ವಾತಾವರಣ: ಹಗಲು ಹೊತ್ತಿನಲ್ಲಿ ನೀವು ಮಲಗಿದ್ದಾಗ ಹೊರಗಿನ ಸದ್ದು ನಿಮ್ಮನ್ನು ಡಿಸ್ಟರ್ಬ್‌ ಮಾಡುವುದು ಸಾಮಾನ್ಯ. ಮಕ್ಕಳ ಗದ್ದಲ ಕೇಳಿಸಬಹುದು. ಹೊರಗೆ ಲಾರಿ, ಬೈಕು, ಕಾರು, ಆಟೋಗಳು ಸದ್ದುಮಾಡಬಹುದು. ಇದಕ್ಕಾಗಿ ಕಿವಿಗೆ ಹತ್ತಿ ಅಥವಾ ಇಯರ್‌ಫೋನ್‌ ಇಟ್ಟುಕೊಂಡು ಮಲಗುವ ಅಭ್ಯಾಸಮಾಡಿಕೊಳ್ಳಬಹುದು. ನಿಮ್ಮ ಮಲಗುವ(sleeping room) ಕೋಣೆಯನ್ನು ಸಾಕಷ್ಟು ಕತ್ತಲು ಇರುವಂತೆ ನೋಡಿಕೊಳ್ಳಬಹುದು. ಕಿಟಕಿಗಳಿಗೆ ದಪ್ಪ ಕರ್ಟನ್‌ ಹಾಕಿ ಕೃತಕ ರಾತ್ರಿ ನಿರ್ಮಿಸಿಕೊಂಡು ನಿದ್ದೆ ಮಾಡಬಹುದು. ಮಲಗುವಾಗ ಫೋನ್‌ ದೂರದಲ್ಲಿಟ್ಟುಕೊಳ್ಳಿ. ಅದರ ರಿಂಗ್‌ಟೋನ್‌ ಅಥವಾ ನೋಟಿಫಿಕೇಷನ್‌ ಸದ್ದುಗಳು ನಿದ್ದೆಗೆ ಭಂಗತರಬಹುದು.

  ದುರಾಭ್ಯಾಸದಿಂದ ದೂರವಿರಿ: ರಾತ್ರಿ ಪಾಳಿಯಲ್ಲಿ ಕೆಲಸಮಾಡುವವರು ಹೆಚ್ಚಾಗಿ ಬೀಡಿ, ಸಿಗರೇಟು, ಗುಟುಕಾ, ತಂಬಾಕು ಸೇವನೆಯ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ. ಗಂಭೀರ ರೋಗಗಳಿಗೆ ನೀವು ಬೇಗ ತುತ್ತಾಗುವ ಸಾಧ್ಯತೆ ಇರುತ್ತದೆ. ರಾತ್ರಿ ಪಾಳಿಯಲ್ಲಿ ಚಹಾ (tea) ಸಹ ಹೆಚ್ಚು ಸೇವಿಸಬೇಡಿ. ಹಗಲು ಚೆನ್ನಾಗಿ ನಿದ್ದೆ ಬರಬೇಕೆಂದು ಮದ್ಯಪಾನ ಮಾಡಿ ಮಲಗುವ ಅಭ್ಯಾಸ ಮಾಡಿಕೊಳ್ಳಬೇಡಿ.

  ಇದನ್ನು ಓದಿ:ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

  ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳಿ: ರಾತ್ರಿಯ ಪಾಳಿಯ ಕೆಲಸದ ಸಂದರ್ಭದಲ್ಲಿ ನೀವು ಎರಡೆರಡು ಬಾರಿ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರೆ ಅದನ್ನು ಬಿಟ್ಟು ಬಿಡಿ. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಊಟ ಮಾಡಿ ಹಾಗೂ ಮಧ್ಯರಾತ್ರಿ 12 ಹಾಗೂ ಬೆಳಗ್ಗಿನ ಜಾವ 6 ಕ್ಕೆ ಪೋಷಕಾಂಶಯುಕ್ತ ಆಹಾರವನ್ನು (food)ಸ್ವಲ್ಪವಾಗಿ ಸೇವಿಸಿ.

  ಕೆಲಸದ ಭಂಗಿಗಳು: ಹೆಚ್ಚಿನ ಜನರು ಈ ವಿಷಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದಿಲ್ಲ. ಉತ್ತಮ ಆಹಾರಕ್ಕಾಗಿ ಒಳ್ಳೆಯ ಭಂಗಿಗಳೂ ಬಹಳ ಅಗತ್ಯ. ಕಂಪ್ಯೂಟರ್ (computer) ಮುಂದೆ ಕೆಲಸ ಮಾಡುವವರಾಗಿದ್ದರೆ ಪ್ರತಿ ಅರ್ಧ ಗಂಟೆಗೊಮ್ಮೆಯಾದರೂ ನೀವು ಕಂಪ್ಯೂಟರ್ ಪರದೆಯಿಂದ ದೂರಕ್ಕೆ ನೋಡುತ್ತೀರಿ ಎಂದು ಖಾತರಿ ಮಾಡಿಕೊಳ್ಳಿ. ಬೆನ್ನಿಗೆ ಸರಿಯಾದ ಆಧಾರ ಇರಲಿ. ಸಾಧ್ಯವಾದರೆ ಒಂದು ಗಂಟೆಯ ಕೆಲಸದ ಬಳಿಕ ಒಮ್ಮೆ ಹೊರಗಡೆ ಅಡ್ಡಾಡಿ ಬನ್ನಿ. ಕೂರುವ ಜಾಗದಲ್ಲೂ ಕುಷನ್ ಇರಲಿ, ಇದರಿಂದ ನಿಮ್ಮ ಬೆನ್ನಿಗೆ ಬಹಳ ಬೆಂಬಲ ಇರುತ್ತದೆ.

  ಇತ್ತ ಗಮನಿಸಿ
  -ಆದಷ್ಟು ರಾತ್ರಿ ಪಾಳಿ ಕೆಲಸದಿಂದ ದೂರವಿರಿ. ಅನಿವಾರ‍್ಯವಾದರೆ, ದೇಹಕ್ಕೆ ತುಂಬಾ ತ್ರಾಸ ನೀಡುವ ಕೆಲಸಕ್ಕೆ ಹೋಗಬೇಡಿ.
  -ದಿನದ 24 ಗಂಟೆಯಲ್ಲಿ ಮೂರು ಬಾರಿ ತೃಪ್ತಿಕರವಾಗಿ ಆಹಾರ(ಊಟ ಅಥವಾ ತಿಂಡಿ) ಸೇವಿಸಿ.
  -ಬಾದಾಮಿ, ಮೊಟ್ಟೆ, ತರಕಾರಿ, ಹಣ್ಣು ಇತ್ಯಾದಿಗಳನ್ನು ಹೆಚ್ಚು ಸೇವಿಸಿ. ಸಕ್ಕರೆಯಂಶ ಹೆಚ್ಚಿರುವ ಸಾಫ್ಟ್‌ಡ್ರಿಂಕ್ಸ್‌, ಬೇಕರಿ ತಿನಿಸು ಇತ್ಯಾದಿಗಳನ್ನು ಅವಾಯ್ಡ್‌ ಮಾಡಿ.
  ಆಟ, ವ್ಯಾಯಾಮ ಇತ್ಯಾದಿಗಳಿಗೆ ಪ್ರಾಶಸ್ತ್ಯ ನೀಡಿ. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತ ಇರಿ
  Published by:vanithasanjevani vanithasanjevani
  First published: