Valentine's Day 2020: ಈ ಪ್ರೀತಿ ಪ್ರೇಮ ಅಂತಾರಲ್ಲ ಅದನ್ನ ಗೆಲ್ಲಲು ಒಂದು ತಂತ್ರವಿದೆ!

Valentine's Day 2020: ಇರುಳ ಕತ್ತಲ ಸೀಳಿ ಇಣುಕಿಣುಕಿ ನೀ ನನ್ನ ಕಾಡುತಿಹೆ, ಇಕ್ಷುಧರನ ಸುಮ ಬಾಣದಿಂದೆನ್ನಇರಿಯುತಿರುವೆ, ಇಹದೊಳಗೆ ಕಾಣದಾ ಲೋಕಗಳ ತೋರುತಿರುವೆ, ಇಂದಲ್ಲ ಎಂದಿಗೂ ನೀ ನನ್ನವಳೆ ಎನಿಸುತಿರುವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • RedWomb
 • Last Updated :
 • Share this:
  ಫೆಬ್ರವರಿ 14 ವ್ಯಾಲೆಂಟೈನ್ಸ್​ ಡೇ...ಅಂದರೆ ಪ್ರೀತಿಯನ್ನು ವ್ಯಕ್ತಪಡಿಸುವ ಸುದಿನ. ಪ್ರೀತಿ ಎಂಬುದೇ ಸುಂದರ ಅನುಭವ, ಈ ಭಾವನೆಯನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ತಯಾರಿಗಳಿರಬೇಕು. ಅವರನ್ನು ಮೆಚ್ಚಿಸಲು ಸಕಲ ಪ್ರಯತ್ನ ಮಾಡಬೇಕಾಗುತ್ತದೆ. ಅದೆಷ್ಟೋ ಮಂದಿಗೆ ಮನದಲ್ಲಿರುವ ಪ್ರೀತಿಯನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಲಾಗದೇ ಕೊರಗುವವರೇ ಹೆಚ್ಚು. ಹಾಗಾಗಿಯೇ ಪ್ರೇಮಿಗಳ ದಿನ ಎಂಬುದು ಒಂದರ್ಥದಲ್ಲಿ ತಮ್ಮ ಮನದಾಳವನ್ನು ತೆರೆದಿಡಲು ಸಿಗುವಂತಹ ಅವಕಾಶ. ನಿಮಗೆ ನಿಮ್ಮ ಪ್ರೀತಿಯನ್ನು ನೇರವಾಗಿ ಹೇಳಲಾಗದಿದ್ದರೆ, ಕೆಲ ಪ್ರೀತಿಯ ಕವನಗಳನ್ನು ಕಳುಹಿಸಿ ಮನಗೆಲ್ಲಬಹುದು. ಶೇಖರ್ ಪೂಜಾರಿ ಅವರು ಬರೆದಿರುವ ಕೆಲ ಪ್ರೀತಿಯ ಹನಿಗವನಗಳು ಇಲ್ಲಿ ನೀಡಲಾಗಿದೆ.


  ಹರೆಯ ಉಕ್ಕಿ ಹರಿಯುವಾಗ ಎದುರು ಬಂದೆ ನೀನು..ಸ್ನೇಹ ಮಾಡಿ ಪ್ರೀತಿ ನೀಡಿ ತಿನಿಸಿ ಹೋದೆ ಜೇನು..ನನ್ನ ನಿನ್ನ ಪ್ರೀತಿ ನೋಡಿ ನಾಚಿತಮ್ಮ ಬಾನು..ತಿಳಿಯದಂತೆ ಸೇರಿ ಬಿಟ್ಟೆ ಹೃದಯದೊಳಗೆ ನೀನು..ಹೃದಯ ಒಡೆದ ನೋವಿನಲ್ಲಿ ನರಳುತಿರುವೆ ನಾನು. ಅದೇನು ತಪ್ಪು ಆಯಿತೆಂದು ಬಿಟ್ಟು ಹೋದೆ ನೀನು...ತಿಳಿಯದಂಧ ಕಾರಣವನು ಹುಡುಕುತಿರುವೆ ನಾನು...ನಿನ್ನ ನೆನಪಿನಲ್ಲೆ ಸತ್ತು ಬದುಕುತಿರುವೆ ನಾನು. - ಶೇಖ್(ಸ್ಪಿಯ)ರ್


  ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು, ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು, ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿದ್ದೆ..ಬೇಲಿ ದಾಟಿ, ಪ್ರೇಮದ ಕಾಣಿಕೆಯನ್ನು ತಂದು ನನ್ನ ಬಾಳಿಗೆ ನೀ ಜೊತೆಯಾದೆ.-ಗೆಳೆಯ ನೀನೆಂದಿಗೂ ನನ್ನವನೆ..    -ಶೇಖ್(ಸ್ಪಿಯ)ರ್


  ನನ್ನ ಹೃದಯದ ಮೇಲೆ ನೀಮಾಡಿದ ಪ್ರೀತಿಯ ಹಸ್ತಾಕ್ಷರ, ನಾ ಅಳಿಯದಂತೆ ಉಳಿಸಿದೆ ಈ ನನ್ನ ಉಸಿರ, ನನ್ನ ಪ್ರತಿ ಮಿಡಿತವು ಪ್ರತಿಧ್ವನಿಸಿದೆ ನಿನ್ನ ಹೆಸರ, ದೂರಾಗದಿರು ಗೆಳೆಯ ಸೇರು ನನ್ನ ಹತ್ತಿರ. -  -ಶೇಖ್(ಸ್ಪಿಯ)ರ್


  ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆಸೆರೆ ಹಿಡಿದೆ? ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ? ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ? ನಮ್ಮಿಬ್ಬರ ನೆನಪುಗಳು ಈಗ ಹಾಡಾಗಿ ಮೂಡುತಿದೆ..!! -  -ಶೇಖ್(ಸ್ಪಿಯ)ರ್


  ಮನಸಿನ ಸಾಗರದಲ್ಲಿಒಲವಿನ ಅಲೆ ಎಬ್ಬಿಸಿದೆ, ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ, ಮರೆಯಲಾಗದ ಮಾತುಗಳು ಪದೇ ಪದೇಪಿಸುಗುಟ್ಟಿದೆ, ಪ್ರೇಮದಿಂದ ಕೈ ಹಿಡಿದು, ಜೀವನದ ಹಾದಿ ತುಳಿಸಿದೆ, ನನ್ನಲಿ ನೀನಾದೆ, ನಿನ್ನಲಿ ನಾ ಬೆರೆತು ಹೋದೆ. -ಶೇಖ್(ಸ್ಪಿಯ)ರ್


  ಮುಂಜಾನೆಯ ಚುಮು ಚುಮುಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ, ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ, ತೇಲಿ ಬಂದ ಸಂಗೀತದ ಅಲೆಗಳಲ್ಲಿ ನಿನ್ನ ಮೌನವ ಕಂಡೆ, ಹೊಂಗಿರಣಗಳ ಬೆಳಕಿನಲ್ಲಿ ಲೋಕವನ್ನೇ ಮರೆಸುವ ನಿನ್ನ ನಗುವ ಕಂಡೆ.  -ಶೇಖ್(ಸ್ಪಿಯ)ರ್


  ಒಲಿದಾಗ ಪದಗಳುನಾಚಿದ್ದು ನಿನ್ನಿಂದಲೇ, ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ, ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ, ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ.  -ಶೇಖ್(ಸ್ಪಿಯ)ರ್


  ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ. ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ. ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ ಅದರಲ್ಲಿ ನಿನ್ನ ಗಾನ ಮಾಧುರ್ಯವ ತುಂಬಿಕೊಳ್ಳುತ್ತಿದ್ದೆ. ಆದರೇನೊಂದು ಆಗದೆ ವಿರಾಗಿಯಾದೆ ಎಂದೆಂದೂ ನಿನ್ನ ಮರೆಯದಾದೆ.  -ಶೇಖ್(ಸ್ಪಿಯ)ರ್


  ಇರುಳ ಕತ್ತಲ ಸೀಳಿ ಇಣುಕಿಣುಕಿ ನೀ ನನ್ನ ಕಾಡುತಿಹೆ, ಇಕ್ಷುಧರನ ಸುಮ ಬಾಣದಿಂದೆನ್ನಇರಿಯುತಿರುವೆ, ಇಹದೊಳಗೆ ಕಾಣದಾ ಲೋಕಗಳ ತೋರುತಿರುವೆ, ಇಂದಲ್ಲ ಎಂದಿಗೂ ನೀ ನನ್ನವಳೆ ಎನಿಸುತಿರುವೆ.  -ಶೇಖ್(ಸ್ಪಿಯ)ರ್


  ಎಲ್ಲೆಲ್ಲೂ ದರ್ಶನವ ನನಗೆ ನೀಡು ಬಾ, ಎತ್ತೆತ್ತ ನೋಡಲತ್ತತ್ತ ನೀ ತೋರು ಬಾ, ಎಂದೆಂದೂ ಮನೆ ಮನವ ತುಂಬು ಬಾ, ಎಂದೋ ಎನದೆ ಇಂದೇ ಓಡೋಡು ಬಾ.  -ಶೇಖ್(ಸ್ಪಿಯ)ರ್


  ಹಣತೆ ನೀನಾಗಿರಲು ಅರಳೆ ನಾನಾಗುವೆ, ನದಿ ನೀನಾಗಿರಲು ಪ್ರವಾಹ ನಾನಾಗುವೆ, ಮೋಡ ನೀನಾಗಲು ಮಳೆ ನಾನಾಗುವೆ, ಸಮಯ ನೀನಾಗಿರಲು ಕ್ಷಣ ನಾನಾಗುವೆ, ದೇಹ ನೀನಾಗಿರಲು ಆತ್ಮ ನಾನಾಗುವೆ.  -ಶೇಖ್(ಸ್ಪಿಯ)ರ್
  First published: