Holiday Plan: ವಾಣಿ ವಿಲಾಸ ಡ್ಯಾಂ ಸೌಂದರ್ಯ ಸವಿಯೋಕೆ ಬೆಂಗಳೂರಿನಿಂದ ಹೀಗೆ ಹೋಗ್ಬೇಕಂತೆ

Vani Vilas Sagar Dam: ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ್ ಜಲಾಶಯ ನೋಡಲು ಸದ್ಯ ಹಲವಾರು ಜನರು ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನಿಂದ ವೀಕೆಂಡ್​ ಟ್ರಿಪ್​ ಪ್ಲ್ಯಾನ್​ ಮಾಡುವುದಾದರೆ ಇದು ಸದ್ಯದ ಬೆಸ್ಟ್​ ಆಯ್ಕೆ ಎನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯ (Rain) ಆರ್ಭಟ ಜೋರಾಗಿಯೇ ಇತ್ತು. ಆದರೆ ಕೆಲ ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ (Dams) ಸಾಕಷ್ಟು ನೀರು ಹರಿದುಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಮಳೆಗಾಲದಲ್ಲಿ (Rainy Season) ಡ್ಯಾಂಗಳನ್ನು ನೋಡುವುದು ಒಂದು ಸುಂದರವಾದ ಅನುಭವ. ಹಾಗೆಯೇ ಭರ್ತಿಯಾಗಿ ಪ್ರವಾಸಿಗರನ್ನು ಸೆಳೆಯುತ್ತಿರುವ ಜಲಾಶಯ ಎಂದರೆ ವಾಣಿ ವಿಲಾಸ ಜಲಾಶಯ. ಸದ್ಯ ಇದು ಪ್ರವಾಸಿಗರ ಹಾಟ್​ ಫೇವರೇಟ್​ ಸ್ಥಳವಾಗಿದ್ದು, ಬೆಂಗಳೂರಿಗರು ಇಲ್ಲಿಗೆ ಹೇಗೆ ಹೋಗಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.  

ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ

ಚಿತ್ರದುರ್ಗವನ್ನು ಬರದ ನಾಡು ಎಂದು ಕರೆಯಲಾಗುತ್ತಿತ್ತು. ಇಲ್ಲಿ ಮಳೆ ಬೀಳುವುದು ಅಪರೂಪ ಎನ್ನುವ ರೀತಿ ಆಗಿತ್ತು. ಆದರೆ ಈ ಬಾರಿ ಎಲ್ಲವೂ ಬದಲಾಗಿದೆ. ಜಿಲ್ಲೆ ಜನರಿಗೆ ಜೀವನಾಡಿಯಾಗಿರುವ ವಾಣಿ ವಿಲಾಸ ಸಾಗರ (Vani Vilasa Sagara) ಮತ್ತೊಮ್ಮೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದ್ದು, ಡ್ಯಾಂ ಭರ್ತಿಯಾಗಿದೆ. ಸದ್ಯ ವಾಣಿ ವಿಲಾಸ ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿರುವ ಕಾರಣ ಸುತ್ತಲಿನ ಪರಿಸರ ಸುಂದರವಾಗಿ ನೋಡುಗರನ್ನು ಆಕರ್ಷಿಸುತ್ತಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ್ ಜಲಾಶಯ ನೋಡಲು ಸದ್ಯ ಹಲವಾರು ಜನರು ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನಿಂದ ವೀಕೆಂಡ್​ ಟ್ರಿಪ್​ ಪ್ಲ್ಯಾನ್​ ಮಾಡುವುದಾದರೆ ಇದು ಸದ್ಯದ ಬೆಸ್ಟ್​ ಆಯ್ಕೆ ಎನ್ನಬಹುದು. ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆಯ ಮಾರ್ಗವಾಗಿ 18 ಕಿಲೋ ಮೀಟರ್ ದೂರದಲ್ಲಿರುವ ಈ ಜಲಾಶಯಕ್ಕೆ ನೀವು ಹೋಗಬಹುದು.

ಇದೊಂದೇ ಅಲ್ಲದೇ ನೀವು ಬೆಂಗಳೂರು, ತುಮಕೂರಿನಿಂದ ಹಿರಿಯೂರು ಮೂಲಕ ಈ ಡ್ಯಾಂ ನೋಡಲು ಹೋಗಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಬರುವವರು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದಲ್ಲಿರುವ ವಿವಿ ಪುರ ಕ್ರಾಸ್ ಮೂಲಕ ಈ ಡ್ಯಾಂಗೆ ಹೋಗಬಹುದು.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ದಿನ ಉಪವಾಸ ಮಾಡಿದ್ರೆ ಎಷ್ಟೆಲ್ಲಾ ಲಾಭ ಇದೆ ನೋಡಿ

ವಾಣಿ ವಿಲಾಸ ಡ್ಯಾಂಗೆ ಹೇಗೆ ಹೋಗಬೇಕು?

ಈ ಮೊದಲು ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ವ್ಯಾಪ್ತಿಯಲ್ಲಿ 800 - 1000 ಅಡಿ ಬೋರ್​ವೆಲ್ ಕೊರೆಸಿದರು ಸಹ ನೀರು ಮಾತ್ರ ಒಂದು ಹನಿಯೂ ಸಿಗುತ್ತಿರಲಿಲ್ಲ. ಇದರ ಪರಿಣಾಮ ಬಹುತೇಕ ಅಡಿಕೆ,ತೆಂಗಿನ ತೋಟಗಳು ಒಣಗಿ ಹೋಗಿ ರೈತರು ಕಂಗಾಲಾಗಿದ್ದರು. ಬಳಿಕ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ವಿವಿ ಸಾಗರಕ್ಕೆ ತಾತ್ಕಾಲಿಕವಾಗಿ ನೀರು ಬಿಡಲಾಗಿತ್ತು.  ಆದರೆ ಈ ಬಾರಿ ಎಲ್ಲವೂ ಬದಲಾಗಿದ್ದು, ಜನರ ಮುಖದಲ್ಲಿ ಸಂತಸ ಮೂಡಿದೆ.

2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಇದೀಗ ಚಿಕ್ಕಮಗಳೂರು, ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ವೇದಾವತಿ ನದಿ ಮೂಲಕ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಈಗ 1958ರ ದಾಖಲೆಯನ್ನು ಹಿಂದಿಕ್ಕಿ ಡ್ಯಾಂ ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆ ಮಟ್ಟಕ್ಕೆ ತುಂಬುತ್ತಿದೆ. ಈವರೆಗೆ ವಿವಿ ಸಾಗರ ಡ್ಯಾಂ ತುಂಬಿ ಕೋಡಿ ಬಿದ್ದ ಸುದ್ದಿಯನ್ನ ಹಿರಿಯರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದ ಜನರು ಇದೀಗ ಡ್ಯಾಂ ಸಂಪೂರ್ಣ ಭರ್ತಿ ಆಗುವುದನ್ನು ನೋಡಲು ಜಿಲ್ಲೆಯ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಮ್ಮ ಮನೆ ಬಳಿಯೇ ಇರೋ ಈ ಅಂಗಡಿಗಳಲ್ಲಿ ಸಖತ್ ಸ್ವೀಟ್ಸ್ ಸಿಗುತ್ತಂತೆ ನೋಡಿ

ಅಲ್ಲದೇ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕುಗಳಲ್ಲಿ ಕೇವಲ 100- 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ರಮ್ಯ ರಮಣೀಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ.
Published by:Sandhya M
First published: