Skin Care: ಈ ವಸ್ತುಗಳನ್ನು ಬಳಸಿದ್ರೆ ನಿಮ್ಮ ಮುಖದ ಅಂದ ಹೆಚ್ಚಾಗುತ್ತಂತೆ

ಗ್ಲೋಯಿಂಗ್ ಸ್ಕಿನ್ ಎಂದರೆ ನಿಮ್ಮ ತ್ವಚೆಯು ನೈಸರ್ಗಿಕ ಹೊಳಪು ಹೊಂದುವುದು ಆಗಿದೆ. ಮತ್ತು ಹಿತವಾದ ತ್ವಚೆ ಎಂದರೆ ನಿಮ್ಮ ತ್ವಚೆಯು ನಯವಾಗಿ ಮತ್ತು ಮೃದುವಾಗಿ ಕಾಣುವುದು. ನಿಮ್ಮ ಚರ್ಮದ ಮೇಲೆ ಯಾವುದೇ ಅಸ್ವಸ್ಥತೆ ಇಲ್ಲದೇ ತ್ವಚೆ ಸಂಪೂರ್ಣ ಶುಭ್ರವಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚರ್ಮವು ಹೊಳಪು (Skin Brighten) ಮತ್ತು ಆರೋಗ್ಯಕರವಾಗಿರಲು (Healthy) ಹಲವು ಅಂಶಗಳು ಕಾರಣವಾಗುತ್ತವೆ. ಚರ್ಮದ ಆರೈಕೆ (Skin Care), ಚರ್ಮವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಚರ್ಮ ಚೆನ್ನಾಗಿದ್ದಾಗ, ಸಂಪೂರ್ಣ ಆರೋಗ್ಯದಿಂದ ಇದ್ದಾಗ ವಿಭಿನ್ನ ಹೊಳಪು, ಕಲೆ, ದದ್ದು, ಅಲರ್ಜಿ (Allergy), ತುರಿಕೆಯಂಥ ಸಮಸ್ಯೆಗಳು ದೂರವಾಗುತ್ತವೆ. ಹೊಳೆಯುವ ಮತ್ತು ಹಿತವಾದ ಚರ್ಮವು ನಿಮ್ಮ ಚರ್ಮದ ಮೈಬಣ್ಣ ಹೆಚ್ಚಿಸುತ್ತದೆ. ಚರ್ಮವು ಆರೋಗ್ಯಕರವಾಗಿ ಮತ್ತು ಹಿತವಾದಾಗ, ಹೊಳಪು ತಾನೇ ತಾನಾಗಿ ಬರುತ್ತದೆ. ಇದು ತುಂಬಾ ಆಕರ್ಷಕವಾಗುತ್ತದೆ. ಮತ್ತು ಚರ್ಮದ ಟೋನ್ ಅಪ್ರಸ್ತುತವಾಗುತ್ತದೆ. ಆರೋಗ್ಯಕರ, ಹಿತವಾದ ಮತ್ತು ಹೊಳೆಯುವ ಚರ್ಮದ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳಲು ನೀವು ಸಾಕಷ್ಟು ಪ್ರಯತ್ನ ಮಾಡುವುದು ತುಂಬಾ ಮುಖ್ಯ.

    ಆರೋಗ್ಯಕರ ತ್ವಚೆ ಪಡೆಯಲು ಏನು ಮಾಡಬೇಕು?

    ಆರೋಗ್ಯಕರ ತ್ವಚೆ ಎಂದರೆ ನಿಮ್ಮ ತ್ವಚೆಯ ಮೇಲೆ ಕಲೆ, ಮೊಡವೆ, ದದ್ದು, ಚರ್ಮದ ಸಮಸ್ಯೆ, ತುರಿಕೆ, ಅಲರ್ಜಿ ಇತ್ಯಾದಿ ಸಮಸ್ಯೆಗಳಿರದೇ, ಸ್ಕಿನ್ ಮೃದು ಮತ್ತು ನಯವಾಗಿರುವುದು ಎಂದರ್ಥ. ಮತ್ತು ನಿಮ್ಮ ಚರ್ಮವು ಸಂಪೂರ್ಣವಾಗಿ ತೇವಾಂಶದಿಂದ ಕೂಡಿರುವುದು ತುಂಬಾ ಮುಖ್ಯ. ಗ್ಲೋಯಿಂಗ್ ಸ್ಕಿನ್ ಎಂದರೆ ನಿಮ್ಮ ತ್ವಚೆಯು ನೈಸರ್ಗಿಕ ಹೊಳಪು ಹೊಂದುವುದು ಆಗಿದೆ.

    ಮತ್ತು ಹಿತವಾದ ತ್ವಚೆ ಎಂದರೆ ನಿಮ್ಮ ತ್ವಚೆಯು ನಯವಾಗಿ ಮತ್ತು ಮೃದುವಾಗಿ ಕಾಣುವುದು. ನಿಮ್ಮ ಚರ್ಮದ ಮೇಲೆ ಯಾವುದೇ ಅಸ್ವಸ್ಥತೆ ಇಲ್ಲದೇ ತ್ವಚೆ ಸಂಪೂರ್ಣ ಶುಭ್ರವಾಗಿರಬೇಕು. ಹಾಗಾದರೆ ಶುಭ್ರ, ಶುಚಿಯಾದ, ಹೊಳಪು ಮತ್ತು ನಯವಾದ, ಆರೋಗ್ಯಕರ ತ್ವಚೆ ಪಡೆಯಲು ನೀವು ಇಲ್ಲಿ ತಿಳಿಸಿರುವ ಆಹಾರಗಳನ್ನು ನಿಮ್ಮ ತ್ವಚೆಯ ಮೇಲೆ ಹಚ್ಚುವ ಮೂಲಕ ಅದರ ಸೌಂದರ್ಯವನ್ನು ಬಹುಮಟ್ಟಿಗೆ ಹೆಚ್ಚಿಸಬಹುದು.

    ಇದನ್ನೂ ಓದಿ: ಈ ಹಣ್ಣಿನ ಬೀಜ ತಿಂದರೆ ಆರೋಗ್ಯಕ್ಕೆ ಹಾನಿ ಗ್ಯಾರೆಂಟಿ, ಹಣ್ಣು ತಿನ್ನುವ ಮುನ್ನ ಯೋಚಿಸಿ

    ಯಾವೆಲ್ಲಾ ಆಹಾರಗಳನ್ನು ಬಾಲಿವುಡ್ ಖ್ಯಾತನಾಮರು ಮತ್ತು ಮಾಡೆಲಿಂಗ್ ತಾರೆಯರು ತಮ್ಮ ಚರ್ಮದ ಮೇಲೆ ಅನ್ವಯಿಸುತ್ತಾರೆ ಎಂಬುದನ್ನಯ ನಾವು ಇಲ್ಲಿ ನೋಡೋಣ.

    ಕಲ್ಲುಪ್ಪು

    ನೀವು ಕಲ್ಲು ಉಪ್ಪು ಅಂದ್ರೆ ಪಿಂಕ್ ಸಾಲ್ಟ್ ಅನ್ನು ನಿಯಮಿತವಾಗಿ ನಿಮ್ಮ ತ್ವಚೆಯ ಮೇಲೆ ಹಚ್ಚಿದರೆ, ನಿಮ್ಮ ಚರ್ಮವು ಹಿತವಾದ ಮತ್ತು ದೋಷ ರಹಿತ ಆಗಿರುತ್ತದೆ. ಇದಕ್ಕಾಗಿ, 2 ಚಿಟಿಕೆ ಕಲ್ಲು ಉಪ್ಪನ್ನು ತೆಗೆದುಕೊಂಡು ಅದನ್ನು ಎರಡು ಚಮಚ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ.

    ಈಗ ಅದನ್ನು ಹತ್ತಿಯಿಂದ ತ್ವಚೆಯ ಮೇಲೆ ಹಚ್ಚಿ ಮತ್ತು 5 ನಿಮಿಷಗಳ ಕಾಲ ಹಿಡಿದ ನಂತರ ತಾಜಾ ನೀರಿನಿಂದ ಮುಖ ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ. ಕಲ್ಲು ಉಪ್ಪು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದೆ. ಇದು ಒಳಗಿನಿಂದ ಚರ್ಮವನ್ನು ಪೋಷಿಸುತ್ತದೆ ಮತ್ತು ಕಲೆ ಶಮನಗೊಳಿಸುತ್ತದೆ.

    ತೆಂಗಿನ ಎಣ್ಣೆ

    ತೆಂಗಿನ ಎಣ್ಣೆ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ನಾವು ಅಲರ್ಜಿ ಅಥವಾ ಇನ್ ಫೆಕ್ಷನ್ ಇದ್ದಾಗ ಮಾತ್ರ ತೆಂಗಿನ ಎಣ್ಣೆ ಚರ್ಮಕ್ಕೆ ಹಚ್ಚುತ್ತೇವೆ. ನೀವು ಚರ್ಮವನ್ನು ಹಿತವಾದ ಮಾಡಲು ತೆಂಗಿನ ಎಣ್ಣೆ ಬಳಸುವುದು ಸೂಕ್ತ. ಇದಕ್ಕಾಗಿ 3 ರಿಂದ 4 ಹನಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಕುತ್ತಿಗೆಗೆ ಚೆನ್ನಾಗಿ ಹಚ್ಚಿ. ಲಘುವಾಗಿ ಮಸಾಜ್ ಮಾಡಿ. ನಂತರ ಒಂದು ಗಂಟೆಯ ನಂತರ ಮುಖ ತೊಳೆಯಿರಿ.

    ಇದನ್ನೂ ಓದಿ: ಒಂದು ಕಪ್ ವಾಲ್ ನಟ್ಸ್​ನಲ್ಲಿಯ ಪೋಷಕಾಂಶ, ಪ್ರಯೋಜನಗಳ ಸೀಕ್ರೆಟ್

    ಜೇನು ಮಿಶ್ರಣ ಅನ್ವಯಿಸಿ

    ನೀವು 4 ರಿಂದ 5 ಹನಿ ಜೇನುತುಪ್ಪ ತೆಗೆದುಕೊಂಡು ಅದನ್ನು ಎರಡು ಚಮಚ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಈಗ ಈ ಮಿಶ್ರಣ ಹತ್ತಿಯಿಂದ ಚರ್ಮದ ಮೇಲೆ ಅನ್ವಯಿಸಿ. ಅದು ಚೆನ್ನಾಗಿ ಆರಿದ ಮೇಲೆ ಮುಖ ತೊಳೆದು ಕ್ಲೀನ್ ಮಾಡಿ. ಈ ಮೂರರಲ್ಲಿ ಯಾವುದಾದರೊಂದು ಕ್ರಮ ಅಳವಡಿಸಿಕೊಂಡರೆ ಕೇವಲ 15 ದಿನದೊಳಗೆ ತ್ವಚೆಯಲ್ಲಿ ವಿಭಿನ್ನ ಸೌಂದರ್ಯ ಕಾಣಬಹುದು.
    Published by:renukadariyannavar
    First published: