Neem Face Pack: ಈ ಬೇವಿನ ಫೇಸ್ ಪ್ಯಾಕ್‍ಗಳನ್ನು ಮನೆಯಲ್ಲೇ ತಯಾರಿಸಿ ಮೊಡವೆಗಳನ್ನು ಓಡಿಸಿ

ಬೇವಿನ ಪ್ಯಾಕ್  ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು ಮಾತ್ರವಲ್ಲ ಕಾಂತಿಯನ್ನು ಕೂಡ ನೀಡುತ್ತದೆ. ಚರ್ಮಕ್ಕೆ ಪ್ರಯೋಜನಕಾರಿಯಾದ ಮನೆಯಲ್ಲೇ ತಯಾರಿಸಬಹುದಾದ ಮೂರು ಫೇಸ್ ಪ್ಯಾಕ್‍ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಹಿ ಬೇವು ಬಹಳ ಹಿಂದಿನ ಕಾಲದಿಂದಲೂ ಔಷಧೀಯ ಸಸ್ಯವಾಗಿ (Medicinal plant) ಬಳಕೆಯಲ್ಲಿದೆ. ಆಧುನಿಕ ಯುಗದಲ್ಲಿ ಹಲವಾರು ಚರ್ಮದ ಆರೈಕೆಯ (Skin Care) ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಬೇವನ್ನು ಬಳಸಲಾಗುತ್ತದೆ ಎಂಬುದನ್ನು ಆ ಉತ್ಪನ್ನಗಳ ಜಾಹೀರಾತುಗಳಲ್ಲಿ ನೀವು ನೋಡಿರಬಹುದು. ಬೇವು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ (Skin Health) ಅತ್ಯುತ್ತಮ. ಬೇವು ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಕಹಿ ಬೇವು ಚರ್ಮದ ಸಾಕಷ್ಟು ಬಗೆಯ ಸಮಸ್ಯೆಗಳ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನಿಮ್ಮ ಮುಖದಲ್ಲಿ ಮೊಡವೆ (Pimples) ಮತ್ತಿತರ ಸಮಸ್ಯೆಗಳಿದ್ದಲ್ಲಿ ಬೇವಿನ ಪ್ಯಾಕ್ (Neem Pack) ಬಳಸುವುದು ಉತ್ತಮ ಮಾರ್ಗ. 

ಬೇವಿನ ಪ್ಯಾಕ್  ಚರ್ಮದ ಸಮಸ್ಯೆಗಳನ್ನು ನಿವಾರಿಸುವುದು ಮಾತ್ರವಲ್ಲ ಕಾಂತಿಯನ್ನು ಕೂಡ ನೀಡುತ್ತದೆ. ಚರ್ಮಕ್ಕೆ ಪ್ರಯೋಜನಕಾರಿಯಾದ ಮನೆಯಲ್ಲೇ ತಯಾರಿಸಬಹುದಾದ ಮೂರು ಫೇಸ್ ಪ್ಯಾಕ್‍ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

  • ಬೇವು , ಜೇನು ತುಪ್ಪ ಮತ್ತು ಹಾಲು ( ಒಣ ಚರ್ಮದವರಿಗೆ)
    ಒಣ ಚರ್ಮದವರಿಗೆ ಮಾಯಿಶ್ಚರೈಸರ್ ಬಹಳ ಅಗತ್ಯ. ಈ ಪ್ಯಾಕ್‍ನಲ್ಲಿರುವ, ಜೇನು ತುಪ್ಪ ಮತ್ತು ಹಾಲು ಚರ್ಮಕ್ಕೆ ತೇವಾಂಶ ಒದಗಿಸಿದರೆ, ಬೇವು ಮುಖದಲ್ಲಿ ಮೊಡವೆಗಳನ್ನು ನಿವಾರಿಸುತ್ತದೆ.


ಸಾಮಾಗ್ರಿಗಳು :
2 ಟೇಬಲ್ ಚಮಚ ಜಜ್ಜಿದ ಬೇವಿನ ಸೊಪ್ಪಿನ ಪೆಸ್ಟ್
1 ಟೇಬಲ್ ಚಮಚ ಜೇನು ತುಪ್ಪ
1 1/2 ಟೇಬಲ್ ಚಮಚ ಹಾಲು

ವಿಧಾನ :
ಎಲ್ಲವನ್ನು ಸೇರಿಸಿ ಒಂದು ಪೇಸ್ಟ್ ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿದ ಬಳಿಕ, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.

  • ಬೇವು, ಮುಲ್ತಾನಿ ಮಿಟ್ಟಿ ಮತ್ತು ಮೊಸರು ( ಎಣ್ಣೆ ಮತ್ತು ಮೊಡವೆಯುಕ್ತ ಚರ್ಮದವರಿಗೆ)
    ಮೊದಲೇ ತಿಳಿಸಿದಂತೆ, ಬೇವು ಮೊಡವೆಗಳನ್ನು ನಿವಾರಿಸುತ್ತದೆ. ಚರ್ಮದಲ್ಲಿನ ಮುಲ್ತಾನಿ ಮಣ್ಣು ಹೆಚ್ಚೂವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಮೊಸರು ಚರ್ಮದ ಮೃದುತ್ವವನ್ನು ಕಾಪಾಡುತ್ತದೆ ಮತ್ತು ಗುಲಾಬಿ ಜಲ ಚರ್ಮದಲ್ಲಿನ ಜಲ ಸಂಚಯನಕ್ಕೆ ಬೆಂಬಲ ನೀಡುತ್ತದೆ. ಈ ಪ್ಯಾಕನ್ನು ಬಳಸುವುದರಿಂದ ಎಣ್ಣೆ ಮುಕ್ತ ಮತ್ತು ಮೃದುವಾದ ಚರ್ಮ ನಿಮ್ಮದಾಗುತ್ತದೆ. ನೀವು ಈ ಪ್ಯಾಕ್‍ನಲ್ಲಿ ಮುಲ್ತಾನಿ ಮಿಟ್ಟಿಯ ಬದಲಿಗೆ ಕ್ಯಾಲನ್ ಕ್ಲೇಯನ್ನು ಕೂಡ ಬಳಸಬಹುದು.


ಇದನ್ನೂ ಓದಿ: Banana Peels Benefits: ಮೊಡವೆಗಳಿಂದ ಮುಕ್ತಿ ಪಡೆಯಲು ಬಾಳೆ ಹಣ್ಣಿನ ಸಿಪ್ಪೆ ಬೆಸ್ಟ್ ಮೆಡಿಸಿನ್ ಅಂತೆ!

ಸಾಮಾಗ್ರಿಗಳು :
2 ಟೇಬಲ್ ಚಮಚ ಜಜ್ಜಿದ ಬೇವಿನ ಪೇಸ್ಟ್
1 ಟೇಬಲದ ಚಮಚ ಮೊಸರು
3/4 ಟೇಬಲ್ ಚಮಚ ಮುಲ್ತಾನಿ ಮಿಟ್ಟಿ
1/2 ಟೇಬಲ್ ಚಮಚ ರೋಸ್ ವಾಟರ್

ವಿಧಾನ : ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್‍ಗೆ ಹಾಕಿ, ಗಂಟಾಗದಂತೆ ಚೆನ್ನಾಗಿ ಕಲಸಿಕೊಳ್ಳಿ. ಈ ಪ್ಯಾಕನ್ನು ಮುಖಕ್ಕೆ ಹಚ್ಚಿಕೊಂಡ 10 ನಿಮಿಷದ ಬಳಿಕ, ತಣ್ಣಗಿನ ನೀರಿನಿಂದ ತೊಳೆದು ತೆಗೆಯಿರಿ.

  • ಬೇವು , ಅರಶಿನ ಮತ್ತು ಟೀ ಟ್ರೀ ತೈಲ ( ತೀವ್ರವಾಗಿ ಮೊಡವೆಗಳಿಂದ ಪೀಡಿತವಾಗಿರುವ ಚರ್ಮ ಉಳ್ಳವರಿಗೆ)
    ನಿಮ್ಮ ಮುಖದಲ್ಲಿ ಮೊಡವೆಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಯಾವ ಮನೆಮದ್ದಿಗೂ ಗುಣವಾಗುತ್ತಿಲ್ಲ ಎಂದಾದಲ್ಲಿ, ಈ ಪ್ಯಾಕ್ ಅನ್ನು ಒಮ್ಮೆ ಖಂಡಿತಾ ಪ್ರಯತ್ನಿಸಿ. ಅರಶಿನ ಮತ್ತು ಬೇವಿನ ಈ ಮಿಶ್ರಣ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್ ಮತ್ತು ಉರಿಯೂತ ನಿವಾರಕವಾಗಿರುತ್ತದೆ. ಟೀ ಟ್ರೀ ತೈಲ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ.
    ಗಮನಿಸಿ : ಇದನ್ನು ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್‍ನಂತೆ ಬಳಸುವ ಬದಲು, ಮೊಡವೆಗಳ ಮೇಲೆ ಹಚ್ಚುವುದು ಹೆಚ್ಚು ಸೂಕ್ತ.


ಇದನ್ನೂ ಓದಿ:  Skin Care: ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮಕ್ಕೆ ಈ ಸ್ಕಿನ್ ಕೇರ್ ಟಿಪ್ಸ್ ಫಾಲೋ ಮಾಡಿ

ಸಾಮಾಗ್ರಿಗಳು :
2 ಟೇಬಲ್ ಚಮಚ ಜಜ್ಜಿದ ಬೇವಿನ ಪೇಸ್ಟ್
1 ಹನಿ ಟೀ ಟ್ರೀ ತೈಲ
1 ಟೇಬಲ್ ಚಮಚ ಅರಶಿನ

ವಿಧಾನ:
ಎಲ್ಲಾ ಮೂರು ಸಾಮಾಗ್ರಿಗಳನ್ನು ಸೇರಿಸಿ ದಪ್ಪಗಿನ ಪೇಸ್ಟನ್ನು ತಯಾರಿಸಿ. ಕೇವಲ ಮೊಡವೆಗಳು ಇರುವ ಜಾಗಕ್ಕೆ ಮಾತ್ರ ಈ ಪೇಸ್ಟನ್ನು ಹಚ್ಚಿರಿ. ಬಳಿಕ ನೀರಿನಿಂದ ತೊಳೆದು ತೆಗೆಯಿರಿ. ಆದಾದ ಬಳಿಕ ಹೈಡ್ರೇಟಿಂಗ್ ಸೀರಮ್ ಬಳಸಿ ಚರ್ಮವನ್ನು ಮಾಯಿಶ್ಚರೈಸ್ ಮಾಡುವುದನ್ನು ಮರೆಯಿದಿರಿ.
Published by:Ashwini Prabhu
First published: