• Home
  • »
  • News
  • »
  • lifestyle
  • »
  • Skin Care: ಹಾಲಿನ ಪುಡಿಯನ್ನು ಹೀಗೆ ಯೂಸ್ ಮಾಡಿದ್ರೆ ಮೊಡವೆಗೆ ಪರಿಹಾರ ಸಿಗುತ್ತೆ

Skin Care: ಹಾಲಿನ ಪುಡಿಯನ್ನು ಹೀಗೆ ಯೂಸ್ ಮಾಡಿದ್ರೆ ಮೊಡವೆಗೆ ಪರಿಹಾರ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಕಾರಣಗಳಿಂದ ಚರ್ಮವು ಕೆಟ್ಟದಾಗುತ್ತದೆ. ಇದನ್ನು ಸರಿಪಡಿಸಲು ನೀವು ಕೆಲವು ಮನೆ ಮದ್ದು ಟ್ರೈ ಮಾಡಿ. ನ್ಯಾಚುರಲ್ ಸ್ಕಿನ್ ಕೇರ್ ತ್ವಚೆಯ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಚರ್ಮದ ಆರೈಕೆಗೆ ಹಾಲಿನ ಪುಡಿ ಬಳಕೆ ಮಾಡಿದರೆ ಇದು ಚರ್ಮದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

    ಮುಖದ ಹೊಳಪು (Face Brightening) ಕಾಪಾಡಲು ಮತ್ತು ಹೊಳೆಯುವ ತ್ವಚೆ (Skin) ಪಡೆಯಲು ಹಲವರು ಹಲವು ರೀತಿಯ ಪ್ರಯತ್ನ ಮಾಡ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು (Girls) ಮುಖದ ಮೇಲೆ ಒಂದೇ ಒಂದು ಗುಳ್ಳೆಯಾದ್ರೂ (Acne) ಸಹ ಸಹಿಸುವುದಿಲ್ಲ. ಸುಂದರ (Beautiful) ಹಾಗೂ ಕಲೆ ರಹಿತ ತ್ವಚೆ ಪಡೆಯಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಅಷ್ಟಕ್ಕೂ ಮುಖದ ನೈಸರ್ಗಿಕ ಹೊಳಪನ್ನು (Natural Glow) ಯಾರು ತಾನೇ ಇಷ್ಟ ಪಡಲ್ಲ? ಆರೋಗ್ಯಕರ ಆಹಾರ ಹಾಗೂ ಯೋಗ ಮಾಡಿದ್ರೆ ಸುಂದರ ತ್ವಚೆ ಪಡೆಯಬಹುದು. ಜೊತೆಗೆ ಆರೋಗ್ಯಕರ ಚರ್ಮದ ಆರೈಕೆ ಕೂಡ ಮುಖ್ಯವಾಗುತ್ತದೆ. ಆಗ ಮಾತ್ರ ನೀವು ನೈಸರ್ಗಿಕ ಹೊಳಪು ಪಡೆಯಲು ಸಾಧ್ಯ.


    ಸುಂದರ ಹಾಗೂ ಹೊಳೆಯುವ ತ್ವಚೆಗೆ ಹಾಲಿನ ಪುಡಿ


    ಒತ್ತಡದ ಜೀವನಶೈಲಿ, ಪರಿಸರದ ಬದಲಾವಣೆ, ಬಿಸಿಲು, ಒಣಹವೆ, ಧೂಳು ಸೇರಿದಂತೆ ಅನೇಕ ಕಾರಣಗಳಿಂದ ಚರ್ಮವು ಕೆಟ್ಟದಾಗುತ್ತದೆ. ಇದನ್ನು ಸರಿಪಡಿಸಲು ನೀವು ಕೆಲವು ಮನೆ ಮದ್ದು ಟ್ರೈ ಮಾಡಿ.


    ನ್ಯಾಚುರಲ್ ಸ್ಕಿನ್ ಕೇರ್ ತ್ವಚೆಯ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಚರ್ಮದ ಆರೈಕೆಗೆ ಹಾಲಿನ ಪುಡಿ ಬಳಕೆ ಮಾಡಿದರೆ ಇದು ಚರ್ಮದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.




    ಮನೆಯಲ್ಲಿ ಹಾಲಿನ ಪುಡಿ ಫೇಶಿಯಲ್ ಮಾಡುವುದು ಹೇಗೆ?


    ಮೊದಲು ತ್ವಚೆಯನ್ನು ಶುದ್ಧೀಕರಿಸಿ


    ತ್ವಚೆಯ ಶುದ್ಧೀಕರಣಕ್ಕಾಗಿ ಒಂದು ಬಟ್ಟಲಿಗೆ 2 ಚಮಚ ಹಸಿ ಹಾಲು ಹಾಕಿ. ನಂತರ ಅದಕ್ಕೆ ಒಂದು ಚಮಚ ಹಾಲಿನ ಪುಡಿ ಬೆರೆಸಿ, ಕ್ಲೆನ್ಸರ್ ತಯಾರಿಸಿ. ನಂತರ ಮುಖವನ್ನು ಸ್ವಚ್ಛಗೊಳಿಸಿ. ಕ್ಲೆನ್ಸರ್ ನ್ನು ಬ್ರಷ್ ಅಥವಾ ಹತ್ತಿ ಪ್ಯಾಡ್ ಸಹಾಯದಿಂದ ಮುಖಕ್ಕೆ ಹಚ್ಚಿ, 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.


    ಸ್ಟೀಮ್ ತೆಗೆದುಕೊಳ್ಳುವುದು


    ಸ್ಟೀಮ್ ಗಾಗಿ ದೊಡ್ಡ ಬಟ್ಟಲು ಅಥವಾ ಸ್ಟೀಮರ್ ನಲ್ಲಿ ನೀರು ಬಿಸಿ ಮಾಡಿ. ಇದಕ್ಕೆ ನಿಮ್ಮಿಷ್ಟದ ಫೇಶಿಯಲ್ ಆಯಿಲ್ ಹಾಕಿ 15 ನಿಮಿಷ ಮುಖವನ್ನು ಕವರ್ ಮಾಡಿ, ಸ್ಟೀಮ್ ತೆಗೆದುಕೊಳ್ಳಿ.


    ಸ್ಕ್ರಬ್ಬಿಂಗ್ ಮಾಡುವುದು


    ಸ್ಕ್ರಬ್ಬಿಂಗ್ ಗಾಗಿ ಬಟ್ಟಲಿನಲ್ಲಿ ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಹಾಲಿನ ಪುಡಿ ಮತ್ತು ಒಂದು ಚಮಚ ಹಸಿ ಹಾಲನ್ನು ಬೆರೆಸಿ, ಮಿಶ್ರಣ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಲಘುವಾಗಿ ಸ್ಕ್ರಬ್ ಮಾಡಿ, ನಂತರ ಸರಳ ನೀರಿನಿಂದ ಸ್ವಚ್ಛಗೊಳಿಸಿ.


    ಸಾಂದರ್ಭಿಕ ಚಿತ್ರ


    ಮಸಾಜ್ ಮಾಡುವುದು


    ಮಸಾಜ್ ಗಾಗಿ ಬಟ್ಟಲಿನಲ್ಲಿ 2 ಚಮಚ ಹಾಲಿನ ಪುಡಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ತೆಂಗಿನ ಎಣ್ಣೆ ಮಿಶ್ರಣ ಮಾಡಿ. ಸ್ವಲ್ಪ ರೋಸ್ ವಾಟರ್ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಇದನ್ನು  ಈಗ ಈ ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ, 15 ನಿಮಿಷ ಮಸಾಜ್ ಮಾಡಿ.


    ಫೇಸ್‌ಪ್ಯಾಕ್


    ಫೇಸ್ ಪ್ಯಾಕ್ ಗಾಗಿ ಬಟ್ಟಲಿನಲ್ಲಿ 2 ಚಮಚ ಹಾಲಿನ ಪುಡಿ, ಒಂದು ಚಮಚ ಶ್ರೀಗಂಧದ ಪುಡಿ, ಒಂದು ಚಮಚ ಕಡಲೆಬೇಳೆ ಹಿಟ್ಟು, 2 ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ, ಪೇಸ್ಟ್ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ.


    ಇದನ್ನೂ ಓದಿ: ಈ ಪಾನೀಯಗಳಲ್ಲಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರಹಸ್ಯ   


    ಇದು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ. ಶುಷ್ಕತೆ ನಿವಾರಿಸುತ್ತದೆ. ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ನೈಸರ್ಗಿಕ ಹೊಳಪನ್ನು ಕಾಪಾಡುತ್ತದೆ.

    Published by:renukadariyannavar
    First published: