Crack Heels: ಒಡೆದ ಹಿಮ್ಮಡಿ ನಿವಾರಣೆ, ಪಾದಗಳ ಆರೈಕೆಗೆ ಯಾವ ಮನೆಮದ್ದುಗಳನ್ನು ಹೇಗೆ ಬಳಸಬೇಕು?

ಒಡೆದ ಕಣಕಾಲುಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಲುಗಳನ್ನು ತೋರಿಸಲು ಮುಜುಗರ ಉಂಟು ಮಾಡುತ್ತದೆ. ಹೆಚ್ಚಿನವರು ಮುಖ ಮತ್ತು ಕೈಗಳ ಆರೈಕೆಗೆ ನೀಡುವ ಸಮಯವನ್ನು ಪಾದಗಳ ಆರೈಕೆಗೆ ನೀಡಲ್ಲ. ಹಾಗಾಗಿ ದಿನದ ಚಿಕ್ಕ ಸಮಯವನ್ನಾದ್ರೂ ಪಾದಗಳ ಆರೈಕೆಗೆ ಗಮನ ಕೊಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಒಡೆದ ಹಿಮ್ಮಡಿ (Crack Heels) ಅಸಹ್ಯವಾಗಿ ಕಾಣುತ್ತವೆ. ಜೊತೆಗೆ ನಡೆಯುವಾಗ ಸಾಕಷ್ಟು ನೋವುಂಟು (Pain) ಮಾಡುತ್ತವೆ. ನಿರಂತರ ನಡಿಗೆಯಿಂದ (Walking) ಬಿರುಕು ಬಿಟ್ಟ ಹಿಮ್ಮಡಿಗಳ ಮೇಲೆ ಒತ್ತಡ (Feet Stress) ಹೆಚ್ಚುತ್ತದೆ. ಇದು ಕೆಲವೊಮ್ಮೆ ನೋವು ಮತ್ತು ರಕ್ತಸ್ರಾವಕ್ಕೂ ಕಾರಣ ಆಗುತ್ತದೆ. ಶುಷ್ಕತೆ ಹೆಚ್ಚಿದಾಗ ಮತ್ತು ಚಳಿಗಾಲದಲ್ಲಿ ಒಡೆದ ಹಿಮ್ಮಡಿ ಸಮಸ್ಯೆ ಹೆಚ್ಚು. ಆದರೆ ಕೆಲವೊಮ್ಮೆ ಕಳಪೆ ಪಾದದ ನೈರ್ಮಲ್ಯ ಅಥವಾ ನಿರ್ಜಲೀಕರಣ ಚರ್ಮವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದು ಮಾನ್ಸೂನ್ ಅಥವಾ ಬೇಸಿಗೆಯಲ್ಲೂ ನಿಮ್ಮನ್ನು ತೊಂದರೆ ಉಂಟು ಮಾಡಬಹುದು. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ರೀತಿಯ ನೋವು ಅಥವಾ ಅಸ್ವಸ್ಥತೆ ತಪ್ಪಿಸಲು ಕೆಲವು ಸಲಹೆ ಪಾಲಿಸುವುದು ಮುಖ್ಯ.

    ಪಾದದ ಆರೈಕೆ ನಿರ್ಲಕ್ಷ್ಯ ಬೇಡ

    ಒಡೆದ ಕಣಕಾಲುಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಲುಗಳನ್ನು ತೋರಿಸಲು ಮುಜುಗರ ಉಂಟು ಮಾಡುತ್ತದೆ. ಹೆಚ್ಚಿನವರು ಮುಖ ಮತ್ತು ಕೈಗಳ ಆರೈಕೆಗೆ ನೀಡುವ ಸಮಯವನ್ನು ಪಾದಗಳ ಆರೈಕೆಗೆ ನೀಡಲ್ಲ. ಹಾಗಾಗಿ ದಿನದ ಚಿಕ್ಕ ಸಮಯವನ್ನಾದ್ರೂ ಪಾದಗಳ ಆರೈಕೆಗೆ ಗಮನ ಕೊಡಿ. ಆದರೆ ಇದು ದೇಹದ ಒಂದು ಪ್ರಮುಖ ಭಾಗ. ಕಾಳಜಿಯ ಅಗತ್ಯವಿದೆ.

    ಹಿಮ್ಮಡಿ ಬಿರುಕು ಬಿಡಲು ಕಾರಣವೇನು?

    ಒಡೆದ ಹಿಮ್ಮಡಿಗೆ ಕಾರಣವಾಗುವ ಕೆಲವು ಸಾಮಾನ್ಯ ಅಂಶಗಗಳೆಂದರೆ ಬೊಜ್ಜು, ಸರಿಯಾಗಿ ಹಾಕದ ಬೂಟು, ದೀರ್ಘಕಾಲದ ಒಣ ಚರ್ಮ ಮತ್ತು ಸರಿಯಾದ ಆರೈಕೆ ಮತ್ತು ನೈರ್ಮಲ್ಯದ ಕೊರತೆ. ಅಡುಗೆ ಮನೆಯಲ್ಲಿನ ಪದಾರ್ಥಗಳು ಬಿರುಕು ಬಿಟ್ಟ ಹಿಮ್ಮಡಿ ಸರಿಪಡಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಚರ್ಮಕ್ಕೆ ಆರೈಕೆ ನೀಡಲು ವಿಟಮಿನ್ ಸಿ ಹೇಗೆ ಲಾಭಕಾರಿ?

    ಒಡೆದ ಹಿಮ್ಮಡಿಗೆ ಪರಿಹಾರ ನೀಡಬಲ್ಲ ಕೆಲವು ಮನೆಮದ್ದುಗಳು ಹೀಗಿವೆ

    ಬಾಳೆಹಣ್ಣು

    ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ6 ಮತ್ತು ಸಿ ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ಚರ್ಮವನ್ನು ಚೆನ್ನಾಗಿ ಹೈಡ್ರೀಕರಿಸುತ್ತದೆ. ಬಾಳೆಹಣ್ಣು ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಪಾದಗಳನ್ನು ತೇವವಾಗಿಡುತ್ತದೆ. ಶುಷ್ಕತೆ ತಡೆಯುತ್ತದೆ.

    ಹೇಗೆ ಬಳಸುವುದು?

    ಎರಡು ಮಾಗಿದ ಬಾಳೆಹಣ್ಣುಗಳನ್ನು ಹಿಸುಕಿ ನಯವಾದ ಪೇಸ್ಟ್ ಮಾಡಿ. ಉಗುರು ಮತ್ತು ಕಾಲ್ಬೆರಳುಗಳ ಬದಿ ಸೇರಿದಂತೆ ಸಂಪೂರ್ಣ ಪಾದಕ್ಕೆ ಈ ಪೇಸ್ಟ್ ಅನ್ವಯಿಸಿ. 20 ನಿಮಿಷ ಬಿಡಿ. ನಂತರ ಪಾದಗಳನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಮಲಗುವ ಮುನ್ನ ಕನಿಷ್ಠ 2 ವಾರ ಪುನರಾವರ್ತಿಸಿ.

    ವ್ಯಾಸಲೀನ್ ಮತ್ತು ನಿಂಬೆ ರಸ

    ನಿಂಬೆಯ ಆಮ್ಲೀಯ ಗುಣಲಕ್ಷಣ, ವ್ಯಾಸಲೀನ್‌ನ ಆರ್ಧ್ರಕ ಪರಿಣಾಮ ಸಂಯೋಜನೆಯಾದಾಗ ಒಣ ಚರ್ಮ ಮತ್ತು ಬಿರುಕು ಬಿಟ್ಟ ಪಾದ ಸ್ವಚ್ಛವಾಗುತ್ತದೆ.

    ಬಳಸುವುದು ಹೇಗೆ?

    ಪಾದಗಳನ್ನು 15 ನಿಮಿಷ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ. ತೊಳೆದು ಒಣಗಿಸಿ. ಒಂದು ಟೀ ಚಮಚ ವ್ಯಾಸಲೀನ್ ಮತ್ತು ಕೆಲವು ಹನಿ ನಿಂಬೆ ರಸ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಣಕಾಲುಗಳು ಮತ್ತು ಪಾದಗಳ ಇತರ ಭಾಗಗಳಿಗೆ ಸಂಪೂರ್ಣವಾಗಿ ಅನ್ವಯಿಸಿ. ರಾತ್ರಿಯಿಡೀ ಉಣ್ಣೆಯ ಸಾಕ್ಸ್ ಧರಿಸಿ ಮತ್ತು ಬೆಳಿಗ್ಗೆ ತೊಳೆಯಿರಿ. ನಿಯಮಿತವಾಗಿ ಮಾಡಿ.

    ಜೇನುತುಪ್ಪ

    ಜೇನುತುಪ್ಪವು ನೈಸರ್ಗಿಕ ನಂಜುನಿರೋಧಕ. ಇದು ಉತ್ತಮ ಹ್ಯೂಮೆಕ್ಟಂಟ್ ಆಗಿದೆ. ಚರ್ಮವನ್ನು ತೇವ ಮತ್ತು ಒಣಗದಂತೆ ತಡೆಯುತ್ತದೆ.

    ಹೇಗೆ ಬಳಸುವುದು?

    ಬೆಚ್ಚಗಿನ ನೀರಿನಲ್ಲಿ ಒಂದು ಕಪ್ ಜೇನುತುಪ್ಪ ಮಿಶ್ರಣ ಮಾಡಿ. ಪಾದಗಳಿಗೆ ಹಚ್ಚಿ 20 ನಿಮಿಷ ಮೃದುವಾಗಿ ಮಸಾಜ್ ಮಾಡಿ. ನಂತರ ಪಾದ ಒಣಗಿಸಿ ಮತ್ತು ಮಾಯಿಶ್ಚರೈಸರ್ ಅನ್ವಯಿಸಿ. ನಿಯಮಿತವಾಗಿ ಮಾಡಿ.

    ಅಕ್ಕಿ ಹಿಟ್ಟು, ಜೇನುತುಪ್ಪ ಮತ್ತು ವಿನೆಗರ್

    ಅಕ್ಕಿ ಹಿಟ್ಟು ಅದ್ಭುತ ನೈಸರ್ಗಿಕ ಎಕ್ಸ್ಫೋಲಿಯೇಟರ್. ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಚರ್ಮವನ್ನು ಪೋಷಿಸುತ್ತದೆ.

    ಇದನ್ನೂ ಓದಿ: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ

    ಹೇಗೆ ಬಳಸುವುದು?

    ಎಲ್ಲಾ ಪದಾರ್ಥಗಳನ್ನು ಬೆರೆಸಿ ಪೇಸ್ಟ್ ತಯಾರಿಸಿ. ಪಾದಗಳಿಗೆ ಸ್ಕ್ರಬ್ ಮಾಡಿ. 10 ನಿಮಿಷ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ, ಒಣಗಿಸಿ. ಸ್ಕ್ರಬ್ ಮಾಡಿ. ವಾರಕ್ಕೆ 2-3 ಬಾರಿ ಪುನರಾವರ್ತಿಸಿ.
    Published by:renukadariyannavar
    First published: