• Home
  • »
  • News
  • »
  • lifestyle
  • »
  • Ginger Juice: ಶುಂಠಿ ಕೇವಲ ಆರೋಗ್ಯಕ್ಕೆ ಮಾತ್ರ ಅಲ್ಲ ಚರ್ಮದ ಅಂದ ಹೆಚ್ಚಿಸಲು ಸಹಕಾರಿ

Ginger Juice: ಶುಂಠಿ ಕೇವಲ ಆರೋಗ್ಯಕ್ಕೆ ಮಾತ್ರ ಅಲ್ಲ ಚರ್ಮದ ಅಂದ ಹೆಚ್ಚಿಸಲು ಸಹಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ginger Juice For Skin: ಮುಖ್ಯವಾಗಿ ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಮಸ್ಯೆಗೆ ನಿಮಗೆ ಗೊತ್ತಿಲ್ಲದ ಪರಿಹಾರವನ್ನು ನಾವು ಹೇಳುತ್ತೇವೆ. ಈ  ಒಂದು ವಸ್ತುವಿನ ಬಳಕೆಯಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. ಆ ವಸ್ತು ಶುಂಠಿ. 

  • Share this:

ಮಹಿಳೆಯರು (Women) ತಮ್ಮ ಚರ್ಮವನ್ನು (Skin) ಕಾಂತಿಯುತವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಜೊತೆಗೆ ವಿವಿಧ ರೀತಿಯ ಸೌಂದರ್ಯವರ್ಧಕಗಳನ್ನು (Beauty Product)  ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಈ ವಸ್ತುಗಳಲ್ಲಿ ರಾಸಾಯನಿಕಗಳಿರುತ್ತವೆ. ಇದು ಮುಖದ ಚರ್ಮದ ಮೇಲೆ ಪರಿಣಾಮ ಬೀರಬಹುದು. ಎಷ್ಟೋ ಮಹಿಳೆಯರು ಮುಖ ಮತ್ತು ಚರ್ಮದ ಸೌಂದರ್ಯಕ್ಕಾಗಿ ಮನೆಮದ್ದುಗಳನ್ನು (Home Remedies)  ಬಳಸುತ್ತಾರೆ. ಇನ್ನು ಮುಖ್ಯವಾಗಿ ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸಮಸ್ಯೆಗೆ ನಿಮಗೆ ಗೊತ್ತಿಲ್ಲದ ಪರಿಹಾರವನ್ನು ನಾವು ಹೇಳುತ್ತೇವೆ. ಈ  ಒಂದು ವಸ್ತುವಿನ ಬಳಕೆಯಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. ಆ ವಸ್ತು ಶುಂಠಿ. 


ಈ ಶುಂಠಿಯನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಶುಂಠಿಯನ್ನು ಮುಖ್ಯವಾಗಿ ಆಹಾರದ ರುಚಿ ಹೆಚ್ಚಿಸಲು  ಬಳಸಲಾಗುತ್ತದೆ. ಈ ಶುಂಠಿಯಿಂದ ಆರೋಗ್ಯ ಪ್ರಯೋಜನಗಳು ಬಹಳಷ್ಟಿದೆ. ಶುಂಠಿಯನ್ನು ಸೇವಿಸಿದರೆ ನೆಗಡಿ, ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ. ಅಲ್ಲದೇ, ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಶುಂಠಿ, ಚರ್ಮಕ್ಕೂ ಪ್ರಯೋಜನಕಾರಿ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ.


ಶುಂಠಿಯ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ, ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳಂತಹ ಅನೇಕ ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.


ಶುಂಠಿ ಬಹುಪಯೋಗಿ  ವಸ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯವಾಗಿ ಚಳಿಗಾಲದಲ್ಲಿ ಶುಂಠಿಯನ್ನು ಸೇವಿಸಬೇಕು ಎನ್ನುತ್ತಾರೆ ತಜ್ಞರು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ಶೀತ, ಕೆಮ್ಮು, ಗಂಟಲು ನೋವು ಮುಂತಾದ ಸಮಸ್ಯೆಗಳು ದೂರವಾಗುತ್ತವೆ. ಚರ್ಮದ ಸಮಸ್ಯೆಗಳಿಗೆ ಸಹ ಶುಂಠಿಯು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಮಹಿಳೆಯರು ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಶುಂಠಿಯನ್ನು ಯಾವುದೇ ಚಿಂತೆಯಿಲ್ಲದೇ ಬಳಕೆ ಮಾಡಬಹುದು.


ಇದನ್ನೂ ಓದಿ: ಕೈಗಳ ಬಗ್ಗೆಯೂ ಇರಲಿ ಕಾಳಜಿ, ಮನೆಯಲ್ಲೇ ತಯಾರಿಸಿ ಈ ಮಾಸ್ಕ್


ಮುಖವನ್ನು ಕಾಂತಿಯುತ ಮತ್ತು ಸುಂದರವಾಗಿಸಲು ಶುಂಠಿಯನ್ನು ಹೇಗೆ ಬಳಸಬೇಕು ಎಂಬುದು ಇಲ್ಲಿದೆ.


ಶುಂಠಿಯನ್ನು ಬಳಕೆ ಮಾಡುವುದರಿಂದ ಮುಖದ ತ್ವಚೆಯು ಆರೋಗ್ಯಕರವಾಗಿರುತ್ತದೆ. ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಶುಂಠಿ ಪುಡಿಯನ್ನು ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಬೆರೆಸಿ,  ಮಿಶ್ರಣ ಮಾಡಿಕೊಂಡು ನಿಮ್ಮ ಮುಖಕ್ಕೆ ವಾರಕ್ಕೊಮ್ಮೆ ಹಚ್ಚಿ. ಇದು ಮುಖದ ಚರ್ಮ ಸಡಿಲವಾಗದಂತೆ ತಡೆಯುತ್ತದೆ. ಇದನ್ನು ನೀವು ಕೆಲ ತಿಂಗಳು ಕಾಲ ಬಳಸಿದರೆ ಬಬೇಗ ಸುಕ್ಕು ಮಾಯವಾಗುತ್ತದೆ.


ಶುಂಠಿ ರಸವನ್ನು ರೋಸ್ ವಾಟರ್ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು  ನಿಮ್ಮ ಮುಖಕ್ಕೆ  ಹಚ್ಚಿ. 20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ತೊಳೆಯಿರಿ.  ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.


ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಆರೋಗ್ಯಕ್ಕೂ ಒಳ್ಳೆಯದು, ಹಣನೂ ಉಳಿಯುತ್ತೆ


ಶುಂಠಿ ರಸವನ್ನು ಹೀಗೆ ಬಳಸಿ


ಕೇವಲ ಶುಂಠಿ ರಸವನ್ನು ಈ ರೀತಿ ಮುಖಕ್ಕೆ ಹಚ್ಚುವುದರಿಂದ ಚಿಕ್ಕ ವಯಸ್ಸಿನಲ್ಲಿ ಮುಖದಲ್ಲಿ ಕಾಣಿಸುವ ಸುಕ್ಕುಗಳು ಕಡಿಮೆಯಾಗುತ್ತವೆ. ಅಲ್ಲದೇ, ಮುಖದಲ್ಲಿರುವ ಕಪ್ಪು ಕಲೆಗಳೂ ಸಹ ಮಾಯವಾಗುತ್ತವೆ.




ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಈ ಶುಂಠಿಯನ್ನು ನಿಮ್ಮ ತ್ವಚೆಗೆ ಬಳಸುವುದರಿಂದ ಇದು  ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಶುಂಠಿಯ ರಸವನ್ನು ಮುಖಕ್ಕೆ ಹಚ್ಚುವುದರಿಂದ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಮುಖಕ್ಕೆ ಹಚ್ಚಿದ ಶುಂಠಿಯ ರಸ ಒಣಗುವ ತನಕ ಮುಖದ ಮೇಲೆ ಮಸಾಜ್ ಮಾಡಿದರೆ ಖಂಡಿತವಾಗಿಯೂ ಬಹು ಬೇಗನೆ ನಿಮ್ಮ ಚರ್ಮದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

Published by:Sandhya M
First published: