• Home
  • »
  • News
  • »
  • lifestyle
  • »
  • Home Remedies: ಶುಂಠಿಯನ್ನು ಈ ರೀತಿ ತಿಂದ್ರೆ ಪಿರಿಯಡ್ಸ್​ ಹೊಟ್ಟೆ ನೋವು ಮಾಯವಾಗುತ್ತೆ

Home Remedies: ಶುಂಠಿಯನ್ನು ಈ ರೀತಿ ತಿಂದ್ರೆ ಪಿರಿಯಡ್ಸ್​ ಹೊಟ್ಟೆ ನೋವು ಮಾಯವಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How To Get Rid of Periods Cramp: ಶುಂಠಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಿರಿಯಡ್ಸ್​ ಸಮಯದಲ್ಲಿ ಶುಂಠಿಯು ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ. 

  • Share this:

ಮುಟ್ಟು ಅಥವಾ ಪಿರಿಯಡ್ಸ್​ ಸಮಯದಲ್ಲಿ (Periods Time) ನೋವು ಸಾಮಾನ್ಯ ಸಂಗತಿ. ಪಿರಿಯಡ್ಸ್​ ಸಮಯದಲ್ಲಿ ಮಹಿಳೆಯರು (Women) ವಿವಿಧ ಹಂತದ ನೋವನ್ನು (Pain) ಅನುಭವಿಸುತ್ತಾರೆ. ಆದರೆ, ಅತಿಯಾದ  ನೋವು ಆತಂಕಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಇದರಿಂದ ಕೆಲವು ಮಹಿಳೆಯರು ತಮ್ಮ ಕೆಲಸದಲ್ಲಿ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಹಾಸಿಗೆಯಲ್ಲಿಯೇ ಇರಬೇಕಾಗುತ್ತದೆ. ಆದರೆ ಕೆಲವು ಮನೆಮದ್ದುಗಳ (Home Remedies) ಸಹಾಯದಿಂದ ನೀವು ಈ ನೋವಿನಿಂದ ಪರಿಹಾರವನ್ನು ಪಡೆಯಬಹುದು.


ಅಂತಹ ಒಂದು ಪದಾರ್ಥವೆಂದರೆ ಶುಂಠಿ. ಶುಂಠಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಿರಿಯಡ್ಸ್​ ಸಮಯದಲ್ಲಿ ಶುಂಠಿಯು ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಶುಂಠಿ ನೋವು ಹಾರ್ಮೋನ್ ಪ್ರೋಸ್ಟಗ್ಲಾಂಡಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಆಯಾಸದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಇದು ಅನಿಯಮಿತವಾಗಿರುವ ಪಿರಿಯಡ್ಸ್​ ಅನ್ನು ಸಹ ಕ್ರಮಬದ್ಧಗೊಳಿಸಬಹುದು. ಹಾಗಾದರೆ ಈ ಶುಂಠಿಯನ್ನು ಹೇಗೆ ಸೇವನೆ ಮಾಡಿದರೆ ನೋವು ಕಡಿಮೆಯಾಗುತ್ತದೆ ಎಂಬುದು ಇಲ್ಲಿದೆ.


ಶುಂಠಿಯನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ


ಶುಂಠಿಯು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ಅನೇಕ ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಶುಂಠಿ ನೀರು ಸಹ ತೂಕವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಇದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.




ಇದನ್ನೂ ಓದಿ: ದೃಷ್ಟಿ ಸಮಸ್ಯೆ ಹೆಚ್ಚಾಗ್ಬಾರ್ದು ಅಂದ್ರೆ ಈ ಮುನ್ನಚ್ಚರಿಕೆ ತೆಗೆದುಕೊಳ್ಳಲೇ ಬೇಕು


100 ಗ್ರಾಂ ಶುಂಠಿಯಲ್ಲಿ ಕ್ಯಾಲೋರಿಗಳು - 80, ಕೊಬ್ಬುಗಳು - 0.8 ಗ್ರಾಂ, ಸೋಡಿಯಂ - 13 ಮಿಲಿಗ್ರಾಂ, ಪೊಟ್ಯಾಸಿಯಮ್ - 415 ಮಿಲಿಗ್ರಾಂ, ಕಾರ್ಬೋಹೈಡ್ರೇಟ್ಗಳು - 18 ಗ್ರಾಂ, ಆಹಾರದ ಫೈಬರ್ - 2 ಗ್ರಾಂ, ಸಕ್ಕರೆ - 1.7 ಗ್ರಾಂ, ಪ್ರೋಟೀನ್ - 1.8 ಗ್ರಾಂ ಇರುತ್ತದೆ.




ಮುಟ್ಟಿನ ನೋವನ್ನು ಕಡಿಮೆ ಮಾಡಲು ಈ ಶುಂಠಿಯನ್ನು ಸೇವಿಸಿ


ಶುಂಠಿ ಟೀ:  ನಾವು ನಿಯಮಿತವಾಗಿ ಹಾಲಿನ ಚಹಾವನ್ನು ಕುಡಿಯುತ್ತೇವೆ. ನೀವು ಚಹಾ ಮಾಡಲು ನೀರು ಮತ್ತು ಚಹಾ ಎಲೆಗಳನ್ನು ಕುದಿಸಿದಾಗ.  ಅದರಲ್ಲಿ ಶುಂಠಿಯನ್ನು ಸಹ ಹಾಕಿ ಕುದಿಸಿ. ನಂತರ ಅದಕ್ಕೆ ಹಾಲು ಸೇರಿಸಿ. ನಿಮ್ಮ ಶುಂಠಿ ಚಹಾವನ್ನು ಈ ರೀತಿ ತಯಾರಿಸಿ ಸೇವನೆ ಮಾಡುವುದು ಪಿರಿಯಡ್ಸ್​ ನೋವಿಗೆ ಪರಿಹಾರ ನೀಡುತ್ತದೆ.


ಶುಂಠಿ ತುಳಸಿ ಹರ್ಬಲ್ ಟೀ: ಶುಂಠಿಯನ್ನು ತೆಳುವಾಗಿ ಕತ್ತರಿಸಿ. ನಂತರ  ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಶುಂಠಿ ಸೇರಿಸಿ. ಇದಕ್ಕೆ ತುಳಸಿ ಎಲೆಗಳನ್ನು ಸೇರಿಸಿ. ಸ್ವಲ್ಪ ಹೊತ್ತು ಕುದಿಸಿ. ಈ ಶುಂಠಿ ಮತ್ತು ತುಳಸಿಯ ಈ ಗಿಡಮೂಲಿಕೆ ಚಹಾವು ಮುಟ್ಟಿನ ನೋವಿನಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.




ಶುಂಠಿ ರಸ: ಶುಂಠಿ ರಸವನ್ನು ತಯಾರಿಸಲು ಬಾಣಲೆಯಲ್ಲಿ 1 ಕಪ್ ನೀರು ಹಾಕಿ, ಇದಕ್ಕೆ ಸ್ವಲ್ಪ ಶುಂಠಿ ಮತ್ತು ಸೋಂಪುಕಾಳು ಸೇರಿಸಿ ಸ್ವಲ್ಪ ಸಮಯ ಕುದಿಸಿ. ನಂತರ ಅದನ್ನು ಸೋಸಿಕೊಂಡು, ಸ್ವಲ್ಪ ಬೆಚ್ಚಗಿರುವಾಗ ಇದನ್ನು ಕುಡಿಯುವುದು ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ.


ಇದನ್ನೂ ಓದಿ: ಯಾರಿಗೂ ಗೊತ್ತಿಲ್ಲದ ಮರಸೇಬು ಹಣ್ಣಿನ ಪ್ರಯೋಜನಗಳಿವು, ದಿನಕ್ಕೊಂದರಂತೆ ತಿಂದರೆ ಆರೋಗ್ಯ ಹದಗೆಡಲ್ಲ




ಶುಂಠಿ ನೀರು: ಶುಂಠಿ ಮತ್ತು ಜೇನುತುಪ್ಪದೊಂದಿಗೆ ಬೆಚ್ಚಗಿನ ನೀರನ್ನು ಕುಡಿಯುವುದು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಒಂದು ಕಪ್ ನೀರಿನಲ್ಲಿ ಸ್ವಲ್ಪ ಶುಂಠಿಯನ್ನು ರುಬ್ಬಿಕೊಂಡು ಹಾಕಿ,  ನಂತರ ಅದನ್ನು 10 ನಿಮಿಷಗಳ ಕಾಲ ಕುದಿಸಿ. ಈಗ ಗ್ಯಾಸ್​ ಶಾಖವನ್ನು ಆಫ್ ಮಾಡಿ, ಈ ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ. ಈ ಶುಂಠಿ ನೀರನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತದಿಂದ ಮುಕ್ತಿ ಸಿಗುತ್ತದೆ.

Published by:Sandhya M
First published: