ಚಟ್ನಿ, ಕೋಸಂಬರಿ, ಸಾಂಬಾರ್, ರಸಂ (Rasam) ಹೀಗೆ ಮುಂತಾದ ಆಹಾರಗಳಲ್ಲಿ (Food) ಕರಿಬೇವಿನ ಸೊಪ್ಪು (Curry Leaves) ಪ್ರಮುಖ ಸುವಾಸನೆ ಹಾಗೂ ರುಚಿಕರ ಅಂಶವಾಗಿದೆ. ಕರಿಬೇವಿನ ಎಲೆಗಳನ್ನು ಎಲ್ಲಾ ಆಹಾರಗಳಲ್ಲಿ ಬಳಸುವುದರಿಂದ ಅನೇಕ ಆಹಾರಗಳಿಗೆ ಇದು ಪರಿಮಳವನ್ನು (Smell) ನೀಡುತ್ತದೆ. ಆದರೆ, ಕರಿಬೇವಿನ ಎಲೆಗಳು ಸುವಾಸನೆ ಮಾತ್ರವಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳನ್ನು (Health Benefits) ಸಹ ಹೊಂದಿವೆ. ಚಳಿಗಾಲದಲ್ಲಿ (Winter) ಕರಿಬೇವಿನ ಎಲೆಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಇದನ್ನು ಅಡುಗೆಯಲ್ಲಿ ಬಳಸಬೇಕು.
ಕರಿಬೇವಿನ ಎಲೆಗಳ ಬಳಕೆಯು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆಗಳು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದರ ಜೊತೆಗೆ ಇದನ್ನು ತಿನ್ನುವುದು ಮಧುಮೇಹ, ಅಜೀರ್ಣ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಬೂದು ಕೂದಲಿಗೆ ಪರಿಹಾರ ನೀಡುತ್ತದೆ
ಕೂದಲು ಬಿಳಿಯಾಗುವುದನ್ನು ತಡೆಯಲು ಕರಿಬೇವಿನ ಎಲೆಗಳು ಅಗತ್ಯ ಅಂಶಗಳನ್ನು ಒಳಗೊಂಡಿರುತ್ತವೆ. ಡ್ಯಾಂಡ್ರಫ್ ಅನ್ನು ಕಡಿಮೆ ಮಾಡಲು, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜಿಗುಟಾದ ಕೂದಲನ್ನು ಸಡಿಲಗೊಳಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಇದು ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿಯೇ ಕರಿಬೇವಿನ ಎಲೆಗಳನ್ನು ಕೂದಲಿನ ಎಣ್ಣೆಯನ್ನು ತಯಾರಿಸಲು ಬಳಸಲಾಗುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ ಈ ಕರಿಬೇವಿನ ಎಲೆ
ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆ ನೋವನ್ನು ಕಡಿಮೆ ಮಾಡಲು ಈ ಕರಿಬೇವಿನ ಎಲೆಗಳು ಸಹಾಯ ಮಾಡುತ್ತದೆ. ಇದು ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಅಗತ್ಯವಾದ ರಸವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಅತಿಸಾರ ಮತ್ತು ಮಲಬದ್ಧತೆ ನಿವಾರಣೆಗೆ ಕರಿಬೇವಿನ ಸೊಪ್ಪು ಬಿಟ್ಟು ಬೇರೆ ಔಷಧವಿಲ್ಲ ಎಂದರೆ ತಪ್ಪಲ್ಲ.
ಇದನ್ನೂ ಓದಿ: ಬಾಯಿ ಚಪ್ಪರಿಸಿ ತಿನ್ನೋ ಮೊಮೊಸ್ ಆರೋಗ್ಯಕ್ಕೆ ಭಾರೀ ಡೇಂಜರ್
ಬೆಳಗಿನ ನೋವನ್ನು ಪರಿಹರಿಸಲು ಉಪಯುಕ್ತ ಇದು
ಅನೇಕ ಬಾರಿ ಬೆಳಗ್ಗೆ ಎದ್ದಾಗ ದೇಹದ ವಿವಿಧ ಭಾಗಗಳಲ್ಲಿ ನೋವಾಗುತ್ತದೆ. ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ತಾಜಾತನ ಅನಿಸುವುದಿಲ್ಲ. ಇಂತಹ ಸಮಸ್ಯೆಗಳಿಗೆ ಕರಿಬೇವಿನ ಸೊಪ್ಪು ರಾಮಬಾಣ. ಹಾಗೆಯೇ, ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಯರು ಅನುಭವಿಸುವ ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು ಸಹ ಇದನ್ನು ಬಳಸಬಹುದು.
ಮಧುಮೇಹದ ವಿರುದ್ಧ ಪರಿಣಾಮಕಾರಿ ಔಷಧಿ ಇದು
ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ಕರಿಬೇವಿನ ಎಲೆಗಳು ದೇಹದಲ್ಲಿ ಇನ್ಸುಲಿನ್ ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಮಧುಮೇಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಉತ್ತಮ
ಕರಿಬೇವಿನ ಎಲೆಗಳು ಆ್ಯಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿಹೊಂದಿರುವುದರಿಂದ, ಅವು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ದೇಹದಲ್ಲಿನ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ದೇಹದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿದ್ದರೆ, ಸಾಮಾನ್ಯವಾಗಿ ಅನೇಕ ರೋಗಗಳು ಹತ್ತಿರವೂ ಬರಲ್ಲ. ಕರಿಬೇವಿನ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ ಹಾಗೂ ಅನೇಕ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಇದನ್ನೂ ಓದಿ: ಈ ಹೂವುಗಳು ಸುಂದರ ಮಾತ್ರ ಅಲ್ಲ, ಆರೋಗ್ಯಕರ ಕೂಡ
ಕರಿಬೇವಿನ ಎಲೆಗಳು ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಫೈಬರ್, ರಂಜಕ, ಕಬ್ಬಿಣ ಮತ್ತು ಅನೇಕ ವಿಟಮಿನ್ಗಳನ್ನು ಸಮೃದ್ಧವಾಗಿ ಹೊಂದಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಅನೇಕ ಸೋಂಕುಗಳು ಸಹ ತಗುಲದಂತೆ ನೋಡಿಕೊಳ್ಳುತ್ತದೆ. ಕರಿಬೇವಿನ ಪೌಷ್ಠಿಕಾಂಶವನ್ನು ಪರಿಗಣಿಸಿ, ಪ್ರತಿಯೊಬ್ಬರೂ ಕರಿಬೇವಿನ ಎಲೆಗಳನ್ನು ತಿನ್ನಬೇಕು. ಇದು ಆಹಾರದ ರುಚಿ ಮತ್ತು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ