Cinnamon Benefits: ದಾಲ್ಚಿನ್ನಿಯನ್ನು ಹೀಗೆ ಬಳಸಿದ್ರೆ ಮಧುಮೇಹ ಸಮಸ್ಯೆಗೆ ಪರಿಹಾರ ಸಿಗುತ್ತೆ

ಮಧುಮೇಹ ಚಿಕಿತ್ಸೆಯು ಸಾಮಾನ್ಯವಾಗಿ ಔಷಧ ಮತ್ತು ಇನ್ಸುಲಿನ್ ಚುಚ್ಚುಮದ್ದನ್ನು ಒಳಗೊಂಡಿದೆ. ಆದರೆ ಅನೇಕ ಜನರು ನೈಸರ್ಗಿಕವಾಗಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುವ ಆಹಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ದಾಲ್ಚಿನ್ನಿ ನಿಮಗೆ ಪ್ರಯೋಜನಕಾರಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಧುಮೇಹ (Diabetes) ಅಂದರೆ ಸಕ್ಕರೆ ರೋಗಿಗಳಲ್ಲಿ ರಕ್ತದಲ್ಲಿ (Blood) ಅಸಹಜ ಹೆಚ್ಚಿನ ಸಕ್ಕರೆ ಮಟ್ಟಕ್ಕೆ ಸಂಬಂಧಪಟ್ಟಿದೆ. ಆದಾಗ್ಯೂ ಇಂದಿನ ಕಾಲದಲ್ಲಿ ಸಕ್ಕರೆ ಕಾಯಿಲೆ ಸಮಸ್ಯೆ (Disease Problem) ಹೆಚ್ಚಿನ ಜನರು ಎದುರಿಸುತ್ತಿದ್ದಾರೆ. ಇದು ಸಕ್ಕರೆ ರೋಗಿಗಳ ಜನರು (People) ಅದರ ಗಂಭೀರತೆಯನ್ನು ತುಂಬಾ ಲಘುವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಈಗಿನ ಕಾಲದಲ್ಲಿ ಎಲ್ಲರನ್ನೂ ಮಧುಮೇಹ ಕಾಯಿಲೆ ಕಾಡುತ್ತಿದೆ. ಇನ್ನು ಅದು ತೀರಾ ಸಹಜವಾದ ವಿಷಯ. ಆದರೆ ಸೂಕ್ತ ಜಾಗ್ರತೆ ವಹಿಸಿ. ಏಕೆಂದರೆ ಇದನ್ನು ಗಮನಿಸದೆ ಬಿಟ್ಟರೆ ಅಥವಾ ಚಿಕಿತ್ಸೆ ನೀಡದೆ ಇದ್ದರೆ ನಿಮ್ಮ ಹೃದಯ, ಮೂತ್ರಪಿಂಡ, ನರಮಂಡಲ ಹಾಳು ಮಾಡುತ್ತದೆ. ಹಲವು ರೋಗಗಳಿಗೆ ಇದು ಕಾರಣ ಆಗಬಹುದು.

  ಮಧುಮೇಹ ಕಾಯಿಲೆಗೆ ನೈಸರ್ಗಿಕ ಚಿಕಿತ್ಸೆ

  ಮಧುಮೇಹ ಚಿಕಿತ್ಸೆಯು ಸಾಮಾನ್ಯವಾಗಿ ಔಷಧ ಮತ್ತು ಇನ್ಸುಲಿನ್ ಚುಚ್ಚುಮದ್ದನ್ನು ಒಳಗೊಂಡಿದೆ. ಆದರೆ ಅನೇಕ ಜನರು ನೈಸರ್ಗಿಕವಾಗಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುವ ಆಹಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ನೀವು ಸಹ ಅಂತಹ ನೈಸರ್ಗಿಕ ಪ್ರಕ್ರಿಯೆ ಮೂಲಕ ಇನ್ಸುಲಿನ್ ಅನ್ನು ಹೆಚ್ಚಿಸಲು ಹುಡುಕುತ್ತಿದ್ದರೆ ದಾಲ್ಚಿನ್ನಿ ನಿಮಗೆ ಪ್ರಯೋಜನಕಾರಿ ಆಗಿದೆ.

  ಹೋಮಿಯೋಪತಿ ತಜ್ಞೆ ಡಾ ಸ್ಮಿತಾ ಭೋರ್ ಪಾಟೀಲ್ ಅವರ ಪ್ರಕಾರ, ಇತ್ತೀಚೆಗೆ ಇಸ್ತಾನ್‌ನಲ್ಲಿ ದಾಲ್ಚಿನ್ನಿ ಸೇವನೆಯಿಂದ ಮಧುಮೇಹದಲ್ಲಿ ಪ್ರಯೋಜನ ನೀಡುತ್ತದೆ. ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಕುರಿತು ತಿಳಿಸಿದ್ದಾರೆ.

  ಇದನ್ನೂ ಓದಿ: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಕಿರುತೆರೆ ನಟಿ! ಅವರ ಆಹಾರ ಪದ್ಧತಿ ಹೀಗಿದೆ

  ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ ಅವರು ದಾಲ್ಚಿನ್ನಿ ಆರೋಗ್ಯಕರ ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಉತ್ತಮ ಮಸಾಲೆ ಆಗಿದೆ ಎಂದು ಹೇಳಿದ್ದಾರೆ. ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ರೋಗಿಗಳಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

  ದೇಹದಲ್ಲಿ ಸಕ್ಕರೆ ಪ್ರಮಾಣ ಎಷ್ಟು ಇರಬೇಕು

  ಊಟಕ್ಕೆ ಮೊದಲು: ಆರೋಗ್ಯವಂತ ವ್ಯಕ್ತಿಯ ಗುರಿ ರಕ್ತದ ಸಕ್ಕರೆ ಮಟ್ಟ 100 mg/dl ಗಿಂತ ಕಡಿಮೆ ಇರಬೇಕು. ಅದೇ ವೇಳೆ ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟವು 80-130 mg/dl ವ್ಯಾಪ್ತಿಯಲ್ಲಿರಬೇಕು.

  ಊಟವಾದ 1ರಿಂದ 2 ಗಂಟೆಗಳ ನಂತರ: ಆರೋಗ್ಯವಂತ ವ್ಯಕ್ತಿಯ ರಕ್ತದ ಸಕ್ಕರೆ ಮಟ್ಟವು 140 mg / dl ಗಿಂತ ಕಡಿಮೆ ಇರಬೇಕು. ಆದರೆ ಮಧುಮೇಹಿ 180 mg / dl ಗಿಂತ ಕಡಿಮೆ ಇರಬೇಕು.

  ಕಳೆದ ಮೂರು ತಿಂಗಳುಗಳಲ್ಲಿ A1C ರಕ್ತದ ಸಕ್ಕರೆ ಮಟ್ಟ: ಆರೋಗ್ಯವಂತ ವ್ಯಕ್ತಿಯಲ್ಲಿ 5.7 ಪ್ರತಿಶತಕ್ಕಿಂತ ಕಡಿಮೆ ಮತ್ತು ಮಧುಮೇಹಿಗಳಲ್ಲಿ 180 mg/dl ಗಿಂತ ಕಡಿಮೆ ಇರಬೇಕು.

  ಮಧುಮೇಹಕ್ಕೆ ಮುಖ್ಯ ಕಾರಣಗಳು ಯಾವವು?

  ಮಧುಮೇಹಕ್ಕೆ ನಿಖರವಾದ ಕಾರಣ ಗೊತ್ತಿಲ್ಲ. ಆದರೆ ಅನಾರೋಗ್ಯಕರ ಜೀವನಶೈಲಿಯೇ ದೊಡ್ಡ ಕಾರಣ ಎನ್ನಲಾಗಿದೆ. ಕೆಲವು ಆಹಾರ ಮತ್ತು ಪಾನೀಯ ದೇಹದ ರಕ್ತದ ಸಕ್ಕರೆ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

  ಇದು ಸಕ್ಕರೆ, ಕೊಬ್ಬಿನ ಆಹಾರಗಳು ಮತ್ತು ಜಂಕ್ ಆಹಾರ ಒಳಗೊಂಡಿರುತ್ತದೆ. ಜೊತೆಗೆ ಹಾರ್ಮೋನ್ ಅಸಮತೋಲನ, ಹೆಚ್ಚುತ್ತಿರುವ ವಯಸ್ಸು, ಮಧುಮೇಹ ಕೌಟುಂಬಿಕ ಇತಿಹಾಸ, ಅನೇಕ ರೋಗಗಳು ಸಹ ಇದಕ್ಕೆ ಕಾರಣವಾಗಿವೆ.

  ಮಧುಮೇಹಕ್ಕೆ ಮನೆಮದ್ದುಗಳು

  NCBI ಪ್ರಕಾರ ಮಧುಮೇಹ ರೋಗಿಗಳ ರಕ್ತದ ಸಕ್ಕರೆ ಮಟ್ಟದ ಏರಿಳಿತ ನಿಯಂತ್ರಿಸಲು ಕೆಲವು ಮನೆ ಅಥವಾ ನೈಸರ್ಗಿಕ ಪರಿಹಾರಗಳಿವೆ. ಅದರಲ್ಲಿ ದಾಲ್ಚಿನ್ನಿ ನಿಮಗೆ ಪ್ರಯೋಜನಕಾರಿ. ಮಧುಮೇಹ ವಿರೋಧಿ ಗುಣಲಕ್ಷಣಗಳು ದಾಲ್ಚಿನ್ನಿಯಲ್ಲಿ ಕಂಡು ಬರುತ್ತವೆ. ಇದರ ಜೊತೆಗೆ ಸೀರಮ್‌ನಲ್ಲಿರುವ ಪಾಲಿಫಿನಾಲ್‌ಗಳು ಗ್ಲೂಕೋಸ್ ಮತ್ತು ಇನ್ಸುಲಿನ್ ಅನ್ನು ಕಡಿಮೆ ಮಾಡುತ್ತವೆ. ಮಧುಮೇಹದ ಅಪಾಯದಿಂದ ರಕ್ಷಿಸುತ್ತದೆ.

  ಯಾವ ರೋಗಗಳಲ್ಲಿ ದಾಲ್ಚಿನ್ನಿ ಪ್ರಯೋಜನಕಾರಿ?

  ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು, ಕೀಲು ನೋವನ್ನು ಕಡಿಮೆ ಮಾಡಲು, ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು, ಇನ್ಸುಲಿನ್ ಪ್ರತಿರೋಧ ಸುಧಾರಿಸುತ್ತದೆ.

  ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುತ್ತದೆ ಕೆಂಪು ಬೆಂಡೆಕಾಯಿ! ಇಲ್ಲಿದೆ ಇದರ ಆರೋಗ್ಯ ಗುಣಗಳು

  ಮಧುಮೇಹದಲ್ಲಿ ದಾಲ್ಚಿನ್ನಿ ಸೇವನೆ

  ಸಕ್ಕರೆ ಕಾಯಿಲೆಗೆ ದಾಲ್ಚಿನ್ನಿ ನೀರಿನಲ್ಲಿ ಬೆರೆಸಿ ಕುಡಿಯುವುದು ಉತ್ತಮ ಮಾರ್ಗ ಎನ್ನುತ್ತಾರೆ ತಜ್ಞರು. 2 ಇಂಚಿನ ದಾಲ್ಚಿನ್ನಿಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
  Published by:renukadariyannavar
  First published: