• Home
  • »
  • News
  • »
  • lifestyle
  • »
  • Hair Care: ಕೂದಲು ಸೊಂಪಾಗಿ ಬೆಳೆಯಬೇಕು ಅಂದ್ರೆ ಅಲೋವೆರಾವನ್ನು ಈ ರೀತಿ ಬಳಸಿ

Hair Care: ಕೂದಲು ಸೊಂಪಾಗಿ ಬೆಳೆಯಬೇಕು ಅಂದ್ರೆ ಅಲೋವೆರಾವನ್ನು ಈ ರೀತಿ ಬಳಸಿ

ಅಲೋವೆರಾ ಜೆಲ್

ಅಲೋವೆರಾ ಜೆಲ್

Aloe Vera for Hair Growth: ಈ ಅಲೋವೆರಾವನ್ನು ಸಾಮಾನ್ಯವಾಗಿ ಈಗ ಎಲ್ಲರ ಮನೆಯಲ್ಲಿ ಬೆಳೆಯಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅಲೋವೆರಾ ಜೆಲ್‌ನ ಪ್ರಯೋಜನಗಳನ್ನು ಸಾಕಷ್ಟು ಜನ ತಿಳಿದುಕೊಂಡಿದ್ದಾರೆ. ನಮ್ಮ ಸುಂದರ ತ್ವಚೆಗೆ ಈ ಅಲೋವೆರಾ ಬಹಳ ಒಳ್ಳೆಯದು ಎಂದು ಕೂಡ ಅರಿತುಕೊಂಡಿದ್ಧಾರೆ.

ಮುಂದೆ ಓದಿ ...
  • Share this:

ಬೊಕ್ಕ ತಲೆಯ ಸಮಸ್ಯೆ (Baldness) ಇಂದು ಹೆಚ್ಚಿನವರನ್ನು ಕಾಡುತ್ತಾ ಇದೆ. ಪುರುಷರು ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆಯು (Problem) ಕಾಣಸಿಗುತ್ತಿದೆ. ಕಲುಷಿತ ವಾತಾವರಣ ಹಾಗೂ ಆಧುನಿಕ ಜೀವನಶೈಲಿಯೇ (Lifestyle) ಇದಕ್ಕೆ ಪ್ರಮುಖ ಕಾರಣವಾಗಿದೆ. ತಿನ್ನುವ ಆಹಾರ ಮತ್ತು ಬಳಸುವ ನೀರಿನಿಂದಲೂ ಕೂದಲು ಉದುರಿ ಬೊಕ್ಕ ತಲೆ ಸಮಸ್ಯೆ ಮತ್ತು ಕೂದಲು ಹೆಚ್ಚು ಉದುರುವ ಸಮಸ್ಯೆ ಈಗ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಪರಿಹಾರವಾಗಿ ನಾವಿಂದು ಅಲೋವೆರಾದ (Aloe Vera) ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.


ಈ ಅಲೋವೆರಾವನ್ನು ಸಾಮಾನ್ಯವಾಗಿ ಈಗ ಎಲ್ಲರ ಮನೆಯಲ್ಲಿ ಬೆಳೆಯಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅಲೋವೆರಾ ಜೆಲ್‌ನ ಪ್ರಯೋಜನಗಳನ್ನು ಸಾಕಷ್ಟು ಜನ ತಿಳಿದುಕೊಂಡಿದ್ದಾರೆ. ನಮ್ಮ ಸುಂದರ ತ್ವಚೆಗೆ ಈ ಅಲೋವೆರಾ ಬಹಳ ಒಳ್ಳೆಯದು ಎಂದು ಕೂಡ ಅರಿತುಕೊಂಡಿದ್ಧಾರೆ. ಇದು ನಮಗೆ ಸುಂದರ ತ್ವಚೆ ನೀಡುವುದಷ್ಟೆ ಅಲ್ಲದೇ ದೇಹದ ಉಷ್ಣಾಂಶವನ್ನು ಸಹ ಕಡಿಮೆ ಮಾಡುವ ಗುಣದಿಂದ ಎಲ್ಲರೂ ಇದನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಇಂದು ನಾವು ಕೂದಲ ಬೆಳವಣಿಗೆಗೆ ಅಲೋವೆರಾವನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೋಣ.


ಈ ಅಲೋವೆರಾವು 20 ಖನಿಜಗಳು, 18 ಅಮೈನೋ ಆಮ್ಲಗಳು ಮತ್ತು 12 ವಿಟಮಿನ್‌ಗಳನ್ನು ಒಳಗೊಂಡಿದ್ದು, 75 ಕ್ಕೂ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಅಲೋವೆರಾ ಜೆಲ್‌ ಅನ್ನು ಕೂದಲಿಗೆ ಲೇಪನ ಮಾಡಿದರೆ ಅದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ, ಅದರ ಜೊತೆಗೆ ಕೂದಲಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ




ಹಾಗಿದ್ರೆ ಅಲೋವೆರಾ ಜೆಲ್ ಅನ್ನು ಎಲೆಯಿಂದ ತೆಗೆಯುವುದು ಹೇಗೆ?


ಅಲೋವೆರಾ ಸಸ್ಯದಿಂದ ಎಲೆಯನ್ನು ಕತ್ತರಿಸಿ.
ಎಲೆಯನ್ನು ಎರಡು ಭಾಗಗಳಾಗಿ ಕತ್ತರಿಸಿದ ನಂತರ ಚಮಚದ ಸಹಾಯದಿಂದ ಅದರ ಎಲೆಯ ಮೇಲ್ಭಾಗದಲ್ಲಿರುವ ಜೆಲ್ ಅನ್ನು ಹೊರತೆಗೆಯಿರಿ.


ಕೂದಲು ಬೆಳವಣಿಗೆಗೆ ಅಲೋವೆರಾವನ್ನು ಹೇಗೆ ಬಳಸಬೇಕು?


ಅಲೋವೆರಾವನ್ನು ಹಾಗೆಯೇ ನೇರವಾಗಿ ಕೂದಲಿಗೆ ಹಚ್ಚಬಹುದು ಅಥವಾ ಕೂದಲ ಬೆಳವಣಿಗೆಗೆ ಉತ್ತಮ ಫಲಿತಾಂಶ ನೀಡುವ ಹೇರ್‌ ಮಾಸ್ಕ್‌ಗಳಾಗಿ ಕೂಡ ಬಳಸಬಹುದು.


ಕ್ಯಾಸ್ಟರ್ ಎಣ್ಣೆಯೊಂದಿಗೆ ಅಲೋವೆರಾ : ನೈಸರ್ಗಿಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕ್ಯಾಸ್ಟರ್ ಎಣ್ಣೆಯೊಂದಿಗೆ ಅಲೋವೆರಾವನ್ನು ಮಿಶ್ರಣ ಮಾಡಿ. ಒಂದು ಕಪ್ ಅಲೋವೆರಾ ಜೆಲ್ ತೆಗೆದುಕೊಂಡು ಅದಕ್ಕೆ ಎರಡು ಚಮಚ ಕ್ಯಾಸ್ಟರ್ ಆಯಿಲ್ ಸೇರಿಸಿ. ಕೂದಲ ಬುಡಕ್ಕೆ ಮತ್ತು ಸಂಪೂರ್ಣ ಕೂದಲಿಗೆ ಹಚ್ಚಿ. 2-3 ಗಂಟೆಗಳ ಕಾಲದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಉತ್ತಮ ಶ್ಯಾಂಪೂವನ್ನು ಬಳಸಿ ತಲೆ ಸ್ನಾನ ಮಾಡಿ.


ಈರುಳ್ಳಿ ರಸದೊಂದಿಗೆ ಅಲೋವೆರಾ: ಅಲೋವೆರಾವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದಾಗ, ಕೂದಲಿನ ಬೆಳವಣಿಗೆಗೆ ಉತ್ತಮವಾಗಿರುತ್ತದೆ. ಈರುಳ್ಳಿ ರಸದಿಂದ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲೋವೆರಾವು ಕೂದಲು ಉದುರುವಿಕೆಯನ್ನು ತಡೆಯುತ್ತದೆ.


ಇದನ್ನೂ ಓದಿ: ಹೃದಯಾಘಾತವಾದಾಗ ನಿಮಗೆ ನೀವೇ CPR ನೀಡಬಹುದಾ? ವೈದ್ಯರು ಹೇಳೋದು ಹೀಗೆ


ಅಲೋವೆರಾ ಮತ್ತು ಈರುಳ್ಳಿ ರಸವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಸಮವಾಗಿ ಹಚ್ಚಿ ಮತ್ತು 30-45 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕೆ ವಾರಕ್ಕೆ ಎರಡು ಬಾರಿ ಮಾಡಬಹುದು.


ಗ್ರೀನ್‌ ಟೀಯೊಂದಿಗೆ ಅಲೋವೆರಾ: ಕೂದಲು ಬೆಳವಣಿಗೆಗೆ ಗ್ರೀನ್ ಟೀ ಆರೋಗ್ಯಕರ. ಕೂದಲು ಉದುರುವಿಕೆಯನ್ನು ತಡೆಯುವ ಕ್ಯಾಟೆಚಿನ್‌ಗಳಲ್ಲಿ ಅಧಿಕವಾಗಿರುವ ಗ್ರೀನ್‌ ಟೀ ಯು ಕೂದಲು ಉದುರುವಿಕೆಗೆ ಕಾರಣವಾದ ಡೈಹೈಡ್ರೊಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ.


ಒಂದು ಕಪ್ ಅಲೋವೆರಾ ಮತ್ತು ಗ್ರೀನ್‌ ಟೀ ಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿಗೆ ಚೆನ್ನಾಗಿ ಮಸಾಜ್‌ ಮಾಡಿ. 15-20 ನಿಮಿಷಗಳ ಕಾಲ ಮಸಾಜ್‌ ಮಾಡಿದ ನಂತರ ತಣ್ಣೀರಿನಿಂದ ತೊಳೆಯಿರಿ.


ನೆಲ್ಲಿಕಾಯಿ ಜೊತೆ ಅಲೋವೆರಾ: ಆಮ್ಲಾ ಅಥವಾ ನೆಲ್ಲಿಕಾಯಿ ಕೂದಲು ಉದುರುವುದನ್ನು ತಡೆಯುತ್ತದೆ, ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.


ಇದನ್ನೂ ಓದಿ: ನಟಿ ಸಮಂತಾ ಫಿಟ್ನೆಸ್ ಸೀಕ್ರೆಟ್​ ಈ ಸ್ಪೆಷಲ್ ಇಡ್ಲಿಯಂತೆ


ಅಲೋವೆರಾ ಜೆಲ್ ಜೊತೆಗೆ ನೆಲ್ಲಿಕಾಯಿ ಜ್ಯೂಸ್ ಅಥವಾ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ನೆತ್ತಿಗೆ ಸಮವಾಗಿ ಹಚ್ಚಿ. ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಹಾಗೆಯೇ ಬಿಡಿ. ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಬಳಸಬಹುದು.

Published by:Sandhya M
First published: