ಹಲ್ಲು ನೋವು ಶಮನಕ್ಕೆ ಮನೆಯಲ್ಲೇ ಇದೆ ಪರಿಹಾರ

ಕಾಳು ಮೆಣಸಿನ ಪುಡಿಯೊಂದಿಗೆ ಸ್ವಲ್ವ ಉಪ್ಪು ಸೇರಿಸಿ ಪೇಸ್ಟ್​ ಮಾಡಿಕೊಳ್ಳಿ. ಈ ಪೇಸ್ಟ್​ನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಳ್ಳುವುದರಿಂದ ಹಲ್ಲು ನೋವಿಗೆ ಪರಿಹಾರ ಕಾಣಬಹುದು.

zahir | news18
Updated:July 29, 2019, 3:37 PM IST
ಹಲ್ಲು ನೋವು ಶಮನಕ್ಕೆ ಮನೆಯಲ್ಲೇ ಇದೆ ಪರಿಹಾರ
.
  • News18
  • Last Updated: July 29, 2019, 3:37 PM IST
  • Share this:
ಹಲ್ಲು ನೋವು ಸಾಮಾನ್ಯವಾಗಿ ಬಹುತೇಕರಲ್ಲಿ ಕಾಣಿಸಿಕೊಳ್ಳುತ್ತದೆ. ಈ ನೋವು ಕೊಡುವ ಸಂಕಟ ಅಷ್ಟಿಷ್ಟಲ್ಲ. ಸಹಿಸಲಾರದ ನೋವಿಗೆ ಅನೇಕ ಕಾರಣಗಳಿದ್ದರೂ, ತಕ್ಷಣ ಪರಿಹಾರ ಸಿಗಬೇಕು ಎಂದು ಹಲ್ಲು ನೋವಿರುವವರು ಭಾವಿಸುತ್ತಾರೆ. ಅಂತಹದೊಂದು ಯಾತನೆಯನ್ನು ಹಲ್ಲು ನೋವು ನೀಡುತ್ತಿರುತ್ತದೆ. ಹಲ್ಲು ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲೇ ಇರುವ ಕೆಲ ಪದಾರ್ಥಗಳಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬೆಳ್ಳುಳ್ಳಿ:
ಆಯುರ್ವೇದ ಸೂಚಿಸುವ ಸಿದ್ಧ ಔಷಧಿ ಎಂದರೆ ಬೆಳ್ಳುಳ್ಳಿ. ಇದನ್ನು ಸಿಪ್ಪೆ ತೆಗೆದು ಚೆನ್ನಾಗಿ ಜಜ್ಜಿ ಅದಕ್ಕೆ ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಬೇಕು. ಈ ಬೆಳ್ಳುಳ್ಳಿ ಪೇಸ್ಟ್​ನ್ನು ನೋವಿರುವ ಜಾಗಕ್ಕೆ ಇಟ್ಟುಕೊಳ್ಳಿ. ಇದರಿಂದ ಹಲ್ಲು ನೋವು ನಿಯಂತ್ರಣಕ್ಕೆ ಬರುತ್ತದೆ.

ನಿಂಬೆ ರಸ:
ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲ್ಲು ಮತ್ತು ಒಸಡನ್ನು ಬಲಗೊಳಿಸುವಂತಹ ಕಾರ್ಯವನ್ನು ಮಾಡುತ್ತದೆ. ಸ್ವಲ್ಪ ನಿಂಬೆ ರಸ ತೆಗೆದು ನೋವಿರುವ ಹಲ್ಲಿನ ಮೇಲೆ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ಈರುಳ್ಳಿ:
ಬೆಳ್ಳುಳ್ಳಿಯಂತೆ ಈರುಳ್ಳಿಯನ್ನು ಬಳಸುವುದರಿಂದ ಸಹ ಹಲ್ಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಹಲ್ಲು ನೋವಿನ ಆರಂಭಿಕ ಹಂತದಲ್ಲಿ ಈರುಳ್ಳಿಯನ್ನು ಜಗಿಯುತ್ತಾ ಇರುವುದರಿಂದ ನೋವು ಕಡಿಮೆಯಾಗುತ್ತದೆ.
Loading...

ಲವಂಗ:
ಲವಂಗದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಹೇರಳವಾಗಿರುತ್ತವೆ. ಹಾಗಾಗಿ ಹಲ್ಲು ನೋವು ಇರುವ ಸಂದರ್ಭದಲ್ಲಿ ಲವಂಗವನ್ನು ಆ ಜಾಗದಲ್ಲಿ ಇಟ್ಟುಕೊಳ್ಳಿ. ಇದರಿಂದ ಹಲ್ಲು ನೋವು ಉಪಶಮನವಾಗುವುದಲ್ಲದೇ, ಹಲ್ಲಿನ ಸೋಂಕಿಗೆ ಕಾರಣವಾಗುವ ಕೀಟಾಣುಗಳು ನಾಶವಾಗುತ್ತದೆ.

ಕಾಳುಮೆಣಸು ಮತ್ತು ಉಪ್ಪು:
ಕಾಳು ಮೆಣಸಿನ ಪುಡಿಯೊಂದಿಗೆ ಸ್ವಲ್ವ ಉಪ್ಪು ಸೇರಿಸಿ ಪೇಸ್ಟ್​ ಮಾಡಿಕೊಳ್ಳಿ. ಈ ಪೇಸ್ಟ್​ನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಳ್ಳುವುದರಿಂದ ಹಲ್ಲು ನೋವಿಗೆ ಪರಿಹಾರ ಕಾಣಬಹುದು.

ಉಪ್ಪು ನೀರು:
ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ. ಇದೇ ಪ್ರಕ್ರಿಯೆಯನ್ನು ದಿನಂಪ್ರತಿ ರಾತ್ರಿ ಮಲಗುವ ಮುನ್ನ ಮಾಡುವುದರಿಂದ ಬಾಯಲ್ಲಿರುವ ಕೀಟಾಣುಗಳು ನಾಶವಾಗುತ್ತವೆ. ಹೀಗೆ ಮಾಡುವುದರಿಂದ ಹಲ್ಲಿನ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು.

ಈ ರೀತಿಯಾಗಿ ನಿಮ್ಮ ಹಲ್ಲು ನೋವು ನಿಯಂತ್ರಣಕ್ಕೆ ಬರದಿದ್ದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.
First published:July 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...