• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Beauty Tips: ತ್ವಚೆಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು? ನೈಸರ್ಗಿಕ ಪದಾರ್ಥಗಳಿಂದ ಹೇಗೆ ಅಂದ ಹೆಚ್ಚಿಸಬೇಕು ತಿಳಿಯಿರಿ!

Beauty Tips: ತ್ವಚೆಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು? ನೈಸರ್ಗಿಕ ಪದಾರ್ಥಗಳಿಂದ ಹೇಗೆ ಅಂದ ಹೆಚ್ಚಿಸಬೇಕು ತಿಳಿಯಿರಿ!

ನಟಿ ಇಶಾ ಗುಪ್ತಾ

ನಟಿ ಇಶಾ ಗುಪ್ತಾ

ಕೇವಲ ಬಾಹ್ಯ ಪೋಷಣೆ ಮಾತ್ರವಲ್ಲದೇ, ಆಹಾರದ ಬಗ್ಗೆಯೂ ಸೂಕ್ತ ಕೇರ್ ತೆಗೆದುಕೊಳ್ಳಬೇಕು. ಏನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದನ್ನು ತಿಳಿದಿರಬೇಕು. 36 ವರ್ಷದ ನಟಿ ಇಶಾ ಗುಪ್ತಾರ ಸೌಂದರ್ಯವು ನಿಜವಾಗಿಯೂ ಅವಳ ವಯಸ್ಸ ಇದಲ್ಲವೆಂದು ಹೇಳುತ್ತದೆ.

  • Share this:

ಚಲನಚಿತ್ರಗಳಲ್ಲಿ (Movies) ತನ್ನ ಬೋಲ್ಡ್ ಆಕ್ಟಿಂಗ್ (Bold Acting) ಮೂಲಕ ಜನರ (People) ಮನ ಗೆದ್ದಿರುವ ನಟಿ ಇಶಾ ಗುಪ್ತಾ (Actress Isha Gupta) ತುಂಬಾ ಸುಂದರವಾಗಿದ್ದಾರೆ. ಅವರ ಕಲೆ ರಹಿತ ಮುಖ ಮತ್ತು ಪರ್ಸನಾಲಿಟಿ ಎಷ್ಟು ಸುಂದರ ಎಂದು ಹೇಳಬೇಕಾಗಿಲ್ಲ. ನಟಿ ಇಶಾ ಗುಪ್ತಾ, ಹೊಳೆಯುವ ಚರ್ಮ ಮತ್ತು ನಿಷ್ಕಳಂಕ ಮುಖ ಅಭಿಮಾನಿಗಳನ್ನು ಮತ್ತು ಪಡ್ಡೆ ಹುಡುಗರ ಹೃದಯ ಗೆದ್ದಿದೆ. ಆದಾಗ್ಯೂ ಹೆಚ್ಚಿನ ಜನರು ನಟಿ ಇಶಾ ಗುಪ್ತಾರ ಈ ಸ್ಟನ್ನಿಂಗ್ ಬ್ಯೂಟಿ ಹಿಂದೆ ಮೇಕ್ ಅಪ್ ಮಾಡಿರಬಹುದು ಎಂದು ಭಾವಿಸುತ್ತಾರೆ. ಆದರೆ ಮೇಕಪ್ ಮಾಡುವುದು ಒಂದು ಕಡೆಯಾದರೆ ಅವರು ತಮ್ಮ ತ್ವಚೆಯ ಬಗ್ಗೆ ಮತ್ತು ಬ್ಯೂಟಿ ಬಗ್ಗೆ ಸಾಕಷ್ಟು ಕೇರ್ ತೆಗೆದುಕೊಳ್ತಾರೆ.


ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು


ಕೇವಲ ಬಾಹ್ಯ ಪೋಷಣೆ ಮಾತ್ರವಲ್ಲದೇ, ಆಹಾರದ ಬಗ್ಗೆಯೂ ಸೂಕ್ತ ಕೇರ್ ತೆಗೆದುಕೊಳ್ಳಬೇಕು. ಏನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದನ್ನು ತಿಳಿದಿರಬೇಕು. 36 ವರ್ಷದ ನಟಿ ಇಶಾ ಗುಪ್ತಾರ ಸೌಂದರ್ಯವು ನಿಜವಾಗಿಯೂ ಅವಳ ವಯಸ್ಸ ಇದಲ್ಲವೆಂದು ಹೇಳುತ್ತದೆ.


ನೈಸರ್ಗಿಕ ಪದಾರ್ಥಗಳಿಂದ ಚರ್ಮದ ಆರೈಕೆ


ಮೇಕಪ್ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಹೊರತಾಗಿ, ಚರ್ಮದ ಆರೈಕೆ ದಿನಚರಿಯಲ್ಲಿ ಗೃಹೋಪಯೋಗಿ ವಸ್ತುಗಳು ಮತ್ತು ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡಬೇಕು. ಇಶಾ ಗುಪ್ತಾ ಅವರ ಸೌಂದರ್ಯದ ಕೆಲವು ರಹಸ್ಯಗಳನ್ನು ಇಲ್ಲಿ ಹೇಳಲಾಗುತ್ತಿದೆ.


ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!


ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ನಟಿ ಇಶಾ ಗುಪ್ತಾ, ಅನೇಕ ಸೌಂದರ್ಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ತಾಲೀಮು ಮತ್ತು ಆರೋಗ್ಯಕರ ಆಹಾರ ಕ್ರಮ ಬಹಳ ಮುಖ್ಯ.


ಮುಖ ಮತ್ತು ದೇಹದಿಂದ ಸಂಪೂರ್ಣವಾಗಿ ಬೆವರು ತೆಗೆದು ಹಾಕಬೇಕು. ಸರಳ ನಡಿಗೆಯ ಮೂಲಕವೂ ಈ ದಿನಚರಿ ಅನುಸರಿಸಬಹುದು. ಆರೋಗ್ಯಕರ ಜ್ಯೂಸ್, ಸ್ಮೂಥಿ ಮತ್ತು ಸಾಕಷ್ಟು ನೀರಿನ ವಸ್ತುಗಳನ್ನು ಸೇವನೆ ಮಾಡಿ.


ಈ ಚರ್ಮದ ಆರೈಕೆ ಉತ್ಪನ್ನ ಪ್ರತಿದಿನ ಬಳಸಿ


ಮಾಯಿಶ್ಚರೈಸರ್, ಕ್ಲೆನ್ಸರ್, ಟೋನರ್ ಇವೆಲ್ಲವೂ ಚರ್ಮದ ಪ್ರಕಾರಕ್ಕೆ ತಕ್ಕಂತೆ ಬಳಸಬೇಕು. ಬೇಸಿಗೆಯಲ್ಲಿ ನಟಿ ಹಗುರ ಮಾಯಿಶ್ಚರೈಸರ್ ಅನ್ವಯಿಸುತ್ತಾರೆ. ಸನ್‌ಸ್ಕ್ರೀನ್ ಅನ್ವಯಿಸಲು ಮರೆಯಬೇಡಿ.


ನಟಿಯ ಪ್ರಕಾರ, ನೀವು ಮೇಕ್ಅಪ್ ಹಾಕುತ್ತೀರೋ ಇಲ್ಲವೋ, ಆದರೆ ಈ ವಿಷಯಗಳನ್ನು ಅನುಸರಿಸುವುದು ಮುಖ್ಯ. ರಾತ್ರಿ ಮಲಗುವ ಮೊದಲು, ಅವಳು ತನ್ನ ಮೇಕ್ಅಪ್ ರಿಮೂವ್ ಮಾಡಲು ಮರೆಯುವುದಿಲ್ಲ.


ಈ ವಸ್ತುಗಳನ್ನು ಕಲೆ ಹೋಗಲಾಡಿಸಲು ಬಳಸಿ


ಇಶಾ ಗುಪ್ತಾ ತ್ವಚೆಯ ಆರೈಕೆಗೆ ಅನೇಕ ಗೃಹೋಪಯೋಗಿ ವಸ್ತುಗಳನ್ನು ಬಳಸುತ್ತಾರೆ. ಮುಖದ ಕಲೆ, ಡಾರ್ಕ್ ಸ್ಪಾಟ್ ರಿಮೂವ್ ಮಾಡಲು ಬೇಳೆ ಹಿಟ್ಟಿನಲ್ಲಿ ಅಡಿಗೆ ಸೋಡಾ ಬೆರೆಸಿ ಅದನ್ನು ಲೇಪಿಸುತ್ತಾರೆ. ಅಡಿಗೆ ಸೋಡಾವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. ಪೇಸ್ಟ್ ಮಾಡಲು ಸ್ವಲ್ಪ ನೀರು ಸೇರಿಸಿ ನಂತರ ಮುಖದ ಮೇಲೆ ಅನ್ವಯಿಸಿ. ಫೇಸ್ ಪ್ಯಾಕ್‌ನಲ್ಲಿ ಮೊಸರು ಬಳಸುತ್ತಾರೆ. ಎಣ್ಣೆಯುಕ್ತ ಚರ್ಮ ಹೊಂದಿರದವರಿಗೆ ಇದು ಉತ್ತಮ.


ಹೊಳೆಯುವ ಚರ್ಮ ಕಾಪಾಡಿಕೊಳ್ಳಲು ಇದನ್ನು ತಿನ್ನಬೇಡಿ


ಸಕ್ಕರೆ ಚರ್ಮಕ್ಕೆ ಒಳ್ಳೆಯದಲ್ಲ. ಹೀಗಾಗಿ ಅವರು ಸಕ್ಕರೆಯನ್ನು ಸೇವನೆ ಮಾಡುವುದಿಲ್ಲ. ನಟಿ ವಿಭಿನ್ನ ರೀತಿಯಲ್ಲಿ ಮುಖ ಸ್ವಚ್ಛಗೊಳಿಸುತ್ತಾರೆ. ಕಣ್ಣು ಮತ್ತು ಮುಖವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಫೇಸ್ ವಾಶ್ ಬಳಸುವುದಿಲ್ಲ.


ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ


ದುಬಾರಿ ವಸ್ತುಗಳನ್ನು ನಂಬಬೇಡಿ


ಚರ್ಮದ ಆರೈಕೆಗೆ ಸಾಮಾನ್ಯ ವಸ್ತುಗಳನ್ನೇ ಬಳಸಿ. ದುಬಾರಿ ಉತ್ಪನ್ನಗಳಿಗೆ ಮರುಳಾಗಬೇಡಿ ಅಂತಾರೆ ಇಶಾ.

top videos
    First published: