• Home
  • »
  • News
  • »
  • lifestyle
  • »
  • Holi Skin Care: ಹೋಳಿ ಹಬ್ಬದ ಸಂಭ್ರಮದಲ್ಲಿ ಕೂದಲು, ಚರ್ಮದ ಆರೈಕೆಯನ್ನು ಮರೆಯದಿರಿ - ಈ ಟಿಪ್ಸ್ ಫಾಲೋ ಮಾಡಿ

Holi Skin Care: ಹೋಳಿ ಹಬ್ಬದ ಸಂಭ್ರಮದಲ್ಲಿ ಕೂದಲು, ಚರ್ಮದ ಆರೈಕೆಯನ್ನು ಮರೆಯದಿರಿ - ಈ ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Skin Care: ಸಾಧ್ಯವಾದರೆ ಮರುದಿನ ಕೂಡ ತಲೆಸ್ನಾನ ಮಾಡಿ. ಕೂದಲಿಗೆ ಬಣ್ಣ ಹೋಗುವುದರಿಂದ ಎಚ್ಚರಿಕೆಯಿಂದ ಆರೈಕೆ ಮಾಡಬೇಕು.  ಇನ್ನು ಈ ಸಂದರ್ಭದಲ್ಲಿ ಇಡೀ ದೇಹದ ಆರೈಕೆಯೂ ಮುಖ್ಯ ಎನ್ನುತ್ತಾರೆ ವೈದ್ಯರು. ದೇಹದ ಆರೈಕೆ ಕಡೆಗಣಿಸಬಾರದು.

  • Share this:

ಹೋಳಿ ಹಬ್ಬಕ್ಕೆ (Holi Festival)  ಕೆಲವೇ ದಿನಗಳ ಬಾಕಿ ಇದೆ, ಭಾರತದಲ್ಲಿ (India)  ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ರಂಗು ರಂಗಿನ ಹಬ್ಬದ ಲ್ಲಿ ಬಣ್ಣದ (Color) ಓಕುಳಿಯಿಂದ ಮಿಂದೆದ್ದು ಜನರು ಸಂತೋಷಪಡುತ್ತಾರೆ.  ಈ ಹಬ್ಬವನ್ನು ದಕ್ಷಿಣ ಭಾರತಕ್ಕಿಂತ (South India)  ಉತ್ತರ ಭಾರತದಲ್ಲಿ (North India)  ಹೆಚ್ಚಾಗಿ ಆಚರಣೆ ಮಾಡುತ್ತಾರೆ. ಈ ಹಬ್ಬದ ಸಂತಸದ ಸಮಯದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಸಹ ಹೆಚ್ಚು ಕಾಳಜಿವಹಿಸಬೇಕು. ಬಣ್ಣಗಳ ಕಾರಣದಿಂದ ಕೂದಲು ಮತ್ತು ಚರ್ಮದ ಸಮಸ್ಯೆ ಉಂಟಾಗಬಹುದು. ಹಾಗಾಗಿ ಹೋಳಿ ಆಡುವ ಮುನ್ನ ಹಾಗೂ ಆಡಿದ ನಂತರ ಚರ್ಮ ಮತ್ತು ಕೂದಲಿನ ಆರೈಕೆ ಮಾಡಬೇಕು.  ಹಬ್ಬದಂದು ಓಕುಳಿ ಆಡುವ ಮೊದಲು ಮತ್ತು ನಂತರದ ಚರ್ಮ ಹಾಗೂ ಕೂದಲಿನ ಆರೈಕೆ ಬಗ್ಗೆ ಫೊರ್ಟಿಸ್ ಆಸ್ಪತ್ರೆ ಚರ್ಮರೋಗ ತಜ್ಞೆಯಾದ ಡಾ. ಸ್ಮಿತಾ ವಾರಿಯರ್ ಅವರು ಸಲಹೆ ನೀಡಿದ್ದಾರೆ. ಆ ಸಲಹೆಗಳೇನು ಎಂಬುದು ಇಲ್ಲಿದೆ.  


ಹೋಳಿ ಆಡುವ ಮುನ್ನ ಹೀಗೆ ಮಾಡಿ


ಐಸ್​ ಕ್ಯೂಬ್​ ಬಳಸಿ


ಹೋಳಿ ಹಬ್ಬದ ದಿನ  ಆಟ ಆಡಲು ಹೋಗುವ ಮುಂಚೆ ಚರ್ಮಕ್ಕೆ ಐಸ್‌ ಕ್ಯೂಬ್‌ ಹಚ್ಚಿ ಮಸಾಜ್ ಮಾಡಿ. ಹೀಗೆ ತ್ವೆಚೆಯ ಮೇಲೆ ಐಸ್‌ ಕ್ಯೂಬ್ ಬಳಸುವುದರಿಂದ ಚರ್ಮದ ರಂಧ್ರಗಳನ್ನು ಮುಚ್ಚಲು ಇದು ಸಹಾಯ ಮಾಡಿ ಬಣ್ಣ ಒಳಗೆ ಸೇರದಂತೆ ತಡೆಯುತ್ತದೆ.


ಎಣ್ಣೆಯನ್ನು ಹಚ್ಚಿ


ಹೋಳಿ ಹಬ್ಬದ ಬಣ್ಣದ ಆಟ ಆಡಲು ಹೋಗುವ ಮೊದಲು ಎಣ್ಣೆಯನ್ನು  ತೆಗೆದುಕೊಂಡು ಹಚ್ಚಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಕಾಪಾಡಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆ ಮತ್ತು ಬಣ್ಣಗಳ ನಡುವೆ ತಡೆಗೋಡೆಯನ್ನು ನಿರ್ಮಿಸಿ ಬಣ್ಣದಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ.


ಸನ್ಸ್​ಕ್ರೀಮ್​ ಅಥವಾ ಮಾಯ್ಚರೈಸರ್ ಬಳಸಿ


ಚರ್ಮದ ಎಲ್ಲಾ ರೀತಿಯ ಸಮಸ್ಯೆಗೆ ಉತ್ತಮ ಆರೈಕೆ ವಿಧ ಎಂದರೆ ಸನ್ಸ್​ಕ್ರೀಮ್​ ಅಥವಾ ಮಾಯ್ಚರೈಸರ್ ಬಳಕೆ ಮಾಡುವುದು. ಇದು ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುವುದಲ್ಲದೇ ಬಣ್ಣದ ಹಾನಿಕಾರಕ ಅಂಶಗಳು ಚರ್ಮವನ್ನು ಸೇರದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ತ್ವಚೆಯ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿ ಸಹ.


ಇದನ್ನೂ ಓದಿ: ಶುಗರ್ ಫ್ರೀ ಆಹಾರದ ಹಿಂದೆ ಹೋಗಿ ಈ ಸಮಸ್ಯೆಗಳನ್ನು ತಂದುಕೊಳ್ಳಬೇಡಿ


ಹೋಳಿ ಆಡಿದ ನಂತರ ಏನು ಮಾಡಬೇಕು?


ಮುಖ್ಯವಾಗಿ ಹೋಳಿ ಆಡುವಾಗ ಮುಖದ ಮೇಲೆ ಹೆಚ್ಚು ಬಣ್ಣ ತಾಗದಂತೆ ನೋಡಿಕೊಳ್ಳುವುದು ಮುಖ್ಯ. ಅದರಲ್ಲಿ ಹೆಚ್ಚಿನ ರಾಸಾಯನಿಕಗಳಿರುವುದರಿಂದ ಅದು ಅಲರ್ಜಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಎಚ್ಚರದಿಂದ ಆಡಿ. ಇನ್ನು ಆಟ ಆಡಿ ಬಂದ ನಂತರ ಕೇವಲ ನೀರು ಮತ್ತು ಫೇಸ್​ ವಾಶ್​ ಬಳಸಿ ಮುಖವನ್ನು ಸ್ವಚ್ಛ ಮಾಡಿ. ಮುಖ ತೊಳೆಯಲು ನಿಂಬೆ, ಟೊಮ್ಯಾಟೋ ಸೇರಿದಂತೆ ಬೇರೆ ಇತರ ವಸ್ತುಗಳನ್ನು ಬಳಸಬೇಡಿ, ಅದು ರಿಯಾಕ್ಷನ್​ ಆಗಲು ಕಾರಣವಾಗುತ್ತದೆ.


ಮುಖ ತೊಳೆದ ಬಳಿಕ ಫೇಸ್ ಮಾಚ್ಶರೈಸ್‌ನನ್ನು ಬಳಸಿ, ಸೂರ್ಯನ ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಓಕುಳಿಯಾಡಿದ ಒಂದೆರಡು ದಿನಗಳ ಕಾಲ ಮುಖಕ್ಕೆ ಮೇಕಪ್ ಬಳಸುವುದು ಸಂಪೂರ್ಣವಾಗಿ ನಿಲ್ಲಿಸುವುದು ನಿಮಗೆ ಸಹಾಯ ಮಾಡುತ್ತದೆ.


 ಕೂದಲ ಆರೈಕೆ ಮಾಡುವುದು ಹೇಗೆ?


ಬಣ್ಣದ ಆಟ ಮುಗಿದ ನಂತರ ಕೂದಲು ಹೆಚ್ಚು ಒಣಗಿರುತ್ತದೆ.  ಹೀಗಾಗಿ ಕೂದಲಿಗೆ ಎಣ್ಣೆಯನ್ನು ಹಚ್ಚಿ 30 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ತಲೆಸ್ನಾನ ಮಾಡಲು ಶಾಂಪು ಅಥವಾ ನೈಸರ್ಗಿಕ ಕ್ಲೆನ್ಸರ್ ಬಳಸಿ, ಅಲ್ಲದೇ, ತಲೆಸ್ನಾನ ಮಾಡುವಾಗ ಕೂದಲಿಗೆ ಸ್ಕ್ರಬ್​ ಮಾಡಬಹುದು. ಹಾಗೆಯೇ ಶಾಂಪು ಬಳಿಕ ಕಂಡಿಷನ್ ಬಳಸುವುದನ್ನು ಮರೆಯಬೇಡಿ.


ಸಾಧ್ಯವಾದರೆ ಮರುದಿನ ಕೂಡ ತಲೆಸ್ನಾನ ಮಾಡಿ. ಕೂದಲಿಗೆ ಬಣ್ಣ ಹೋಗುವುದರಿಂದ ಎಚ್ಚರಿಕೆಯಿಂದ ಆರೈಕೆ ಮಾಡಬೇಕು.  ಇನ್ನು ಈ ಸಂದರ್ಭದಲ್ಲಿ ಇಡೀ ದೇಹದ ಆರೈಕೆಯೂ ಮುಖ್ಯ ಎನ್ನುತ್ತಾರೆ ವೈದ್ಯರು. ದೇಹದ ಆರೈಕೆ ಕಡೆಗಣಿಸಬಾರದು.  ಬಣ್ಣವಾಡಿದ ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಿ, ಮರುದಿನ ಕೂಡ ಇಡೀ ದೇಹಕ್ಕೆ ಎಣ್ಣೆ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದು ಬಹಳ ಮುಖ್ಯ. ಇದರಿಂದ ದೇಹವು ಶುಷ್ಕವಾಗುವುದನ್ನು ತಡೆಯುತ್ತದೆ. ಈ ಸಂದರ್ಭದಲ್ಲಿ ರಾಸಾಯನಿಕ ಸೋಪ್ ಬಳಸಬೇಡಿ.


ಇದನ್ನೂ ಓದಿ: ಮದುಮಗಳ ಸೌಂದರ್ಯ ಹೆಚ್ಚಿಸುತ್ತವೆ ಈ ಮೂಗುಬಟ್ಟುಗಳು


ಇನ್ನು ಈ ಎಲ್ಲಾ ಮುನ್ನೆಚ್ಚರಿಕೆ ಬಳಿಕ ಸಹ ತುರಿಕೆ ಕಾಣಿಸಿಕೊಂಡಲ್ಲಿ ಅದನ್ನು ಕಡೆಗಾಣಿಸದೆ ವೈದ್ಯರನ್ನು ಸಂಪರ್ಕಿಸಿ.

Published by:Sandhya M
First published: