Hair Care: ಬೆಂಡೆಕಾಯಿ ನೀರಿನಿಂದ ಕೂದಲ ಆರೈಕೆ ಹೇಗೆ? ಇದರ ಪ್ರಯೋಜನಗಳೇನು?

ಹಲವರಲ್ಲಿ ಕೂದಲ ಶುಷ್ಕತೆ ಸಮಸ್ಯೆ ಸಾಕಷ್ಟು ಕಾಡುತ್ತದೆ. ಹಲವು ಕೂದಲ ಆರೈಕೆಯ ನಂತರವೂ ಸಮಸ್ಯೆ ಹಾಗೆಯೇ ಮುಂದುವರೆಯುತ್ತದೆ. ಇದಕ್ಕೆ ಕೆಲವರು ಬೆಂಡೆಕಾಯಿಯನ್ನು ಮನೆಮದ್ದಾಗಿ ಬಳಕೆ ಮಾಡುತ್ತಾರೆ. ಬೆಂಡೆಕಾಯಿಯನ್ನು ಕೂದಲ ಆರೈಕೆಗೆ ಬಳಕೆ ಮಾಡುವುದು ಸಾಕಷ್ಟು ಪ್ರಯೋಜನ ತಂದು ಕೊಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೂದಲ ಆರೈಕೆ (Hair Care) ಮಾಡುವುದು ಸಾಕಷ್ಟು ಸಮಯ (Time) ತೆಗೆದುಕೊಳ್ಳುತ್ತದೆ. ಹಾಗಾಗಿ ಕೆಲವರು ಕೂದಲ ಆರೈಕೆಗೆ ವಿವಿಧ ಬ್ರ್ಯಾಂಡ್ ಗಳ (Brand) ಸಾಮಗ್ರಿಗಳನ್ನು ಬಳಕೆ ಮಾಡುತ್ತಾರೆ. ಆದರೆ ಮನೆ ಮದ್ದುಗಳನ್ನು (Home Remedies) ಟ್ರೈ ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಮನೆ ಮದ್ದುಗಳ ಆರೈಕೆ ಕೂದಲನ್ನು ರಾಸಾಯನಿಕವಾಗಿ ಡ್ಯಾಮೇಜ್ ಮಾಡುವುದರಿಂದ ತಪ್ಪಿಸುತ್ತದೆ. ಕೆಲವೊಮ್ಮೆ ಕೂದಲಿಗೆ ಹೆಚ್ಚು ಆರೈಕೆ ಮಾಡಲು ಸಮಯದ ಅಭಾವವೂ ಇರುತ್ತದೆ. ನಮ್ಮ ಕೂದಲನ್ನು ಆರೋಗ್ಯವಾಗಿ ಮತ್ತು ಹೊಳೆಯುವಂತೆ ಮಾಡಲು ದುಬಾರಿ ಕೂದಲ ರಕ್ಷಣೆಯ ದಿನಚರಿ ಫಾಲೋ ಮಾಡುವುದರಿಂದ ಪಾರ್ಲರ್‌ಗಳಲ್ಲಿ ಸ್ಪಾ ಚಿಕಿತ್ಸೆ ಸಹ ಪಡೆಯುತ್ತಾರೆ.

    ಕೆಲವೊಮ್ಮೆ ಈ ವಿಷಯಗಳು ಆರಂಭದಲ್ಲಿ ಪರಿಣಾಮ ಬೀರುತ್ತವೆ. ಆದರೆ ಕ್ರಮೇಣ ಸಮಸ್ಯೆ ಮೊದಲಿನಂತೆ ಸಂಭವಿಸಲು ಪ್ರಾರಂಭಿಸುತ್ತದೆ. ನಮ್ಮ ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿ ಇರಿಸಲು ನಾವು ನೈಸರ್ಗಿಕ ವಸ್ತುಗಳ ಮೇಲೆ ಅವಲಂಬಿತರಾಗಬೇಕು. ಹಾಗಾಗಿ ನಮ್ಮ ಕೂದಲು ನಿಜವಾಗಿಯೂ ಬಲವಾದ ಮತ್ತು ಹೊಳೆಯುತ್ತದೆ.

    ಕೂದಲ ಶುಷ್ಕತೆ ಸಮಸ್ಯೆ

    ಹಲವರಲ್ಲಿ ಕೂದಲ ಶುಷ್ಕತೆ ಸಮಸ್ಯೆ ಸಾಕಷ್ಟು ಕಾಡುತ್ತದೆ. ಹಲವು ಕೂದಲ ಆರೈಕೆಯ ನಂತರವೂ ಸಮಸ್ಯೆ ಹಾಗೆಯೇ ಮುಂದುವರೆಯುತ್ತದೆ. ಇದಕ್ಕೆ ಕೆಲವರು ಬೆಂಡೆಕಾಯಿಯನ್ನು ಮನೆಮದ್ದಾಗಿ ಬಳಕೆ ಮಾಡುತ್ತಾರೆ. ಬೆಂಡೆಕಾಯಿಯನ್ನು ಕೂದಲ ಆರೈಕೆಗೆ ಬಳಕೆ ಮಾಡುವುದು ಸಾಕಷ್ಟು ಪ್ರಯೋಜನ ತಂದು ಕೊಡುತ್ತದೆ.

    ಇದನ್ನೂ ಓದಿ: ಚರ್ಮಕ್ಕೆ ಆರೈಕೆ ನೀಡಲು ವಿಟಮಿನ್ ಸಿ ಹೇಗೆ ಲಾಭಕಾರಿ?

    ಹಾಗಾದ್ರೆ ಬೆಂಡೆಕಾಯಿ ನೀರು ನಿಮ್ಮ ಕೂದಲಿಗೆ ಹೇಗೆ ಪ್ರಯೋಜನ ನೀಡುತ್ತದೆ ಎಂದು ನಾವು ಇಲ್ಲಿ ತಿಳಿಯೋಣ.

    ಬೆಂಡೆಕಾಯಿ ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ತಜ್ಞರ ಪ್ರಕಾರ ಬೆಂಡೆಕಾಯಿಯಲ್ಲಿ ಪ್ರೋಟೀನ್ ಮತ್ತು ಫೋಲೇಟ್ ಅಂಶಗಳು ಸಮೃದ್ಧ ಆಗಿದೆ. ಇದು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಆಗಿದೆ. ಜೊತೆಗೆ ಇದು ಕೂದಲು ಉದುರುವಿಕೆ ತಡೆಯುತ್ತದೆ. ಮತ್ತು ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

    ಬೆಂಡೆಕಾಯಿ ನೀರು ಕೂದಲಿಗೆ ಬಳಕೆ ಮಾಡುವುದು ದುರ್ಬಲ ಕೂದಲನ್ನು ಬಲಿಷ್ಟವಾಗಿಸುತ್ತದೆ. ಕೂದಲು ಸಮಸ್ಯೆ ಹೋಗಲಾಡಿಸಲು ಬೆಂಡೆಕಾಯಿ ನೀರು ಅನ್ನು ಕೂದಲಿಗೆ ಹೇಗೆ ಬಳಸುವುದು ಎಂದು ಈಗ ನಾವು ಇಲ್ಲಿ ನೋಡೋಣ.

    ಬೆಂಡೆಕಾಯಿ ನೀರಿನಿಂದ ಕಂಡೀಷನರ್ ಮಾಡುವುದು ಹೇಗೆ?

    ಬೆಂಡೆಕಾಯಿ ನೀರು ಕಂಡೀಶನರ್ ಮಾಡಲು, ಮೊದಲು 15 ರಿಂದ 20 ಬೆಂಡೆಕಾಯಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರಿನೊಂದಿಗೆ ಕುದಿಸಿ. ನೀವು ಬೆಂಡೆಕಾಯಿಯನ್ನು ಕತ್ತರಿಸಿ ಅಥವಾ ಕತ್ತರಿಸದೆಯೇ ಬಳಕೆ ಮಾಡಬಹುದು.

    ಬೆಂಡೆಕಾಯಿ ಸರಿಯಾಗಿ ಕುದಿಯಲು ನೀರಿನ ಪ್ರಮಾಣ ಹೆಚ್ಚು ಇರುವಂತೆ ನೋಡಿಕೊಳ್ಳಿ. ನೀರನ್ನು ಕುದಿಸಿದ ನಂತರ, ಅದನ್ನು ತಣ್ಣಗಾಗಲು ಬಿಡಿ. ನಂತರ ನೀರಿನಿಂದ ಬೆಂಡೆಕಾಯಿಯನ್ನು ಬೇರ್ಪಡಿಸಿ. ನೀರನ್ನು ಫಿಲ್ಟರ್ ಮಾಡಿ. ಈಗ ನಿಮ್ಮ ಕೂದಲನ್ನು ಎರಡು ಭಾಗಗಳಾಗಿ ವಿಂಗಡಿಸಿ.

    ನಂತರ ಕೈಗಳಿಂದ ಕೂದಲಿನ ಬುಡಕ್ಕೆ ಹಾಗೂ ಕೂದಲಿಗೆ ಬೆಂಡೆಕಾಯಿ ನೀರಿನಿಂದ ಲಘುವಾಗಿ ಮಸಾಜ್ ಮಾಡಿ. ಕೂದಲಿನ ಕೆಳಭಾಗಕ್ಕೆ ಅನ್ವಯಿಸಿ ಮತ್ತು 5 ರಿಂದ 10 ನಿಮಿಷ ಮಸಾಜ್ ಮಾಡಿ. 20 ರಿಂದ 25 ನಿಮಿಷ ಕಾಲ ಅದನ್ನು ಕೂದಲಿನಲ್ಲಿ ಬಿಡಿ ನಂತರ ಸರಳ ನೀರಿನಿಂದ ಕೂದಲು ಚೆನ್ನಾಗಿ ತೊಳೆಯಿರಿ.

    ಬೆಂಡೆಕಾಯಿ ಕಂಡೀಷನಿಂಗ್ ಪ್ರಯೋಜನಗಳು

    ಬೆಂಡೆಕಾಯಿ ನೀರನ್ನು ಕಂಡೀಷನರ್ ಆಗಿ ಬಳಸಬಹುದು. ಇದರಿಂದ ನಿಮ್ಮ ಒಣ ಕೂದಲು ನುಣುಪಾಗಿ ಕೂದಲು ಹೊಳೆಯುತ್ತದೆ.

    ಬೆಂಡೆಕಾಯಿ ನೀರು ಹೇರ್ ಕಂಡೀಶನರ್ ಯಾವುದೇ ಅಡ್ಡ ಪರಿಣಾಮ ಹೊಂದಿಲ್ಲ. ಏಕೆಂದರೆ ಇದರಲ್ಲಿ ಕೇವಲ ತರಕಾರಿ ಬಳಕೆ ಮಾಡುವುದು ಯಾವುದೇ ರಾಸಾಯನಿಕ ಬಳಸಲಾಗಿಲ್ಲ.

    ಇದನ್ನೂ ಓದಿ: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ

    ಬೆಂಡೆಕಾಯಿ ನೀರು ನೈಸರ್ಗಿಕ ಕಂಡೀಷನರ್ ನಿಮ್ಮ ಕೂದಲಿಗೆ ಮತ್ತು ಒಳಗಿನಿಂದ ನೈಸರ್ಗಿಕ ನೋಟ ನೀಡುತ್ತದೆ. ಇದನ್ನು ಸ್ಟ್ರಾಂಗ್ ಮಾಡುತ್ತದೆ. ಕೂದಲು ಒಣಗುವ ಸಮಸ್ಯೆಯಿಂದ ಕೂದಲು ಉದುರುವಿಕೆಯ ಸಮಸ್ಯೆ ತಡೆಯುವ ಮೂಲಕ ನಿಮ್ಮ ಕೂದಲನ್ನು ಬಲಿಷ್ಠಗೊಳಿಸಲು ಇದು ಸಹಾಯ ಮಾಡುತ್ತದೆ.
    Published by:renukadariyannavar
    First published: