• Home
  • »
  • News
  • »
  • lifestyle
  • »
  • Cleaning Tips: ಗ್ಲಾಸ್ ಗ್ಯಾಸ್​ ಸ್ಟೌವ್​ ಕ್ಲೀನಿಂಗ್​ ವೇಳೆ ಈ ಟಿಪ್ಸ್​ ಬಳಸಿ, ಹಾಳಾಗೋದೇ ಇಲ್ಲ

Cleaning Tips: ಗ್ಲಾಸ್ ಗ್ಯಾಸ್​ ಸ್ಟೌವ್​ ಕ್ಲೀನಿಂಗ್​ ವೇಳೆ ಈ ಟಿಪ್ಸ್​ ಬಳಸಿ, ಹಾಳಾಗೋದೇ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How To Take Care of Glass Gas Stove: ನೀವು ಮೊದಲು ಖರೀದಿಸಿದಾಗ ಇದ್ದ ಅದರ ಸುಂದರ ನೋಟವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಕುಕ್‌ಟಾಪ್ ಅನ್ನು ಬಳಸುವಾಗ ನೀವು ತಪ್ಪಿಸಬೇಕಾದ ಕೆಲವು ವಿಷಯಗಳಿವೆ. ಅದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

  • Share this:

ಆಧುನಿಕ ಅಡಿಗೆ ಮನೆ (Modern Kitchen) ಯಾರಿಗೆ ಇಷ್ಟವಿಲ್ಲ, ಹೇಳಿ.  ಈ ದಿನಗಳಲ್ಲಿ ಅನೇಕ ಮನೆ ನಿರ್ಮಿಸುವವರು ತಮ್ಮ ಅಡುಗೆಮನೆ ಸೊಗಸಾದ ವಿನ್ಯಾಸಗಳಲ್ಲಿ (Design) ಇರಬೇಕು ಬಯಸುತ್ತಾರೆ. ಹೆಚ್ಚಿನ ಆಧುನಿಕ ಗೃಹಿಣಿಯರು ಸೆರಾಮಿಕ್ ಕುಕ್ಟಾಪ್​ಗಳನ್ನು ಬಳಸಲು ಇಷ್ಟಪಡುತ್ತಾರೆ. ಸಾಮಾನ್ಯ ಗ್ಯಾಸ್​ ಸ್ಟೌವ್​ಗಿಂತ (Gas Stove) ಇದಕ್ಕೆ  ಹೆಚ್ಚಿನ ಕಾಳಜಿ ಮತ್ತು ಶುಚಿಗೊಳಿಸುವುದು ಸವಾಲಾಗಿದ್ದರೂ ಸಹ ಸೆರಾಮಿಕ್ ಅಥವಾ ಗಾಜಿನ ಕುಕ್ಟಾಪ್ ಹೆಚ್ಚು ಸುಂದರ ಎಂಬುದನ್ನ ಯಾರೂ ನಿರಾಕರಿಸುವುದಿಲ್ಲ. ಆದರೆ ನೀವು ಮೊದಲು ಖರೀದಿಸಿದಾಗ ಇದ್ದ ಅದರ ಸುಂದರ ನೋಟವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಕುಕ್‌ಟಾಪ್ ಅನ್ನು ಬಳಸುವಾಗ ನೀವು ತಪ್ಪಿಸಬೇಕಾದ ಕೆಲವು ವಿಷಯಗಳಿವೆ. ಅದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.


ಗ್ಯಾಸ್​ ಸ್ಟೌವ್​ ಕಾಳಜಿ ಹೀಗೆ ವಹಿಸಿ


ಸ್ಟೌವ್​  ಮೇಲ್ಮೈಯಲ್ಲಿ ಉಂಟಾಗುವ ಗೀರುಗಳನ್ನು ತಡೆಗಟ್ಟಲು ಸ್ಪಾಂಜ್ ಕ್ಲೀನರ್ಗಳನ್ನು ಬಳಸಿ. ಸ್ಕ್ರ್ಯಾಚ್ ಉಂಟು ಮಾಡುವ ಕ್ಲೀನರ್ ಅಥವಾ ಈ ಪಾತ್ರೆ ತೊಳೆಯಲು ಬಳಸುವ ಸ್ಟೀಲ್ ಸ್ಪಾಂಜ್​ ಎಂದಿಗೂ ಬಳಸಬೇಡಿ. ಯಾವಾಗಲೂ ಸೆರಾಮಿಕ್ ಮತ್ತು ಗಾಜಿನ ಕುಕ್‌ಟಾಪ್‌ಗಳನ್ನು ಕ್ಲೀನ್ ಮಾಡಲು ಇರುವ ವಸ್ತುಗಳನ್ನು ಮಾತ್ರ ಬಳಸಿ.


ಕೆಳಭಾಗದಲ್ಲಿ ಗ್ರೀಸ್ ಇರುವ ಮಡಕೆಗಳು ಮತ್ತು ಆ ರೀತಿಯ ಪಾತ್ರೆಗಳನ್ನು ಸಹ ಎಂದಿಗೂ ಬಳಸಬೇಡಿ. ಏಕೆಂದರೆ ಆ ಪಾತ್ರೆಗಳು ನಿಮ್ಮ  ಕುಕ್‌ಟಾಪ್‌ನಲ್ಲಿ ಕಲೆ ಉಂಟು ಮಾಡುತ್ತದೆ. ನಂತರ ಇವುಗಳನ್ನು ಸ್ವಚ್ಛ ಮಾಡುವುದು ತುಂಬಾ ಕಷ್ಟ.  ನಿಮ್ಮ ಕುಕ್‌ಟಾಪ್‌ನಲ್ಲಿ ಕಬ್ಬಿಣದ ಪ್ಯಾನ್‌ಗಳನ್ನು ಬಳಸಬೇಡಿ. ಏಕೆಂದರೆ ಅವುಗಳ ತಳವು ಸಾಮಾನ್ಯವಾಗಿ ಗಟ್ಟಿಯಾಗಿರುತ್ತದೆ. ಅದು ಕಲೆ  ಹಾಗೂ ಗೀರು ಉಂಟು ಮಾಡುತ್ತದೆ. ಹಾಗೆಯೇ, ಗಟ್ಟಿಯಾದ ತಳವಿರುವ ಸೆರಾಮಿಕ್ ಮತ್ತು ಸ್ಟೋನ್‌ವೇರ್ ಕುಕ್‌ವೇರ್‌ಗಳನ್ನು ಬಳಸುವುದನ್ನು ತಪ್ಪಿಸಿ.


ಸಾಮಾನ್ಯ ಸ್ಟೌವ್​ನಲ್ಲಿ ಅಡುಗೆ ಮಾಡುವಾಗ ಸಾಮಾನ್ಯವಾಗಿ ಬಳಸುವ ಸ್ಪೂನ್ ಗಳನ್ನು ಸ್ಟೌಬ್​ ಮೇಲೆ ಇಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ನೀವು ಅಡುಗೆ ಮಾಡುವಾಗ ಕುಕ್‌ಟಾಪ್‌ನ ಸೌಟುಗಳನ್ನು ಇಡಬೇಡಿ. ಏಕೆಂದರೆ ಚಮಚಕ್ಕೆ ಅಂಟಿಕೊಂಡ ಆಹಾರವು ಸ್ಟೌವ್​ ಮೇಲೆ ಬಿಸಿಯಾಗಿ, ಅಲ್ಲಿಯೇ ಅಂಟಿಕೊಳ್ಳುತ್ತದೆ.


ಇದನ್ನೂ ಓದಿ: ಈ ಆಹಾರಗಳು ನಿಮ್ಮ ನೆನೆಪಿನ ಶಕ್ತಿ ಹಾಳು ಮಾಡುತ್ತೆ ಎಚ್ಚರ


ಬಾಣಲೆಯಲ್ಲಿ ಸಕ್ಕರೆ ಪದಾರ್ಥಗಳನ್ನು  ಮತ್ತು ನೀರನ್ನು ಕುದಿಸುವಾಗ ಚೆಲ್ಲದಂತೆ ಎಚ್ಚರಿಕೆ ವಹಿಸಿ. ಇದು ಸ್ಟೌವ್ ಕೊಳೆಯಾಗಲು ಕಾರಣವಾಗುತ್ತದೆ. ಹಳದಿ ಬಣ್ಣದ ಕಲೆ ಅಸಹ್ಯವಾಗಿ ಕಾಣುತ್ತದೆ. ಅವುಗಳನ್ನು ತೆಗೆದುಹಾಕುವುದು ಬಹುತೇಕ ಅಸಾಧ್ಯ.


ಮತ್ತೊಂದು ಮಹಿಳೆಯರ ಅಭ್ಯಾಸ ಎಂದರೆ, ಆ ಸ್ಟೌವ್​ ಮೇಲೆ ಕೈ ಇಡುವುದು ಅಥವಾ ಅದಕ್ಕೆ ಒರಗಿ ಕೂರುವುದು ಮಾಡುತ್ತಾರೆ. ಇದು ತಪ್ಪು, ಕೇವಲ ಕಲೆ ಮಾತ್ರವಲ್ಲದೇ, ಅದು ಹಾಳಾಗಲು ಸಹ ಕಾರಣವಾಗುತ್ತದೆ.




ಕ್ಲೀನ್​ ಮಾಡುವುದು ಹೇಗೆ?


ಈ ಸ್ಟೌವ್​ ವಿವಿಧ ಭಾಗಗಳನ್ನು ತೆಗೆದುಹಾಕಿ. 8-9 ಕಪ್ ಬೆಚ್ಚಗಿನ ನೀರು ಮತ್ತು 2 ಟೇಬಲ್ ಸ್ಪೂನ್​ ಡಿಶ್​ ವಾಶ್​ ಲಿಕ್ವಿಡ್​ ಹಾಕಿ ಮಿಶ್ರಣ ಮಾಡಿ. ಈಗ ಸ್ಟೌವ್​ನ ತೆಗೆದಿರುವ ಭಾಗವನ್ನು ಅದರಲ್ಲಿ ನೆನಸಿ ಇಡಿ. ಬರ್ನರ್ ಹಾಗೂ ಬೇರೆ ಭಾಗಗಳನ್ನು ಒಂದೆಡೆ ನೆನೆಸಿ ಬಿಟ್ಟು, ಸ್ಟೌವ್ ಮೇಲೆ ಉಳಿದ ಭಾಗವನ್ನು ಸ್ವಚ್ಛಗೊಳಿಸಿ. ಬಟ್ಟೆಯನ್ನು ಬಳಸಿ ಸ್ವಚ್ಛ ಮಾಡುವುದು ಬಹಳ ಉತ್ತಮ.


 ವಿನೆಗರ್ ಮತ್ತು ಬೇಕಿಂಗ್ ಸೋಡಾ ಬಳಸಿ


1 ಕಪ್ ವಿನೆಗರ್ ಜೊತೆಗೆ 1 ಕಪ್ ಸೋಡಾ ಹಾಗೂ ನೀರನ್ನು ಮಿಶ್ರಣವನ್ನು ಮಾಡಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಹಾಕಿ. ನಿಮ್ಮ ಅಡುಗೆ ಒಲೆಯ ಮೇಲೆ ಇದನ್ನು ಸಿಂಪಡಿಸಿ ಸ್ವಚ್ಛ ಮಾಡಬಹುದು. ಅಲ್ಲದೇ, ಬಹಳ ಜಿಡ್ಡಿನ ಅಂಶ ಇದ್ದರೆ, ವಿನಗರ್ ಹಾಗೂ ನೀರು ಮಿಕ್ಸ್ ಮಾಡಿ ಅದನ್ನು ಸ್ಟೌವ್​ ಮೇಲೆ ಹಾಕಿ. ನಂತರ ಅದರ ಮೇಲೆ ನೀವು  ಅಡಿಗೆ ಸೋಡಾವನ್ನು ಹಾಕಿ, 2 ರಿಂದ 3 ನಿಮಿಷಗಳ ಬಿಡಿ.


ಇದನ್ನೂ ಓದಿ: ಚಳಿಗಾಲದಲ್ಲಿ ಕರಿಮೆಣಸಿನ ಎಣ್ಣೆಯನ್ನು ಹೀಗೆ ಬಳಸಿ, ಆಮೇಲೆ ಮ್ಯಾಜಿಕ್ ನೋಡಿ


ಆ ಸಮಯದಲ್ಲಿ ಜಿಡ್ಡು ಅಡಿಗೆ ಸೋಡಾದ ಮೇಲೆ ಅಂಟಿಕೊಳ್ಳುತ್ತದೆ. ಸುಲಭವಾಗಿ ನೀವು ಕಲೆ ಹಾಗೂ ಕೊಳೆಯನ್ನು ಸ್ವಚ್ಛ ಮಾಡಬಹುದು.  ಈ ಮಿಶ್ರಣವನ್ನು ಹಾಕಿದ ಮೆಲೆ ನೀವು ಬಟ್ಟೆಯಿಂದ ಸ್ವಚ್ಛ ಮಾಡುವ ಬದಲು ನೀವು ಟೂತ್​ ಬ್ರಷ್​ ಬಳಕೆ ಮಾಡುವುದು ಬಹಳ ಸೂಕ್ತ. ಈಗ ಬಕೆಟ್​ನಲ್ಲಿ ನೆನಸಿರುವ ಸ್ಟೌವ್​ನ ಬಿಡಿ ಭಾಗಗಳನ್ನು ತೆಗೆದು, ಒಂದು ಸ್ಕ್ರಬ್​ನಿಂದ ಸ್ವಚ್ಛಮಾಡಿ, ಬಿಸಿನಲ್ಲಿ ಒಣಗಿಸಿ. ಪೂರ್ತಿ ಒಣಗದೇ ಅವುಗಳನ್ನು ಬಳಸಲೇ ಬೇಡಿ.

Published by:Sandhya M
First published: