Pregnancy Health: ಗರ್ಭಿಣಿಯರು ಮೊದಲ ಮೂರು ತಿಂಗಳು ಎಷ್ಟು ಕಾಳಜಿವಹಿಸಿದ್ರೂ ಸಾಲದು, ಡಾಕ್ಟರ್​ ಹೇಳೊದೇನು ಕೇಳಿ

First Trimester of Pregnancy: ಡಾಕ್ಟರ್​ ಪ್ರಕಾರ ಈ ಮೊದಲ ಮೂರು ತಿಂಗಳ ಬಹಳ ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಗರ್ಭಪಾತದ ಸಾಧ್ಯತೆಗಳು ಹೆಚ್ಚಿರುತ್ತದೆ. ಸದ್ಯದ ಜೀವನಶೈಲಿಯ ಕಾರಣದಿಂದ ಬಹುತೇಕ 30 ರಿಂದ 40 ಶೇಕಡ ಗರ್ಭಧಾರಣೆ ಗರ್ಭಪಾತದಲ್ಲಿ ಕೊನೆಯಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಗರ್ಭಿಣಿಯಾಗಿದ್ದೀರಿ (Pregnant) ಎಂದು ತಿಳಿದ ತಕ್ಷಣ ಪೋಷಕರ (Parents)  ಜವಾಬ್ದಾರಿಗಳ (Responsibility)ಜಗತ್ತಿನಲ್ಲಿ ಮುಳುಗುವ ಮೊದಲು ಸಂತೋಷದಿಂದ ಕುಣಿದು ಕುಪ್ಪಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಹೊಸ ಪೋಷಕರಾಗಿ ನಿಮ್ಮ ಕೆಲಸ ಈಗ ಪ್ರಾರಂಭವಾಗುತ್ತದೆ. ಪ್ರತಿ ಸಮಸ್ಯೆ (Problem) ವಿರುದ್ಧ ನೀವು ಹೋರಾಡಲು ಸಾಧ್ಯವಾಗದಿದ್ದರೂ, ಆರೋಗ್ಯಕರ, ಸಂತೋಷದ ಗರ್ಭಾವಸ್ಥೆಯನ್ನು ಅನುಭವಿಸಬೇಕು. ಅದರಲ್ಲೂ ಮೊದಲ ಮೂರು ತಿಂಗಳ ಬಹಳ ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ಆರೋಗ್ಯದ ಕಾಳಜಿ ಹೇಗಿರಬೇಕು ಎಂಬುದನ್ನ ರಾಧಾಕೃಷ್ಣ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ ವಿದ್ಯಾ ಭಟ್​ ಮಾಹಿತಿ ನೀಡಿದ್ದಾರೆ. 

ಡಾಕ್ಟರ್​ ಪ್ರಕಾರ ಈ ಮೊದಲ ಮೂರು ತಿಂಗಳ ಬಹಳ ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಗರ್ಭಪಾತದ ಸಾಧ್ಯತೆಗಳು ಹೆಚ್ಚಿರುತ್ತದೆ. ಸದ್ಯದ ಜೀವನಶೈಲಿಯ ಕಾರಣದಿಂದ ಬಹುತೇಕ 30 ರಿಂದ 40 ಶೇಕಡ ಗರ್ಭಧಾರಣೆ ಗರ್ಭಪಾತದಲ್ಲಿ ಕೊನೆಯಾಗುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಅಲ್ಲದೇ, ಈ ಸಮಯದಲ್ಲಿ ಕೆಲವೊಮ್ಮೆ ಬ್ಲೀಡಿಂಗ್ ಉಂಟಾಗುವ ಸಾಧ್ಯತೆ ಸಹ ಇರುತ್ತದೆ. ಹಾಗಾಗಿ ಆಗಾಗ ವೈದ್ಯರ ಸಲಹೆ ಪಡೆಯುವುದು ಸಹಾಯ ಮಾಡುತ್ತದೆ.

ಯಾವುದನ್ನೇ ಗೂಗಲ್ ಮಾಡುವ ಬದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.  ಮುಖ್ಯವಾಗಿ ಈ ಮೊದಲು ಗರ್ಭಪಾತವನ್ನು ಅನುಭವಿಸಿರುವ ಮಹಿಳೆಯರು ಅತಿಯಾಗಿ ಆರೋಗ್ಯದ ಬಗ್ಗೆ ಕಾಳಜಿವಸಹಿದಬೇಕು. ಆಹಾರಗಳ ವಿಚಾರದಲ್ಲಿ ಸಹ ನೆಗ್ಲೆಕ್ಟ್​ ಮಾಡಬಾರದು.

ನಿಮಗೆ ಅಗತ್ಯವಾದ ವಿಟಮಿನ್​ಗಳನ್ನು ತೆಗೆದುಕೊಳ್ಳಿ

ಈ ವಿಟಮಿನ್​ಗಳು ನಿಮಗೆ ಅಗತ್ಯವಿರುವ ಫೋಲೇಟ್ ಅನ್ನು ಪೂರೈಸುತ್ತವೆ ಮತ್ತು ಅವು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವುಗಳ ಅಗತ್ಯತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಅವು ಸೂಕ್ತ ಪ್ರಮಾಣದಲ್ಲಿ DHA (ಡೊಕೊಸಾಹೆಕ್ಸೆನೊಯಿಕ್ ಆಸಿಡ್) ಮತ್ತು EPA (ಐಕೊಸಾಪೆಂಟೆನೊಯಿಕ್ ಆಮ್ಲ) ಅನ್ನು ಸಹ ಒದಗಿಸುತ್ತವೆ. ಈ ಎರಡು ರೀತಿಯ ಒಮೆಗಾ-3 ಕೊಬ್ಬುಗಳು ನಿಮ್ಮ ಮಗುವಿನ ಮೆದುಳು ಬೆಳವಣಿಗೆಗೆ ಸಹಾಯ ಮಾಡುತ್ತವೆ.

ವಿವಿಧ ಆಹಾರಗಳನ್ನು ತಿನ್ನಿರಿ.

ವಿವಿಧ ರೀತಿಯ ಆಹಾರವನ್ನು ತಿನ್ನಲು ಪ್ರಯತ್ನಿಸಿ. ಪಾಲಕ, ಕ್ಯಾರೆಟ್, ಸೇಬುಗಳು, ಬಾಳೆಹಣ್ಣು, ಬೆರಿಹಣ್ಣುಗಳು ಇತ್ಯಾದಿಗಳನ್ನು ಸೇವನೆ ಮಾಡಿ.ಗಾಢ ಬಣ್ಣದ ಆಹಾರಗಳು ಹೆಚ್ಚಿನ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ. ನೀವು ವಿವಿಧ ರೀತಿಯ ಆಹಾರವನ್ನು ಸೇವಿಸಿದರೆ, ನಿಮ್ಮ ಮಗುವೂ ತಿನ್ನುತ್ತದೆ.

ಇದನ್ನೂ ಓದಿ: ರಾತ್ರಿ ಒಂದು ಲವಂಗ ತಿಂದ್ರೆ ಸಾಕು ಈ ಯಾವ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ

ನಿದ್ದೆ ಮಾಡುವುದು ಸಹ ಮುಖ್ಯ

ನಿಮ್ಮ ದೇಹವು ವಿವಿಧ ಬದಲಾವಣೆಗಳನ್ನು ಅನುಭವಿಸುತ್ತಿರುತ್ತದೆ ಮತ್ತು ನಿಮ್ಮ ಮಗುವಿಗೆ ಸಂಪೂರ್ಣವಾಗಿ ಹೊಸ ಜೀವನವನ್ನು ಒದಗಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ನಿಮಗೆ ಸಾಧ್ಯವಾದಾಗ ನಿದ್ದೆ ಮಾಡಿ. ನೀವು ಕೆಲಸ ಮಾಡುತ್ತಿದ್ದರೆ, ನಿಮ್ಮ ಊಟದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ರಾತ್ರಿಯಲ್ಲಿ ನೀವು ಹೆಚ್ಚು ನಿದ್ರೆ ಮಾಡಬೇಕಾಗಬಹುದು.

ವ್ಯಾಯಾಮ ಮಾಡಬೇಕು

ನಿಯಮಿತ ವ್ಯಾಯಾಮವು ಮೊದಲ ತ್ರೈಮಾಸಿಕದಲ್ಲಿ ಉಂಟಾಗುವ ಆಯಾಸ ಮತ್ತು ಹಾರ್ಮೋನುಗಳ ಬದಲಾವಣೆಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ತೂಕ ಹೆಚ್ಚಾಗುವುದನ್ನು ತಡೆಯಲು ಮತ್ತು ನಿದ್ರಾಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಗರ್ಭಾವಸ್ಥೆಯಲ್ಲಿಯೂ ಸಹ ನೀವು ಹೆಚ್ಚು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಆದರೆ ನೀವು ಯಾವುದೇ ಹೊಸ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಕಹಿ ಅಂತ ಮೂಗು ಮುರಿಯುವ ಹಾಗಲಕಾಯಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚು ಮಾಡುತ್ತೆ

ಹೈಡ್ರೇಟೆಡ್ ಆಗಿರಿ

ಸರಿಯಾಗಿ ನೀರು ಕುಡಿಯುವುದು ಪ್ರಸವಪೂರ್ವ ಹೆರಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ತಲೆನೋವು, ಮೂತ್ರಪಿಂಡದ ಕಲ್ಲುಗಳು ಮತ್ತು ತಲೆತಿರುಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ಈಗಾಗಲೇ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆ ಅನುಭವಿಸುತ್ತಿದ್ದರೆ ಈ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Published by:Sandhya M
First published: