• Home
  • »
  • News
  • »
  • lifestyle
  • »
  • Heart Care: ಹೃದಯಾಘಾತದಿಂದ ಪಾರಾಗಬೇಕೇ? ಈ ಆಹಾರ ಪದ್ಧತಿಯನ್ನು ಫಾಲೋ ಮಾಡಿ

Heart Care: ಹೃದಯಾಘಾತದಿಂದ ಪಾರಾಗಬೇಕೇ? ಈ ಆಹಾರ ಪದ್ಧತಿಯನ್ನು ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Care: ಇಂದಿನ ಬ್ಯುಸಿ ಜಗತ್ತಿನಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ತುಂಬಾ ವಿರಳ. ಹಾಗಾಗಿ ಹೃದಯಾಪಘಾತಗಳಾಗುತ್ತಿರುವುದು ಹೇರಳವಾಗ್ತಾ ಇದೆ. ಹಾಗಾಗಿ ಹೃದಯದ ಆರೋಗ್ಯಕ್ಕಾಗಿ ಯಾವ ರೀತಿಯ ಆಹಾರಗಳು ಸೂಕ್ತ ಎಂಬುದನ್ನು ತಿಳಿಯಿರಿ.

  • Share this:

ಅನಾದಿ ಕಾಲದಿಂದಲೂ 'ಆರೋಗ್ಯವೇ ಭಾಗ್ಯ' (Health is destiny) ಎಂಬ ಮಾತು ಅಕ್ಷರಶಃ ಸತ್ಯವಾದ ನುಡಿ ಎಂದರೆ ತಪ್ಪಾಗಲಾರದು. ಅದರಲ್ಲೂ ಈಗೀಗ ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ರಮೇಣವಾಗಿ ಏರುತ್ತಲಿದೆ. ಆಧುನಿಕ ಜೀವನ ಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪ್ರತಿಯೊಬ್ಬರು ಎದುರಿಸುತ್ತಿದ್ದಾರೆ. ಅದಕ್ಕೆ ನಾವಿಂದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇರಿಸಲು ಯಾವೆಲ್ಲ ಬಗೆಯ ಆಹಾರಗಳನ್ನು ಸೇವನೆ ಮಾಡಬೇಕೆಂದು ತಿಳಿಸಿಕೊಡುತ್ತೇವೆ.ಕೆಲವು ಅಧ್ಯಯನಗಳ ಪ್ರಕಾರ, ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಸಾವುಗಳು ಹೃದ್ರೋಗದ ಕಾರಣದಿಂದಾಗಿ ಸಂಭವಿಸುತ್ತವೆ.


ನಿಮ್ಮ ಹೃದಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಮತ್ತು ಅದರಿಂದ ಪಾರಾಗಬೇಕು ಎಂಬುದು ನಿಮ್ಮ ಉದ್ದೇಶವಾಗಿದ್ದರೇ, ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಈ 10 ಹೃದಯ-ಆರೋಗ್ಯಕರ ಆಹಾರಗಳ ಬಗ್ಗೆ ಮುಂದೆ ಓದಿ.


ಆರೋಗ್ಯಕರ-ಹೃದಯ ಆಹಾರಗಳು


ಹೃದಯದ ಆರೋಗ್ಯದ ವಿಷಯಕ್ಕೆ ಬಂದಾಗ, ಆಹಾರಕ್ರಮವು ಅತ್ಯಂತ ಮುಖ್ಯವಾದ ಅಂಶವಾಗುತ್ತದೆ. ವಾಸ್ತವವಾಗಿ, ಉತ್ತಮ ಆಹಾರಕ್ರಮವು ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ಹಿಡಿದು ವಿವಿಧ ಹೃದಯ ಕಾಯಿಲೆಗಳಿಂದ ರಕ್ಷಿಸುವವರೆಗೆ ಎಲ್ಲ ರೀತಿಯ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.


ಆರೋಗ್ಯಕರ ಆಹಾರ ಪದ್ಧತಿ ಮತ್ತು ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಹೃದಯದ ಆರೋಗ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೀವು ಫಿಟ್ ಆಗಿರಲು ಮತ್ತು ಅಧಿಕ ತೂಕದಿಂದ ನಿಮ್ಮನ್ನು ಮುಕ್ತಿಗೊಳಿಸುತ್ತದೆ.


ಇದನ್ನೂ ಓದಿ: ಈ ರೀತಿ ಮಾಡಿದ್ರೆ ಅನಗತ್ಯವಾಗಿ ಬಟ್ಟೆ ಖರೀದಿಸೋದು ತಪ್ಪಿಸಬಹುದು


ಬಹು ಮುಖ್ಯವಾಗಿ ದೈನಂದಿನ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಖಂಡಿತವಾಗಿಯೂ ದೊಡ್ಡ ಆರೋಗ್ಯ ವ್ಯತ್ಯಾಸಗಳನ್ನು ನಾವು ಕಾಣಬಹುದಾಗಿದೆ.


ಹೃದಯದ ಆರೋಗ್ಯಕ್ಕೆ ದೈನಂದಿನ ಆಹಾರದಲ್ಲಿ ಸೇರಿಸಬಹುದಾದ 10 ಆರೋಗ್ಯಕರ ಆಹಾರಗಳಿವು


ನಿಮ್ಮ ಹೃದಯವು ಯಂಗ್ ಮತ್ತು ಆರೋಗ್ಯಕರವಾಗಿ ಇರಲು ಸಹಾಯ ಮಾಡುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು ಇಲ್ಲಿವೆ.


ಆಹಾರದಲ್ಲಿ ಉತ್ತಮ ಗುಣಮಟ್ಟದ ತೈಲಗಳ ಬಳಕೆ


ಕೊಬ್ಬರಿ ಎಣ್ಣೆ, ಶುದ್ಧ A2 ಗಿರ್ ಹಸುವಿನ ತುಪ್ಪ ಮತ್ತು ಸಾಸಿವೆ ಎಣ್ಣೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇವು ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯಕ.


ಒಮೆಗಾ 3 ಅಂಶವಿರುವ ಆಹಾರಗಳು


ಒಮೆಗಾ 3 ಕೊಬ್ಬಿನಾಮ್ಲವು ಹೃದಯಕ್ಕೆ ಪ್ರಮುಖ ಮತ್ತು ಅತ್ಯಂತ ಆರೋಗ್ಯಕರ ಕೊಬ್ಬಿನಾಮ್ಲವಾಗಿದೆ. ಇದು ಉರಿಯೂತವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಅಪಧಮನಿಯ ಬ್ಲಾಕ್ ಗಳನ್ನು ಗುಣಪಡಿಸುತ್ತದೆ. ಉದಾ: ಮೀನು, ಅಗಸೆ ಬೀಜಗಳು, ವಾಲ್‌ನಟ್ಸ್ ಮತ್ತು ಚಿಯಾ ಬೀಜಗಳು ಇತ್ಯಾದಿ.


ಬೀಟ್ರೂಟ್


ಈ ಬೀಟ್ರೂಟ್ ವಾಸೋಡಿಲೇಟರ್ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವನ್ನು ಹೊಂದಿರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.


ಬೆಳ್ಳುಳ್ಳಿ


ಬೆಳ್ಳುಳ್ಳಿ ದೇಹದ ಉರಿಯೂತ ಮತ್ತು ಕೆಟ್ಟ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಾರುವ ಆಹಾರ ಪದಾರ್ಥವಾಗಿದೆ. ಇದು ನೈಸರ್ಗಿಕವಾಗಿ ರಕ್ತ ತೆಳುವಾಗುವಂತೆಯೂ ಕಾರ್ಯನಿರ್ವಹಿಸುತ್ತದೆ.


ಆರ್ಗನಿಕ್ ಟೀ


ಇದು ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವನ್ನು ಒಳಗೊಂಡಿದೆ., ಅಲ್ಲದೆ, ಇದು ಪ್ರಬಲವಾಗಿ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವನ್ನು ತಡೆಯುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ.


ಹಣ್ಣುಗಳು


ಹಣ್ಣುಗಳಲ್ಲಿ ದ್ರಾಕ್ಷಿಗಳು, ದಾಳಿಂಬೆ, ಮತ್ತು ಬೆರ್ರಿಗಳು ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವನ್ನು ಹೊಂದಿರುವುದರಿಂದ ಈ ಹಣ್ಣುಗಳು ಹೃದಯಕ್ಕೆ ಬಹಳ ಆರೋಗ್ಯಕರ ಆಹಾರಗಳು ಎಂದರೆ ತಪ್ಪಾಗಲಾರದು.


ವಿಟಮಿನ್ ಇ- ಅಂಶವಿರುವ ಆಹಾರಗಳು


ಈ ಆಹಾರಗಳು ಉರಿಯೂತವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೇ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವುದು. ಕೋಶ ದುರಸ್ತಿ ಮತ್ತು ಅಪಧಮನಿಗಳನ್ನು ಗುಣಪಡಿಸುವುದು. ಉದಾ: ಸೂರ್ಯಕಾಂತಿ ಬೀಜಗಳು, ಉಪ್ಪುರಹಿತ ಕಡಲೆಕಾಯಿಗಳು, ಆವಕಾಡೊಗಳು, ಬಾದಾಮಿ ಮತ್ತು ಎಳ್ಳು ಇತ್ಯಾದಿ.


ಮೆಗ್ನೀಸಿಯಮ್-ಭರಿತ ಆಹಾರಗಳು


ಹೃದಯದ ಸ್ನಾಯುಗಳ ಆರೋಗ್ಯ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವ ಸಾಮರ್ಥ್ಯಕ್ಕಾಗಿ ಈ ಆಹಾರಗಳು ಬಹಳ ಮುಖ್ಯ. ಉದಾ: ಬೀಜಗಳು, ಹಸಿರು ಎಲೆಗಳ ತರಕಾರಿಗಳು, ಕೋಕೋ ಇತ್ಯಾದಿ.


ಪೊಟ್ಯಾಸಿಯಮ್-ಸಮೃದ್ಧ ಆಹಾರಗಳು


ಇದು ರಕ್ತದೊತ್ತಡ ಮತ್ತು ಹೃದಯ ಸ್ನಾಯುವಿನ ಸಂಕೋಚನವನ್ನು ನಿರ್ವಹಿಸುತ್ತದೆ ಮತ್ತು ಹೃದಯದ ಲಯವನ್ನು ಸ್ಥಿರವಾಗಿರಿಸುತ್ತದೆ. ಉದಾ: ಬಾಳೆಹಣ್ಣು, ಆವಕಾಡೊಗಳು, ಕುಂಬಳಕಾಯಿ ಇತ್ಯಾದಿ.


ಇದನ್ನೂ ಓದಿ: ಕಣ್ಣಿನ ಆರೋಗ್ಯಕ್ಕೆ ಪ್ರತಿದಿನ ಈ ಆಹಾರಗಳನ್ನು ತಿನ್ನಿ


ವಿಟಮಿನ್ ಕೆ ಸಮೃದ್ಧ ಆಹಾರಗಳು


ಇವು ಹೆಚ್ಚಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗಾಗಿ ಮತ್ತು ಅಪಧಮನಿಗಳ ಕ್ಯಾಲ್ಸಿಫಿಕೇಶನ್ ಅನ್ನು ತಡೆಯುವ ಗುಣಲಕ್ಷಣಗಳನ್ನು ಒಳಗೊಂಡಿವೆ. ಉದಾ: ಹಸಿರು ಎಲೆಗಳ ತರಕಾರಿಗಳು, ಕೋಸುಗಡ್ಡೆ, ಒಣದ್ರಾಕ್ಷಿ, ಆವಕಾಡೊ ಇತ್ಯಾದಿ.


–ಕೊನೆಯದಾಗಿ ಈ ಎಲ್ಲ ಆಹಾರಗಳ ನಿಯಮಿತ ಸೇವನೆ ಜೊತೆಗೆ ಉತ್ತಮ ನಿದ್ದೆ, ವ್ಯಾಯಾಮ ಇವೆಲ್ಲವೂ ನಿಮ್ಮ ಹೃದಯವನ್ನು ಯಾವಾಗಲೂ ಯಂಗ್ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು