• Home
 • »
 • News
 • »
 • lifestyle
 • »
 • Health Care: ಬ್ರೈನ್ ಸ್ಟ್ರೋಕ್ ನಂತರ ಬದುಕುವುದು ಹೇಗೆ? ಬೇಗ ಚೇತರಿಸಿಕೊಳ್ಳುವ ಬಗ್ಗೆ ನಟ ರಾಹುಲ್ ರಾಯ್ ಹೇಳೋದೇನು?

Health Care: ಬ್ರೈನ್ ಸ್ಟ್ರೋಕ್ ನಂತರ ಬದುಕುವುದು ಹೇಗೆ? ಬೇಗ ಚೇತರಿಸಿಕೊಳ್ಳುವ ಬಗ್ಗೆ ನಟ ರಾಹುಲ್ ರಾಯ್ ಹೇಳೋದೇನು?

ನಟ ರಾಹುಲ್ ರಾಯ್

ನಟ ರಾಹುಲ್ ರಾಯ್

'ಡೈರಿ ಉತ್ಪನ್ನಗಳು ಸೇರಿದಂತೆ ಮಾಂಸಾಹಾರ ಸೇವಿಸುವುದನ್ನು ಬಿಟ್ಟಿದ್ದೇನೆ. ಈಗ ನಾನು ಸಿಗರೇಟ್ ಸೇದುವುದಿಲ್ಲ. ಮತ್ತು ಅದು ಇಲ್ಲದೆ ಸಂಪೂರ್ಣವಾಗಿ ಚೆನ್ನಾಗಿದ್ದೇನೆ.

 • Share this:

  ಕಾರ್ಗಿಲ್‌ನಲ್ಲಿ ಪ್ರಾಜೆಕ್ಟ್‌ನ ಶೂಟಿಂಗ್‌ನಲ್ಲಿ ಬ್ರೈನ್ ಸ್ಟ್ರೋಕ್‌ಗೆ (Bain Stroke) ಒಳಗಾದ ಒಂದು ವರ್ಷದ ನಂತರ ನಟ ರಾಹುಲ್ ರಾಯ್ (Actor Rahul Rai) ಚೇತರಿಸಿಕೊಂಡಿದ್ದಾರೆ. ತಮ್ಮ ಸಹೋದರಿ ಪ್ರಿಯಾಂಕಾ ರಾಯ್ ಅವರ ಸಲಹೆಯಂತೆ ಸಾತ್ವಿಕ ಮತ್ತು ಆರೋಗ್ಯಕರ (Healthy) ಆಹಾರ (Food) ಸೇವನೆ ಮಾಡುವ ಮೂಲಕ ತಾವು ಹೇಗೆ ಬೇಗನೇ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ರಾಹುಲ್ ತನ್ನ ಸಹೋದರಿಯನ್ನು ಪ್ರೀತಿಯಿಂದ ಹರಿ ಮಾ ಎಂದು ಕರೆಯುತ್ತಾರೆ. ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ, ರಾಹುಲ್ 'ತಾವು ಏನು ತಿನ್ನುತ್ತಾರೆ ಎಂದು ಜನರು ಆಗಾಗ್ಗೆ ಕೇಳುತ್ತಾರೆ' ಎಂದು ಬರೆದಿದ್ದಾರೆ. ತನ್ನ ಸಹೋದರಿಯನ್ನು ಟ್ಯಾಗ್ ಮಾಡುವ ಮೂಲಕ ಮತ್ತು ತಮ್ಮನ್ನು ಸಾವಿನ ದವಡೆಯಿಂದ ಪ್ರಿಯಾಂಕಾ ಮೇಲಕ್ಕೆ ತಂದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.


  ಬ್ರೈನ್ ಸ್ಟ್ರೋಕ್ ನಂತರ ಬದುಕುವುದು ಹೇಗೆ?


  56 ವರ್ಷದ ನಟ ರಾಹುಲ್ ರಾಯ್ ನಿಯಮಿತವಾಗಿ ತಾವು ಸೇವಿಸುತ್ತಿರುವ ಊಟವನ್ನು ಹಂಚಿಕೊಂಡಿದ್ದಾರೆ. ಮತ್ತು ಬ್ರೈನ್ ಸ್ಟ್ರೋಕ್ ನಂತರ ಬದುಕುವುದು ಹೇಗೆ? ಆರೋಗ್ಯವಾಗಿರಲು ತಿನ್ನಲು ಸಾಕಷ್ಟು ಪ್ರಯತ್ನ ಮಾಡುವುದು ಮತ್ತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹಾಗೂ ಆರೋಗ್ಯಕರ ಆಹಾರ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದನ್ನು ತಿಳಿಸಿದ್ದಾರೆ.


  ನನ್ನ ಸಹೋದರಿ ಹರಿ ಮಾ


  ನನ್ನ ಸಹೋದರಿ ಹರಿ ಮಾ- ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಎಂದು ರಾಹುಲ್ ಹೇಳಿದ್ದಾರೆ. ನನ್ನ ಹೆಚ್ಚಿನ ಆಹಾರ ಮತ್ತು ದೈನಂದಿನ ಆಹಾರವು ಸಾತ್ವಿಕ ಮತ್ತು ಆರೋಗ್ಯಕರವಾಗಿರುತ್ತದೆ. ಎಲ್ಲ ರೀತಿಯ ಹಸಿರು ಸೊಪ್ಪು, ತರಕಾರಿ ಇರುವ ಪದಾರ್ಥಗಳಿಂದ ಕೂಡಿದೆ.


  ಇದನ್ನೂ ಓದಿ: ಈ 4 ಆಹಾರಗಳಿಂದ ದೂರವಿದ್ರೆ ಹಾರ್ಟ್ ಅಟ್ಯಾಕ್ ಸಮಸ್ಯೆ ಹತ್ತಿರಕ್ಕೂ ಸುಳಿಯಲ್ಲ


  ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ ಮೆದುಳಿನ ಪಾರ್ಶ್ವವಾಯು ಸಂಭವಿಸುತ್ತದೆ ಎಂದು ವಿವರಿಸಿದ್ದಾರೆ. ಅಧಿಕ ರಕ್ತದೊತ್ತಡ, ಡಿಸ್ಲಿಪಿಡೆಮಿಯಾ, ಧೂಮಪಾನ, ಮಧುಮೇಹ ಮೆಲ್ಲಿಟಸ್, ಹೃದಯ ರಕ್ತನಾಳದ ಕಾಯಿಲೆ, ಅತಿಯಾದ ಮದ್ಯಪಾನ ಮತ್ತು ಅಧಿಕ ತೂಕ ಇವೆಲ್ಲವೂ ಪಾರ್ಶ್ವವಾಯುವಿಗೆ ಕಾರಣವಾಗಬಹುದು.


  ಪ್ಲೇಟ್ ಸಾವಯವ ಆಹಾರವನ್ನು ಒಳಗೊಂಡಿದೆ


  ಕ್ವಿನೋವಾ, ಕುಲ್ತಿ ದಾಲ್, ಅವಕಾಡೊ, ಕೆಂಪುಮೆಣಸು, ಬ್ರೊಕೊಲಿ, ಟೊಮೆಟೊ, ರೆಡ್ ಕ್ಯಾಬೇಜ್ ಮುಂತಾದ ಆಹಾರ ಪದಾರ್ಥಗಳನ್ನು ಅವರ ತಟ್ಟೆಯಲ್ಲಿ ಕಾಣಬಹುದು. ವೀಡಿಯೊದಲ್ಲಿ ನಟ ಹೇಳಿದ್ದು ಹೀಗೆ - 'ಜನರು ನಾನು ಯಾವ ಆಹಾರವನ್ನು ತಿನ್ನುತ್ತೇನೆ ಎಂದು ಕೇಳುತ್ತಾರೆ. ನನ್ನ ಆಹಾರವೆಲ್ಲ ಸಾತ್ವಿಕ. ಹರಿ ಮಾ ನನಗೆ ಆರೋಗ್ಯಕರ ಆಹಾರವನ್ನು ನೀಡುತ್ತಾರೆ.


  ಆರೋಗ್ಯಕರ ಆಹಾರದ ವಿಷಯಕ್ಕೆ ಬಂದಾಗಲೆಲ್ಲಾ ತಾವು ಎಡವುತ್ತಿದ್ದುದಾಗಿ ರಾಹುಲ್ ಒಪ್ಪಿಕೊಂಡಿದ್ದಾರೆ. 'ನಾನು ಯಾವಾಗಲೂ ಅನಾರೋಗ್ಯಕರ ವಸ್ತುಗಳನ್ನು ತಿನ್ನಲು ಬಯಸುತ್ತೇನೆ. ನಾನು ಆಗಾಗ್ಗೆ ಜಗಳವಾಡುತ್ತೇನೆ ಮತ್ತು ವಾದಿಸುತ್ತೇನೆ. ಆದರೆ ಕೊನೆಯಲ್ಲಿ ಅವಳು ನನ್ನನ್ನು ಆರೋಗ್ಯಕರವಾಗಿ ಮತ್ತು ಉತ್ತಮ ಸ್ಥಿತಿಗೆ ತರುತ್ತಾಳೆ. ಅದಕ್ಕಾಗಿಯೇ ನಾನು ನನ್ನ ಹಿಂಬಾಲಕರಿಗೆ ಆರೋಗ್ಯವಾಗಿರಲು ಮತ್ತು ಆರೋಗ್ಯಕರ ಆಹಾರ ತಿನ್ನಲು ಸಲಹೆ ನೀಡುತ್ತೇನೆ.


  ಸಾತ್ವಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು


  ಬ್ರೈನ್ ಸ್ಟ್ರೋಕ್‌ನಿಂದ ಚೇತರಿಸಿಕೊಂಡ ನಂತರ ಅವರು ಸಾತ್ವಿಕ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ ಎಂದು ವೀಡಿಯೊದಲ್ಲಿ ತಿಳಿಸಿದ್ದಾರೆ. 'ಡೈರಿ ಉತ್ಪನ್ನಗಳು ಸೇರಿದಂತೆ ಮಾಂಸಾಹಾರ ಸೇವಿಸುವುದನ್ನು ಬಿಟ್ಟಿದ್ದೇನೆ. ಈಗ ನಾನು ಸಿಗರೇಟ್ ಸೇದುವುದಿಲ್ಲ. ಮತ್ತು ಅದು ಇಲ್ಲದೆ ಸಂಪೂರ್ಣವಾಗಿ ಚೆನ್ನಾಗಿದ್ದೇನೆ.


  ಬ್ರೈನ್ ಸ್ಟ್ರೋಕ್ ನಂತರ ಕರಿದ ಆಹಾರ ಸೇವನೆ ನಿಲ್ಲಿಸಿದ್ದಾನೆ


  ಸಾತ್ವಿಕ ಜೀವನಶೈಲಿಯು ಆಯುರ್ವೇದದ ಪ್ರಕಾರ, ಆರೋಗ್ಯಕರ ಮತ್ತು ಹಗುರವಾದ ಆಹಾರವನ್ನು ಒಳಗೊಂಡಿರುತ್ತದೆ. ಅಂತಹ ಆಹಾರಗಳು ಶಕ್ತಿ, ಸಂತೋಷ, ಶಾಂತತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


  ಇದರರ್ಥ ಸಾತ್ವಿಕ ಆಹಾರದಲ್ಲಿ, ಒಬ್ಬ ವ್ಯಕ್ತಿಯು ಸಸ್ಯಾಹಾರಿ, ಪೌಷ್ಟಿಕ, ತಾಜಾ ಮತ್ತು ರುಚಿಕರವಾದ ವಸ್ತುಗಳನ್ನು ಮಾತ್ರ ಸೇವಿಸಬೇಕು. ಒಟ್ಟಾರೆಯಾಗಿ, ಸಾತ್ವಿಕ ಆಹಾರವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹುರಿದ ಮತ್ತು ಸಂಸ್ಕರಿಸಿದ ಆಹಾರಗಳಿಗೆ ಸ್ಥಳವಿಲ್ಲ.


  ಸಕ್ಕರೆ ಇಲ್ಲದ ಖರ್ಜೂರದ ಖೀರ್ ಅನ್ನು ರಾಹುಲ್ ತಿನ್ನುತ್ತಿದ್ದಾರೆ


  ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಅವರು ಹೀಗೆ ಹೇಳಿದರು- 'ನಾನು ಕರಿದ ವಸ್ತುಗಳನ್ನು ತಿನ್ನುವುದನ್ನು ನಿಲ್ಲಿಸಿದ್ದೇನೆ. ಈಗ ನಾನು ಸಕ್ಕರೆ, ಹಾಲು ಸಹ ತ್ಯಜಿಸುತ್ತೇನೆ. ಬದಲಿಗೆ ನಾನು ಪ್ರತಿ ವಾಕಿಂಗ್ ಮಾಡುತ್ತೇನೆ. ನನ್ನ ಚೇತರಿಕೆಯಲ್ಲಿ ಇದು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಯೋಗಾಸನವನ್ನೂ ಆರಂಭಿಸಿದ್ದಾಗಿ ಹೇಳಿದ್ದಾರೆ.


  ಇದನ್ನೂ ಓದಿ: ಒತ್ತಡ, ಚಿಂತೆ, ಕೋಪ ಕಡಿಮೆ ಮಾಡಲು ಈ ಯೋಗಾಭ್ಯಾಸ, ಪ್ರಾಣಾಯಾಮ ರೂಢಿಸಿಕೊಳ್ಳಿ


  ಅದರ ಫಲಿತಾಂಶ ನಿಮ್ಮ ಮುಂದಿದೆ. 'ನಾನು ಮೊದಲು ಯೋಗ ಮಾಡುತ್ತಿರಲಿಲ್ಲ. ಆದರೆ ಈಗ ಅದು ದೇಹಕ್ಕೆ ಉತ್ತಮ ಔಷಧಿ ಎಂದು ನಾನು ಅರಿತುಕೊಂಡಿದ್ದೇನೆ'. ರಾಹುಲ್ ಅವರ ಈ ಪೋಸ್ಟ್ ಬ್ರೈನ್ ಸ್ಟ್ರೋಕ್ ನಂತರ ತ್ವರಿತವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಸಾಬೀತು ಪಡಿಸಬಹುದು.

  Published by:renukadariyannavar
  First published: