ಎರಡನೇ ಪ್ರೀತಿಯಲ್ಲಿ ಏನೋ ಸರಿಯಿಲ್ಲ ಎಂಬ ಅನುಮಾನವೇ; ಈ ಐದು ಮಾರ್ಗ ಅನುಸರಿಸಿ

ಹೊಸ ಸಂಗಾತಿ ಜೊತೆಗೆ ಹಳೆಯ ಗೆಳೆಯನ ಕಹಿ ಅನುಭವಗಳನ್ನು ನೆನೆದು ನಡೆದುಕೊಳ್ಳುತ್ತಿದ್ದರೆ, ನಿಮ್ಮೊಳಗೆ ಕೀಳರಿಮೆ ಉಂಟಾಗಬಹುದು.

Photo: Google

Photo: Google

 • Share this:
  ಪ್ರೀತಿ ನಂಬಿಕೆ ಜೊತೆ ಜೊತೆಯಲ್ಲಿ ಅಪನಂಬಿಕೆಯನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಹಲವು ಸಂಬಂಧಗಳು ಹಳಸಿ ಹೋಗುತ್ತವೆ. ಅದರಲ್ಲೂ ಮೊದಲ ಪ್ರೀತಿಯಲ್ಲಿ ಆದ ಎಡವಟ್ಟುಗಳು ಎರಡನೇ ಪ್ರೀತಿಯಲ್ಲಿ ಪ್ರತಿಫಲಿಸುತ್ತಿರುತ್ತದೆ. ಏನಾಗುತ್ತಿದೆ ಎಂದು ಅರಿವಿಗೆ ಬರುವ ಮೊದಲು ಕಾಲ ಕೈ ಮೀರಿ ಹೋಗಿರುತ್ತದೆ. ಬಹುಶಃ ಇದು ಬಹುತೇಕರ ಬದುಕಿನಲ್ಲಿ ನಡೆದಿರುತ್ತದೆ.  ನಿಮ್ಮ ಖಾಸಗಿ ಬದುಕನ್ನು ಹತ್ತಿಕ್ಕುವ ಪ್ರಯತ್ನವಾಗಿರಬಹುದು. ಇಲ್ಲವೇ ಸಂಗಾತಿ ಅವರನ್ನು ತೊರೆದು ಹೋಗಿರಬಹುದು. ಈ ಕಾರಣದಿಂದ ನಿಮ್ಮ ಮುಂದಿನ ಸಂಗಾತಿ ನಿಮ್ಮೊಟ್ಟಿಗೆ ಒಳ್ಳೆಯತನದಿಂದ ಇದ್ದರೂ ಹಳೆಯ ಅನುಭವದಿಂದ ನೀವು ಆತಂಕದಲ್ಲೇ ಇರುವಿರಿ. ನಿಮ್ಮ ಈ ಹೊಸ ಸಂಗಾತಿ ಜೊತೆಗೆ ಹಳೆಯ ಗೆಳೆಯನ ಕಹಿ ಅನುಭವಗಳನ್ನು ನೆನೆದು ನಡೆದುಕೊಳ್ಳುತ್ತಿದ್ದರೆ, ನಿಮ್ಮೊಳಗೆ ಕೀಳರಿಮೆ ಉಂಟಾಗಬಹುದು. ಅದು ಈ ರೀತಿ ಇರಬಹುದು.

  ನಿಮ್ಮ ಸಂಗಾತಿ ಮೇಲೆ ಅಪನಂಬಿಕೆ ಮೂಡುತ್ತದೆ

  ಒಮ್ಮೆ ಮೋಸ ಹೋಗಿದ್ದರೆ, ನಿಮ್ಮ ಸಂಗಾತಿ ನಿಮಗೆ ಸುಳ್ಳು ಹೇಳುತ್ತಿದ್ದಾರೆ ಮತ್ತು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ನಿಮಗೆ ಕಾಡಬಹುದು. ಹಿಂದಿನ ಪ್ರೀತಿಯಲ್ಲಿ ದ್ರೋಹ, ನಿಮ್ಮ ಪೋಷಕರ ದಾಂಪತ್ಯದಲ್ಲಿನ ಒಡಕು ಇವೆಲ್ಲವು ನಿಮ್ಮ ಪ್ರಸ್ತುತ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಭಾವನಾತ್ಮಕ ವಿಷಯದಿಂದ ನೀವು ಗೊಂದಲಕ್ಕೆ ಒಳಗಾಗಬಾರದು. ನಂಬಿಕೆ ಸಮಸ್ಯೆಯೂ ವಿಶ್ವಾಸದ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಸಾಕಷ್ಟು ದುಃಖಕರವಾಗಿರುತ್ತದೆ. ಆದ್ದರಿಂದ ತರ್ಕ ಬದ್ಧವಾಗಿರಿ. ಉಸಿರಾಟದ ಮೇಲೆ ಗಮನವಿರಲಿ, ಸಂಗೀತವನ್ನು ಕೇಳಿ. ಆತಂಕ ಉಂಟಾದಾಗ ಮನಸ್ಸನ್ನು ಬೇರೆ ಕಡೆ ತಿರುಗಿಸಿ. ನಿಮ್ಮ ಮನೋಸ್ಥಿತಿ ಬಗ್ಗೆ ಆತನಿಗೆ ಅರಿವು ಮೂಡಿಸಿ, ಇದು ನಿಮಗೆ ನೆರವಾಗುತ್ತದೆ.

  ನೀವೇ ಹಿಂದೆ ಮೋಸ ಮಾಡಿರಲುಬಹುದು!

  ಹೌದು! ಇದು ಸ್ವಲ್ಪ ಕಹಿ ಅನಿಸಬಹುದು. ಪ್ರತಿ ಬಾರಿ ನಿಮಗೆ ಮೋಸ ಆಗಬೇಕೆಂದಿಲ್ಲ. ನೀವು ಕೂಡ ನಿಮ್ಮ ಸ್ನೇಹಿತರು, ಸಹೋದ್ಯೋಗಿ ಜೊತೆಗೆ ಸ್ನೇಹದಿಂದ ಇದ್ದರೂ ಕೆಲವೊಮ್ಮೆ ನಿಮ್ಮ ಮನಸ್ಸು ಹಳಿ ತಪ್ಪಿರಬಹುದು. ನೀವು ನಿಮ್ಮ ಸಂಗಾತಿಗೆ ಮೋಸ ಮಾಡಿರಬಹುದು. ಆ ಅನುಭವವನ್ನೇ ಇಲ್ಲಿಯೂ ನೀವು ಹೋಲಿಸುತ್ತಿರಬಹುದು. ಇದು ಅವನ ಮೇಲಿನ ನಂಬಿಕೆಗಿಂತ ನಿಮ್ಮ ಮೇಲಿನ ನಂಬಿಕೆಯ ಪ್ರಶ್ನೆ. ಹಿಂದಿನ ಅನುಭವಗಳನ್ನು ಮರೆತು ಇನ್ನು ಮುಂದೆ ಇಬ್ಬರೂ ನಿಮ್ಮ ಸಂಬಂಧಗಳಲ್ಲಿ ಪ್ರಾಮಾಣಿಕತೆ ಉಳಿಸಿಕೊಳ್ಳಿ.

  ನಿಮ್ಮ ಬಗ್ಗೆ ಕೀಳರಿಮೆ

  ಒಬ್ಬ ಹೆಣ್ಣು ನಿಮಗಿಂತ ಸುಂದರವಾದ , ಒಳ್ಳೆಯ ವ್ಯಕ್ತಿತ್ವದ, ನಿಮಗಿಂತ ಉತ್ತಮ ಸಾಧನೆ ಮಾಡಿದ್ದರೆ, ಆ ಹೆಣ್ಣಿನ ಜೊತೆಗೆ ನಿಮ್ಮ ಗೆಳೆಯ ಸ್ನೇಹಿತನಾಗಿರುವುದು ನಿಮಗೆ ಅಸುರಕ್ಷತೆ ಭಾವವನ್ನು ತರಬಹುದು. ಇದು ನಿಮ್ಮ ಆತ್ಮವಿಶ್ವಾಸವನ್ನೇ ಅಲುಗಾಡಿಸಬಹುದು.
  ನಿಮ್ಮ ಬಗ್ಗೆ ನಿರಂತರ ಟೀಕೆ ಮತ್ತು ಹೋಲಿಕೆಗಳನ್ನು ನೀವು ಬಿಡಿ. ಯಾರೂ ಸಂಪೂರ್ಣರಲ್ಲ. ನಿಮ್ಮಲ್ಲಿನ ಉತ್ತಮತೆಯನ್ನು ನಿಮ್ಮ ಸಂಗಾತಿ ಪ್ರೀತಿಸುವುದಲ್ಲ. ಸಾಕಷ್ಟು ಜನರು ಉತ್ತಮರಿದ್ದಾರೆ.
  ನೀವು ಹೇಗಿದ್ದರೂ ಆತ ಮೆಚ್ಚುತ್ತಾನೆ. ನಿಮ್ಮ ಅಪೂರ್ಣತೆಯ ಗಮನವನ್ನು ನಿಮ್ಮ ಅಭಿವೃದ್ಧಿಯ ಕಡೆಗೆ ಹರಿಸಿ. ಆತ್ಮವಿಶ್ವಾಸವಿರಲಿ. ಕುಹಕಕ್ಕೆ ಕಿವಿಗೊಡಬೇಡಿ.

  ಅವನೇ ನಿಮ್ಮ ಭರವಸೆ

  ಒಳ್ಳೆಯ ಹುಡುಗರು ಅದರಲ್ಲೂ ಸ್ನೇಹಪರರಾಗಿದ್ದರೆ ಅವರು ಇತರ ಮಹಿಳಾ ಸ್ನೇಹಿತರ ಜೊತೆಗೆ ಸಾಮಾನ್ಯವಾಗಿ ಮಾತನಾಡಿದರೂ ನಿಮಗೆ ನೋವಾಗಬಹುದು. ಅವನು ಹೆಣ್ಣು ಮಕ್ಕಳ ಗಮನವನ್ನು ಬಯಸುತ್ತಾನೆ ಎಂದು ನೀವು ನೊಂದುಕೊಳ್ಳಬಹುದು. ನೆನಪಿಡಿ, ಕೆಲವು ಪುರುಷರು ಹೆಣ್ಣಿನ ಭಾವನಾತ್ಮಕ ಸೆಳೆತವನ್ನು ಹೊಂದಿರುತ್ತಾರೆ. ಆದರೆ ಅದರ ನಡುವೆ ವ್ಯಕ್ತಿತ್ವ ರೂಪುಗೊಂಡಿರುವ ಒಂದು ಎಳೆ ಇರುತ್ತದೆ. ಅದನ್ನು ಗೌರವಿಸಿ.

  ನಿಮ್ಮ ಪುರುಷ ಸ್ನೇಹಿತರ ವಿಚಾರದಲ್ಲಿ ನೀವು ಹೀಗೆ ನಡೆದುಕೊಳ್ಳುವಿರಾ? ಸ್ನೇಹ ಮತ್ತು ಗಮನದ ನಿರೀಕ್ಷೆ ಮೋಸವಲ್ಲ. ನಿಮ್ಮ ವ್ಯಕ್ತಿತ್ವವನ್ನು ಬಲವಾಗಿ ರೂಪಿಸಿಕೊಳ್ಳಲು ಪ್ರಯತ್ನಿಸಿ.

  ನಿಮ್ಮ ಸಂಬಂಧ ಮುಕ್ತವಾಗಿಲ್ಲ ಎಂದು ಭಾವಿಸುವುದು

  ಅನಿಶ್ಚಿತತೆ ಮತ್ತು ರಹಸ್ಯಗಳು ಅಸುರಕ್ಷಿತ ವ್ಯಕ್ತಿಯನ್ನು ಕುಗ್ಗಿಸುತ್ತದೆ. ನಿಮ್ಮ ಸಂಗಾತಿ ಆಫೀಸ್ ಪಾರ್ಟಿ ಮತ್ತು ಪಾರ್ಟಿಗಳಲ್ಲಿದ್ದಾಗ ನಿಮ್ಮ ಅತಿಯಾದ ಆಲೋಚನೆ ಕೆಲಸ ಮಾಡುತ್ತದೆ. ಅವನು ಫೋನ್ ಗಮನಿಸಿಲ್ಲ? ಕರೆ ಸ್ವೀಕರಿಸಲಿಲ್ಲ? ಅವನೊಟ್ಟಿಗೆ ಯಾರಿದ್ದಾರೆ? ಏನೆಲ್ಲಾ ನಡೆಯುತ್ತಿದೆ ಎನ್ನುವ ಊಹೆ ನಿಮ್ಮನ್ನು ಹಿಂಸಿಸುತ್ತದೆ.

  ನೀವಿಬ್ಬರೂ ನಿಮ್ಮನ್ನು ಪ್ರೀತಿಸಿದ್ದರೆ, ನಿಮ್ಮ ನೋವುಗಳನ್ನು ಪರಸ್ಪರ ಗುಣಪಡಿಸಿಕೊಳ್ಳಲು ನೆರವಾಗಬೇಕು. ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಪ್ರತಿಯೊಂದನ್ನು ಕೇಳಿಸಿಕೊಂಡು ಅದಕ್ಕೆ ಪರಿಹಾರ ಸೂಚಿಸಿ. ಮುಕ್ತವಾಗಿದ್ದಷ್ಟು ನಿಮ್ಮ ಸಂಬಂಧ ಮುಂದಕ್ಕೆ ಸಾಗುತ್ತದೆ.

  ಎಲ್ಲಾ ಅಭಿರುಚಿಗಳನ್ನು ಹೊಂದಿಸಿಕೊಂಡು ಹೇಗೋ ಒಂದುಗೂಡಿರುವ ಸ್ನೇಹದ ಮೇಲಿನ ಪ್ರೀತಿಯನ್ನು ಕಾಪಾಡಿಕೊಳ್ಳಬೇಕು. ಅದರ ಮೇಲಿನ ಹಿಂದಿನ ಅನುಭದ ಧೂಳನ್ನು ಕೊಡವಿಕೊಂಡು ಪ್ರೀತಿಯನ್ನು ಅಪ್ಪಿಕೊಳ್ಳಬೇಕು. ಆಗ ನಿಮ್ಮಂಥ ಅದೃಷ್ಟವಂತರು ಯಾರಿರುತ್ತಾರೆ ಹೇಳಿ ನೋಡೋಣ!?
  First published: