Health Care: ತೆಳ್ಳಗೆ ಮತ್ತು ದುರ್ಬಲ ದೇಹ ಸದೃಢಗೊಳಿಸಲು ಅಶ್ವಗಂಧ ಬೆಸ್ಟ್, ಬಳಸೋದು ಹೇಗೆ?

ಅಶ್ವಗಂಧ ಬಳಕೆಯು ತೂಕ ಹೆಚ್ಚಿಸಲು ತುಂಬಾ ಪರಿಣಾಮಕಾರಿ ಆಗಿದೆ. ಇದು ಎರಡು ವಿಭಿನ್ನ ಅಧ್ಯಯನಗಳಿಂದ ಸ್ಪಷ್ಟ ಆಗಿದೆ. ಇದು ಜೀರ್ಣಕಾರಿ ರಸಗಳ ಸಕ್ರಿಯಗೊಳಿಸುವಿಕೆ ಹೆಚ್ಚಿಸುವ ಮೂಲಕ ಹಸಿವನ್ನು ಉತ್ತೇಜಿಸುತ್ತದೆ. ಅಶ್ವಗಂಧ ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಶಾರೀರಿಕವಾಗಿ ತೆಳ್ಳಗೆ (Slim) ಹಾಗೂ ದುರ್ಬಲ ದೇಹವು (Weak Body) ಸದೃಢವಾಗಲು ಕೆಲವು ಪ್ರಯತ್ನಗಳನ್ನು ಮಾಡಬೇಕು. ಯಾರ ದೇಹವು ದುರ್ಬಲವಾಗಿರುತ್ತದೆಯೋ ಅವರೂ ಸಹ ಬಲಿಷ್ಟ ಹಾಗೂ ಸದೃಢ ದೇಹ ಹೊಂದಲು ಮತ್ತು ಸಾಮಾನ್ಯರಂತೆ ಕಾಣಲು ಕೆಲವು ಉತ್ಪನ್ನಗಳನ್ನು (Products) ಸೇವನೆ ಮಾಡಿರುತ್ತೀರಿ. ಮಾರುಕಟ್ಟೆಯಲ್ಲಿ (Market) ಸಿಗುವ ಕೆಲವು ಉತ್ಪನ್ನಗಳನ್ನು ನೀವು ಸೇವನೆ ಮಾಡಿದಾಗ ಅದರಿಂದ ದೇಹವು ಸದೃಢವಾಗಬಹುದು. ಆದರೆ ಅದರಿಂದ ಸೈಡ್ ಎಫೆಕ್ಟ್ ಭಯ ಹೆಚ್ಚು ಕಾಡುತ್ತದೆ. ಈ ಉತ್ಪನ್ನಗಳು ಕೆಲವು ಅಡ್ಡ ಪರಿಣಾಮ ಹೊಂದಿದ್ದು, ದಿನಗಳು ಕಳೆದಂತೆ ಅದರ ಫ್ರಭಾವ ಬೀರುತ್ತದೆ. ಅಂತಹ ಸ್ಥಿತಿಯಲ್ಲಿ, ಅಶ್ವಗಂಧ ಆಯುರ್ವೇದ ಗಿಡಮೂಲಿಕೆಯ ಆಯ್ಕೆಯು ತುಂಬಾ ಪ್ರಯೋಜನಕಾರಿ ಆಗಿದೆ.

    ಹಾಗಾಗಿ ಇಂದು ನಾವು ತೂಕ ಹೆಚ್ಚಿಸಲು ಅಶ್ವಗಂಧ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವೈಜ್ಞಾನಿಕ ಪುರಾವೆಯ ಜೊತೆಗೆ ತಿಳಿಯೋಣ. ಹಾಗಾಗಿ ತೂಕ ಹೆಚ್ಚಾಗಲು ಅಶ್ವಗಂಧವನ್ನು ಹೇಗೆ ಬಳಸಬೇಕೆಂದು ಇಲ್ಲಿ ನಾವು ತಿಳಿಯೋಣ.

    ತೂಕವನ್ನು ಹೆಚ್ಚಿಸಲು ಅಶ್ವಗಂಧ ಹೇಗೆ ಪ್ರಯೋಜನಕಾರಿ ?

    ಅಶ್ವಗಂಧ ಬಳಕೆಯು ತೂಕ ಹೆಚ್ಚಿಸಲು ತುಂಬಾ ಪರಿಣಾಮಕಾರಿ ಆಗಿದೆ. ಇದು ಎರಡು ವಿಭಿನ್ನ ಅಧ್ಯಯನಗಳಿಂದ ಸ್ಪಷ್ಟ ಆಗಿದೆ. NCBI - ನ್ಯಾಷನಲ್ ಸೆಂಟರ್ ಆಫ್ ಬಯೋಟೆಕ್ನಾಲಜಿ ಇನ್ಫರ್ಮೇಷನ್  ನಲ್ಲಿರುವ ಸಂಶೋಧನಾ ಪ್ರಬಂಧದ ಪ್ರಕಾರ ನೋಡುವುದಾದರೆ, ಅಶ್ವಗಂಧ ಇದು ಜೀರ್ಣಕಾರಿ ರಸಗಳ ಸಕ್ರಿಯಗೊಳಿಸುವಿಕೆ ಹೆಚ್ಚಿಸುವ ಮೂಲಕ ಹಸಿವನ್ನು ಉತ್ತೇಜಿಸುತ್ತದೆ.

    ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

    ಅಶ್ವಗಂಧ ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಎರಡೂ ಗುಣಲಕ್ಷಣಗಳು ಇದು ತೂಕ ಹೆಚ್ಚಿಸುವ ಪರಿಹಾರವಾಗಿ ಉಪಯುಕ್ತವೆಂದು ಪರಿಗಣಿತವಾಗಿದೆ.

    ತೂಕ ಹೆಚ್ಚಿಸಲು ಅಶ್ವಗಂಧವನ್ನು ಹೇಗೆ ಸೇವಿಸುವುದು ಮುಖ್ಯ?

    ಅಶ್ವಗಂಧವನ್ನು ಪುಡಿಯ ರೂಪದಲ್ಲಿ ಸೇವಿಸುವುದು: ಅಶ್ವಗಂಧ ಪುಡಿ ನೀವೇ ತಯಾರಿಸಿ ಅಥವಾ ಪುಡಿ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಈ ಚೂರ್ಣ ಅಥವಾ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರದ ಜೊತೆ ಮತ್ತು ಮಲಗುವ ವೇಳೆ ಒಂದು ಲೋಟ ಹಾಲಿಗೆ ಒಂದು ಚಮಚ ಬೆರೆಸಿ ಕುಡಿಯಿರಿ.

    ಮನೆಯಲ್ಲಿ ಅಶ್ವಗಂಧ ಪುಡಿ ಮಾಡುವುದು: ಅಶ್ವಗಂಧ ಒಂದು ಮೂಲಿಕೆ. ಅಂತಹ ಸ್ಥಿತಿಯಲ್ಲಿ ಇದು ಒಬ್ಬರ ಆಸುಪಾಸಿನಲ್ಲಿ ಸುಲಭವಾಗಿ ಲಭ್ಯವಿದ್ದರೆ, ನಂತರ ಪುಡಿಯನ್ನು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ ಮೊದಲು ಈ ಮೂಲಿಕೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ.

    ನಂತರ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸರ್ ಅಥವಾ ಸಿಲ್ಬಟ್ಟಾ ಮೇಲೆ ರುಬ್ಬಿ ನುಣ್ಣಗೆ ಪುಡಿ ಮಾಡಿ. ನಂತರ ಅದನ್ನು ಮುಚ್ಚಿದ ಪೆಟ್ಟಿಗೆಯಲ್ಲಿ ಇರಿಸಿ. ಮನೆಯಲ್ಲಿ ತಯಾರಿಸಿದ ಈ ಅಶ್ವಗಂಧ ಪುಡಿಯನ್ನು ಬೆಳಿಗ್ಗೆ ಅಥವಾ ಸಂಜೆ ಒಂದು ಟೀ ಚಮಚ ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಬೆರೆಸಿ ಕುಡಿಯುವುದು.

    ಟ್ಯಾಬ್ಲೆಟ್ ಅಥವಾ ಕ್ಯಾಪ್ಸುಲ್ ರೂಪದಲ್ಲಿ ಸೇವಿಸುವುದು: ಅಶ್ವಗಂಧ ಪುಡಿ ಪ್ರಯೋಜನಗಳು ಮಾತ್ರವಲ್ಲದೆ, ಅಶ್ವಗಂಧ ಮಾತ್ರೆಗಳು ಮತ್ತು ಕ್ಯಾಪ್ಸುಲ್ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯ ಇವೆ. ತೂಕ ಹೆಚ್ಚಿಸಲು ವೈದ್ಯರ ಸಲಹೆ ಮೇರೆಗೆ ಈ ಕ್ಯಾಪ್ಸುಲ್ ಬಳಸಬಹುದು.

    ತೂಕ ಹೆಚ್ಚಾಗಲು ಅಶ್ವಗಂಧದ ದೈನಂದಿನ ಡೋಸೇಜ್ ಎಷ್ಟಿರಬೇಕು?

    ಅಶ್ವಗಂಧ ಪುಡಿಯ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಸುವುದು ಎಂದು ಮೊದಲು ತಿಳಿಯಬೇಕು. ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಅದನ್ನು ಸೇವಿಸುವುದು ಸುರಕ್ಷಿತ ಎಂದು ತಿಳಿದುಕೊಳ್ಳಿ. ದಿನಕ್ಕೆ 3 ಗ್ರಾಂ ವರೆಗೆ ಅಶ್ವಗಂಧ ಸೇವನೆ ಮಾಡುವುದು ಸುರಕ್ಷಿತ ಎಂದು ಪರಿಗಣಿಸಲಾಗಿದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ತೂಕ ಹೆಚ್ಚಿಸುವಲ್ಲಿ ಅಶ್ವಗಂಧದ ಪ್ರಯೋಜನ ತಿಳಿಯಲು ಕೋಳಿಗಳನ್ನು ಆಧರಿಸಿದ ಸಂಶೋಧನೆಯು 2.5 ಗ್ರಾಂ ಅಶ್ವಗಂಧ ಸೇವನೆ ಮಾಡುವ ಬಗ್ಗೆ ತಿಳಿಸಿದೆ. ವ್ಯಕ್ತಿಯ ದೈಹಿಕ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಈ ಡೋಸೇಜ್ ಬದಲಾಯಿಸಬೇಕು.
    Published by:renukadariyannavar
    First published: