Kitchen Hacks: ಫ್ರಿಡ್ಜ್​ನಲ್ಲಿ ತರಕಾರಿಗಳು ಬೇಗ ಹಾಳಾಗಬಾರದು ಅಂದ್ರೆ ಹೀಗೆ ಮಾಡಿ

ಎಲ್ಲರ ಮನೆಯಲ್ಲಿ ತರಕಾರಿ ಹಾಳಾಗದೆ ಇರುವುದಕ್ಕೆ ಪರಿಹಾರವಾಗಿ ರೆಫ್ರಿಜರೆಟರ್ ಬಂದಿದೆ. ಫ್ರಿಡ್ಜ್ ಅಲ್ಲಿ ತರಕಾರಿ ಚೆನ್ನಾಗಿ ಏನೋ ಇರುತ್ತವೆ. ಆದರೆ ತಾಜಾ ತರಕಾರಿ ಇರುವ ರೀತಿ ಇರೋದಿಲ್ಲ ಎಂಬ ಸಮಸ್ಯೆಯನ್ನು ಆಗಾಗ ಹೇಳುತ್ತಲೆ ಇರುತ್ತಾರೆ. ಈ ಸಮಸ್ಯೆಗೆ ಉತ್ತರವಾಗಿ ನಾವು ಇಲ್ಲಿ ಈ ಲೇಖನವನ್ನು ನಿಮಗಾಗಿ ತಂದಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ತರಕಾರಿಗಳು

ತರಕಾರಿಗಳು

  • Share this:
ಪ್ರತಿ ದಿನದ ಅಡುಗೆಗೆ ಮುಖ್ಯವಾಗಿ ಬೇಕಾಗುವ ಆಹಾರ ಪದಾರ್ಥಗಳೆಂದರೆ ಅವು ತರಕಾರಿಗಳು (Vegetables).  ಆದರೆ ತರಕಾರಿಗಳು ಬೇಗನೆ ಹಾಳಾಗುತ್ತವೆ ಎಂಬ ಮಾತುಗಳನ್ನು ಮನೆಯಲ್ಲಿ ಅಮ್ಮನೋ ಅಕ್ಕನೋ ಅಥವಾ ಮದುವೆಯಾಗಿದ್ದರೆ ಹೆಂಡತಿನೋ ಹೇಳ್ತಾನೆ ಇರ್ತಾರೆ. ಅದಕ್ಕೆ ಈಗ ಎಲ್ಲರ ಮನೆಯಲ್ಲಿ ತರಕಾರಿ ಹಾಳಾಗದೆ ಇರುವುದಕ್ಕೆ ಪರಿಹಾರವಾಗಿ ರೆಫ್ರಿಜರೆಟರ್ (Refrigerator) ಬಂದಿದೆ. ಫ್ರಿಡ್ಜ್ ಅಲ್ಲಿ ತರಕಾರಿ ಚೆನ್ನಾಗಿ ಏನೋ ಇರುತ್ತವೆ. ಆದರೆ ತಾಜಾ ತರಕಾರಿ (Fresh vegetables) ಇರುವ ರೀತಿ ಇರೋದಿಲ್ಲ ಎಂಬ ಸಮಸ್ಯೆಯನ್ನು ಆಗಾಗ ಹೇಳುತ್ತಲೆ ಇರುತ್ತಾರೆ. ಈ ಸಮಸ್ಯೆಗೆ ಉತ್ತರವಾಗಿ ನಾವು ಇಲ್ಲಿ ಈ ಲೇಖನವನ್ನು ನಿಮಗಾಗಿ ತಂದಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಬಹುತೇಕ ಮಹಿಳೆಯರು ನಮ್ಮ ಮನೆಯಲ್ಲಿ ತರಕಾರಿಗಳು ಫ್ರಿಡ್ಜ್ ಅಲ್ಲಿ ಇಟ್ಟರೂ ತಾಜಾ ಇರಲಿಲ್ಲ. ಅದಕ್ಕೆ ಮತ್ತೆ ತರಕಾರಿ ತರೋದಕ್ಕೆ ಬಂದೆ ಎಂದು ಹೇಳುತ್ತಿರುತ್ತಾರೆ. ಈ ತರ ಸಮಸ್ಯೆ ಏಕೆ ಆಗುತ್ತದೆ ಎಂಬುದಕ್ಕೆ ಈ ಲೇಖನದಲ್ಲಿ ಉತ್ತರವನ್ನು ಕಂಡುಹಿಡಿಯೋಣ.

ಗಾಳಿಯಾಡದ ಚೀಲಗಳಲ್ಲಿ ಸಂಗ್ರಹಿಸಿಡುವುದು ಉತ್ತಮ
ಬೀನ್ಸ್ , ನುಗ್ಗೆಕಾಯಿ, ಕುಂಬಳಕಾಯಿ ಹೀಗೆ ಇತರ ತರಕಾರಿಗಳನ್ನು ಕತ್ತರಿಸಿ ಗಾಳಿಯಾಡದ ಚೀಲಗಳಲ್ಲಿ ಇರಿಸಿ ಫ್ರೀಡ್ಜ್ ಅಲ್ಲಿ ಸಂಗ್ರಹಣೆ ಮಾಡಿರುತ್ತಿರಿ. ಆದರೂ ತರಕಾರಿ ಮರುದಿನ ತಾಜಾ ಆಗಿಲ್ಲ. ಎಂದರೆ ಸಹಜವಾಗಿ ಏನಪ್ಪ ಮಾಡೋದು ಹೀಗೆಲ್ಲ ಆದರೆ ಎಂದು ಚಿಂತೆಗೊಳಗಾಗುತ್ತಿರಿ. ಅಲ್ವಾ..? ಅದಕ್ಕೆ ಫ್ರಿಡ್ಜ್​ನಲ್ಲಿ ತರಕಾರಿಗಳನ್ನು ಇರಿಸುವುದಕ್ಕೆ ಮುಂಚೆ ಕೆಲವು ವಿಧಾನಗಳನ್ನು ನೀವು ಅನುಸರಿಸಿದ್ದೆ ಆದರೆ ನಿಮ್ಮ ತರಕಾರಿ ಈಗ ತಾನೇ ಕಿತ್ತುಕೊಂಡು ಬಂದ ಫ್ರೆಶ್ ತರಕಾರಿ ಇದ್ದ ಹಾಗೆ ಇರುತ್ತವೆ. ಹಾಗಿದ್ರೆ ತಡ ಯಾಕೆ ಬನ್ನಿ ಆ ವಿಧಾನಗಳನ್ನು ತಿಳಿಯೋಣ.

ಇದನ್ನೂ ಓದಿ: Cleaning Hacks: ಬೆಳ್ಳಿ ವಸ್ತುಗಳು ಕಪ್ಪಾಗಿದ್ರೆ ಈ ವಸ್ತುಗಳನ್ನು ಬಳಸಿ, ಮ್ಯಾಜಿಕ್ ನೋಡಿ

ಫ್ರೀಡ್ಜ್ ನಲ್ಲಿ ತರಕಾರಿ ತಾಜಾ ಇರುವಂತೆ ಶೇಖರಣೆ ಮಾಡುವ ವಿಧಾನಗಳು ಇಲ್ಲಿವೆ:

  • ಮೊದಲಿಗೆ ಮಾರ್ಕೆಟ್ ನಿಂದ ತಂದ ತರಕಾರಿಗಳನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

  • ಒಲೆ ಮೇಲೆ ಒಂದು ಪಾತ್ರೆ ಇರಿಸಿ ಅದಕ್ಕೆ ನೀರು ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ.

  • ಈಗ ನೀರು ಬಿಸಿಯಾದ ನಂತರ ಒಲೆಯನ್ನು ಆಫ್ ಮಾಡಿ.

  • ಆ ಬಿಸಿ ನೀರಿಗೆ ನೀವು ಕತ್ತರಿಸಿ ಇರಿಸಿಕೊಂಡಿದ್ದ ತರಕಾರಿಗಳನ್ನು ಹಾಕಿ.

  • ಹಾಗೆಯೇ 5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ತರಕಾರಿಗಳನ್ನು ಹಾಗೆಯೇ ಬಿಡಿ.

  • ಇದರ ನಂತರ ಬಿಸಿ ನೀರಿನಲ್ಲಿರುವ ತರಕಾರಿಗಳನ್ನು ಇನ್ನೊಂದು ಪಾತ್ರೆಯಲ್ಲಿರುವ ತಣ್ಣಿರಿಗೆ ವರ್ಗಾಯಿಸಿ.

  • ತಣ್ಣಿರಿನಲ್ಲಿ ಕೂಡ 5 ನಿಮಿಷಗಳ ಕಾಲ ಹಾಗೆಯೇ ಸ್ವಲ್ಪ ಸಮಯ ಬಿಡಿ. ಇದರಿದ ತರಕಾರಿಗಳ ಬಣ್ಣ ತಾಜಾವಾಗಿ ಇರಲು ಸಹಾಯವಾಗುತ್ತದೆ.

  • ಇದರ ನಂತರ ಒಂದು ಸ್ವಚ್ಫವಾದ ಕಾಟನ್ ಬಟ್ಟೆ ತೆಗೆದುಕೊಳ್ಳಿ.

  • ಕಾಟನ್ ಬಟ್ಟೆ ಮೇಲೆ ಈಗಾಗಲೇ ತಣ್ಣಿರಿನಲ್ಲಿ ಇರುವ ತರಕಾರಿಗಳನ್ನು ಸೋಸುವ ಜಾರಿನ ಮೂಲಕ ನೀರನ್ನು ಬೇರ್ಪಡಿಸಿ.

  • ನೀರನ್ನು ಬೇರ್ಪಡಿಸಿದ ನಂತರ ಕತ್ತರಿಸಿದ ತರಕಾರಿಗಳನ್ನು ಆ ಕಾಟನ್ ಬಟ್ಟೆಯ ಮೇಲೆ ಹರಡಿ.

  • ಕಾಟನ್ ಬಟ್ಟೆಯೂ ತರಕಾರಿಯಲ್ಲಿರುವ ನೀರೆಲ್ಲ ಹೀರಿಕೊಳ್ಳುವವರೆಗೂ ಅಲ್ಲಿಯೇ ಬಿಡಿ.

  • ಇದರ ನಂತರ ಜಿಪ್ ಲಾಕ್ ಇರುವ ಬ್ಯಾಗ್ ಗಳಲ್ಲಿ ಈ ಕತ್ತರಿಸಿದ ತರಕಾರಿಗಳನ್ನು ಫ್ರಿಡ್ಜ್ ನಲ್ಲಿ ಶೇಖರಿಸಿ.

  • ಈ ರೀತಿ ಮಾಡಿದರೆ ತರಕಾರಿಗಳು ಬಹಳ ದಿನ ತಾಜಾತನ ದಿಂದ ಇರುತ್ತವೆ.

  • ಆದರೂ ಕೂಡ ಬಹಳ ದಿನ ಫ್ರಿಡ್ಜನಲ್ಲಿ ಶೇಖರಿಸಿ ಇರಿಸಿದ ತರಕಾರಿ ಆರೋಗ್ಯಕ್ಕೆ ಅಷ್ಟೊಂದು ಉತ್ತಮವಲ್ಲ.


ಇದನ್ನೂ ಓದಿ: Restaurants Near Me: ಬೆಂಗಳೂರಿನ ಈ ರೆಸ್ಟೊರೆಂಟ್​ಗಳಲ್ಲಿ ಡಿಫರೆಂಟ್​ ಟೈಪ್​ ಥಾಲಿ ಸಿಗುತ್ತಂತೆ

ಹಸಿ ತರಕಾರಿಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಫ್ರೀಡ್ಜನಲ್ಲಿ ಯಾವಾಗಲೂ ಶೇಖರಿಸಿ ಇರಿಸಿದ ತರಕಾರಿ ಸೇವನೆ ಕೂಡ ಅಷ್ಟು ಉತ್ತಮವಲ್ಲ. ಸಾಧ್ಯವಾದಷ್ಟು ದಿನನಿತ್ಯ ತಾಜಾ ತರಕಾರಿ ಕೊಂಡು ಅವುಗಳನ್ನೆ ನಿಮ್ಮ ಆಹಾರದಲ್ಲಿ ಬಳಸಿ.
Published by:Ashwini Prabhu
First published: