Baby Sleep- ರಾತ್ರಿಹೊತ್ತು ಮಗು ಹಾಯಾಗಿ ನಿದ್ರಿಸಬೇಕೆ? ಇಲ್ಲಿದೆ ಸುಲಭ ಉಪಾಯ

ರಾತ್ರಿ ನಿಮ್ಮ ಮಗು ಮಲಗದೇ ರಚ್ಚೆ ಹಿಡಿಯುತ್ತಿದೆಯೇ? ಮಗುವನ್ನು ಎಳೆ ಬಿಸಿಲಿನಲ್ಲಿ ಆಡಲು ಬಿಡುವುದು, ಒಳ್ಳೆಯ ಕ್ಯಾಲೋರಿಯುಕ್ತ ಆಹಾರ ಕೊಡುವುದು ಇವೇ ಮುಂತಾದ ಕ್ರಮಗಳನ್ನ ಅನುಸರಿಸಿ ನೋಡಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹುಟ್ಟಿದ ಮಗುವಿನಿಂದ ಹಿಡಿದು, ವರ್ಷವಾಗೋವರೆಗೆ ಮಕ್ಕಳು ಹೆಚ್ಚಿನ ಸಮಯವನ್ನು ನಿದ್ರಿಸಿಯೇ (baby sleeping) ಕಳೆಯುತ್ತವೆ. ಅಗತ್ಯದಷ್ಟು ನಿದ್ರೆಯಾಗಿಲ್ಲವೆಂದರೆ ಕಿರಿಕಿರಿ (annoying) ಮಾಡುತ್ತಿರುತ್ತವೆ. ಅದರಲ್ಲಿಯೂ 4-6 ತಿಂಗಳ ಮಕ್ಕಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಬಾಧಿಸುತ್ತದೆ. ಹಾಗಾಗಿ ಮಗುವಿನ ನಿದ್ರೆಗೆ ಪೋಷಕರು ಹೆಚ್ಚು ತಲೆಕೆಡಿಸಿಕೊಳ್ಳಲೇಬೇಕಿದೆ. ಮಗುವಿನ ರಾತ್ರಿ ಆಹಾರವನ್ನು(Reduce food) ಕಡಿಮೆ ಮಾಡಿ ಚೆನ್ನಾಗಿ ನಿದ್ದೆ ಮಾಡಬೇಕಾದ್ರೆ ಪೋಷಕರು ಕೆಲ ಟ್ರಿಕ್ಸ್‌ಗಳನ್ನು ಪಾಲಿಸಲೇಬೇಕಾಗಿದೆ.

  ಕೆಲವೊಮ್ಮೆ ಜ್ವರ ಮತ್ತು ಕೆಮ್ಮು-ಕಫದಿಂದಲೂ ಮಕ್ಕಳು ಸರಿಯಾಗಿ ನಿದ್ರಿಸುವುದಿಲ್ಲ. ಸಂಶೋಧನೆ ಪ್ರಕಾರ ಮಕ್ಕಳು ಹೊಟ್ಟೆ ತುಂಬಾ ತಿನ್ನದೇ ಹೋದರೆ, ನಿದ್ದೆಯಲ್ಲಿ ಮೂತ್ರ ಮಾಡಿದರೆ ಅಥವಾ ಪಚನಕ್ರಿಯೆಗೆ ತೊಂದರೆಯಾಗಿದೆ ಎಂದರೆ ರಾತ್ರಿ ಪದೆ ಪದೇ ಏಳುತ್ತವೆ ಎನ್ನಲಾಗಿದೆ. ಇತ್ತೀಚೆಗೆ ಉದ್ಯೋಗಸ್ಥ ಪೋಷಕರಿಗೆ ಮಕ್ಕಳಿಗೆ ನಿದ್ರೆ ಹತ್ತಿಸುವುದೇ ನಿಜಕ್ಕೂ ಹರಸಾಹಸದ ಕೆಲಸ. ಬಹುತೇಕ ಮಕ್ಕಳು ಬೆಳಗಿನ ಸಮಯದಲ್ಲಿ ನಿದ್ರೆ ಹೊಡೆದು ಇಡೀ ರಾತ್ರಿ ಎಚ್ಚರವಾಗಿದ್ದು ಪೋಷಕರ ನಿದ್ರೆಯನ್ನು ಹಾಳು ಮಾಡುತ್ತವೆ.

  ಇದನ್ನು ಓದಿ: Baby Nightwear: ನಿಮ್ಮ ಮಗುವಿನ ರಾತ್ರಿ ಉಡುಪು ಹೀಗಿದ್ದರೆ ಆರಾಮಾಗಿ ನಿದ್ದೆ ಮಾಡುತ್ತೆ..

  ಮಗುವಿಗೆ ನಿದ್ದೆ ಮುಖ್ಯ(Sleep is important for the baby): 
  ನಿಮ್ಮ ಮುದ್ದು ಮಗುವನ್ನು ಹೆಚ್ಚಾಗಿ ಮುದ್ದಿಸುತ್ತಾ ಮನೆಯಲ್ಲೇ ಕೂಡಿ ಹಾಕಬೇಡಿ. ಸಾಧ್ಯವಾದಷ್ಟು ಮನೆಯ ಹೊರಗಡೆ ಎಳೆ ಬಿಸಿಲಿನಲ್ಲಿ ಆಟವಾಡಲು ಬಿಡಿ. ಇದರಿಂದ ಹೆಚ್ಚಾಗಿ ಸೂರ್ಯನ ಕಿರಣ ನಿಮ್ಮ ಮಗುವಿನ ಮೇಲೆ ಬಿದ್ದು ಮಗುವಿನ ಮೆಲಟೋನಿನ್ (Melatonin) ಹಾರ್ಮೋನ್ ಸ್ವಲ್ಪ ಹೊತ್ತಿನ ತನಕ ನಿಷ್ಕ್ರಿಯಗೊಳ್ಳುತ್ತವೆ.
  ಮಗುವಿನಲ್ಲಿ ಬೆಳಗಿನ ಸಮಯದಲ್ಲಿ ಈ ಹಾರ್ಮೋನ್ ನಿಷ್ಕ್ರಿಯ ಆಗುವುದರಿಂದ ರಾತ್ರಿಯ ಸಮಯದಲ್ಲಿ ನಿಮ್ಮ ಮಗು ಬಹಳ ಹೊತ್ತಿನ ತನಕ ನಿದ್ರೆ ಮಾಡಬಹುದು. ಇದರಿಂದ ನಿಮ್ಮ ಮಗುವಿನ ಆರೋಗ್ಯದಲ್ಲಿ ಉತ್ತಮ ಅಭಿವೃದ್ಧಿ ಕಾಣಬಹುದು. ಹಾಗಾಗಿ ಆಗಾಗ ಆಹಾರ ಕೊಡುವ ಕ್ರಮದಿಂದ ತಪ್ಪಿಸಿ.

  ಬೆಳವಣಿಗೆಗೆ ಕ್ಯಾಲೊರಿಗಳು ಬೇಕಾಗಬಹುದು(Calories may be needed)
  ಒಟ್ಟಿನಲ್ಲಿ ಮಗು ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡಲು ಅವರ ಆಹಾರ ಕ್ರಮ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಬಹುದು. ರಾತ್ರಿ ವೇಳೆ ಎರಡು ಬಾರಿ ಎಂದು ಎದೆ ಹಾಲು ಕುಡಿಯುವ ಮಕ್ಕಳಿಗೆ ಸಮಸ್ಯೆ ಏನು ಎಂಬುದು ಅನೇಕ ಪೋಷಕರಿಗೆ ತಿಳಿದೇ ಇಲ್ಲ ಬಿಡಿ. ಇನ್ನು ನಿಮ್ಮ ಮಗು ಚೆನ್ನಾಗಿ ಬೆಳೆಯುತ್ತಿದೆಯೇ? ಉತ್ತರ ಇಲ್ಲ ಎಂದಾದರೆ, ನಿಮ್ಮ ಮಗುವಿಗೆ ರಾತ್ರಿಯಲ್ಲಿ ಆ ಕ್ಯಾಲೊರಿಗಳು ಬೇಕಾಗಬಹುದು. ನಿಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಖಚಿತವಿಲ್ಲದಿದ್ದರೆ, ದಯವಿಟ್ಟು ನಿಮ್ಮ ಮಕ್ಕಳ ವೈದ್ಯರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳುವುದು ಉತ್ತಮ.

  ಸ್ತನಪಾನ ಮಾಡಿ(Breastfeed)
  ನಿಮ್ಮ ಮಗುವಿನ ವಯಸ್ಸು ಎಷ್ಟು? ಬಾಟಲ್‌ ಫಿಡ್‌ ಮಾಡುವ ಶಿಶುಗಳು ಸಾಮಾನ್ಯವಾಗಿ 6 ​​ತಿಂಗಳ ವಯಸ್ಸಿನಲ್ಲಿ ರಾತ್ರಿ ಆಹಾರವನ್ನು ತ್ಯಜಿಸಬಹುದು. ಸ್ತನ್ಯಪಾನ ಶಿಶುಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ, ಅದು ಒಂದು ವರ್ಷದವರೆಗೆ ಹಾಲು ಸೇವಿಸಬಹುದು. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಆರು ತಿಂಗಳವರೆಗೆ ವಿಶೇಷ ಸ್ತನಪಾನವನ್ನು ಶಿಫಾರಸು ಮಾಡುತ್ತದೆ, ಇತರೆ ಪೂರಕ ಆಹಾರಗಳ ಜೊತೆಗೆ ಒಂದು ವರ್ಷದವರೆಗೆ ಸ್ತನ್ಯಪಾನ ಉತ್ತಮ ಎಂದು ಹೇಳುತ್ತದೆ. ರಾತ್ರಿವೇಳೇ ಶ್ರೂಶೆಷೆ ಮಾಡುವ ತಾಯಿಯಂದಿರು ಕೂಡ ನಿದ್ರೆ ಚೆನ್ನಾಗಿ ಮಾಡಿದರೇ ಮಾತ್ರ ಮಗುವಿಗೆ ಎದೆಹಾಲು ಚೆನ್ನಾಗಿ ಬರುತ್ತದೆ ಎಂದು ತಜ್ಷರು ಹೇಳುತ್ತಾರೆ. ಹಾಗಾಗಿ ಗಾಢಾ ನಿದ್ರೆಯಲ್ಲಿರುವ ಮಗುವನ್ನು ಎಬ್ಬಿಸಿ ಆಹಾರ ಕೊಡುವ ಅಭ್ಯಾಸ ಬೇಡ ಎನ್ನುತ್ತಾರೆ. ಮಗು ಬೆಳಯುತ್ತಿದ್ದಂತೆ ಒಂದೊಂದೆ ಆಹಾರ ನೀಡುತ್ತ,ರಾತ್ರಿ ಹೊತ್ತು ಹಂತ ಹಂತವಾಗಿ ಆಹಾರ ಕೊಡುವುದನ್ನು ನಿಲ್ಲಿ ಸುಖ ನಿದ್ರೆಗೆ ಸಹಾಯ ಮಡುವುದು ಪೋಷಕರ ಕರ್ತವ್ಯ ಕೂಡ.

  ಇದನ್ನು ಓದಿ: Baby Sleeping Position: ರಾತ್ರಿ ಹೊತ್ತು ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಬೇಡಿ..

  ಸೂಕ್ತ ಆಹಾರ(Appropriate food)
  ನಿಧಾನವಾಗಿ ಎದೆ ಹಾಲು ನಿಲ್ಲಿಸಿ, ಮಗುವಿಗೆ ಸೂಕ್ತ ಎನಿಸುವ ಆಹಾರ ತಿನಿಸಲು ಆರಂಭಿಸುವುದು ಅಗತ್ಯ. ಬೆಳಿಗ್ಗಿನ ಸಮಯದಲ್ಲಿ ಮಕ್ಕಳಿಗೆ ಸಾಕಾಗುವಷ್ಟು ಆಹಾರ ನೀಡುವುದು ರೂಡಿಸಿಕೊಳ್ಳಿ , ಸಂಜೆಯೂ ಹಾಲು ಅಥವಾ ಇತರೆ ದ್ರವಹಾರದ ಬದಲು, ಘನಹಾರ ನೀಡಿದರೆ ರಾತ್ರಿ ಹೊತ್ತಿಗೆ ಜೀರ್ಣಿಸಿಕೊಂಡು ಸುಧಾರಿಸಿಕೊಳುತ್ತದೆ.ತಾಯಿಯ ಧ್ವನಿ ಕೇಳಿದರೆ ಮಕ್ಕಳು ಅಳುವುದನ್ನು ನಿಲ್ಲಿಸಿ ಮಗು ಸಂತಸಗೊಳ್ಳುತ್ತದೆ. ಹಾಗಾಗಿ ಅಮ್ಮನ ಸಮೀಪ ಸಾಕಷ್ಟು ಸಮಯಕಳೆಯುವಂತೆ ನೋಡಿಕೊಳ್ಳಿ.
  ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿದರೆ, ಮಕ್ಕಳು ನಿರಾಳವಾಗಿ, ನೆಮ್ಮದಿಯಾಗಿ ನಿದ್ರಿಸುತ್ತವೆ. ಬೆಳಿಗ್ಗೆ ಬಿಸಿಲು ನೋಡಿಕೊಂಡು ಸ್ನಾನ ಮಾಡಿಸಿ, ಮೃದುವಾದ ಹತ್ತಿ ಅಥವಾ ಹಿತವೆನಿಸುವ ಬಟ್ಟೆಯನ್ನು ತೊಡಿಸಿ, ಮಲಗಿಸಿ. ಚಳಿಗಾಲದಲ್ಲಿ ಚಳಿಯಾಗದಂತೆ, ಬೇಸಿಗೆಯಲ್ಲಿ ಸೆಖೆ ಕಾಡದಂಥ ಬಟ್ಟೆಗಳಿಗೆ ಆದ್ಯತೆ ನೀಡುವುದು ಉತ್ತಮ
  Published by:vanithasanjevani vanithasanjevani
  First published: