ಬಾಲ್ಯದಿಂದಲೂ ನೀವು ಉಗುರು(Nails) ಕಚ್ಚೋದು ಕೆಟ್ಟ ಅಭ್ಯಾಸ(Bad Habits) ಎಂದು ಹಿರಿಯರು ಹೇಳ್ತಿರೋದನ್ನ ಕೇಳಿಯೇ ಇರ್ತೀರಿ. ಯಾಕಂದ್ರೆ ನಮ್ಮ ದೇಹದಲ್ಲಿ(Body) ಅತಿ ಹೆಚ್ಚು ಸಾಂದ್ರತೆಯಲ್ಲಿ ಬ್ಯಾಕ್ಟೀರಿಯಾಗಳು(Bacteria) ನೆಲೆಸುವ ಸ್ಥಳ ಉಗುರುಸಂದಿ. ಇದಕ್ಕೇ ಉಗುರನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಿರುವುದು ಅಗತ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇರುತ್ತದೆ. ಆದರೆ ವಯಸ್ಸಾದಂತೆ ಈ ಅಭ್ಯಾಸ ಕಡಿಮೆಯಾಗುತ್ತಾ ಹೋಗುತ್ತದೆ, ಹೋಗಬೇಕು. ಆದರೆ ಕೆಲವರಲ್ಲಿ ಮಾತ್ರ ಇದು ಬಹುಕಾಲದವರೆಗೆ ಉಳಿದುಕೊಂಡಿರುತ್ತದೆ.ಇನ್ನು ನಾವು ಆಹಾರವನ್ನು(Food) ಸೇವಿಸುವಾಗ ಅಜಾಗರೂಕತೆಯಿಂದ ಉಗುರು ನಮ್ಮ ದೇಹ ಸೇರಿದ್ರೆ ಕರುಳಿಗೆ ತೊಂದರೆಯಾಗುತ್ತೆ. ಈ ಕಾರಣದಿಂದಾಗೇ ಉಗುರನ್ನು ಮನೆಯ(Home) ಒಳಗೆ ಕತ್ತರಿಸಬಾರದು ಎನ್ನಲಾಗುತ್ತೆ. ವೈದ್ಯಶಾಸ್ತ್ರದ ಪ್ರಕಾರ, ಉಗುರು ಕಚ್ಚುವುದು ಕ್ಯಾಲ್ಸಿಯಂ ಕೊರತೆಯ ಲಕ್ಷಣ ಎನ್ನಲಾಗುತ್ತೆ. ಕೆಲವರು ಮಾಡಲು ಕೆಲಸವಿಲ್ಲದೇ ಕೂತಾಗ, ಇಲ್ಲವೇ ತೀವ್ರ ಒತ್ತಡದಲ್ಲಿದ್ದಾಗ ಉಗುರು ಕಚ್ಚುವುದನ್ನು ರೂಢಿಸಿಕೊಳ್ತಾರೆ. ಇದು ಒತ್ತಡದಿಂದ ಹೊರಬರುವ ಒಂದು ಕ್ರಿಯೆ ಅಷ್ಟೇ. ಉಗುರು ಕಚ್ಚುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಉಂಟಾಗುತ್ತವೆ.
ಉಗುರು ಕಚ್ಚಲು ಕಾರಣ ಏನು..?
1)ತುಂಬಾ ಹತಾಶೆ, ಬೇಸರ ಅಥವಾ ತಾಳ್ಮೆ ಕಳೆದುಕೊಂಡರೆ ಆಗ ಉಗುರು ಕಚ್ಚುವ ಮೂಲಕ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿರಬಹುದು
2)ಕೆಲವೊಂದು ಸಲ ತುಂಬಾ ಏಕಾಗ್ರತೆಯಿಂದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಉಗುರನ್ನು ಗೊತ್ತಿಲ್ಲದೆ ಕಚ್ಚಬಹುದು
ಇದನ್ನೂ ಓದಿ: ತೂಕ ಇಳಿಕೆಯಿಂದ ಹಿಡಿದು, ಹಲ್ಲಿನ ಬಿಳುಪಿನವರೆಗೆ ಅಡುಗೆ ಸೋಡಾದಿಂದ ಇದೆ ಹತ್ತಾರು ಲಾಭ
3)ಆಂತಕ ಮತ್ತು ಧೈರ್ಯ ಕುಂದಿರುವುದಕ್ಕೆ ಇದು ತಾತ್ಕಾಲಿಕ ಪರಿಹಾರ
4)ಕೆಲವು ಸಂದರ್ಭದಲ್ಲಿ ಇದು ಎಡಿಎಚ್ ಡಿ, ಖಿನ್ನತೆ, ಒಸಿಡಿ ಮತ್ತು ಆತಂಕದಂತಹ ಮಾನಸಿಕ ಆರೋಗ್ಯದ ಸಮಸ್ಯೆಯಾಗಿರಬಹುದು
ಉಗುರು ಕಚ್ಚೋದ್ರಿಂದ ಆಗುವ ಅಪಾಯವೇನು..?
1)ಉಗುರುಗಳನ್ನ ಕಚ್ಚೋದ್ರಿಂದ ಮುಖದಲ್ಲಿ ಕೆಂಪು ಕಲೆಗಳು ಉಂಟಾಗೋದ್ರ ಜೊತೆಗೆ ಮುಖ ಊದಿಕೊಳ್ಳುವ ಅಪಾಯವಿದೆ. ಇದು ಮಾತ್ರವಲ್ಲದೇ ಉಗುರುಗಳ ಕೆಳಗೆ ಬ್ಯಾಕ್ಟೀರಿಯಾ ಸೋಂಕು ತಗುಲಬಹುದು. ಹೀಗಾಗಿ ಈ ಕೆಟ್ಟ ಅಭ್ಯಾಸದಿಂದ ದೂರ ಇರೋದು ಒಳ್ಳೆಯದು. ಉಗುರು ಕಚ್ಚುವ ಅಭ್ಯಾಸದಿಂದಾಗಿ ಪರೋನಿಕಿಯಾದಂತಹ ಬ್ಯಾಕ್ಟೀರಿಯಾಗಳು ದೇಹವನ್ನ ಸೇರುತ್ತವೆ.
ಇದು ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಕೀವು ಉಂಟಾಗಬಹುದು. ಇಷ್ಟು ಮಾತ್ರವಲ್ಲದೇ ಕೆಲ ಶ್ವಾಶತ ನ್ಯೂನ್ಯತೆಗೂ ಈ ಅಭ್ಯಾಸ ಕಾರಣವಾಗಬಹುದು.
2)ಬಾಲ್ಯದಲ್ಲಿಯೇ ಮಕ್ಕಳಿಂದ ಈ ಅಭ್ಯಾಸವನ್ನ ತಪ್ಪಿಸದೇ ಹೋದಲ್ಲಿ ವಕ್ರದಂತ ಸಮಸ್ಯೆಗೂ ಈ ಅಭ್ಯಾಸ ಕಾರಣವಾಗಿಸುತ್ತೆ. ಉಗುರನ್ನ ಕಚ್ಚೋಕೆ ನಾವು ಒಂದರಿಂದ ಎರಡು ಹಲ್ಲನ್ನ ಮಾತ್ರ ಬಳಕೆ ಮಾಡಿಕೊಳ್ತೇವೆ.
ನೀವು ಪದೇ ಪದೇ ಆ ಹಲ್ಲಿನಿಂದ ಉಗುರು ಕಚ್ಚೋದ್ರಿಂದ ಹಲ್ಲಿನ ಆಕಾರವೇ ಮಾರ್ಪಾಡಾಗಿ ಬಿಡುತ್ತೆ. ಉಗುರುಗಳನ್ನ ಹಲ್ಲಿನಿಂದ ಕಚ್ಚಿದ ಬಳಿಕ ಅದರ ತುಂಡುಗಳು ಬಾಯಿಯಲ್ಲೇ ಉಳಿದು ಬಿಡುತ್ತೆ. ಮೊನಚಾದ ಉಗುರು ನಿಮ್ಮ ವಸಡಿಗೆ ಗಾಯ ಮಾಡಬಹುದು. ಇದರಿಂದ ವಸಡಿನಲ್ಲಿ ರಕ್ತ ಬರುತ್ತದೆ.
3)ಉಗುರು ಕಚ್ಚುವುದರಿಂದ ಆಗ ಹೊರಪೊರೆ ಮತ್ತು ಅಂಗಾಂಶಗಳಿಗೆ ಹಾನಿ ಆಗುವುದು. ಇದರಿಂದ ದೀರ್ಘಕಾಲಕ್ಕೆ ಯಾವುದೇ ಹಾನಿ ಆಗದೆ ಇದ್ದರೂ ಉಗುರಿನ ಸುತ್ತಲು ಊತವು ಕಂಡುಬರುವುದು
4)ಉಗುರು ಕಚ್ಚುವ ಅಭ್ಯಾಸದಿಂದ ಕೆಲವು ದುರ್ನಾತ ಬೀರುವ ಬ್ಯಾಕ್ಟೀರಿಯಾಗಳೂ ಬಾಯಿಯೊಳಗೆ ದಾಟಿಕೊಂಡು ನಾಲಿಗೆಯ ಹಿಂಭಾಗ, ನಾಲಿಗೆಯ ಹಿಂಭಾಗದ ಬದಿ, ಗಂಟಲ ಮೇಲ್ಭಾಗ, ಬಾಯಿಯ ಮೇಲ್ಭಾಗ ಕಿರುನಾಲಿಗೆಯ ಅಕ್ಕಪಕ್ಕದಲ್ಲೆಲ್ಲಾ ಅಂಟಿಕೊಂಡು ತಮ್ಮ ವಠಾರವನ್ನು ಬೆಳೆಸುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ತೆಳುವಾದ ಬಿಳಿ ಪದರವೊಂದರಂತೆ ಕಾಣುತ್ತದೆ.
5)ಉಗುರು ಮತ್ತು ಕೂದಲು ಸತತವಾಗಿ ಬೆಳೆಯುತ್ತಿರುವ ಅಂಗಗಳು. ಉಗುರಿನ ಬುಡದಲ್ಲಿರುವ ಅತಿ ಸೂಕ್ಷ್ಮ ಅಂಗಾಂಶದಿಂದ ಉಗುರು ಬೆಳೆಯಲು ಅಗತ್ಯವಾದ ಕೆರಾಟಿನ್ ಎಂಬ ವಸ್ತು ದೊರಕುತ್ತದೆ. ಒಂದು ವೇಳೆ ಸತತವಾದ ಉಗುರು ಕಚ್ಚುವ ಅಭ್ಯಾಸವಿದ್ದರೆ ಈ ಅಂಗಾಂಶವೂ ಘಾಸಿಗೊಳ್ಳುತ್ತದೆ.
ಒಂದು ಹಂತದಲ್ಲಿ ರಿಪೇರಿಯಾಗದಷ್ಟು ಘಾಸಿಯಾಗಿ ಉಗುರಿನ ಬೆಳವಣಿಗೆ ನಿಂತೇ ಹೋಗುತ್ತದೆ. ಇರುವ ಉಗುರು ಉದುರಿ ಬೆರಳುಗಳು ಮುಟ್ಟಲೂ ಆಗದಷ್ಟು ನೋವಿನಿಂದ ಕೂಡುತ್ತವೆ.
6)ಉಗುರು ಕಚ್ಚೋದ್ರಿಂದ ದೇಹಕ್ಕೆ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ. ಈ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ.ಇದರಿಂದ ಹೊಟ್ಟೆನೋವು, ಮಲಬದ್ಧತೆ, ಆಸಿಡಿಟಿಯಂತಹ ಸಮಸ್ಯೆಗಳು ಕಂಡುಬರುತ್ತದೆ.
ಉಗುರು ಕಚ್ಚುವ ಅಭ್ಯಾಸ ಬಿಡಲು ಏನು ಮಾಡಬೇಕು..?
1)ಆಗಾಗ ಉಗುರು ನೀಟ್ ಆಗಿ ಕತ್ತರಿಸಿಕೊಂಡರೆ ಕಚ್ಚುವ ಪ್ರಮೇಯವೇ ಬರದು.
2) ಮತ್ತೊಂದು ಉತ್ತಮ ಕೆಲಸವೆಂದರೆ, ನಿಮ್ಮಷ್ಟಕ್ಕೆ ನೀವೇ ದೃಢ ನಿರ್ಧಾರ ಮಾಡಿಕೊಳ್ಳಬೇಕು. ಪ್ರತೀ ಬಾರಿ ನಿಮ್ಮ ಬೆರಳು ಬಾಯಿಯ ಹತ್ತಿರಕ್ಕೆ ಹೋದಾಗಲೂ ಇಲ್ಲ ನಾನು ಉಗುರು ಕಚ್ಚುವುದನ್ನು ಬಿಡುತ್ತೇನೆ ಎಂಬ ಪ್ರತಿಜ್ಞೆ ನೆನಪಾಗಬೇಕು
3)ಅಭ್ಯಾಸವನ್ನು ತೊಡೆದುಹಾಕಲು, ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ.
ಇದನ್ನೂ ಓದಿ: ಗರ್ಭಿಣಿಯರೇ ಎಚ್ಚರ.. Cold Drinks ಸೇವಿಸೋದರಿಂದ ಇಷ್ಟೆಲ್ಲಾ ಅಡ್ಡ ಪರಿಣಾಮಗಳಿವೆ!
4)ಹೆಚ್ಚಾಗಿ ನೈಲ್ ಪಾಲಿಷ್ ತುಂಬಾ ಕಹಿಯಾಗಿ ಇರುವುದು. ನೈಲ್ ಪಾಲಿಷ್ ಹಾಕಿದ ಬೆರಳನ್ನು ನೀವು ಬಾಯಿಗೆ ಇಟ್ಟ ವೇಳೆ ಅದು ಕಹಿಯಾಗುವುದು.
5)ನೀವು ಬಟ್ಟೆಯ ಗ್ಲೌಸ್ ಧರಿಸಿದರೆ ಉಗುರು ಕಚ್ಚುವುದು ನಿಲ್ಲುವುದು.
6)ಚೂಯಿಂಗ್ ಗಮ್ ಜಗಿಯುವ ಮೂಲಕ ನೀವು ಬೇರೆ ಅಭ್ಯಾಸ ರೂಢಿಸಿಕೊಳ್ಳಬಹುದು. ಕೈಯಲ್ಲಿ ಒತ್ತಡ ನಿವಾರಣೆಯ ಚೆಂಡು ಹಿಡಿದುಕೊಳ್ಳಬಹುದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ