• Home
  • »
  • News
  • »
  • lifestyle
  • »
  • Bed Wetting: ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದರೆ ಚಿಂತಿಸಬೇಡಿ, ಈ ಸಲಹೆ ಪಾಲಿಸಿ

Bed Wetting: ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದರೆ ಚಿಂತಿಸಬೇಡಿ, ಈ ಸಲಹೆ ಪಾಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಗು ಚಿಕ್ಕದಾಗಿದ್ದಾಗ ಅದರ ಮೆದುಳು ಹಾಗೂ ಮೂತ್ರಕೋಶದ ಮಧ್ಯದ ಸಂವಹನ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಆದರೆ ಮೂರರಿಂದ ಐದರ ವರ್ಷದವರಾಗಿದ್ದಾಗ ಮಗುವಿನ ತಾಯಿಯೇ ಪ್ರಾಥಮಿಕವಾಗಿ ಮಗುವಿಗೆ ಶೌಚಾಲಯದ ಬಳಕೆಯ ಬಗ್ಗೆ ಅರಿವು ಮೂಡಿಸುವುದಲ್ಲದೆ ತರಬೇತಿಯನ್ನೂ ಸಹ ನೀಡುತ್ತಾಳೆ.

  • Share this:

ಹಾಸಿಗೆ ಒದ್ದೆ ಮಾಡುವುದು ಅಥವಾ ಮಲಗಿದ್ದಾಗ ಹಾಸಿಗೆಯಲ್ಲೆ (Bed) ಮೂತ್ರ ವಿಸರ್ಜಿಸುವಿಕೆ ಎಂಬುದು ಒಂದು ಸಹಜ ಆರೋಗ್ಯದ ಸ್ಥಿತಿಯಾಗಿದ್ದು ಇದು ಹೆಚ್ಚಾಗಿ ಆರರಿಂದ ಹದಿನೈದು ಪ್ರಾಯದವರೆಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗಾಗಿ ಅಂತಹ ಮಕ್ಕಳ ಪೋಷಕರ ಬಳಿ  ಕೇಳಿಕೊಳ್ಳುವುದೇನೆಂದರೆ, ನಿಮ್ಮ ಮಕ್ಕಳು (Children) ಆ ಚಿಕ್ಕ ವಯಸ್ಸಿನಿಂದ ಹಿಡಿದು ಹದಿನಾರು ವರ್ಷದವರೆಗಿನ ಅವಧಿಯಲ್ಲಿ ದಿನಕ್ಕೆ ಒಂದು ಬಾರಿ, ಇಲ್ಲವೆ ವಾರಕ್ಕೆ ಎರಡು ಬಾರಿ ಅಥವಾ ಮಾಸಿಕವಾಗಿ ಹಲವು ದಿನಗಳ ಕಾಲ ರಾತ್ರಿ (Night) ಮಲಗಿದ್ದಾಗ ಮೂತ್ರ (Urine) ಮಾಡುತ್ತಿದ್ದರೆ ಅದನ್ನು ಒಂದು ಅನಾರೋಗ್ಯಕರ ಪ್ರಕ್ರಿಯೆ ಎಂದು ತಿಳಿಯಿರಿ. ಆ ಪ್ರಕ್ರಿಯೆಯಿಂದ ಮಕ್ಕಳನ್ನು ಹೊರತರುವುದು ಹೇಗೆ ಎಂಬುದರ ಕುರಿತು ಆಲೋಚಿಸಿ.


ಆರು ವರ್ಷದಿಂದ ಹಿಡಿದು ಹದಿನೈದು ವರ್ಷದವರೆಗೆ ಕಾಲಿಡುವ ತನಕ ಮಕ್ಕಳಲ್ಲಿ ಈ ಹಾಸಿಗೆ ಒದ್ದೆ ಮಾಡುವಂತಹ ಪ್ರಕ್ರಿಯೆಯಲ್ಲಿ ಗಮನಾರ್ಹವಾಗಿ ಸುಧಾರಣೆ ಬರುವ ಸಾಧ್ಯತೆಯಿದೆಯಾದರೂ ಎಲ್ಲ ಮಕ್ಕಳಲ್ಲೂ ಈ ಸುಧಾರಣೆ ಬರುತ್ತದೆನ್ನಲಾಗುವುದಿಲ್ಲ. ಹಾಗಾಗಿ, ಅಂತಹ ಮಕ್ಕಳನ್ನು ಪೋಷಕರಾದವರು ಗುರುತಿಸುವುದು  ಅವಶ್ಯಕವಾಗಿದೆ.


ಹೀಗೆ ಆಗಲು ಕಾರಣ ಇಲ್ಲಿದೆ


ಮಗು ಚಿಕ್ಕದಾಗಿದ್ದಾಗ ಅದರ ಮೆದುಳು ಹಾಗೂ ಮೂತ್ರಕೋಶದ ಮಧ್ಯದ ಸಂವಹನ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಆದರೆ ಮೂರರಿಂದ ಐದರ ವರ್ಷದವರಾಗಿದ್ದಾಗ ಮಗುವಿನ ತಾಯಿಯೇ ಪ್ರಾಥಮಿಕವಾಗಿ ಮಗುವಿಗೆ ಶೌಚಾಲಯದ ಬಳಕೆಯ ಬಗ್ಗೆ ಅರಿವು ಮೂಡಿಸುವುದಲ್ಲದೆ ತರಬೇತಿಯನ್ನೂ ಸಹ ನೀಡುತ್ತಾಳೆ. ಆದರೆ ತಾಯಿ ನೀಡುವ ಈ ತರಬೇತಿ ದಿನದ ಸಮಯದಲ್ಲಿ ಅನ್ವಯವಾಗುವಂತಹ ನಿಸರ್ಗಕ್ರಿಯೆಗೆ ಮಾತ್ರವೇ ಅನ್ವಯಿಸಲ್ಪಟ್ಟಿರುತ್ತದೆ.


ದಿನದ ಅವಧಿಯಲ್ಲಿ ಮಕ್ಕಳಿಗೆ ಅರಿವಿರುತ್ತದೆ


ಹಾಗಾಗಿ ದಿನದ ಸಮಯದಲ್ಲಿ ಮೂತ್ರ ವಿಸರ್ಜನೆಯಂತಹ ಕ್ರಿಯೆಗಳ ಬಗ್ಗೆ ನಮಗೆ ಮನೆಯಲ್ಲಿ ಇತರೆ ಹಿರಿಯರಿಂದ ಆಚರಿಸಿಕೊಂಡು ಬರಲಾಗುತ್ತಿರುವಂತಹ ಪ್ರವೃತ್ತಿ, ವರ್ತನೆ, ಆಚರಣೆಯ ಬಗ್ಗೆ ಮೆದುಳಿನಲ್ಲಿ ವಿಷಯಗಳು ಅಚ್ಚಳಿಯದೆ ಮುದ್ರಿಸಲ್ಪಟ್ಟಿರುತ್ತವೆ. ಹಾಗಾಗಿ ದಿನದ ಸಮಯದಲ್ಲಿ ಮೂತ್ರದ ಕರೆ ಬಂದಾಗ ಅದನ್ನು ಎಲ್ಲಿ ಮತ್ತು ಹೇಗೆ ವಿಸರ್ಜಿಸಬೇಕೆಂಬುದರ ಬಗ್ಗೆ ಮಕ್ಕಳಿಗೆ ಗೊತ್ತಾಗಿಯೇ ಬಿಡುತ್ತದೆ.


ರಾತ್ರಿ ಮಾತ್ರ ಹೀಗಾಗುವುದು ಏಕೆ?


ಆದರೆ, ರಾತ್ರಿಯ ವಿಷಯದಲ್ಲಿ ಏನಾಗಬಹುದು? ಏಕೆಂದರೆ ರಾತ್ರಿಯ ಸಮಯದಲ್ಲಿ ನಾವು ಆಳವಾದ ನಿದ್ರೆಯಲ್ಲಿರುತ್ತೇವೆ. ಹಾಗಾಗಿ, ಮೂತ್ರಕೋಶ ಹಾಗೂ ಮೆದುಳಿನ ಮಧ್ಯೆ ತಾಳ ಪೂರ್ಣವಾಗಿ ಏರ್ಪಟ್ಟಿರುವುದಿಲ್ಲ. ಹಾಗಾಗಿ ಹಾಸಿಗೆ ಒದ್ದೆ ಮಾಡುವುದು ಸಾಮಾನ್ಯವಾದಂತಾಗಿ ಬಿಡುತ್ತದೆ. ಬಹಳಷ್ಟು ಪೋಷಕರು ಹಾಗೂ ಜನರು ಇದನ್ನು ಒಂದು ಕಳಂಕ ಎಂದೇ ಭಾವಿಸಿದ್ದಾರೆ.


ಇದನ್ನೂ ಓದಿ: Burans Flower: ಮಧುಮೇಹಕ್ಕೆ ರಾಮಬಾಣ ಈ ಬುರಾನ್ಶ್! ಹಿಮಾಲಯದಲ್ಲಿ ಮಾತ್ರ ಬೆಳೆಯುತ್ತೆ ಈ ಅಪರೂಪದ ಹೂವು


ಒಮ್ಮೆ ಕಲ್ಪಿಸಿಕೊಳ್ಳಿ ಗಾಢವಾಗಿ ನಿದ್ರಿಸುವ ಐದರಿಂದ ಹತ್ತು ವರ್ಷಗಳ ಮಕ್ಕಳು ಸಾಮಾನ್ಯವಾಗಿ ಕೆಲವೊಮ್ಮೆ ಹಾಸಿಗೆ ಒದ್ದೆ ಮಾಡಿಕೊಳ್ಳುವುದಿದೆ. ಅವರಿಗೆ ನಿದ್ರಿಸುವ ಮುಂಚೆ ಒಂದೊಮ್ಮೆ ಮೂತ್ರ ವಿಸರ್ಜಿಸಿ ಮಲಗಿಕೊಳ್ಳುವುದರ ಬಗ್ಗೆ ತಿಳಿಸಲಾಗಿರುವುದಿಲ್ಲ. ಇದರಲ್ಲಿ ಪೋಷಕರ ಆಲಸ್ಯತನವೂ ಇರುತ್ತದೆ. ಇಂತಹ ಮನಸ್ಥಿತಿಯ ಪೋಷಕರು ಮುಂದೆ ಕ್ರಮೇಣವಾಗಿ ಮಕ್ಕಳ ಆ ಚಟ ತನ್ನಿಂದ ತಾನೇ ಸುಧಾರಿಸಿಕೊಳ್ಳಬಹುದೆಂದು ಭಾವಿಸುತ್ತಾರೆ. ಇದು ಒಪ್ಪಬಹುದಾದ ವಿಷಯವಾದರೂ ಎಲ್ಲ ಮಕ್ಕಳೂ ಸುಧಾರಿಕೊಳ್ಳುತ್ತಾರೆ ಎನ್ನಲು ಸಾಧ್ಯವೇ ಇಲ್ಲ.


ಇದೊಂದು ಕಳಂಕ ಎಂದು ಭಾವಿಸುವ ಪಾಲಕರು


ಇನ್ನು, ಒಂದು ಉದಾಹರಣೆ ಕಲ್ಪಿಸಿಕೊಳ್ಳಿ. ಪೋಷಕರೊಬ್ಬರಿಗೆ ತಮ್ಮ ಮಗು ವಾರದಲ್ಲಿ ಇಂತಿಷ್ಟು ದಿನ ಹಾಗೂ ರಾತ್ರಿಯ ಸಮಯದಲ್ಲಿ ಇಷ್ಟಿಷ್ಟು ಗಂಟೆಗೆ ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುತ್ತದೆ ಎಂಬುದು ಸರಿಯಾಗಿ ಗುರುತಾದಲ್ಲಿ ಅವರು ಅದನ್ನು ಒಂದು ಕಳಂಕ ಎಂದೇ ಭಾವಿಸಿ ಸಾಧ್ಯತಃ ಅಂತಹ ದಿನಗಳಲ್ಲಿ ತಮ್ಮ ಬಂಧುಗಳ, ನೆಂಟರ ಮನೆಗಳಿಗೆ ಹೋಗುವ ಸಂದರ್ಭ, ಅವಕಾಶ ಬಂದಾಗ ಅದರಿಂದ ತಪ್ಪಿಸಿಕೊಳ್ಳುತ್ತಾರೆ.
ಅಲ್ಲದೆ, ಆ ಮಗು ತನ್ನ ಪೋಷಕರಿಂದ ಬೈಗುಳಗಳನ್ನು ಕೇಳಬೇಕಾಗುತ್ತದೆ. ಮಗು ತಾನು ಹಾಸಿಗೆ ಒದ್ದೆ ಮಾಡಿದಾಗ ತನ್ನಷ್ಟಕ್ಕೆ ತಾನೆ ಎದ್ದು ಬಟ್ಟೆ ಬದಲಾಯಿಸಿಕೊಳ್ಳಬಹುದು. ಆದರೆ, ಅದರ ಮಾನಸಿಕ ಸ್ಥಿತಿಯ ಮೇಲೆ ಒಟ್ಟಾರೆ ಈ ಪ್ರಸಂಗ ಗಾಢವಾದ ಪರಿಣಾಮ ಬೀರುತ್ತದೆ. ಅದರ ಸಾಮರ್ಥ್ಯದ ಮೇಲೆಯೂ ನಕಾರಾತ್ಮಕ ಪರಿಣಾಮ ಉಂಟಾಗಬಹುದು.


11 ರಿಂದ 16 ವರ್ಷ ವಯಸ್ಸಿನವರೂ ಈ ರೀತಿ ಮಾಡಬಹುದು!


ಹಾಗಾಗಿ ಹಾಸಿಗೆ ಒದ್ದೆ ಮಾಡುವುದನ್ನು ಒಂದು ಆರೋಗ್ಯ ಸ್ಥಿತಿಯನ್ನಾಗಿ ಪರಿಗಣಿಸಿ ಸೂಕ್ಷ್ಮವಾಗಿ ಅವಲೋಕಿಸಬೇಕು. 11 ರಿಂದ 16 ವರ್ಷ ವಯಸ್ಸಿನವರೂ ಹಾಸಿಗೆ ಒದ್ದೆ ಮಾಡುವುದಿದೆ. ಈ ಸಂದರ್ಭದಲ್ಲಿ ಅವರು ಪ್ರೌಢಾವಸ್ಥೆಗೆ ಬರುತ್ತಿರುವುದರಿಂದ ಅವರಲ್ಲಿ ಮಾನಸಿಕವಾಗಿ ಹಲವಾರು ಸೂಕ್ಷ್ಮ ಭಾವನೆಗಳು ಹೊಮ್ಮುತ್ತಿರುತ್ತವೆ, ತಮ್ಮ ದೇಹದ ಬಗ್ಗೆ ಒಂದು ರೀತಿಯ ನಾಜೂಕಾದ ಮನೋಭಾವನೆ ಅವರಲ್ಲಿರುತ್ತದೆ.


ಹಾಗಾಗಿ ಅಂತಹ ಮಕ್ಕಳನ್ನು ವಿವರವಾಗಿ ಅಭ್ಯಸಿಸಿ ಚಿಕಿತ್ಸೆ ನೀಡಲು ಮುಂದಾಗಬೇಕಾಗುತ್ತದೆ, ಮೊದಲಿಗೆ ಆ ಮಗು ಕೇವಲ ರಾತ್ರಿಯ ಸಮಯದಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುತ್ತದೆಯೋ ಅಥವಾ ದಿನದ ಸಮಯದಲ್ಲೂ ಇದು ಘಟಿಸುತ್ತದೆಯೋ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಇದು ಶಾಲೆಗಳಲ್ಲಿಯೂ ಸಂಭವಿಸಬಹುದು. ಹಾಗಾಗಿ ಮೊದಲು ಅವರು ಕೇವಲ ರಾತ್ರಿ ಸಮಯದವರೋ ಅಥವಾ ರಾತ್ರಿ ಹಾಗೂ ಹಗಲು ಎರಡೂ ಸಮಯದವರೋ ಎಂದು ಪತ್ತೆ ಹಚ್ಚಿ ಆ ಪ್ರಕಾರವಾಗಿ ಅವರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.


ಪಾಲಕರು ಹಾಗೂ ಮಕ್ಕಳಿಬ್ಬರಿಗೂ ಸಲಹೆ


ಪ್ರವೃತ್ತಿ ಹಾಗೂ ವರ್ತನೆಗ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಆ ಮಕ್ಕಳಿಗೆ ಹಾಗೂ ಪೋಷಕರಿಗೆ ಇಬ್ಬರಿಗೂ ನೀಡಬೇಕಾಗಿರುತ್ತದೆ. ಸಾಮಾನ್ಯವಾಗಿ ಬಹು ಪ್ರಕರಣಗಳಲ್ಲಿ ರಾತ್ರಿ ಮಲಗುವಾಗ ಸಾಕಷ್ಟು ನೀರು ಕುಡಿದಿದ್ದ ಸಂದರ್ಭದಲ್ಲಿ ಮಕ್ಕಳು ಹಾಸಿಹೆ ಒದ್ದೆ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಆ ನಿಟ್ಟಿನಲ್ಲಿ ಮಕ್ಕಳ ದಿನಚರಿ ಗಮನಿಸುತ್ತ ಮಲಗುವ ಎರಡು ಗಂಟೆಗಳ ಮುಂಚೆ ನೀರು ಕುಡಿಯುವಂತಹ ವಿಧಾನ, ಮಲಗಿದ ಎರಡು ಗಂಟೆಗಳಾದ ಮೇಲೆ ಅಲಾರಾಂ ಮೂಲಕ ಎಚ್ಚೆತ್ತು ಒಂದೊಮ್ಮೆ ಮೂತ್ರ ವಿಸರ್ಜಿಸಿ ಮಲಗಿಕೊಳ್ಳುವಂತಹ ರೂಢಿ ಅಥವಾ ಜೀವನಶೈಲಿಯಲ್ಲಿ ಸಮರ್ಪಕವಾದ ಬದಲಾವಣೆಗಳನ್ನು ವೈದ್ಯರಾದವರು ಶಿಫಾರಸ್ಸು ಮಾಡಬಹುದು.


ಈ ರೀತಿಯಾಗಿ ಒಂದು ಶಿಸ್ತಿನ ಆಹಾರ ಕ್ರಮ ಹಾಗೂ ಮೂತ್ರ ವಿಸರ್ಜನೆಗೆ ಸಂಬಂಧಿಸಿದಂತೆ ಕೆಲವಿ ಪರಿಣಾಮಕಾರಿ ವಿಧಾನಗಳನ್ನು ವೈದ್ಯರ ನಿಗ್ರಾವಣಿಯಲ್ಲಿ ನೆರವೇರಿದಾಗ ಕ್ರಮೇಣ ಸಮಯ ಉರುಳಿದಂತೆ ಹಾಸಿಗೆ ಒದ್ದೆ ಮಾಡಿಕೊಳ್ಳುವಂತಹ ಪರಿಪಾಠ ಮಕ್ಕಳಲ್ಲಿ ನಿಲ್ಲುತ್ತಾ ಬರಬಹುದು. ಇದರಿಂದ ಆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವುದನ್ನು ಗಮನಿಸಬಹುದು.


ವೈದ್ಯರೊಂದಿಗೆ ಸಮಾಲೋಚಿಸಿ


ಇದರ ಜೊತೆಗೆ ಅಂತಹ ಮಕ್ಕಳ ಪೋಷಕರಿಗೂ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಬೇಕಾಗುತ್ತದೆ. ಏಕೆಂದರೆ ಪೋಷಕರು ಮಕ್ಕಳು ಮಲಗುವಾಗ ಹಾಲು ಕುಡಿಯುವುದು ಉತ್ತಮ, ನೀರು ಕುಡಿಯುವುದು ಉತ್ತಮ ಎಂದೇ ಭಾವಿಸಿರುತ್ತಾರೆ. ಇದು ನಿಜ ಎನ್ನಬಹುದಾದರೂ ಹಾಸಿಗೆ ಒದ್ದೆ ಮಾಡಿಕೊಳ್ಳುವಂತಹ ಚಟ ಇದ್ದ ಮಕ್ಕಳಿಗೆ ಇದು ಮತ್ತಷ್ಟು ಪ್ರಚೋದಿಸುವ ಅಂಶವಾಗುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಪೋಷಕ್ರಾದವರು ಈ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ಜೀವನಶೈಲಿ ನಿರ್ವಹಣೆಗೆ ಸಂಬಂಧಿಸಿದಂತೆ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸುವುದು ಉತ್ತಮ.


ಪೋಷಕರ ಪೈಕಿ ಅಪ್ಪ ಅಥವಾ ಅಮ್ಮ ಇಬ್ಬರಲ್ಲಿ ಯಾರಾದರೂ ಒಬ್ಬರು ಹೀಗೆ ಮಾಡಿರಬಹುದು


ಪೋಷಕರ ಪೈಕಿ ಅಪ್ಪ ಅಥವಾ ಅಮ್ಮ ಇಬ್ಬರಲ್ಲಿ ಯಾರಾದರೂ ಒಬ್ಬರು ತಾವು ಮಕ್ಕಳಿದ್ದಾಗ ಹಾಸಿಗೆ ಒದ್ದೆ ಮಾಡುವ ಇತಿಹಾಸ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಮಗುವಿಗೆ ಆ ರೂಢಿ ಅಥವಾ ಸ್ಥಿತಿ ಬರುವ ಸಾಧ್ಯತೆ 15-30 ಪ್ರತಿಶತವಿರುತ್ತದೆ. ಅದೇ ಇಬ್ಬರೂ ಪೋಷಕರು ಆ ಸ್ಥಿತಿಯನ್ನು ಮಕ್ಕಳಾಗಿದ್ದಾಗ ಅನುಭವಿಸಿದ್ದರೆ ಅವರ ಮಗುವಿಗೂ ಇದು ಬರುವ ಸಾಧ್ಯತೆ 50 ಪ್ರತಿಶತದಷ್ಟಿರುತ್ತದೆ.


ಮಕ್ಕಳಿಗೂ ಇದೊಂದು ಅಹಿತಕರ ಅನುಭವ


ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಸಹಜವಾಗಿ ಅದನ್ನು ಅನುಭವಿಸುವ ಮಕ್ಕಳು ಹಾಗೂ ಅವರ ಪೋಷಕರು ಇಬ್ಬರಿಗೂ ಅಹಿತಕರವಾದ ಅನುಭವಾಗಿದೆ. ಅದೆಷ್ಟೋ ಮಕ್ಕಳು 17, 18 ಅಷ್ಟೇ ಏಕೆ 20 ವಯಸ್ಸಿನ ನಂತರವೂ ಹಾಸಿಗೆ ಒದ್ದೆ ಮಾಡಿಕೊಳ್ಳುವ ಸ್ಥಿತಿ ಹೊಂದಿದ್ದಾರೆ. ಆದರೆ, ಈ ಬಗ್ಗೆ ಅವರು ಎಂದಿಗೂ ಮುಕ್ತವಾಗಿ ಮಾತನಾಡದೆ ಇರುವುದು ಹಾಗೂ ವೈದ್ಯರ ಬಳಿ ಹೋಗದೆ ಇರುವುದು ಸಮಸ್ಯೆಯಾಗಿದೆ. ಕೆಲವೊಮ್ಮೆ ವೈದ್ಯರ ಬಳಿ 23 ಅಥವಾ 25 ವಯಸ್ಸಿನವರಾದವರು ಬಂದು ತಮಗೆ ಇಂದಿಗೂ ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುವ ಸ್ಥಿತಿ ಇರುವುದರಿಂದ ಮದುವೆ ಮಾಡಿಕೊಳ್ಳಲು ಹೆದರಿಕೆಯಾಗುತ್ತಿರುವುದಾಗಿ ಎಂಬ ಅಳಲು ತೋಡಿಕೊಂಡಿರುವ ಉದಾಹರಣೆಗಳಿವೆ.


ಇದನ್ನು ಕ್ರಮೇಣವಾಗಿ ಗುಣಪಡಿಸಬಹುದು


ಹಾಗಾಗಿ ಸ್ನೇಹಿತರೆ, ನಿಮ್ಮ ಮಕ್ಕಳಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವ ಸ್ಥಿತಿ ಇದ್ದರೆ ಮುಕ್ತವಾಗಿ ವೈದ್ಯರನ್ನು ಸಂಪರ್ಕಿಸಿ. ಇದನ್ನು ಕ್ರಮೇಣವಾಗಿ ಗುಣಪಡಿಸಬಹುದಾದ ಅನೇಕ ಮಾರ್ಗಗಳಿದ್ದು ವೈದ್ಯರ ಶಿಫಾರಸ್ಸಿನಂತೆ ನಡೆಯಿರಿ. ಇದರಿಂದ ಮಕ್ಕಳು ಕ್ರಮೇಣವಾಗಿ ಸುಧಾರಿಸಿಕೊಳ್ಳೂತ್ತಾರೆ, ಅವರಲ್ಲಿ ಮತ್ತೆ ಆತ್ಮವಿಶ್ವಾಸ ಮೂಡುತ್ತದೆ. ಅದಕ್ಕಾಗಿ ಈ ಪರಿಸ್ಥಿತಿಯ ಬಗ್ಗೆ ಎಲ್ಲ ಪೋಷಕರಾದವರಿಗೆ, ಶಾಲೆಗಳಿಗೆ, ಮಕ್ಕಳ ಕಲ್ಯಾಣ ಸಂಸ್ಥೆಗಳಿಗೆ ತಿಳಿಯುವ ನಿಟ್ಟಿನಲ್ಲಿ ಕೆಲಸವಾಗಬೇಕು. ಪ್ರತಿಯೊಬ್ಬರೂ ಇದನ್ನು ಸಮಾಜದ ಕಳಂಕ ಎಂದು ಭಾವಿಸದೆ ಇದರ ವಿರುದ್ಧ ಹೋರಾಡಲು ಎದ್ದು ನಿಲ್ಲಬೇಕು.

First published: