Healthy Lifestyle: ಬೊಜ್ಜು ಹಾಗೂ ಇತರೆ ಕಾಯಿಲೆಗಳಿಂದ ದೂರವಿರಲು ಆರೋಗ್ಯಕರ ಜೀವನಶೈಲಿಗೆ ಕೆಲ ಟಿಪ್ಸ್ ಇಲ್ಲಿದೆ

ಹೊಟ್ಟೆ ತುಂಬಿರುವಾಗ ಆಹಾರ ತಿನ್ನದಂತೆ ನೋಡಿಕೊಳ್ಳಿ. ಹೊಟ್ಟೆ ತುಂಬಿದ ನಂತರ ಮತ್ತೆ ತಿನ್ನುವುದು ಅನಾರೋಗ್ಯ ಉಂಟು ಮಾಡುಗುತ್ತದೆ. ನೀವು ಆಹಾರದ ರುಚಿಯಿಂದಾಗಿ ಅತಿಯಾಗಿ ತಿಂದರೆ ಹೊಟ್ಟೆ ಸಮಸ್ಯೆ ಜೊತೆಗೆ ವೇಟ್ ಹೆಚ್ಚಾಗುವ ಭಯ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಾತ್ರಿ (Night) ಹೊತ್ತು ಸುಖವಾಗಿ, ನೆಮ್ಮದಿಯಿಂದ ನಿದ್ದೆ (Sleeping) ಮಾಡಬೇಕು. ಯಾವಾಗಲೂ ಖುಷಿಯಾಗಿ (Happy), ಲವಲವಿಕೆಯಿಂದ ಜಾಯ್ ಫುಲ್ ಆಗಿರಬೇಕೆಂದರೆ ನಿಮ್ಮ ಲೈಫ್ ಸ್ಟೈಲ್ (Lifestyle) ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಕಡಿಮೆ ತಿನ್ನುವ ಮತ್ತು ಬೆಲ್ಲ ತಿನ್ನುವ ಅಭ್ಯಾಸ ರೂಢಿಸಿಕೊಂಡಿರಬೇಕು ಎಂದು ಹೇಳಲಾಗುತ್ತದೆ. ಕಡಿಮೆ ತಿಂದರೆ ಅನೇಕ ರೋಗಗಳಿಂದ ಪಾರಾಗುತ್ತೀರಿ. ಮತ್ತು ಸಕ್ಕರೆ ಬದಲು ಬೆಲ್ಲ ತಿನ್ನವುದು ರೂಢಿಸಿಕೊಳ್ಳಿ. ಊಟ ತಿಂದು ಮುಗಿಸುತ್ತಿದ್ದಂತೆ ಬೆಲ್ಲ ತಿನ್ನುವುದು ಅಭ್ಯಾಸ ಮಾಡಿಕೊಂಡರೆ ಕೆಲ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ತುಂಬಾ ಕಡಿಮೆ ತಿನ್ನುವುದು ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ವ್ಯಕ್ತಿಯಲ್ಲಿನ ಎನರ್ಜಿ ಕಡಿಮೆಯಾಗಿ ಅಪೌಷ್ಟಿಕತೆ ಉಂಟಾಗಬಹುದು.

    ಹೊಟ್ಟೆ ತುಂಬಿದ ನಂತರ ಮತ್ತೆ ಆಹಾರ ಸೇವಿಸುವುದು ಸೂಕ್ತವಲ್ಲ

    ನೀವು ಹೊಟ್ಟೆ ತುಂಬಿರುವಾಗ ಆಹಾರ ತಿನ್ನದಂತೆ ನೋಡಿಕೊಳ್ಳಿ. ಹೊಟ್ಟೆ ತುಂಬಿದ ನಂತರ ಮತ್ತೆ ತಿನ್ನುವುದು ಅನಾರೋಗ್ಯ ಉಂಟು ಮಾಡುಗುತ್ತದೆ. ನೀವು ಆಹಾರದ ರುಚಿಯಿಂದಾಗಿ ಅತಿಯಾಗಿ ತಿಂದರೆ ಹೊಟ್ಟೆ ಸಮಸ್ಯೆ ಜೊತೆಗೆ ವೇಟ್ ಹೆಚ್ಚಾಗುವ ಭಯ ಇದೆ. ಹಾಗಾಗಿ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಬದುಕಲು ತಿನ್ನಬೇಕೆ ಹೊರತು, ತಿನ್ನುವುದೇ ಬದುಕಾಗಬಾರದು.

    ಅತಿಯಾಗಿ ತಿನ್ನುವುದು ರೋಗಗಳ ಮೂಲ

    ಹೆಚ್ಚು ತಿನ್ನುವುದು ಪ್ರತಿ ಸಮಸ್ಯೆಯ ಮೂಲವಾಗಿದೆ. ನೀವು ಕಡಿಮೆ ಆಹಾರ ಸೇವಿಸಿದರೆ ಬೊಜ್ಜು ಹೆಚ್ಚಾಗುವುದಿಲ್ಲ. ಆಮ್ಲೀಯತೆ ಇರುವುದಿಲ್ಲ. ಅಜೀರ್ಣ ಮತ್ತು ಇತರ ಕಾಯಿಲೆ ಬರುವುದಿಲ್ಲ. ಕಡಿಮೆ ತಿನ್ನುವುದರಿಂದ ಬೊಜ್ಜು ಬರುವುದಿಲ್ಲ. ಪ್ರತಿ ಊಟದ ವೇಳೆ ನಿಮ್ಮ ಆಹಾರಕ್ಕಿಂತ ಸ್ವಲ್ಪ ಕಡಿಮೆ ತಿನ್ನುವ ಅಭ್ಯಾಸ ಮಾಡಿ.

    ಇದನ್ನೂ ಓದಿ: ಮುಖದ ಕ್ಲೆನ್ಸಿಂಗ್ ಗೆ ದುಬಾರಿ ವಸ್ತುಗಳ ಮೊರೆ ಹೋಗುವುದು ಬಿಡಿ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ನೋಡಿ

    ಫುಡ್ ಪಾಯ್ಸನಿಂಗ್ ಅಪಾಯ

    ಬೇಸಿಗೆಯಲ್ಲಿ ಕೆಲವೊಮ್ಮೆ ಫುಡ್ ಪಾಯ್ಸನಿಂಗ್ ಆಗುತ್ತದೆ. ಬೇಕಾಬಿಟ್ಟಿ ತಿನ್ನುವುದು, ಯಾವ್ಯಾವುದೋ ಪದಾರ್ಥ ತಿನ್ನುವುದು ಅಸಿಡಿಟಿಗೆ ಕಾರಣವಾಗುತ್ತದೆ. ಹೊಟ್ಟೆ ಉಬ್ಬುವುದು, ಹೆಚ್ಚು ತಿನ್ನುವುದು ಜೀರ್ಣಿಸಿಕೊಳ್ಳಲು ಔಷಧ ಸೇವಿಸುವುದು ಅಪಾಯ ತೊಂದೊಡ್ಡುತ್ತದೆ. ಕಡಿಮೆ ತಿಂದು ಸಂತೋಷವಾಗಿರುವುದು ಉತ್ತಮ.

    ದೀರ್ಘ ಕಾಲ ಬದುಕಲು ಕಡಿಮೆ ತಿನ್ನಿರಿ

    ಜಪಾನಿಯರ ದೀರ್ಘಾವಧಿ ರಹಸ್ಯಗಳಲ್ಲಿ ಒಂದು ಅವರು ಕಡಿಮೆ ಆಹಾರ ಸೇವಿಸುವುದು. ವಾಸ್ತವವಾಗಿ, ಅವರು ಯಾವಾಗಲೂ ಸಣ್ಣ ತಟ್ಟೆಯಲ್ಲಿ ಲಿಮಿಟ್ ನಲ್ಲಿ ಆಹಾರ ತಿನ್ನುತ್ತಾರೆ. ನೀವು ಸಹ ಕಡಿಮೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.

    ನೀವು ಜಂಕ್ ಫುಡ್ ಸೇವನೆ ತಪ್ಪಿಸಿ

    ಹೆಚ್ಚು ಹಾನಿ ಮಾಡುವ ಜಂಕ್ ಫುಡ್, ಸಂರಕ್ಷಕಗಳ ಜೊತೆಗೆ, ಅನೇಕ ಅನುಪಯುಕ್ತ ತೈಲಗಳು ಮತ್ತು ಹಾನಿ ಮಾಡುವ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಬಿಟ್ಟು ಬಿಡಿ. ಜಂಕ್ ಫುಡ್ ಹೆಚ್ಚು ತಿನ್ನದೆ, ನೀವು ಕಡಿಮೆ ಪ್ರಮಾಣದಲ್ಲಿ ತಿನ್ನಿ. ಮತ್ತು ಆರೋಗ್ಯವಾಗಿರಿ.

    ನಿಸರ್ಗ ಸ್ನೇಹಿ ಅಭ್ಯಾಸ

    ಕಡಿಮೆ ಆಹಾರ ಸೇವಿಸುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ. ನಿಮಗೂ ಪರಿಸರದ ಬಗ್ಗೆ ಕಾಳಜಿ ಇದ್ದರೆ, ಈ ಅಭ್ಯಾಸದಿಂದ ನೀವು ಹೆಮ್ಮೆ ಪಡುತ್ತೀರಿ. ಧ್ಯಾನ, ಯೋಗ ಮಾಡಿ. ಗೇಮ್ಸ್, ಹೊರಗೆ ಸುತ್ತಾಡಿ.

    ಆರೋಗ್ಯಕರ ದೇಹ ಮತ್ತು ಮನಸ್ಸು ಇಟ್ಟುಕೊಳ್ಳಿ

    ಆರೋಗ್ಯವಂತ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ. ಆರೋಗ್ಯಕರ ದೇಹ ಹೊಂದಲು, ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಇದಕ್ಕಾಗಿ ಆರೋಗ್ಯಕರ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ. ಜೊತೆಗೆ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮಾಡಿ. ಧೂಮಪಾನ, ಮದ್ಯಪಾನದಿಂದ ದೂರವಿರಿ.

    ಇದನ್ನೂ ಓದಿ: ಮಹಿಳೆಯರಲ್ಲಿ ಅತಿಯಾಗಿ ಕಂಡು ಬರುವ ಈ ಕಾಯಿಲೆಗಳು ಸಾಕಷ್ಟು ಸಂಕಷ್ಟ ತಂದೊಡ್ಡುತ್ತವೆ!

    ಸಕಾರಾತ್ಮಕ ಜನರೊಂದಿಗೆ ಸಮಯ ಕಳೆಯಿರಿ

    ಧನಾತ್ಮಕ ಚಿಂತನೆಯ ಜನರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಸಾಮಾಜಿಕವಾಗಿ ಸಕ್ರಿಯವಾಗಿರಿ.
    Published by:renukadariyannavar
    First published: