• Home
  • »
  • News
  • »
  • lifestyle
  • »
  • Vitamin B12 Deficiency: ವಿಟಮಿನ್ ಬಿ 12 ಕೊರತೆಗೆ ಕಾರಣ ಇದಂತೆ, ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ

Vitamin B12 Deficiency: ವಿಟಮಿನ್ ಬಿ 12 ಕೊರತೆಗೆ ಕಾರಣ ಇದಂತೆ, ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vitamin B12 Deficiency: ಒಬ್ಬ ಆರೋಗ್ಯವಂತ ಮನುಷ್ಯನ ದೇಹಕ್ಕೆ ದಿನಕ್ಕೆ 2.4 ಮೈಕ್ರೋಗ್ರಾಂಗಳಷ್ಟು B12 ಬೇಕಾಗುತ್ತದೆ. ಆದಾಗ್ಯೂ ಕಡಿಮೆ ಬಿ12 ನಮಗೆ ಲಭ್ಯವಾದಲ್ಲಿ ಸಹಜವಾಗಿಯೇ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ.

  • Trending Desk
  • 4-MIN READ
  • Last Updated :
  • Share this:

ವಿಟಮಿನ್ ಬಿ12 (Vitamin B12) ನಮ್ಮ ದೇಹಕ್ಕೆ (Body) ಬೇಕಾಗಿರುವ ಒಂದು ಅತ್ಯಂತ ಅವಶ್ಯಕ ಪೋಷಕಾಂಶವಾಗಿದೆ. ರಕ್ತ ಕಣಗಳು, ನರಗಳು ಮತ್ತು ದೇಹದಲ್ಲಿನ ಇತರ ನಿರ್ಣಾಯಕ ಪ್ರಕ್ರಿಯೆಗಳ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಬಿ12 ಮಹತ್ವದ ಪಾತ್ರ ವಹಿಸುತ್ತದೆ. ಒಂದು ಪಕ್ಷ ನಮ್ಮ ದೇಹದಲ್ಲಿ ಈ ಅಂಶ ಕಡಿಮೆಯಾದರೆ ಮೆದುಳು (Brain) ಮತ್ತು ನರವ್ಯವಸ್ಥೆಯ ಮೇಲೆ ಪರಿಣಾಮ ಸೇರಿ ಇನ್ನು ಕೆಲವು ಗಂಭೀರ ಸಮಸ್ಯೆಗೆ (Problem) ತುತ್ತಾಗುತ್ತೇವೆ. ಒಬ್ಬ ಆರೋಗ್ಯವಂತ ಮನುಷ್ಯನ ದೇಹಕ್ಕೆ ದಿನಕ್ಕೆ 2.4 ಮೈಕ್ರೋಗ್ರಾಂಗಳಷ್ಟು B12 ಬೇಕಾಗುತ್ತದೆ. ಆದಾಗ್ಯೂ ಕಡಿಮೆ ಬಿ12 ನಮಗೆ ಲಭ್ಯವಾದಲ್ಲಿ ಸಹಜವಾಗಿಯೇ ಆರೋಗ್ಯದಲ್ಲಿ (Health)  ಏರಿಳಿತ ಕಂಡುಬರುತ್ತದೆ.


ರೋಗ ಸೂಚನೆ ಹಾಗೂ ಲಕ್ಷಣಗಳು
ಹಾಗಾದರೆ ಈ ಅತ್ಯವಶ್ಯಕ ವಿಟಮಿನ್‌ ಕೊರತೆಯಾದರೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಎಂದು ನೋಡುವುದಾದರೆ,
* ಬಿ12 ಕೊರತೆಯ ಒಂದು ಪ್ರಾಥಮಿಕ ಲಕ್ಷಣವೆಂದರೆ ಆಯಾಸ - ಇದು ದೈನಂದಿನ ಜೀವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವಷ್ಟು ಸುಸ್ತು ಅಥವಾ ಬಳಲಿಕೆಗೆ ಕಾರಣವಾಗುತ್ತದೆ.


* ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ರಕ್ತಹೀನತೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ವಾಕರಿಕೆ, ವಾಂತಿ ಅಥವಾ ಅತಿಸಾರ, ಹಸಿವಿನ ಕೊರತೆ, ತೂಕ ನಷ್ಟ, ಬಾಯಿ ಅಥವಾ ನಾಲಿಗೆಯಲ್ಲಿ ನೋವು ಇತ್ಯಾದಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.
* ಒತ್ತಡ, ಗೊಂದಲ, ಜ್ಞಾಪಕ ಶಕ್ತಿ ನಷ್ಟ, ಖಿನ್ನತೆಯಂತಹ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳಬಹುದು. ಈ ಎಲ್ಲಾ ಸಮಸ್ಯೆಗಳು ಬಿ 12 ನಿಂದಲೇ ಆರಂಭವಾಗುವುದರಿಂದ ಇದರ ಲಭ್ಯತೆಯನ್ನು ಹೆಚ್ಚಿಸಿಕೊಳ್ಳದಿದ್ದರೆ ಈ ರೋಗಲಕ್ಷಣಗಳು ಶಾಶ್ವತವಾಗಿಯೂ ಸಹ ಉಳಿಯಬಹುದು.


ವಿಟಮಿನ್ ಬಿ 12 ಹೆಚ್ಚಿಸುವ ಆಹಾರಗಳು
ವಿಟಮಿನ್ ಬಿ 12 ಕೊರತೆಯನ್ನು ಕೆಲವು ಆಹಾರಗಳನ್ನು ಸೇವಿಸುವುದರ ಮೂಲಕ ನಿಗಿಸಿಕೊಳ್ಳಬಹುದು. ಆದಾಗ್ಯೂ ಅದರ ಪೂರಕಗಳನ್ನು ಸಹ ಸೇವಿಸಲು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಬಿ 12 ಯಾವೆಲ್ಲಾ ಆಹಾರಗಳಲ್ಲಿ ಸಿಗುತ್ತದೆ ಎಂಬುದನ್ನು ನೋಡುವುದಾದರೆ ಮೊದಲಿಗೆ, ಮಾಂಸ. ಇದು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ. ಅಂತೆಯೇ ಹಾಲು ಮತ್ತು ಡೈರಿ ಉತ್ಪನ್ನಗಳು, ಮೊಟ್ಟೆ, ಮೀನು ಹೀಗೆ ಇವು ಬಿ 12ನ ಸಮೃದ್ಧ ಮೂಲವಾಗಿವೆ.


ವಿಟಮಿನ್ ಡಿ ಕೊರತೆ ಆಂತರಿಕ ಅಂಶ ಎಂಬ ಗ್ಲೈಕೊಪ್ರೊಟೀನ್ ಕೊರತೆಯಿಂದ ಉಂಟಾಗುತ್ತದೆ. ಈ ಗ್ಲೈಕೊಪ್ರೊಟೀನ್ ಹೊಟ್ಟೆಯ ಕೋಶಗಳಿಂದ ಸ್ರವಿಸಿದರೆ, ಅದು ವಿಟಮಿನ್ ಬಿ 12 ನೊಂದಿಗೆ ಬಂಧಿಸುತ್ತದೆ. ನಂತರ ಅದನ್ನು ಹೀರಿಕೊಳ್ಳಲು ಸಣ್ಣ ಕರುಳಿಗೆ ಸಾಗಿಸಲಾಗುತ್ತದೆ. ಈ ಹೀರಿಕೊಳ್ಳುವಿಕೆಯು ದುರ್ಬಲವಾದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾಗುತ್ತದೆ.


ಇದನ್ನೂ ಓದಿ: ಕೊಬ್ಬು ಕಡಿಮೆ ಆಗ್ಬೇಕಾ? ಹಾಗಾದ್ರೆ ನಿಮ್ಮ ಅಡುಗೆ ಮನೆಯಲ್ಲಿರಲಿ ಈ ಪದಾರ್ಥಗಳು


ಬಿ12 ಕೊರತೆಗೆ ಕೊಡುಗೆ ನೀಡುವ ಅಂಶಗಳು
- ಹೊಟ್ಟೆಯ ಹುಣ್ಣುಗೆ ಕಾರಣವಾಗುವ ಬ್ಯಾಕ್ಟೀರಿಯಾ ಹೆಲಿಕೋಬ್ಯಾಕ್ಟರ್ ಪೈಲೋರಿಯಿಂದ ಉಂಟಾಗುವ ಸೋಂಕು ವಿಟಮಿನ್ ಬಿ 12 ಕೊರತೆಗೆ ಕಾರಣವಾಗಬಹುದು. ಹೌದು, ಹೊಟ್ಟೆಯ ಆಮ್ಲದ ಕೊರತೆ ಸಹ ಬಿ12 ಕೊರತೆಗೆ ಮತ್ತೊಂದು ಸಂಭಾವ್ಯ ಕೊಡುಗೆಯಾಗಿದೆ. ಅಲ್ಸರ್‌ನಂತಹ ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಸಹ ಬಿ12 ಕೊರತೆ ಉಂಟಾಗಬಹುದು ಎಂದು ಸಂಶೋಧಕರು ಈ ಔಷಧಿಗಳ ಬಳಕೆಯನ್ನು ಬಿ12 ಕೊರತೆ ಜೊತೆ ನೇರವಾಗಿ ಉಲ್ಲೇಖಿಸಿದ್ದಾರೆ.
- ಹೊಟ್ಟೆಯ ಆಮ್ಲದ ಉತ್ಪಾದನೆಯು ವಯಸ್ಸಾದಂತೆ ಕಡಿಮೆಯಾಗಬಹುದು. ಹೀಗಾಗಿ ವಯಸ್ಸಾದವರಲ್ಲಿ ಈ ವಿಟಮಿನ್‌ ಕೊರತೆ ಉಂಟಾಗಿ ಸುಸ್ತು, ಆಯಾಸ, ನೆನಪಿನ ಶಕ್ತಿ ಕುಂದುವುದು ಉಂಟಾಗಬಹುದು ಜಠರದಲ್ಲಿನ ವಿಶೇಷ ಪ್ಯಾರಿಯೆಟಲ್ ಕೋಶಗಳಿಂದ ಗ್ಯಾಸ್ಟ್ರಿಕ್ ಆಮ್ಲ ಮತ್ತು ಆಂತರಿಕ ಅಂಶದ ಉತ್ಪಾದನೆಯು ಬಿ12 ಹೀರುವಿಕೆ ಸಂಭವಿಸಲು ನಿರ್ಣಾಯಕವಾಗಿದೆ.


- ಮಾನವರಲ್ಲಿ, ದುರ್ಬಲಗೊಂಡ ಹೊಟ್ಟೆಯ ಒಳಪದರವು ಗ್ಯಾಸ್ಟ್ರಿಕ್ ಶಸ್ತ್ರಚಿಕಿತ್ಸೆ, ದೀರ್ಘಕಾಲದ ಉರಿಯೂತ ಅಥವಾ ವಿನಾಶಕಾರಿ ರಕ್ತಹೀನತೆಯಿಂದ ಉಂಟಾಗುತ್ತದೆ. ಬಿ12 ಕೊರತೆಯ ಮತ್ತೊಂದು ಸಾಮಾನ್ಯ ಕೊಡುಗೆ ಎಂದರೆ ಮೇದೋಜ್ಜೀರಕ ಗ್ರಂಥಿ. ಮೇದೋಜ್ಜೀರಕ ಗ್ರಂಥಿ ಕಾರ್ಯ ಸಮರ್ಪಕವಾಗಿ ನಡೆಯದ ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ಬಿ12 ಕೊರತೆಯನ್ನು ಹೊಂದಿರುತ್ತಾರೆ ಮತ್ತು ಕೊನೆಯದಾಗಿ, ಟೈಪ್ 2 ಡಯಾಬಿಟಿಸ್‌ಗೆ ಚಿಕಿತ್ಸೆ ನೀಡಲು ಬಳಸುವ ಮೆಟ್‌ಫಾರ್ಮಿನ್ ಎಂಬ ಔಷಧಿಯು ಸಹ ಬಿ12 ಕೊರತೆಯೊಂದಿಗೆ ಸಂಬಂಧಿಸಿದೆ.


ಬಿ 12 ಕೊರತೆಗೆ ಚಿಕಿತ್ಸೆ
ವಿಟಮಿನ್ ಬಿ 12 ಕೊರತೆಯಿಂದ ನೀವು ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಭೇಟಿಯಾಗಿ. ದೇಹದಲ್ಲಿನ ವಿಟಮಿನ್ ಬಿ 12 ಕೊರತೆಯ ಮಟ್ಟವನ್ನು ಅವಲಂಬಿಸಿ ಅವರು ನಿಮಗೆ ಪೂರಕ ಅಥವಾ ಚುಚ್ಚುಮದ್ದನ್ನು ನೀಡುತ್ತಾರೆ. ವಿಟಮಿನ್ ಬಿ 12 ಪೂರಕವನ್ನು ತೆಗೆದುಕೊಳ್ಳುವುದರಿಂದ, ಶಕ್ತಿಯ ಮಟ್ಟ ಮತ್ತು ಮನಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ಕಂಡುಬರುತ್ತದೆ.


ಇದನ್ನೂ ಓದಿ: ಈ ಸಮಸ್ಯೆಗಳಿದ್ರೆ ಚಳಿಗಾಲದಲ್ಲಿ ಬಾದಾಮಿ ತಿನ್ನೋದು ಡೇಂಜರ್ ಅಂತೆ


ವಿಟಮಿನ್ ಬಿ 12 ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಆದ್ದರಿಂದ, ಮೂತ್ರದ ಮೂಲಕ ದೇಹದಿಂದ ಹೊರಹೋಗುವ ಸಾಧ್ಯತೆಯಿದೆ. ಚಿಕಿತ್ಸೆಯ ಪ್ರಕಾರ ಮತ್ತು ಚೇತರಿಕೆಯ ಅವಧಿಯು ಬಿ12 ಕೊರತೆಯ ಕಾರಣ ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ. ಪೂರ್ಣ ಚೇತರಿಕೆಯಾಗಲು ಒಂದು ವರ್ಷದವರೆಗೆ ತೆಗೆದುಕೊಳ್ಳಬಹುದು ಎನ್ನುತ್ತಾರೆ ವೈದ್ಯರು.

Published by:Sandhya M
First published: