• Home
  • »
  • News
  • »
  • lifestyle
  • »
  • Old Sarees: ನಿಮ್ಮ ಹಳೆಯ ಸೀರೆಗೆ ಹೆಚ್ಚಿನ ಮೆರುಗು ನೀಡಲು ಈ ರೀತಿ ಮಾಡಿ ಸಾಕು

Old Sarees: ನಿಮ್ಮ ಹಳೆಯ ಸೀರೆಗೆ ಹೆಚ್ಚಿನ ಮೆರುಗು ನೀಡಲು ಈ ರೀತಿ ಮಾಡಿ ಸಾಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ವದೇಶಿ ಸೀರೆ ಮತ್ತು ಜವಳಿ ಬ್ರಾಂಡ್ ಆಗಿ ಖ್ಯಾತಿ ಪಡೆದಿರುವ ಏಕಾಯ ಸಂಸ್ಥೆಯು ಇದೇ ಸೆಪ್ಟೆಂಬರ್‌ನಲ್ಲಿ ಹತ್ತು ವರ್ಷಗಳ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂಸ್ಥೆಯು ತನ್ನ 10 ನೇ ವಾರ್ಷಿಕೋತ್ಸವದ ಹಿನ್ನೆಲೆಯ ಅಂಗವಾಗಿ ಕೆಲವು ಹೊಸ ಯೋಜನೆಗಳನ್ನು ಜಾರಿ ತರಬೇಕೆಂದು ಚಿಂತನೆ ನಡೆಸಿದೆ.

ಮುಂದೆ ಓದಿ ...
  • Share this:

ನವ ದೆಹಲಿ: ಸ್ವದೇಶಿ ಸೀರೆ (Desi Saree) ಮತ್ತು ಜವಳಿ ಬ್ರಾಂಡ್ ಆಗಿ ಖ್ಯಾತಿ ಪಡೆದಿರುವ ಏಕಾಯ ಸಂಸ್ಥೆಯು ಇದೇ ಸೆಪ್ಟೆಂಬರ್‌ನಲ್ಲಿ ಹತ್ತು ವರ್ಷಗಳ ವಾರ್ಷಿಕೋತ್ಸವವನ್ನು (Anniversary) ಆಚರಿಸುತ್ತಿದೆ. ಈ ಸಂಸ್ಥೆಯು ತನ್ನ 10 ನೇ ವಾರ್ಷಿಕೋತ್ಸವದ ಹಿನ್ನೆಲೆಯ ಅಂಗವಾಗಿ ಕೆಲವು ಹೊಸ ಯೋಜನೆಗಳನ್ನು ಜಾರಿ ತರಬೇಕೆಂದು ಚಿಂತನೆ ನಡೆಸಿದೆ. ಈ ಯೋಜನೆಯು ಜವಳಿಗಳಿಗೆ ಎರಡನೇ ಅವಕಾಶ ಆಗಿದ್ದು, ಇದು ಮರುಮಾರಾಟ (Resale) ಮತ್ತು ಪೂರ್ವ ಸ್ವಾಮ್ಯದ ಏಕಾಯ (Ekaya) ಸಂಸ್ಥೆಯ ಜವಳಿಗಳ ಮರುಸ್ಥಾಪನೆಗೆ ಬದ್ಧವಾಗಿದೆ. ಈ ಯೋಜನೆಯಿಂದ ತಮ್ಮ ಬ್ರ್ಯಾಂಡ್‌ನ ಪೋಷಕರು ತಮ್ಮ ಪೂರ್ವ-ಮಾಲೀಕತ್ವದ ಏಕಾಯ ಸೀರೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಈ ಸಂಸ್ಥೆಯು ಹೇಳಿದೆ.


ಬಟ್ಟೆಗಳ ಬಗ್ಗೆ ಏಕಾಯದ ಸಹ-ಸಂಸ್ಥಾಪಕ ಮತ್ತು ಕ್ರಿಯೇಟಿವ್‌ ಡೈರೆಕ್ಟರ್‌ ಪಾಲಕ್ ಶಾ ಅವರ ಅಭಿಪ್ರಾಯ 
“ನನ್ನ ಕೊಠಡಿಯ ವಾರ್ಡ್‌ರೋಬ್‌ ಅಲ್ಲಿ ಇರುವ ಅಷ್ಟು ಹಳೆಯ ಏಕಾಯ ಜವಳಿ ಬಟ್ಟೆಗಳನ್ನು ಮತ್ತೆ ಹೇಗೆ ವಿಭಿನ್ನವಾಗಿ ಧರಿಸುವುದು? ನನಗೆ ಅತ್ಯಂತ ಇಷ್ಟವಾದ ಬಟ್ಟೆಗಳು ಮತ್ತು ಸೀರೆಗಳನ್ನು ದಿನಾಲೂ ನೋಡುತ್ತಲೇ ಇರುತ್ತೇನೆ. ಅವುಗಳನ್ನು ಆತ್ಮವಿಶ್ವಾಸದಿಂದ ಧರಿಸುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಹಾಗೆಯೇ ಹೊಸ ಶೈಲಿಯ ಬಟ್ಟೆಗಳನ್ನು ಆಗಾಗ ಹುಡುಕುತ್ತಲೇ ಇರುತ್ತೇನೆ ಮತ್ತು ಹಳೆ ಬಟ್ಟೆಗಳನ್ನು ಹೇಗೆ ಮತ್ತೆ ಮರುಬಳಕೆ ಮಾಡಬಹುದು ಎಂಬುದರ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತೇನೆ.


ನಮ್ಮ ಹಳೆ ಬಟ್ಟೆಗಳಿಗೆ ಹೇಗೆ ಮತ್ತೊಂದು ಅವಕಾಶ ನೀಡಿ ಅವುಗಳನ್ನು ಮತ್ತೊಮ್ಮೆ ಧರಿಸಬಹುದು ಎಂಬುದನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಯೋಚಿಸಿ, ಆಗ ನಿಮಗೆ ಉತ್ತರ ಸಿಗುತ್ತದೆ. ಅದರ ಉತ್ತರ ಏಕಾಯ ಜವಳಿ ಬ್ರ್ಯಾಂಡ್‌ ಆಗಿರುತ್ತದೆ. ಇದರಿಂದ ನಿಮ್ಮ ಮನಸ್ಸಿಗೂ ಸಂತೋಷವಾಗುತ್ತದೆ” ಎಂದು ಏಕಾಯದ ಸಹ-ಸಂಸ್ಥಾಪಕ ಮತ್ತು ಕ್ರಿಯೇಟಿವ್‌ ಡೈರೆಕ್ಟರ್‌ ಪಾಲಕ್ ಶಾ ಹೇಳಿದರು.


ಆದ್ದರಿಂದ ನಿಮ್ಮ ಹಳೆಯ ಬಟ್ಟೆಗಳನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ವಾರ್ಡ್‌ರೋಬ್‌ಗೆ ಮತ್ತೊಂದು ಅವಕಾಶ ನೀಡಿ. ಆಗ ನೋಡಿ ನಿಮ್ಮ ಹಳೆ ಬಟ್ಟೆ ಹೇಗೆ ಹೊಸ ಮೆರಗನ್ನು ಪಡೆಯುತ್ತದೆ. ಈ ಜವಳಿ ಹಳೆ ಸೀರೆಗಳನ್ನು ಮತ್ತೊಮ್ಮೆ ಹೇಗೆ ಬಳಸಬೇಕು ಎಂಬುದಕ್ಕೆ ಏಕಾಯ ಸಂಸ್ಥೆಯವರು ತಿಳಿಸಿರುವ ಕೆಲವು ವಿಧಾನಗಳಿವು:


ಮರುಬಳಕೆ
ನೀವು ಈಗಾಗಲೇ ಬಳಸಿದ ಏಕಾಯ ಜವಳಿ ಸೀರೆಗಳನ್ನು ಮರುಮಾರಾಟ ಮಾಡಲಾಗುವುದು ಮತ್ತು ನಿಮ್ಮ ಹಳೆ ಬಟ್ಟೆ ಅಥವಾ ಸೀರೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಡಲಾಗುತ್ತದೆ. ಅದರ ಮಾರಾಟದಿಂದ ಬರುವ ಆದಾಯದೊಂದಿಗೆ ನೀವು ಇನ್ನೊಂದು ಹೊಸ ಅಥವಾ ಪೂರ್ವ ಸ್ವಾಮ್ಯದ ಸೀರೆ ಅಥವಾ ನಿಮಗೆ ಇಷ್ಟವಾಗುವ ಬಟ್ಟೆಯನ್ನು ಆರಿಸಿಕೊಳ್ಳಬಹುದು.


ಇದನ್ನೂ ಓದಿ:  Ranjani Raghavan: ಹೆಣ್ಮಕ್ಕಳ ಜನ್ಮಸಿದ್ಧ ಹಕ್ಕು ಬಗ್ಗೆ ಕನ್ನಡತಿ ಮಾತು! ಉದ್ದ ಲಂಗದಲ್ಲಿ ಭುವಿಯ ಚಂದ ನೋಡಿ


ಮರುಉದ್ದೇಶಿತ
ನಿಮ್ಮ ಏಕಾಯ ಸಂಸ್ಥೆಯ ಬಟ್ಟೆಯನ್ನು ನೀವು ಹೊಸದಾಗಿ ಧರಿಸಲು ಅನುವು ಆಗುವಂತೆ ನಿಮಗೆ ಹೊಂದುವ ಜಾಕೆಟ್‌, ಓಬಿ ಬೆಲ್ಟ್‌, ಪ್ಯಾಂಟ್‌ ಮತ್ತು ಸ್ಕರ್ಟ್‌, ಶರ್ಟ್‌ ಗಳನ್ನಾಗಿ ಬದಲಾಯಿಸಿ ನಿಮಗೆ ಧರಿಸಲು ನೀಡುತ್ತದೆ. ಇದು ಮರು ಉದ್ದೇಶವನ್ನು ಕೂಡ ಹೊಂದಿದೆ.


ಮರುಸಂಗ್ರಹ
ನಿಮ್ಮ ಹಳೆಯ ಜವಳಿ ಬಟ್ಟೆಗಳನ್ನು ಮತ್ತೆ ಹೇಗೆ ಕೊಠಡಿಯ ವಾರ್ಡ್‌ರೋಬ್‌ ಗೆ ರಿಸ್ಟೋರ್‌ ಮಾಡಬೇಕೆಂದು ನೀವು ನಿರ್ಧರಿಸಿ. ಅವುಗಳನ್ನು ಹಾಳಾಗದಂತೆ ಹೇಗೆ ಮತ್ತೆ ಒಂದು ಕಡೆ ಸಂಗ್ರಹ ಮಾಡುವುದು ಎಂಬುದರ ಕುರಿತು ಕಲಿತುಕೊಂಡು, ನಿಮ್ಮ ಬಟ್ಟೆಗಳನ್ನು ಯಾವಾಗಲೂ ಹೊಸದಾಗಿ ಕಾಣುವಂತೆ ಮಾಡಿ.


ಇದನ್ನೂ ಓದಿ: Chewing Gum: ಚ್ಯೂಯಿಂಗ್ ಗಮ್​ನಿಂದ ಗುಳ್ಳೆ ಊದಿ ತಿಂಗಳಿಗೆ ₹ 67 ಸಾವಿರ ಗಳಿಕೆ!


ಮರುಧರಿಸಿ
ನಿಮ್ಮ ಹಳೆ ಬಟ್ಟೆಗಳನ್ನು ಮತ್ತೆ ಮತ್ತೆ ಧರಿಸಿ. ಏಕೆಂದರೆ ಏಕಾಯ ಸಂಸ್ಥೆಯ ಬಟ್ಟೆಗಳು ಎಷ್ಟು ಸಲ ಧರಿಸಿದರೂ ಅವು ತಮ್ಮ ಮೆರಗನ್ನು ಹಾಗೆಯೇ ಉಳಿಸಿಕೊಂಡಿರುತ್ತವೆ. ನಿಮ್ಮನ್ನು ಉತ್ತಮವಾಗಿ ಕಾಣುವಂತೆ ಮಾಡುವುದಲ್ಲದೇ, ನಿಮ್ಮನ್ನು ಆತ್ಮವಿಶ್ವಾಸದಿಂದ ಇರುವಂತೆ ನೋಡಿಕೊಳ್ಳಲು ಈ ಏಕಾಯ ಬಟ್ಟೆಗಳು ಕಾರಣವಾಗುತ್ತವೆ.

Published by:Ashwini Prabhu
First published: