ಮನುಷ್ಯನ (Human) ದೇಹದ (Body) ಪ್ರತಿ ಅಂಗವೂ (Every Part) ಜೀವಕೋಶಗಳಿಂದ (Cells) ಮಾಡಲ್ಪಟ್ಟಿದೆ. ಮತ್ತು ಅವುಗಳಿಗೆ ಆಮ್ಲಜನಕದ (Oxygen) ಅಗತ್ಯವಿದೆ. ಅದರಲ್ಲಿ ಪಮುಖ ಅಂಗವೆಂದರೆ ಶ್ವಾಸಕೋಶಗಳು (Lungs). ಯಾಕೆಂದರೆ ಶ್ವಾಸಕೋಶಗಳು ಉಸಿರಾಟದ ವ್ಯವಸ್ಥೆಯ ಮುಖ್ಯ ಭಾಗ. ಶ್ವಾಸಕೋಶಗಳ ಮೂಲಕ ದೇಹದ ವಿವಿಧ ಅಂಗಗಳು ಆಮ್ಲಜನಕ ಪಡೆಯುತ್ತವೆ. ಶ್ವಾಸಕೋಶಗಳು ನೀವು ಉಸಿರಾಡಲು ಸಹಾಯ ಮಾಡುವ ಕೆಲಸ ಮಾಡುತ್ತವೆ. ಶ್ವಾಸಕೋಶಗಳು ಎದೆಯ ಎರಡೂ ಬದಿಯಲ್ಲಿರುವ ಒಂದು ಜೋಡಿ ಸ್ಪಂಜಿನ, ಗಾಳಿ ತುಂಬಿದ ಅಂಗಗಳು. ನಿಮ್ಮ ಶ್ವಾಸಕೋಶಗಳು ಆರೋಗ್ಯಕರವಾಗಿರಲು ಮತ್ತು ನಿಮ್ಮ ಉಳಿವಿಗಾಗಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ಮುಖ್ಯ ಆಗಿದೆ.
ಆಗಸ್ಟ್ 1 ರಂದು ವಿಶ್ವದಾದ್ಯಂತ ಶ್ವಾಸಕೋಶದ ಕ್ಯಾನ್ಸರ್ ದಿನ ಆಚರಣೆ
ಆದರೆ ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ, ಧೂಮಪಾನ, ಹಾನಿಕಾರಕ ರಾಸಾಯನಿಕಗಳು ಮತ್ತು ಧೂಳು, ಮಣ್ಣು ಮತ್ತು ನಿರಂತರ ಶೀತ, ಒಣ ಗಾಳಿಯಿಂದಾಗಿ ನಿಮ್ಮ ಶ್ವಾಸಕೋಶದಲ್ಲಿ ವಿಷ ಸಂಗ್ರಹಗೊಳ್ಳುತ್ತದೆ.
ಇದು ಶ್ವಾಸಕೋಶದಲ್ಲಿ ಭಾರ, ಬಿಗಿತ ಮತ್ತು ಊತ ಉಂಟು ಮಾಡುತ್ತದೆ. ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರುವ ಅಪಾಯ ಹೆಚ್ಚಿರುತ್ತದೆ. ಇಂತಹ ಸ್ಥಿತಿಯಲ್ಲಿ ಜಾಗೃತಿಗಾಗಿ ಪ್ರತಿ ವರ್ಷ ಆಗಸ್ಟ್ 1 ರಂದು ವಿಶ್ವದಾದ್ಯಂತ ಶ್ವಾಸಕೋಶದ ಕ್ಯಾನ್ಸರ್ ದಿನ ಆಚರಣೆ ಮಾಡುತ್ತಾರೆ.
ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ
ಶ್ವಾಸಕೋಶದಿಂದ ಕಫ ತೆಗೆದು ಹಾಕುವುದು
ಕೆಜೆ ಸೋಮಯ್ಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಯುರ್ವೇದ ಎಚ್‌ಒಡಿ ಡಾ ಸ್ವಪ್ನಾ ಕದಂ ಅವರು ಶ್ವಾಸಕೋಶ ಆರೋಗ್ಯದ ಬಗ್ಗೆ ವಿವರಿಸಿದ್ದಾರೆ. ಶ್ವಾಸಕೋಶಗಳು ಸ್ವಯಂ-ಶುದ್ಧೀಕರಣದ ಅಂಗಗಳಾಗಿವೆ. ಆದರೂ ಸಹ ಶ್ವಾಸಕೋಶದಿಂದ ಕಫ ತೆಗೆದು ಹಾಕಲು ಮತ್ತು ಉಸಿರಾಡುವ ಸಾಮರ್ಥ್ಯ ಹೆಚ್ಚಿಸಲು ಕೆಲವು ಕೆಲಸ ಮಾಡಬೇಕು ಎಂದು ಹೇಳುತ್ತಾರೆ.
ಪರಿಣಾಮಕಾರಿ ಶ್ವಾಸಕೋಶದ ಶುದ್ಧೀಕರಣವು ಕಫ ಮತ್ತು ಉದ್ರೇಕಕಾರಿ ಅಂಶವನ್ನು ತೆರವುಗೊಳಿಸುತ್ತದೆ. ಹೀಗಾಗಿ ಎದೆಯ ಬಿಗಿತ ಮತ್ತು ಇತರ ಶ್ವಾಸಕೋಶ ಸಮಸ್ಯೆಗಳಿಗೆ ತಾನಾಗಿಯೇ ಪರಿಹಾರ ಸಿಗುತ್ತದೆ. ಇದು ವಾಯು ಮಾರ್ಗಗಳನ್ನು ತೆರೆಯುತ್ತದೆ ಮತ್ತು ನಿಮ್ಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.
ಸ್ಟೀಮ್ ಥೆರಪಿ ಮೂಲಕ ಶ್ವಾಸಕೋಶದ ಕೊಳೆ ತೊಡೆದು ಹಾಕಿ
ಉಗಿ ಚಿಕಿತ್ಸೆಯಲ್ಲಿ ನೀರಿನ ಆವಿಯನ್ನು ಉಸಿರಾಟದ ಮೂಲಕ ಉಸಿರಾಡಬೇಕು. ಉಗಿ ಗಾಳಿಗೆ ಶಾಖ ಮತ್ತು ತೇವಾಂಶ ತರುತ್ತದೆ. ಇದು ಉಸಿರಾಟವನ್ನು ಸುಧಾರಿಸುತ್ತದೆ. ಮತ್ತು ವಾಯುಮಾರ್ಗಗಳು ಮತ್ತು ಶ್ವಾಸಕೋಶಗಳಲ್ಲಿ ಅಸ್ತಿತ್ವದಲ್ಲಿರುವ ಕಫವನ್ನು ಸಡಿಲ ಮಾಡುತ್ತದೆ. ಇದು ಉಸಿರಾಟದ ತೊಂದರೆಯಿಂದ ತ್ವರಿತ ಪರಿಹಾರ ನೀಡುತ್ತದೆ.
ಶ್ವಾಸಕೋಶವನ್ನು ತೆರವುಗೊಳಿಸಲು ನೈಸರ್ಗಿಕ ಮಾರ್ಗ ಯಾವುದು?
ಕೆಮ್ಮುವುದು ಜೀವಾಣು ವಿಷವನ್ನು ಹೊರ ಹಾಕಲು ದೇಹದ ಸ್ವಂತ ನೈಸರ್ಗಿಕ ವಿಧಾನವಾಗಿದೆ. ಆಗ ಶ್ವಾಸಕೋಶದಲ್ಲಿ ತುಂಬಿರುವ ತ್ಯಾಜ್ಯವು ಕಫದ ರೂಪದಲ್ಲಿ ಹೊರ ಬರುತ್ತದೆ. ಆಯುರ್ವೇದ ತಜ್ಞರು ಶ್ವಾಸಕೋಶದಲ್ಲಿ ಅಸ್ವಸ್ಥತೆ ಉಂಟಾದಾಗ ಕೆಮ್ಮುವುದು ಪರಿಹಾರ ನೀಡುತ್ತದೆ ಎನ್ನುತ್ತಾರೆ.
ಕೆಮ್ಮುವ ವಿಧಾನ ಹೀಗಿದೆ
ನಿಮ್ಮ ಭುಜಗಳನ್ನು ಸಡಿಲಿಸಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಎರಡೂ ಪಾದಗಳನ್ನು ನೆಲದ ಮೇಲೆ ಇರಿಸಿ. ಹೊಟ್ಟೆಯ ಮೇಲೆ ಕೈಗಳನ್ನು ಮಡಚಿ, ಮೂಗಿನ ಮೂಲಕ ನಿಧಾನವಾಗಿ ಉಸಿರಾಡಿ. ಮುಂದಕ್ಕೆ ಬಾಗಿ, ನಿಧಾನವಾಗಿ ಉಸಿರು ಬಿಡಿ. ಹೊಟ್ಟೆಯ ಮೇಲೆ ಕೈಗಳನ್ನು ಒತ್ತಿ, ಈಗ ಉಸಿರು ಹೊರ ಬಿಡುವಾಗ, ಎರಡರಿಂದ ಮೂರು ಬಾರಿ ಕೆಮ್ಮು,
ಬಾಯಿಯನ್ನು ಸ್ವಲ್ಪ ತೆರೆಯಿರಿ. ಮೂಗಿನ ಮೂಲಕ ನಿಧಾನವಾಗಿ ಉಸಿರಾಡಿ. ನಂತರ ವಿಶ್ರಾಂತಿ ಮತ್ತೆ ಪುನರಾವರ್ತಿಸಿ. ಈ ರೀತಿ ಕೆಮ್ಮುವ ಉಸಿರಾಟದ ಮಾದರಿಯನ್ನು ಅಭ್ಯಾಸ ಮಾಡಿ. ಕೆಲವು ನಿಮಿಷಗಳ ಕಾಲ ಇದನ್ನು ಮಾಡುತ್ತಿರಿ. ಇದು ಪರಿಹಾರ ನೀಡುತ್ತದೆ.
ಆರೋಗ್ಯಕರ ಶ್ವಾಸಕೋಶಕ್ಕೆ ವ್ಯಾಯಾಮ ಮಾಡಿ
ನಿಯಮಿತ ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ವ್ಯಾಯಾಮವು ಸ್ನಾಯುಗಳನ್ನು ವೇಗವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಇದು ಶ್ವಾಸಕೋಶವನ್ನು ಬಲಪಡಿಸುತ್ತದೆ. ಇದರಿಂದಾಗಿ ಸಾಕಷ್ಟು ಪ್ರಮಾಣದ ಆಮ್ಲಜನಕವು ಸ್ನಾಯುಗಳಿಗೆ ತಲುಪುತ್ತದೆ. ರಕ್ತ ಪರಿಚಲನೆ ಕೂಡ ಉತ್ತಮವಾಗುತ್ತದೆ. ದೇಹವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಬನ್ ಡೈಆಕ್ಸೈಡ್ ಅನ್ನು ತೆಗೆದು ಹಾಕುತ್ತದೆ. ಇದು ವ್ಯಾಯಾಮದ ಸಮಯದಲ್ಲಿ ಉತ್ಪತ್ತಿ ಆಗುತ್ತದೆ.
ಧೂಮಪಾನದಿಂದ ಶ್ವಾಸಕೋಶಗಳು ಕೊಳೆಯುತ್ತವೆ
ಶ್ವಾಸಕೋಶದ ಆರೋಗ್ಯಕ್ಕೆ ಧೂಮಪಾನದಿಂದ ದೂರವಿರಿ. ಉಸಿರಾಡುವಾಗ ಹೊಗೆ ತಕ್ಷಣವೇ ನಿಮ್ಮ ಶ್ವಾಸಕೋಶದಲ್ಲಿ ಉಳಿಯುತ್ತದೆ. ಇದು ವಿಷಕಾರಿ ರಾಸಾಯನಿಕಗಳು ರಕ್ತದಲ್ಲಿ ಬೆರೆತು ಇಡೀ ದೇಹಕ್ಕೆ ತಲುಪಿ ಅಪಾಯ ತಂದೊಡ್ಡುತ್ತವೆ.
ಇದನ್ನೂ ಓದಿ: ಆರೋಗ್ಯಕರ ಜೀವಕೋಶ ಹೊಂದಲು ದಿನಕ್ಕೆಷ್ಟು ಪ್ರೋಟೀನ್ ಬೇಕು ಗೊತ್ತೇ?
ಉರಿಯೂತ ನಿವಾರಕ ಆಹಾರ ಸೇವಿಸಿ
ಶ್ವಾಸನಾಳದ ಉರಿಯೂತವು ಉಸಿರಾಟದ ತೊಂದರೆ, ಎದೆಯಲ್ಲಿ ಭಾರ ಮತ್ತು ಬಿಗಿತದ ಭಾವನೆ ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ, ಅರಿಶಿನ, ಶುಂಠಿ ಸೇವನೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ