Weight Loss: ಸೊಂಟದ ಕೊಬ್ಬನ್ನು ಕರಗಿಸಲು ಈ ವ್ಯಾಯಾಮ ಮಾಡಿ ನೋಡಿ

ದೇಹದ ಕೆಳಗಿನ ಭಾಗದಲ್ಲಿ ಅತಿಯಾದ ಕೊಬ್ಬು ಉಂಟಾಗುತ್ತದೆ. ಕಳಪೆ ಆಹಾರ ಪದ್ಧತಿ ವ್ಯಾಯಾಮ ಕೊರತೆ ವಯಸ್ಸಾಗುವಿಕೆ ಹಾರ್ಮೋನು ಪರಿಣಾಮ ಕೊಬ್ಬು ಹೆಚ್ಚುತ್ತದೆ. ಅಂತಹ ಸ್ಥಿತಿಯಲ್ಲಿ ಸರಿಯಾದ ವ್ಯಾಯಾಮ ಮಾಡುವುದು ಸೊಂಟ ಮತ್ತು ತೊಡೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತೂಕ ಇಳಿಕೆಯಲ್ಲಿ (Weight Loss) ಹೆಚ್ಚಿನ ಜನರು (People) ಬೆಲ್ಲಿ ಫ್ಯಾಟ್ (Belly Fat) ಕರಗಿಸುವತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಕಾಲು, ತೊಡೆಯ (Thigh) ತೂಕ ಇಳಿಕೆ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಟೋನ್ ಮತ್ತು ಸ್ಲಿಮ್ ಕಾಲು ಹೊಂದುವುದು ಎಲ್ಲರ ಕನಸಾಗಿರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ತೊಡೆ ಭಾಗದ ಕೊಬ್ಬು ಕರಗಿಸುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇಡೀ ದೇಹದ ತೂಕ ಕಡಿಮೆ ಮಾಡದೆ ನಿಮ್ಮ ತೊಡೆಗಳಿಂದ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ತೊಡೆಗಳು ಮತ್ತು ಕೆಳಗಿನ ದೇಹವನ್ನು ಟೋನ್ ಮಾಡಲು ಸಾಧ್ಯವಿದೆ.

     ವ್ಯಾಯಾಮ ಮಾಡುವುದು ಕೊಬ್ಬು ಕರಗಿಸುತ್ತದೆ

    ದೇಹದ ಕೆಳಗಿನ ಭಾಗದಲ್ಲಿ ಅತಿಯಾದ ಕೊಬ್ಬು ಉಂಟಾಗುತ್ತದೆ. ಕಳಪೆ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ವಯಸ್ಸಾಗುವಿಕೆ, ಹಾರ್ಮೋನು ಪರಿಣಾಮ ಕೊಬ್ಬು ಹೆಚ್ಚುತ್ತದೆ. ಅಂತಹ ಸ್ಥಿತಿಯಲ್ಲಿ ಸರಿಯಾದ ವ್ಯಾಯಾಮ ಮಾಡುವುದು ಸೊಂಟ ಮತ್ತು ತೊಡೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.

    ಜೀವನಶೈಲಿಯಲ್ಲಿ ಹಲವು ಉತ್ತಮ ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ. ಇದರಿಂದ ನೀವು ನಿಮ್ಮ ಸೊಂಟ ಮತ್ತು ತೊಡೆಯ ಸುತ್ತಲಿನ ಕೊಬ್ಬನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿದೆ. ನೀವು ಕೆಲವು ಸರಳ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಬಹುದು. ಹಾಗಾದರೆ ತೊಡೆಯ ಭಾಗದ ಕೊಬ್ಬು ಕರಗಿಸಲು ಕೆಲವು ಸರಳ ವ್ಯಾಯಾಮಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

    ಸೊಂಟ ಮತ್ತು ತೊಡೆಯ ಕೊಬ್ಬನ್ನು ಕಡಿಮೆ ಮಾಡುವ ವ್ಯಾಯಾಮಗಳು

    ಸ್ಕ್ವಾಟ್ ವ್ಯಾಯಾಮ

    ಕ್ವಾಡ್‌ಗಳು, ಹ್ಯಾಮ್‌ಸ್ಟ್ರಿಂಗ್‌ಗಳು, ಗ್ಲುಟ್ಸ್, ಕಡಿಮೆ ಬೆನ್ನಿನ ವ್ಯಾಯಾಮ ಮಾಡಬೇಕು. ಪ್ರತಿ ವ್ಯಾಯಾಮವನ್ನು ಹತ್ತು ಬಾರಿ ಪುನರಾವರ್ತನೆ ಮಾಡಬೇಕು.

    ಸ್ಕ್ವಾಟ್ ವ್ಯಾಯಾಮ ಮಾಡುವುದು ಹೇಗೆ

    ನೆಲದ ಮೇಲೆ ನೇರವಾಗಿ ನಿಂತು ನಿಮ್ಮ ಪಾದಗಳನ್ನು ಅಗಲ ಮಾಡಿ. ಶಾಂತ ಸ್ಥಿತಿಯಲ್ಲಿರಿ. ನಿಮ್ಮ ತೋಳುಗಳನ್ನು ನಿಮ್ಮ ಮುಂದಕ್ಕೆ ಚಾಚಿರಿ. ನಿಮ್ಮ ಮೊಣಕಾಲು ಬಗ್ಗಿಸಿ. ಮತ್ತು ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳುವ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲುಗಳು ನಿಮ್ಮ ಕಾಲ್ಬೆರಳುಗಳ ಹಿಂದೆ ಇರಬೇಕು. ಮೂಲ ಸ್ಥಾನಕ್ಕೆ ಹಿಂತಿರುಗುವ ಮೊದಲು ಎರಡರಿಂದ ಮೂರು ಸೆಕೆಂಡುಗಳ ಕಾಲ ಇದೇ ಭಂಗಿಯಲ್ಲಿ ಇರಿ.

    ಸ್ಟ್ಯಾಂಡಿಂಗ್ ಫಾರ್ವರ್ಡ್ ಬ್ಯಾಂಡ್

    ಈ ವ್ಯಾಯಾಮ ತೊಡೆಯ ಕೊಬ್ಬನ್ನು ಬೇಗ ಕರಗಿಸುತ್ತದೆ.

    ಸ್ಟ್ಯಾಂಡಿಂಗ್ ಫಾರ್ವರ್ಡ್ ಬ್ಯಾಂಡ್  ಹೇಗೆ ಮಾಡುವುದು

    ನಿಮ್ಮ ಪಾದಗಳನ್ನು ನೆಲದ ಮೇಲೆ ಇರಿಸಿ. ನೇರವಾಗಿ ನಿಂತುಕೊಳ್ಳಿ. ನಿಮ್ಮ ದೇಹವನ್ನು ಶಾಂತ ಸ್ಥಿತಿಯಲ್ಲಿ ಇರಿಸಿ. ಮತ್ತು ನಿಮ್ಮ ಕೈಗಳನ್ನು ನಿಮ್ಮ ಪಕ್ಕದಲ್ಲಿ ಇರಿಸಿರಿ. ನಿಮ್ಮ ದೇಹದ ಮೇಲಿನ ಭಾಗವನ್ನು ಓರೆಯಾಗಿಸಿ ಮತ್ತು ನಿಧಾನವಾಗಿ ಕೆಳಕ್ಕೆ ಇಳಿಸಿ.

    ನಿಮ್ಮ ಕೈಗಳಿಂದ ನಿಮ್ಮ ಮುಂದೆ ನೆಲ ಅಥವಾ ಚಾಪೆಯನ್ನು ಸ್ಪರ್ಶಿಸಲು ಪ್ರಯತ್ನಿಸಿ. ನಿಮ್ಮ ತಲೆಯು ನಿಮ್ಮ ಮೊಣಕಾಲುಗಳನ್ನು ಸ್ಪರ್ಶಿಸಲಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡು ಇರಿ. ಮತ್ತು ನಿಧಾನವಾಗಿ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ.

    ಲಂಜಸ್ ವ್ಯಾಯಾಮ

    ಈ ವ್ಯಾಯಾಮವನ್ನು ಪ್ರತಿ ಬಾರಿ 10 ರಿಂದ 15 ಬಾರಿ ಪುನರಾವರ್ತಿಸಿ. ವ್ಯಾಯಾಮ ಮಾಡುವಾಗ ಪ್ರತಿ ಕೈಯಲ್ಲಿ ಡಂಬ್ಬೆಲ್ ಹಿಡಿಯಬೇಕು.

    ಲಂಜಸ್ ವ್ಯಾಯಾಮ ಮಾಡುವುದು ಹೇಗೆ

    ನೆಲದ ಮೇಲೆ ನಿಂತುಕೊಳ್ಳಿ. ಮತ್ತು ನಿಮ್ಮ ಪಾದಗಳನ್ನು ಹಿಪ್ ಅಗಲವಾಗಿ ಇರಿಸಿರಿ ಮತ್ತು ನಿಮ್ಮ ಎರಡೂ ಕೈಗಳನ್ನು ನಿಮ್ಮ ಸೊಂಟದ ಮೇಲೆ ಇರಿಸಿರಿ. ಈಗ ನಿಮ್ಮ ಬಲ ಪಾದವನ್ನು ಒಂದು ಅಡಿ ಮುಂದಕ್ಕೆ ತನ್ನಿರಿ. ನಿಮ್ಮ ಮುಂಭಾಗ ಮತ್ತು ಹಿಂಭಾಗದ ಎರಡೂ ಕಾಲುಗಳು 90 ಡಿಗ್ರಿ ಕೋನ ರೂಪಿಸುವಂತಿರಲಿ.

    ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

    ನಿಮ್ಮ ಬಲ ಕಾಲು ನಿಮ್ಮ ಕಾಲ್ಬೆರಳು ದಾಟಬಾರದು. 2 ರಿಂದ 3 ಸೆಕೆಂಡು ಇದೇ ಭಂಗಿಯಲ್ಲಿರಿ. ಆರಂಭಿಕ ಸ್ಥಾನಕ್ಕೆ ಹಿಂತಿರುಗಲು ನಿಮ್ಮ ಬಲ ಹಿಮ್ಮಡಿ ಒತ್ತಿರಿ. ಎಡಗಾಲಿನಿಂದ ಅದೇ ಪುನರಾವರ್ತನೆ ಮಾಡಿ.
    Published by:renukadariyannavar
    First published: