• Home
 • »
 • News
 • »
 • lifestyle
 • »
 • Bloating Problem: ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿರುವಿರಾ? ಈ ಸಲಹೆಗಳನ್ನ ಪಾಲಿಸಿ ನೋಡಿ

Bloating Problem: ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿರುವಿರಾ? ಈ ಸಲಹೆಗಳನ್ನ ಪಾಲಿಸಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫಿಸಿಕೋ ಡಯಟ್ ಕ್ಲಿನಿಕ್ ನ ಆಹಾರ ತಜ್ಞೆ ವಿಧಿ ಚಾವ್ಲಾ ಅವರು ಹೊಟ್ಟೆ ಉಬ್ಬರವನ್ನು ಗುಣಪಡಿಸಲು ಕೆಲವು ಉತ್ತಮ ಮಾರ್ಗಗಳನ್ನು ಶಿಫಾರಸು ಮಾಡಿದ್ದಾರೆ ನೋಡಿ.

 • Share this:

  ಕೆಲವರು ಊಟ (Food) ಮಾಡಿದ  ತಕ್ಷಣವೇ ಹೊಟ್ಟೆ ಉಬ್ಬರ ಸಮಸ್ಯೆಯಿಂದ (Bloating) ಬಳಲುತ್ತಾರೆ. ‘ಏನಪ್ಪಾ ಇದು ಊಟಕ್ಕೂ ಮುಂಚೆ ಯಾವುದೇ ಸಮಸ್ಯೆ ಇರಲಿಲ್ಲ, ಊಟ ಮಾಡಿದ ನಂತರ ಹೊಟ್ಟೆ ಉಬ್ಬರ ಸಮಸ್ಯೆ ಶುರುವಾಯ್ತಲ್ಲ, ಇನ್ನೂ ಎಂತಹ ಆಹಾರ ಸೇವಿಸಬೇಕು’ ಅಂತ ಅಂದುಕೊಳ್ಳುತ್ತಾ ಇರುವುದನ್ನು ನಾವು ನೋಡಿರುತ್ತೇವೆ. ಹೊಟ್ಟೆ ಉಬ್ಬರ ಎನ್ನುವುದು ಒಂದು ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಯಾಗಿದ್ದು, ನಿಮ್ಮ ಅನಾರೋಗ್ಯಕರ ಆಹಾರ ಪದ್ಧತಿಗಳು ಇದರ ಹಿಂದಿನ ಕಾರಣವಾಗಿರಬಹುದು. ಇದಕ್ಕೇನು ಪರಿಹಾರವಿದೆ ಅಂತ ನೀವು ಕೇಳಬಹುದು ಅಲ್ಲವೇ? ಹೌದು, ಇಲ್ಲೊಂದಿಷ್ಟು ಸರಳ ಸಲಹೆಗಳನ್ನು ತಿಳಿಸಲಾಗಿದೆ. ಈ ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಪಾರಾಗಬಹುದು.


  ಫಿಸಿಕೋ ಡಯಟ್ ಕ್ಲಿನಿಕ್ ನ ಆಹಾರ ತಜ್ಞೆ ವಿಧಿ ಚಾವ್ಲಾ ಅವರು ಹೊಟ್ಟೆ ಉಬ್ಬರವನ್ನು ಗುಣಪಡಿಸಲು ಕೆಲವು ಉತ್ತಮ ಮಾರ್ಗಗಳನ್ನು ಶಿಫಾರಸು ಮಾಡಿದ್ದಾರೆ ನೋಡಿ.


  ಹೊಟ್ಟೆ ಉಬ್ಬರ ಹೇಗೆ ಸಂಭವಿಸುತ್ತದೆ?


  "ಹೊಟ್ಟೆ ಉಬ್ಬರವು ಸಾಮಾನ್ಯವಾಗಿ ಜಠರಗರುಳಿನ ನಾಳದಲ್ಲಿ ಅನಿಲದ ನಿರ್ಮಾಣದಿಂದಾಗಿ ಸಂಭವಿಸುತ್ತದೆ. ಆದ್ದರಿಂದ, ಇದು ಆಹಾರ, ಪಾನೀಯಗಳು, ಜೀರ್ಣಕಾರಿ ಸಮಸ್ಯೆಗಳು ಅಥವಾ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಋತುಚಕ್ರದ ಸಮಯದಲ್ಲಿಯೂ ಸಹ ಸಂಭವಿಸಬಹುದು" ಎಂದು ಚಾವ್ಲಾ ಹೇಳುತ್ತಾರೆ.


  ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿವೆ 9 ಸಲಹೆಗಳು


  1. ಸರಳ ವ್ಯಾಯಾಮಗಳನ್ನು ಮಾಡುವುದು


  ವಾಕಿಂಗ್ ಗೆ ಹೋಗುವುದು ಅಥವಾ ಸರಳವಾದ ಯೋಗ ಭಂಗಿಗಳನ್ನು ಮಾಡುವುದು ನಿಮ್ಮ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುವಲ್ಲಿ ತುಂಬಾನೇ ಸಹಾಯ ಮಾಡುತ್ತದೆ. ಈ ವ್ಯಾಯಾಮಗಳು ಕರುಳನ್ನು ಚಲಿಸುವಂತೆ ಮಾಡುತ್ತದೆ ಮತ್ತು ಅದರಲ್ಲಿರುವ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: Pregnancy Care: ಗರ್ಭಾವಸ್ಥೆಯಲ್ಲಿ ಈ ತಪ್ಪು ಮಾಡಿದ್ರೆ ಗರ್ಭಪಾತಕ್ಕೆ ಕಾರಣವಾಗಬಹುದು ಎಚ್ಚರ!


  2. ನಿಮ್ಮ ಫಿಜ್ಜಿ ಪಾನೀಯಗಳನ್ನು ಬದಲಿಸಿ


  ಫಿಜ್ಜಿ ಸೋಡಾಗಳಲ್ಲಿ ಎಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಸೇರಿಸಲಾಗಿರುತ್ತದೆ ಅಂತ ನಿಮಗೆ ತಿಳಿದಿದೆಯೇ? ಸರಿ, ಇದು ನಿಮ್ಮನ್ನು ಕೆರಳಿಸಲು ಮತ್ತು ನಿಮ್ಮ ಹೊಟ್ಟೆಯಲ್ಲಿ ಗುಳ್ಳೆಯನ್ನು ತರುವಷ್ಟು ಹೆಚ್ಚಾಗಿದೆ. ಅವುಗಳ ಬದಲಿಗೆ ನೀವು ತಾಜಾ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿಯಿರಿ. ಹೊಟ್ಟೆ ಉಬ್ಬರಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಕೃತಕ ಸಿಹಿಕಾರಕಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.


  3. ಪ್ರೋಬಯಾಟಿಕ್ಸ್ ಸೇವಿಸಿ


  ಜಠರದ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಮೊಸರು ಅಥವಾ ಇತರ ಪ್ರೋಬಯಾಟಿಕ್ ಪೂರಕಗಳನ್ನು ಸೇವಿಸಿ. ಕರುಳಿನ ಬ್ಯಾಕ್ಟೀರಿಯಾಗಳು ಅನಿಲವನ್ನು ಉಂಟು ಮಾಡುತ್ತವೆ, ಇದು ಹೊಟ್ಟೆ ಉಬ್ಬರಕ್ಕೆ ಸಹ ಕಾರಣವಾಗುತ್ತದೆ. ಪ್ರೋಬಯಾಟಿಕ್ಸ್ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  4. ಹೆಚ್ಚು ನಾರಿನಂಶವಿರುವ ಆಹಾರವನ್ನು ಸೇವಿಸಿ


  ಸೋಯಾ ಮತ್ತು ಅದರ ಉತ್ಪನ್ನಗಳಂತಹ ಆನುವಂಶಿಕವಾಗಿ ಮಾರ್ಪಡಿಸಿದ ಆಹಾರಗಳನ್ನು ಸೇವಿಸುವ ಬದಲು ಬಟಾಣಿ, ಬ್ರೊಕೋಲಿ ಮತ್ತು ಅಣಬೆಗಳಂತಹ ಇತರ ಪ್ರೋಟೀನ್ ಸಮೃದ್ಧ ಸಸ್ಯಾಹಾರಿ ಊಟವನ್ನು ಆರಿಸಿಕೊಳ್ಳಿ.


  ಕರುಳಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಕರಗುವ ಮತ್ತು ಕರಗದ ನಾರುಗಳು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತವೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಬಹುದು.


  5. ಉಪ್ಪಿನಂಶವಿರುವ ಆಹಾರಗಳಿಂದ ದೂರವಿರಿ


  ಉಪ್ಪಿನಂಶವಿರುವ ಆಹಾರಗಳನ್ನು ನೀವು ಇಷ್ಟಪಡುತ್ತೀರಾ? ಹಾಗಿದ್ದರೆ, ಸೋಡಿಯಂ ನಿಮ್ಮ ದೇಹವನ್ನು ನೀರಿನ ಮೇಲೆ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ, ಇದು ನಿಮ್ಮ ಹೊಟ್ಟೆಯನ್ನು ಉಬ್ಬಿಸುತ್ತದೆ ಎಂದು ನೀವು ತಿಳಿದಿರಬೇಕು. ಹೊಟ್ಟೆ ಉಬ್ಬರವನ್ನು ತಡೆಗಟ್ಟಲು ನಿಮ್ಮ ಉಪ್ಪಿನ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಿರಿ.


  ಇದನ್ನೂ ಓದಿ: Anemia Diet: ಅನಿಮಿಯಾ ಸಮಸ್ಯೆ ಇದ್ರೆ ಈ ಡಯೆಟ್ ಫಾಲೋ ಮಾಡ್ಬೇಕಂತೆ


  6. ಹರ್ಬಲ್ ಟೀ ಕುಡಿಯಿರಿ


  ಹೊಟ್ಟೆ ಉಬ್ಬರದ ಸಮಸ್ಯೆಗೆ ಹರ್ಬಲ್ ಟೀ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಶುಂಠಿಯು ಉರಿಯೂತ ಶಮನಕಾರಿ ಪರಿಣಾಮಗಳನ್ನು ಹೊಂದಿದ್ದು, ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಶುಂಠಿ ಚಹಾದ ಹೊರತಾಗಿ, ಅರಿಶಿನ ಮತ್ತು ಸೋಂಪು ಚಹಾವನ್ನು ಸಹ ನೀವು ಪ್ರಯತ್ನಿಸಬಹುದು.


  7. ಏಲಕ್ಕಿ ಪುಡಿ


  ಏಲಕ್ಕಿ, ಶುಂಠಿ ಮತ್ತು ಕಲ್ಲುಪ್ಪಿನ ಒಣ ಪುಡಿಯನ್ನು ತಯಾರಿಸಿ ಬಿಸಿ ನೀರಿನಲ್ಲಿ ಹಾಕಿಕೊಂಡು ಸೇವಿಸಿ. ಇದು ಅಜೀರ್ಣವನ್ನು ದೂರ ಮಾಡುತ್ತದೆ, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ಹೊಟ್ಟೆ ಉಬ್ಬರವನ್ನು ಸಹ ಇದು ತಡೆಯುತ್ತದೆ.


  8. ಕ್ಯಾಮೊಮೈಲ್ ಟೀ ಸೇವಿಸಿ


  ನಿಮಗೆ ಭಾವನಾತ್ಮಕ ಸಾಂತ್ವನವನ್ನು ಒದಗಿಸುವುದರ ಜೊತೆಗೆ, ಒಂದು ಬೆಚ್ಚಗಿನ ಕಪ್ ಪರಿಮಳಯುಕ್ತ ಕ್ಯಾಮೊಮೈಲ್ ಟೀ ಕಾರ್ಮಿನೇಟಿವ್ ಇರುವಿಕೆಯಿಂದಾಗಿ ಕಡಿಮೆ ಉಬ್ಬಿದ ಅನುಭವವನ್ನು ಅನುಭವಿಸಲೂ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಆ ಹೊಟ್ಟೆ ಉಬ್ಬರವನ್ನು ನಿವಾರಿಸಲು, ನೀವು ಒಂದು ಕಪ್ ಕ್ಯಾಮೊಮೈಲ್ ಟೀ ಮಾಡಿಕೊಂಡು ಕುಡಿಯಿರಿ.


  9. ಇಂಗು (ಹಿಂಗು) ಮತ್ತು ಅಜ್ವೈನ್


  ಇಂಗು ಮತ್ತು ಅಜ್ವೈನ್ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಗಿಡಮೂಲಿಕೆ ಪರಿಹಾರಗಳಾಗಿ ಯುಗಯುಗಗಳಿಂದ ಬಳಸಲಾಗುತ್ತಿದೆ. ನೀವು ಅವುಗಳನ್ನು ಬೆಚ್ಚಗಿನ ನೀರಿನಲ್ಲಿ ಹಾಕಿಕೊಂಡು ಸೇವಿಸಬಹುದು. ಇದು ಮುಟ್ಟಿನ ಸೆಳೆತ, ಅಜೀರ್ಣ, ಉರಿಯೂತ ಮತ್ತು ಹೊಟ್ಟೆ ಉಬ್ಬರವನ್ನು ಸಹ ನಿವಾರಿಸಲು ಸಹಾಯ ಮಾಡುತ್ತದೆ.

  Published by:Kavya V
  First published: