ಸೊಂಟದ ಭಾಗ ಅಂದ್ರೆ ಹೊಟ್ಟೆಯ ಕೊಬ್ಬನ್ನು (Belly fat) ಕರಗಿಸುವುದು ತುಂಬಾ ಕಷ್ಟಕರ. ಯಾಕಂದ್ರೆ ಬಹುತೇಕ ಕೊಬ್ಬು ಹೊಟ್ಟೆಯ ಭಾಗದಲ್ಲಿ (Stomach Part) ಸಂಗ್ರಹ ಆಗುತ್ತದೆ. ಈ ಕೊಬ್ಬು ಕರಗಿಸುವುದು ತುಂಬಾ ಮುಖ್ಯ. ತೂಕ ಇಳಿಕೆಗೆ (Weight Loss) ಮೊದಲು ನಮ್ಮ ಆಹಾರ (Food) ಕ್ರಮದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಬೆಳಗಿನ ಉಪಾಹಾರ (Morning Breakfast). ಯಾಕಂದ್ರೆ ಬೆಳಗಿನ ತಿಂಡಿ ದಿನದ ಮೊದಲ ಹಾಗೂ ಪ್ರಮುಖ ಊಟ ಆಗಿದೆ. ಹಾಗಾಗಿ ದಿನದ ಮೊದಲ ಊಟವಾದ ಬೆಳಗಿನ ತಿಂಡಿಯನ್ನು ಯಾವಾಗಲೂ ತಪ್ಪಿಸಬಾರದು ಅಂತಾರೆ ತಜ್ಞರು. ಆರೋಗ್ಯಕರ ಜೀವನಶೈಲಿಗೆ ಉಪಹಾರ ಸೇವನೆ ತುಂಬಾ ಮುಖ್ಯ.
ಬೆಲ್ಲಿ ಫ್ಯಾಟ್ ಕರಗಿಸಲು ಆಹಾರ ಕ್ರಮದತ್ತ ಗಮನಹರಿಸಿ
ಸದೃಢ ಆರೋಗ್ಯ ಹೊಂದಲು ಬೆಳಗಿನ ಉಪಾಹಾರವನ್ನು ಬೆಳಗ್ಗೆ ಎಂಟು ಗಂಟೆ ಒಳಗೆ ಅಥವಾ ಬೆಳಿಗ್ಗೆ ಹತ್ತು ಗಂಟೆಯೊಳಗೆ ಸೇವನೆ ಮಾಡಬೇಕು. ಬೆಳಗಿನ ಉಪಾಹಾರ ಸೇವನೆ ನಿಮ್ಮ ದೇಹವನ್ನು ಬೆಳಗ್ಗೆ ಎದ್ದ ನಂತರ ದಿನ ಪೂರ್ತಿ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ.
ಅದರ ಜೊತೆಗೆ ನಿಯಮಿತವಾಗಿ ಬೆಳಗಿನ ಉಪಾಹಾರ ಸೇವನೆ, ಸಮಯ ಮತ್ತು ಯಾವ ಪದಾರ್ಥ ಸೇವನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಯಾಕಂದ್ರೆ ಬೆಳಗಿನ ಉಪಾಹಾರದಲ್ಲಿ ಆರೋಗ್ಯಕರ ಪದಾರ್ಥ ಸೇವನೆ ತುಂಬಾ ಮುಖ್ಯ. ಯಾಕಂದ್ರೆ ಪ್ಯಾಕೇಜ್ ಫುಡ್, ಜಂಕ್ ಫುಡ್ ಸೇವನೆ ನಿಮ್ಮ ತೂಕ ಹೆಚ್ಚಳ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಹಾಗಾಗಿ ನೀವು ಉಪಾಹಾರದಲ್ಲಿ ಆರೋಗ್ಯಕರ ಪದಾರ್ಥ ಸೇರಿಸಿ. ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್, ಪ್ಯಾಕೇಜ್ ಫುಡ್, ಸಂಸ್ಕರಿಸಿದ ಆಹಾರ ಸೇವನೆ ಮಾಡುವುದು ತಪ್ಪಿಸಿ. ಇದರ ಬದಲು ಫೈಬರ್ ಮತ್ತು ಪ್ರೊಟೀನ್ ಭರಿತ ತರಕಾರಿ ಹಾಗೂ ಹಣ್ಣು ಮತ್ತು ವಿವಿಧ ಪೋಷಕಾಂಶ ಭರಿತ ಖಾದ್ಯ ತಯಾರಿಸಿ ಸೇವನೆ ಮಾಡಿ.
ಸಕ್ಕರೆ ಭರಿತ ಕಾಫಿ ಸೇವನೆ ತಪ್ಪಿಸಿ
ಹೊಟ್ಟೆ ಕೊಬ್ಬು ಕಡಿಮೆ ಮಾಡಲು ನೀವು ಬೆಳಗಿನ ಉಪಾಹಾರದಲ್ಲಿ ಕೆನೆ ಮತ್ತು ಹೆಚ್ಚುವರಿ ಸಕ್ಕರೆ ಹಾಕಿದ ಕಾಫಿ ಸೇವನೆ ಆದಷ್ಟು ತಪ್ಪಿಸಿ. ಸಕ್ಕರೆ ಸೇರಿಸಿದ ಪಾನೀಯವು ತೂಕ ಹೆಚ್ಚಳ ಹಾಗೂ ಹೊಟ್ಟೆಯ ಬೊಜ್ಜು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯ ಅಪಾಯ ಹೆಚ್ಚಿಸುತ್ತದೆ.
ಸಕ್ಕರೆ ಭರಿತ ಪಾನೀಯಗಳು ಕಡಿಮೆ ಪೋಷಕಾಂಶ ಹೊಂದಿವೆ. ಇದು ನಿಮ್ಮಲ್ಲಿ ಅನಾರೋಗ್ಯದ ಅಪಾಯ ಹೆಚ್ಚಿಸುತ್ತದೆ. ಅದಾಗ್ಯೂ ನೀವು ಕಾಫಿ ಕುಡಿಯಲು ಬಯಸಿದರೆ ಅದಕ್ಕೆ ಕಡಿಮೆ ಸಿಹಿಕಾರಕ ಸೇರಿಸಿ. ಬ್ಲ್ಯಾಕ್ ಕಾಫಿ ಕುಡಿಯಿರಿ.
ಬಿಳಿ ಬ್ರೆಡ್ ಸೇವನೆ ತಪ್ಪಿಸಿ
ತೂಕ ಇಳಿಕೆ ಮತ್ತು ಬೆಲ್ಲಿ ಫ್ಯಾಟ್ ಕಡಿಮೆ ಮಾಡಲು ಬಿಳಿ ಬ್ರೆಡ್ ಹಾಗೂ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವನೆ ತಪ್ಪಿಸಿ. ಇದು ತ್ವರಿತ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಿಸುತ್ತದೆ. ಬಿಳಿ ಬ್ರೆಡ್ ಬದಲು ಧಾನ್ಯಗಳ ಬ್ರೆಡ್ ಸೇವಿಸಿ.
ರೆಡಿಮೇಡ್ ಉಪಹಾರ ಧಾನ್ಯ ಸೇವನೆ ಅವಾಯ್ಡ್ ಮಾಡಿ
ಹೆಚ್ಚುವರಿ ಸಕ್ಕರೆ ಸೇವನೆ ಬೆಲ್ಲಿ ಫ್ಯಾಟ್ ಹೆಚ್ಚಲು ಕಾರಣವಾಗಿದೆ. ಅದರಲ್ಲೂ ರೆಡಿಮೇಡ್ ಉಪಹಾರ ಧಾನ್ಯಗಳ ಸೇವನೆ ತಪ್ಪಿಸಿ. ಯಾಕಂದ್ರೆ ಇದರಲ್ಲಿ ಎಲ್ಲಾ ಧಾನ್ಯಗಳು ಅಧಿಕ ಸಕ್ಕರೆ ಹೊಂದಿವೆ. ಹಾಗಾಗಿ ಸಿರಿಧಾನ್ಯ ಖರೀದಿ ಮಾಡುವಾಗ
ಕಡಿಮೆ ಸಕ್ಕರೆ ಮತ್ತು ಹೆಚ್ಚು ಫೈಬರ್ ಮತ್ತು ಪ್ರೋಟೀನ್ ಹೊಂದಿರುವ ಬ್ರ್ಯಾಂಡ್ ಫುಡ್ ಖರೀದಿ ಮಾಡಿ ಅಂತಾರೆ ತಜ್ಞರು.
ತ್ವರಿತ ಆಹಾರ ಸೇವನೆ ತಪ್ಪಿಸಿ
ತ್ವರಿತ ಆಹಾರದಿಂದ ಬೇಗ ಹೊಟ್ಟೆ ಕೊಬ್ಬು ಹೆಚ್ಚುತ್ತದೆ. ತ್ವರಿತ ಆಹಾರವು ಹೆಚ್ಚಿನ ಮಟ್ಟದ ಟ್ರಾನ್ಸ್ ಕೊಬ್ಬನ್ನು ಹೊಂದಿದೆ. ಇದರ ನಿಯಮಿತ ಸೇವನೆಯು ಸ್ಥೂಲಕಾಯ ಅಪಾಯ ಹೆಚ್ಚಿಸುತ್ತದೆ. ಹೃದ್ರೋಗ ಮತ್ತು ಮಧುಮೇಹ ಹೆಚ್ಚಿಸುತ್ತದೆ.
ಇದನ್ನೂ ಓದಿ: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!
ಸಂಸ್ಕರಿಸಿದ ಮಾಂಸ ಸೇವನೆ ತಪ್ಪಿಸಿ
ಸಂಸ್ಕರಿಸಿದ ಮಾಂಸ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಕ್ಯಾಲೋರಿ ಮತ್ತು ಟ್ರಾನ್ಸ್ ಕೊಬ್ಬು ಹೆಚ್ಚಿರುತ್ತದೆ. ಇದರ ಸೇವನೆ ಅಪಾಯಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ